World Food Day 2021: ಇಂದು ವಿಶ್ವ ಆಹಾರ ದಿನ; ಹಿನ್ನೆಲೆ, ಉದ್ದೇಶ ಹಾಗೂ ಈ ವರ್ಷದ ಪರಿಕಲ್ಪನೆಯ ಕುರಿತ ಮಾಹಿತಿ ಇಲ್ಲಿದೆ

| Updated By: shivaprasad.hs

Updated on: Oct 16, 2021 | 1:20 PM

FAO: ಇಂದು ಜಗತ್ತಿನಾದ್ಯಂತ ‘ವಿಶ್ವ ಆಹಾರ ದಿನ’ವನ್ನು ಆಚರಿಸಲಾಗುತ್ತಿದೆ. ಈ ದಿನದ ಹಿನ್ನೆಲೆ, ಉದ್ದೇಶ ಹಾಗೂ ಈ ವರ್ಷದ ಪರಿಕಲ್ಪನೆಯ ಕುರಿತ ಮಾಹಿತಿ ಇಲ್ಲಿದೆ.

World Food Day 2021: ಇಂದು ವಿಶ್ವ ಆಹಾರ ದಿನ; ಹಿನ್ನೆಲೆ, ಉದ್ದೇಶ ಹಾಗೂ ಈ ವರ್ಷದ ಪರಿಕಲ್ಪನೆಯ ಕುರಿತ ಮಾಹಿತಿ ಇಲ್ಲಿದೆ
ಸಾಂಕೇತಿಕ ಚಿತ್ರ
Follow us on

ಇಂದು (ಅಕ್ಟೋಬರ್ 16) ಜಗತ್ತಿನಾದ್ಯಂತ ‘ವಿಶ್ವ ಆಹಾರ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಮಂಡಳಿಯು ಇದನ್ನು ಪ್ರಾರಂಭಿಸಿದ್ದು, ಹಸಿವಿನ ಸಮಸ್ಯೆ ಹಾಗೂ ಆರೋಗ್ಯಕರ ಆಹಾರದ ಸೇವನೆಯ ಕುರಿತು ಜಾಗೃತಿ ಮೂಡಿಸಲಿದೆ. ಈ ವರ್ಷ ಆಹಾರ ಮತ್ತು ಕೃಷಿ ಮಂಡಳಿ ಎಫ್​ಎಒ(FAO)ನೊಂದಿಗೆ, UNHCR, ವಿಶ್ವಸಂಸ್ಥೆ ರೆಫ್ಯೂಜಿ ಏಜೆನ್ಸಿ (UN Refugee Agency), ವಿಶ್ವ ಆಹಾರ ಯೋಜನೆ (World Food Programme-WFP) ಕೈಜೋಡಿಸಿವೆ. ವಿಶ್ವದಾದ್ಯಂತ 150 ದೇಶಗಳಲ್ಲಿ ಸರ್ಕಾರ ಹಾಗೂ ಇತರ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಕೊಳ್ಳಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಈ ವರ್ಷದ ವಿಶ್ವ ಆಹಾರ ದಿನವನ್ನು ‘ಉತ್ತಮ ಆಹಾರವು ಆರೋಗ್ಯಕರ ನಾಳೆಗಳಿಗೆ ಬುನಾದಿ’ (Safe food now for a healthy tomorrow) ಎಂಬ ಪರಿಕಲ್ಪನೆಯಲ್ಲಿ ನಡೆಸಲಾಗುತ್ತಿದೆ.

ವಿಶ್ವ ಆಹಾರ ದಿನದ ಹಿನ್ನೆಲೆ:
1979ರ ನವೆಂಬರ್​​ನಲ್ಲಿ ಹಂಗೇರಿಯಾದ ಆಹಾರ ಮತ್ತು ಕೃಷಿಯ ಮಾಜಿ ಮಂತ್ರಿ ಡಾ.ಪಾಲ್ ರೋಮನಿ ಅವರು ವಿಶ್ವ ಆಹಾರ ದಿನವನ್ನು ಆರಂಭಿಸಿದರು. ನಂತರದಲ್ಲಿ ವಿಶ್ವದಾದ್ಯಂತ ಇದು ಪಸರಿಸಿ, ಹಸಿವು, ಪೌಷ್ಠಿಕಾಂಶದ ಕೊರತೆ, ಆಹಾರ ಉತ್ಪಾದನೆ ಮೊದಲಾದ ವಿಷಯಗಳ ಕುರಿತು ಜಾಗೃತಿ ಮೂಡಿಸುವ ದಿನವಾಗಿ ಇದು ಬದಲಾಯಿತು.

ವಿಶ್ವ ಆಹಾರ ದಿನದ ಮಹತ್ವ:
ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಮಂಡಳಿಯ ಸಂಸ್ಥಾಪನೆಯ ನೆನಪಿಗೆ ಆಹಾರ ದಿನವನ್ನು ಜಗತ್ತಿನಾದ್ಯಂತ ಆಚರಿಸುವ ಪದ್ಧತಿ ಆರಂಭವಾಯಿತು. ಮುಖ್ಯವಾಗಿ ಜಗತ್ತಿನಲ್ಲಿ ಹಸಿವನ್ನು ನಿರ್ಮೂಲನೆ ಮಾಡುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ಈ ವರ್ಷ ಇಂದು ವಿಶ್ವದಲ್ಲಿ ಹಸಿವಿನ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಪಣತೊಟ್ಟು, ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳಿಗೆ ಗೌರವ ಸಲ್ಲಿಸಲಾಗುತ್ತದೆ.

ಇದನ್ನೂ ಓದಿ:

ವೀಕೆಂಡ್​ ಟ್ರಿಪ್​ಗೆ ಪ್ಲಾನ್ ಮಾಡುತ್ತಿದ್ದೀರಾ? ; ಬೆಂಗಳೂರು ಸಮೀಪದ ಅದ್ಭುತ ಸ್ಥಳಗಳ ಪಟ್ಟಿ ಇಲ್ಲಿದೆ

Kalaburagi Earthquake: ಲಘು ಭೂಕಂಪನ; ಬೆಳಿಗ್ಗೆ 11.40ರ ಸುಮಾರಿಗೆ ಭೂಮಿಯಿಂದ ಭಾರೀ ಸದ್ದು

Foreign Exchange Reserve: ಭಾರತದ ವಿದೇಶೀ ವಿನಿಮಯ ಸಂಗ್ರಹ 2.04 ಬಿಲಿಯನ್ ಏರಿಕೆಯಾಗಿ 639 ಬಿಲಿಯನ್ ಡಾಲರ್​ಗೆ

Published On - 1:17 pm, Sat, 16 October 21