AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಕೆಂಡ್​ ಟ್ರಿಪ್​ಗೆ ಪ್ಲಾನ್ ಮಾಡುತ್ತಿದ್ದೀರಾ? ; ಬೆಂಗಳೂರು ಸಮೀಪದ ಅದ್ಭುತ ಸ್ಥಳಗಳ ಪಟ್ಟಿ ಇಲ್ಲಿದೆ

ವೀಕೆಂಡ್​ನಲ್ಲಿ ಪ್ರವಾಸಕ್ಕಾಗಿ ಯೋಚಿಸುತ್ತಿದ್ದೀರಾ? ಬೆಂಗಳೂರಿನ ಸುತ್ತಮುತ್ತ ಹಲವು ವೈಶಿಷ್ಟ್ಯಪೂರ್ಣ ಕಾರಣಗಳಿಗಾಗಿ ಪ್ರಸಿದ್ಧಿಯನ್ನು ಹೊಂದಿರುವ ಸ್ಥಳಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ನೀವಿನ್ನೂ ಈ ಸ್ಥಳಗಳಿಗೆ ಭೇಟಿ ನೀಡಿಲ್ಲವಾದರೆ, ಖಂಡಿತಾ ಭೇಟಿ ನೀಡಿ.

ವೀಕೆಂಡ್​ ಟ್ರಿಪ್​ಗೆ ಪ್ಲಾನ್ ಮಾಡುತ್ತಿದ್ದೀರಾ? ; ಬೆಂಗಳೂರು ಸಮೀಪದ ಅದ್ಭುತ ಸ್ಥಳಗಳ ಪಟ್ಟಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Oct 16, 2021 | 12:33 PM

Share

ನಗರವಾಸಿಗಳಿಗೆ ವೀಕೆಂಡ್ ಎನ್ನುವುದು ಹಬ್ಬವಿದ್ದಂತೆ. ವಾರವಿಡೀ‌ ದುಡಿದು ಸುಸ್ತಾಗಿರುವವರು, ಪ್ರವಾಸ ಕೈಗೊಂಡು ಮತ್ತೆ ಮರು ಉತ್ಸಾಹ ಪಡೆಯುವ ಸುಸಂದರ್ಭಕ್ಕೂ ವೀಕೆಂಡ್ ಸಾಕ್ಷಿಯಾಗುತ್ತದೆ. ಬೆಂಗಳೂರಿನಲ್ಲಿ ವಾಸಿಸುವವರಿಗೆ ಎರಡು ದಿನಗಳಲ್ಲಿ ಉತ್ತಮ ಅನುಭವ ನೀಡಬಲ್ಲ‌ ಪ್ರವಾಸಿ ಸ್ಥಳಗಳಾವುವು? ಈ ಗೊಂದಲ‌ ನಿಮಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಟ್ರೆಕ್ಕಿಂಗ್, ಅಡ್ವೆಂಚರ್, ತೀರ್ಥ ಕ್ಷೇತ್ರಗಳು ಹೀಗೆ ಎಲ್ಲವನ್ನೂ ಒಳಗೊಂಡಿರುವ ಈ ಸ್ಥಳಗಳು ನಿಮ್ಮ ವೀಕೆಂಡ್ ಅನ್ನು ಮತ್ತಷ್ಟು ಸಂತಸಗೊಳಿಸಬಹುದು. ನೀವಿನ್ನೂ ಈ ಸ್ಥಳಗಳಿಗೆ ತೆರಳಿಲ್ಲವಾದರೆ ಪ್ಲಾನ್ ಮಾಡಿ.

ಕೊಡಗು: ಬೆಂಗಳೂರಿನಿಂದ ಸುಮಾರು 240 ಕಿಲೋ ಮೀಟರ್ ದೂರದಲ್ಲಿರುವ ಕೊಡಗು ಹಲವಾರು ಸುಂದರ ಪ್ರದೇಶಗಳನ್ನು ಹೊಂದಿದೆ. ‘ದಕ್ಷಿಣದ ಕಾಶ್ಮೀರ’, ‘ದಕ್ಷಿಣದ ಸ್ಕಾಟ್ ಲ್ಯಾಂಡ್’ ಮೊದಲಾದ ಖ್ಯಾತಿಯೂ ಮಂಜಿನ ಊರು ಕೊಡಗಿಗಿದೆ. ಪಶ್ಚಿನ ಘಟ್ಟಗಳ ಸಾಲಿನಲ್ಲಿರುವ ಕೂರ್ಗ್, ಗುಡ್ಡಗಳು, ಕೆರೆಗಳು, ನದಿಗಳನ್ನು ಒಳಗೊಂಡಿದ್ದು, ಸುತ್ತಾಡಲು ಉತ್ತಮ ಸ್ಥಳಗಳನ್ನು ಹೊಂದಿವೆ. ಅಡ್ವೆಂಚರ್ ಪ್ರಿಯರಿಗೆ ಪೇಂಟ್ ಬಾಲ್, ಡರ್ಟ್ ಬೈಕಿಂಗ್ ಸೇರಿದಂತೆ ಹಲವಾರು ಕ್ರೀಡೆಗಳನ್ನು ಆಡುವ ಅವಕಾಶವಿದ್ದು, ರಿವರ್ ರಾಫ್ಟಿಂಗ್ ಕೂಡ ಮಾಡಬಹುದು. ವಿಶೇಷವಾಗಿ ಕೂರ್ಗ್ ವೈನ್ ಅನ್ನು ಟೇಸ್ಟ್ ಮಾಡಲು ಮರೆಯದಿರಿ.

Kodagu

ಸಾಂದರ್ಭಿಕ ಚಿತ್ರ

ನಂದಿ ಬೆಟ್ಟ: ಬೆಂಗಳೂರಿನಿಂದ ಸುಮಾರು 60 ಕಿಲೋ ಮೀಟರ್ ದೂರವಿರುವ ಈ ಸ್ಥಳಕ್ಕೆ ಒಂದೂವರೆ ಗಂಟೆಯೊಳಗೆ ತಲುಪಬಹುದು. ನಂದಿ ಮಲಗಿರುವಂತೆ ಕಾಣುವ ಈ ಬೆಟ್ಟಕ್ಕೆ ನಂದಿ ಹಿಲ್ಸ್ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಇಲ್ಲಿ ಭೋಗನಂದೀಶ್ವರ ದೇವಸ್ಥಾನವಿದ್ದು, ರಾಜ್ಯದ ಹಳೆಯ ದೇವಸ್ಥಾನಗಳಲ್ಲಿ ಇದೂ ಒಂದು. ಬೆಟ್ಟದ ಮೇಲಿನಿಂದ ಬೆಂಗಳೂರು ನಗರದ ವಿಹಂಗಮ ನೋಟ ಕಾಣಿಸುತ್ತದೆ. ಅದನ್ನು‌ ಮಿಸ್ ಮಾಡಲೇಬೇಡಿ.

Nandi Hills

ನಂದಿ ಬೆಟ್ಟ

ಯೇಲಗಿರಿ: ಬಡವರ ಊಟಿ ಎಂದು ಕರೆಯಲ್ಪಡುವ ಈ ಊರು ತಮಿಳುನಾಡು ರಾಜ್ಯದ ವ್ಯಾಪ್ತಿಯಲ್ಲಿದೆ. ಟ್ರೆಕ್ಕಿಂಗ್ ಪದರಿಯರಿಗೆ ಉತ್ತಮವಾದ ಸ್ಥಳ ಇದಾಗಿದ್ದು, ದಕ್ಷಿಣ ಭಾರತದ ಉತ್ತಮ ಹಿಲ್ ಸ್ಟೇಷನ್‌ಗಳಲ್ಲಿ ಒಂದು ಎಂಬ ಖ್ಯಾತಿ‌ ಇದಕ್ಕಿದೆ.ಇದು ಬೆಂಗಳೂರಿನಿಂದ ಸುಮಾರು 160 ಕಿಮೀ ದೂರದಲ್ಲಿದೆ.

ಮೈಸೂರು: ಬೆಂಗಳೂರಿನಿಂದ ಅರಮನೆಗಳ‌ ನಗರಿ ಮೈಸೂರು 150ಕಿಮೀ ದೂರವಿದೆ. ಅರಮನೆಗಳು, ಉದ್ಯಾನವನಗಳು, ಕೆರೆಗಳು, ಗ್ಯಾಲರಿಗಳು, ದೇವಸ್ಥಾನಗಳು.. ಏನುಂಟು ಏನಿಲ್ಲ… ಮೈಸೂರಿನಲ್ಲಿ ಎಲ್ಲವೂ ಇದೆ. ಆದ್ದರಿಂದಲೇ ಬೆಂಗಳೂರಿಗರು ವೀಕೆಂಡ್ ನಲ್ಲಿ ಮೈಸೂರಿನೆಡೆಗೆ ಮುಖಮಾಡುತ್ತಾರೆ. ನೀವು‌ ಮೈಸೂರಿಗೆ ಹೊಸಬರು ಎಂದಾದರೆ ಚಾಮುಂಡಿ ಬೆಟ್ಟವನ್ನು‌ ಮಿಸ್ ಮಾಡಲೇಬೇಡಿ.

Mysore Palace

ಮೈಸೂರು ಅರಮನೆ

ರಾಮನಗರ: ಬಾಲಿವುಡ್ ಸಿನಿಮಾ ಪ್ರೇಮಿಗಳಿಗೆ ಈ ಜಾಗ ಕಂಡಿತಾ ಹೊಸದಲ್ಲ. ಕಾರಣ, ಅವರು ಶೋಲೆ ಚಿತ್ರದಲ್ಲಿ ಈ ಜಾಗದ ಸೌಂದರ್ಯ ಕಂಡು ಖಂಡಿತವಾಗಿ ಮಾರುಹೋಗಿರುತ್ತಾರೆ. ಇದು ಬೆಂಗಳೂರಿನಿಂದ ಸುಮಾರು 50ಕಿಮೀ ದೂರದಲ್ಲಿದ್ದು, 1 ಗಂಟೆ 40 ನಿಮಿಷದೊಳಗೆ ಸ್ಥಳವನ್ನು ತಲುಪಬಹುದು. ವೀಕೆಂಡ್ ನಲ್ಲಿ ಸಾಹಸಮಯ ಕ್ರೀಡೆಗಳನ್ನು ಆಡಿ ಸಮಯ ಕಳೆಯಲು ಯೋಚಿಸುವವರು ರಾಮನಗರದ ಸ್ಥಳಗಳಿಗೆ ಭೇಟಿ ನೀಡಬಹುದು. ರ್ಯಾಪ್ಲಿಂಗ್, ಟ್ರೆಕ್ಕಿಂಗ್, ಗುಹೆಗಳ ಹುಡುಕಾಟಕ್ಕೆ ಒಳ್ಳೆಯ ಸ್ಥಳಗಳಿವೆ.

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿಗೆ ಸೆಪ್ಟೆಂಬರ್​ನಿಂದ ಮೇವರೆಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ನದಿಗಳು, ದೇವಸ್ಥಾನಗಳು, ಟ್ರೆಕ್ಕಿಂಗ್, ಕಣ್ಮನ ಸೆಳೆಯುವ ಪ್ರಕೃತಿ ಸೌಂದರ್ಯ ಈ ಎಲ್ಲವುಗಳಿಂದ ಚಿಕ್ಕಮಗಳೂರು ಬಹಳ ಗಮನ ಸೆಳೆಯುತ್ತದೆ. ಬೆಂಗಳೂರಿನಿಂದ 242 ಕಿಲೋ ಮೀಟರ್ ದೂರದಲ್ಲಿ ಚಿಕ್ಕಮಗಳೂರು ಇದ್ದು, ಸುಮಾರು 4.30 ಗಂಟೆಯಲ್ಲಿ ಪ್ರಯಾಣಿಸಬಹುದು.

Mullayyana giri

ಮುಳ್ಳಯ್ಯನ ಗಿರಿ

ಇದನ್ನೂ ಓದಿ:

ಒಂದು ದಿನದ ಟ್ರಿಪ್​ಗಾಗಿ ಪ್ಲಾನ್​ ಮಾಡುತ್ತಿದ್ದೀರಾ? ಬೆಂಗಳೂರಿನಿಂದ ಪ್ರಯಾಣಿಸಲು ಹತ್ತಿರದ ಪ್ರವಾಸಿ ತಾಣಗಳಿವು

ವೀಕೆಂಡ್​ ಟ್ರಿಪ್​ಗೆ ಯೋಚಿಸುತ್ತಿದ್ದೀರಾ? ; ಬೆಂಗಳೂರು ಸಮೀಪವೇ ಇರುವ 10 ಅತ್ಯುತ್ತಮ ಸ್ಥಳಗಳ ವಿವರ ಇಲ್ಲಿದೆ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?