Green Chilli Fry Recipe :ಖಾರ ಖಾರ ಊಟ ಇಷ್ಟಪಡುವವರಿಗೆ ಇಲ್ಲಿದೆ ಗ್ರೀನ್ ಚಿಲ್ಲಿ ಫ್ರೈ ರೆಸಿಪಿ

ಸಾಮಾನ್ಯವಾಗಿ ಹೆಚ್ಚು ಮಸಾಲೆಯುಕ್ತ ಆಹಾರವನ್ನು ಮಕ್ಕಳು ಮತ್ತು ಹಿರಿಯರಿಗೆ ಕೊಡಲು ಬಯಸುವುದಿಲ್ಲ. ಅಂತಹ ಸಂದರ್ಭದಲ್ಲಿ ಮನೆಯವರೆಲ್ಲರೂ ಕಡಿಮೆ ಖಾರವಿರುವ ಆಹಾರವನ್ನು ಸೇವಿಸುವುದು ಅನಿವಾರ್ಯವಾಗಿರುತ್ತದೆ. ಆದರೆ ನೀವು ಇನ್ನೂ ಮುಂದೆ ನಿಮ್ಮ ಊಟದೊಂದಿಗೆ ಈ ಗ್ರೀನ್ ಚಿಲ್ಲಿ ಫ್ರೈ ಅನ್ನು ಜೋಡಿಸಿ.

Green Chilli Fry Recipe :ಖಾರ ಖಾರ ಊಟ ಇಷ್ಟಪಡುವವರಿಗೆ ಇಲ್ಲಿದೆ ಗ್ರೀನ್ ಚಿಲ್ಲಿ ಫ್ರೈ ರೆಸಿಪಿ
Green Chilli Fry RecipeImage Credit source: Fun Food
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Nov 01, 2022 | 5:08 PM

ಅತಿ ಮಸಾಲೆಯುಕ್ತ ಊಟವನ್ನು ಇಷ್ಟಪಡುವವರಿಗೆ, ಸುಲಭವಾಗಿ ಕೇವಲ 10 ನಿಮಿಷಗಳಲ್ಲಿ ತಯಾರಿಸಬಹುದಾದ ರೆಸಿಪಿ ಇದಾಗಿದ್ದು, ನಿಮ್ಮ ಊಟದ ಜೊತೆಗೆ ನೆಂಚಿಕೊಳ್ಳಲು ಒಂದು ಉತ್ತಮ ರೆಸಿಪಿಯಾಗಿದೆ.

ಸಾಮಾನ್ಯವಾಗಿ ಹೆಚ್ಚು ಮಸಾಲೆಯುಕ್ತ ಆಹಾರವನ್ನು ಮಕ್ಕಳು ಮತ್ತು ಹಿರಿಯರಿಗೆ ಕೊಡಲು ಬಯಸುವುದಿಲ್ಲ. ಅಂತಹ ಸಂದರ್ಭದಲ್ಲಿ ಮನೆಯವರೆಲ್ಲರೂ ಕಡಿಮೆ ಖಾರವಿರುವ ಆಹಾರವನ್ನು ಸೇವಿಸುವುದು ಅನಿವಾರ್ಯವಾಗಿರುತ್ತದೆ. ಆದರೆ ನೀವು ಇನ್ನೂ ಮುಂದೆ ನಿಮ್ಮ ಊಟದೊಂದಿಗೆ ಈ ಗ್ರೀನ್ ಚಿಲ್ಲಿ ಫ್ರೈ ಅನ್ನು ಜೋಡಿಸಿ. ಇದು ಒಂದು ರೀತಿಯ ಉಪ್ಪಿನಕಾಯಿಯಾಗಿದ್ದು, ನೀವು ಒಂದು ವಾರದವರೆಗೆ ಫ್ರಿಜ್‌ನಲ್ಲಿ ಸಂಗ್ರಹಿಸಿ ಇಡಬಹುದಾಗಿದೆ.

ಈ ರೆಸಿಪಿಯನ್ನು ತಯಾರಿಸಲು, ನಿಮಗೆ ಹಸಿರು ಮೆಣಸಿನಕಾಯಿಗಳು, ಜೀರಿಗೆ, ಅರಿಶಿನ, ಇಂಗು, ಕೊತ್ತಂಬರಿ ಪುಡಿ, ಒಣ ಮಾವಿನ ಪುಡಿ, ಫೆನ್ನೆಲ್ ಪುಡಿ, ಉಪ್ಪು ಮತ್ತು ಎಣ್ಣೆ ಬೇಕಾಗುತ್ತದೆ. 10 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ತಯಾರಿಸಲಾದ ಈ ಸೂಪರ್ ಸುಲಭವಾದ ರೆಸಿಪಿಯನ್ನು ರೋಟಿ ಸಬ್ಜಿ ಮತ್ತು ದಾಲ್ ಅನ್ನದೊಂದಿಗೆ ಕೂಡ ಸೇವಿಸಬಹುದು.

ಸಾಮಾನ್ಯವಾಗಿ ಮಾಡುವ ಈ ರೆಸಿಪಿಗೆ ಇನಷ್ಟು ಹೆಚ್ಚಿನ ಸುವಾಸನೆಗಳನ್ನು ಸೇರಿಸಲು, ನೀವು ಕೆಲವು ಬೆಳ್ಳುಳ್ಳಿ ಪುಡಿ, ಮಿಶ್ರ ಮಸಾಲೆ ಪುಡಿ ಮತ್ತು ಚಿಲ್ಲಿ ಫ್ಲೇಕ್ಸ್ ಅನ್ನು ಕೂಡ ಸೇರಿಸಬಹುದು. ಆದರೆ ಈ ಗ್ರೀನ್ ಚಿಲ್ಲಿ ಫ್ರೈ ಅನ್ನು ಗಾಳಿಯಾಡದ ಕಂಟೇನರ್‌ನಲ್ಲಿ ಫ್ರಿಡ್ಜ್‌ನಲ್ಲಿ ಶೇಖರಿಸಿಡಿ ಇಡಿ. ಇದು ಒಂದು ವಾರದ ವರೆಗೆ ಹಾಳಾಗದಂತೆ ಕಾಪಾಡುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಒಮ್ಮೆ ಈ ರೆಸಿಪಿಯನ್ನು ಪ್ರಯತ್ನಿಸಿ ನೋಡಿ.

ಮಾಡುವ ವಿಧಾನ:

  • ಹಂತ 1 ಹಸಿರು ಮೆಣಸಿನಕಾಯಿಯನ್ನು ಕತ್ತರಿಸಿ ಹಸಿರು ಮೆಣಸಿನಕಾಯಿಯನ್ನು ತೊಳೆದು ಒಣಗಿಸಿ. ನಂತರ ಈ ಹಸಿ ಮೆಣಸಿನಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮತ್ತು ಅವುಗಳನ್ನು ಒಂದು ಪಾತ್ರೆಯಲ್ಲಿ ಮುಚ್ಚಿಡಿ.
  • ಹಂತ 2: ಒಗ್ಗರಣೆ ತಯಾರಿಸಿ ಈಗ ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದಕ್ಕೆ ಇಂಗು, ಜೀರಿಗೆ ಸೇರಿಸಿ ಮತ್ತು ಅವುಗಳನ್ನು ಒಂದು ನಿಮಿಷ ಎಣ್ಣೆಯಲ್ಲಿ ಹುರಿಯಿರಿ.
  • ಹಂತ 3: ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಈಗ ಉಪ್ಪಿನೊಂದಿಗೆ ಹಸಿ ಮೆಣಸಿನಕಾಯಿಯನ್ನು ಸೇರಿಸಿ ಮಿಶ್ರಣ ಮಾಡಿ ಮತ್ತು 10 ಸೆಕೆಂಡುಗಳ ಕಾಲ ಹುರಿಯಿರಿ.
  • ಹಂತ 4: ಎಲ್ಲಾ ಮಸಾಲೆಗಳನ್ನು ಸೇರಿಸಿ ಈಗ ಅರಿಶಿನ, ಕೊತ್ತಂಬರಿ ಪುಡಿ, ಒಣ ಮಾವಿನ ಪುಡಿ ಮತ್ತು ಫೆನ್ನೆಲ್ ಬೀಜಗಳ ಪುಡಿ ಸೇರಿಸಿ. 2-3 ನಿಮಿಷಗಳ ಕಾಲ ಹಸಿ ಮೆಣಸಿನಕಾಯಿಯನ್ನು ಬೆರೆಸಿ ಮತ್ತು ಹುರಿಯಿರಿ. ಹಸಿರು ಮೆಣಸಿನಕಾಯಿ ಇನ್ನೂ ಸ್ವಲ್ಪ ಕುರುಕಲು ಆಗುವ ವರೆಗೆ ಹುರಿದುಕೊಳ್ಳಿ.
  • ಹಂತ 5 ಈಗ ನಿಮ್ಮ ಗ್ರೀನ್ ಚಿಲ್ಲಿ ಫ್ರೈ ಸವಿಯಲು ಸಿದ್ದ. ಈ ಸುಲಭವಾದ ರೆಸಿಪಿಯನ್ನು ರೋಟಿ ಸಬ್ಜಿ ಮತ್ತು ದಾಲ್ ಅನ್ನದೊಂದಿಗೆ ಕೂಡ ಸೇವಿಸಬಹುದು.

ಇದನ್ನು ಓದಿ: ಬಾಳೆ ಹಣ್ಣಿನಿಂದ ಮಾಡಬಹುದು ವಿವಿಧ ರೆಸಿಪಿಗಳು

Published On - 5:07 pm, Tue, 1 November 22