ಒಂದು ದಿನದ ಟ್ರಿಪ್​ಗಾಗಿ ಪ್ಲಾನ್​ ಮಾಡುತ್ತಿದ್ದೀರಾ? ಬೆಂಗಳೂರಿನಿಂದ ಪ್ರಯಾಣಿಸಲು ಹತ್ತಿರದ ಪ್ರವಾಸಿ ತಾಣಗಳಿವು

ಈ ಸುಂದರ ತಾಣಗಳು ನಿಮ್ಮ ಮನಸ್ಸು ಗೆಲ್ಲುವುದಂತೂ ಸತ್ಯ. ಆರಾಮವಾಗಿ ನೀವು ಪ್ರಯಾಣ ಕೈಗೊಳ್ಳಬಹುದು. ಒಂದು ದಿನದ ವೀಕೆಂಡ್​ನಲ್ಲಿ ಬಿಂದಾಸ್​ಆಗಿ ಕುಟುಂಬದವರೊಡನೆ ಸಮಯ ಕಳೆಯಲು ಒಳ್ಳೆಯ ಸ್ಥಳಗಳಿವು.

ಒಂದು ದಿನದ ಟ್ರಿಪ್​ಗಾಗಿ ಪ್ಲಾನ್​ ಮಾಡುತ್ತಿದ್ದೀರಾ? ಬೆಂಗಳೂರಿನಿಂದ ಪ್ರಯಾಣಿಸಲು ಹತ್ತಿರದ ಪ್ರವಾಸಿ ತಾಣಗಳಿವು
ಜಲಪಾತ
Follow us
TV9 Web
| Updated By: shruti hegde

Updated on:Jul 12, 2021 | 12:16 PM

ಮನೆಯಲ್ಲಿಯೇ ಕುಳಿತು ಅದೆಷ್ಟೋ ದಿನವಾಗಿ ಬಿಟ್ಟಿದೆ ಅಲ್ವೇ? ವೀಕೆಂಡ್​ನಲ್ಲಿ ಟ್ರಿಪ್​ ಹೋಗಲು ಪ್ಲಾನ್​ ಮಾಡುತ್ತಿರಬಹುದು. ಸ್ನೇಹಿತರನ್ನು ಭೇಟಿ ಮಾಡದೆ ವರ್ಷಗಳೇ ಕಳೆದು ಹೋಗಿದೆ.. ಹೀಗಿರುವಾಗ ಎಲ್ಲರೂ ಸೇರಿ ಒಂದು ದಿನ ಪ್ರವಾಸಕ್ಕೆ ಹೋಗಲು ಯೋಚಿಸಿರಬಹುದು. ಆದರೆ ಒಂದು ದಿನದಲ್ಲಿ ಭೇಟಿ ನೀಡಲು ಸಾಧ್ಯವಿರುವ ಪ್ರವಾಸಿ ಸ್ಥಳಗಳು ಎಲ್ಲಿವೆ? ಹತ್ತಿರದಲ್ಲಿರುವ ಕೆಲವು ಸ್ಥಳಗಳ ಮಾಹಿತಿಯನ್ನು ನಾವು ಹೇಳಿದ್ದೇವೆ. ಬೆಂಗಳೂರಿನಿಂದ 100 ಕಿಲೋಮೀಟರ್​ ವ್ಯಾಪ್ತಿಯಲ್ಲಿರುವ ಸುಂದರ ಸ್ಥಳಗಳಿವು. ಒಂದು ದಿನ ಆರಾಮವಾಗಿ ಸಮಯ ಕಳೆಯಬಹುದು.

ವಾರಪೂರ್ತಿ ಕೆಲಸ ಮಾಡಿ ಮನಸ್ಸಿಗೆ ನೆಮ್ಮದಿಯೇ ಇಲ್ಲದಂತೆ ಆಗಿರಬಹುದು. ಅದರಲ್ಲಿಯೂ ಮಳೆಗಾಲದ ಈ ಸಮಯದಲ್ಲಿ ಧುಮ್ಮಿಕ್ಕುವ ಜಲಪಾತಗಳನ್ನು ನೋಡುವುದೇ ಒಂದು ಸಂಭ್ರಮ. ಹಚ್ಚ-ಹಸುರಿನ ಮಧ್ಯೆ ತನ್ನಪಾಡಿಗೆ ತಾನು ಹರಿಯುವ ನದಿಗೆ ಚಿಂತೆಯಿಲ್ಲ.. ಯಾವುದೇ ಒತ್ತಡವಿಲ್ಲ. ಆದರೆ ಮನುಷ್ಯನ ಆತಂಕವನ್ನು.. ಚಿಂತೆಯನ್ನು ಮರೆಸುವ ಶಕ್ತಿ ಇದೆ. ನೈಸರ್ಗಿಕ ಸೌಂದರ್ಯವನ್ನು ನೋಡುತ್ತಲೇ ಪ್ರವಾಸಿಗರು ಮೈ ಮರೆಯುತ್ತಾರೆ. ಪ್ರಕೃತಿಯ ಸೊಬಗಿಗೆ ಮರಳಾಗದಿರುವವರು ಇದ್ದಾರೆಯೇ?

ಬೆಂಗಳೂರಿಗೆ ಹತ್ತಿರವಿರುವ ಅತ್ಯುತ್ತಮ ಪ್ರವಾಸಿ ತಾಣಗಳು 1) ಸ್ಕಂದಗಿರಿ 2) ಸಂಗಮ 3) ನಂದಿ ಬೆಟ್ಟ 4) ಸಾವನದುರ್ಗ ಬೆಟ್ಟ 5) ಮಂಚನಬೆಲೆ 6) ಅಂತರ್​ಗಂಗೆ 7) ಅವಲಬೆಟ್ಟ 8) ಭೀಮೇಶ್ವರಿ 9) ಹೊಗೆನಕಲ್​ ಫಾಲ್ಸ್​ 19) ಮೈಸೂರು 11) ಬಿಳಿಗಿರಿರಂಗ ಬೆಟ್ಟ 12) ಕಬಿನಿ ರಿವರ್​

ಈ ಸುಂದರ ತಾಣಗಳು ನಿಮ್ಮ ಮನಸ್ಸು ಗೆಲ್ಲುವುದಂತೂ ಸತ್ಯ. ಆರಾಮವಾಗಿ ನೀವು ಪ್ರಯಾಣ ಕೈಗೊಳ್ಳಬಹುದು. ಒಂದು ದಿನದ ವೀಕೆಂಡ್​ನಲ್ಲಿ ಬಿಂದಾಸ್​ಆಗಿ ಕುಟುಂಬದವರೊಡನೆ ಸಮಯ ಕಳೆಯಲು ಒಳ್ಳೆಯ ಸ್ಥಳಗಳಿವು. ವಾರವಿಡೀ ಕೆಲಸ, ಬ್ಯುಸಿ ಲೈಫ್​ನಲ್ಲಿ ಸಿಗುವ ವೀಕೆಂಡ್​ನಲ್ಲಿ ಸುಂದರ ತಾಣಗಳ್ನು ವೀಕ್ಷಿಸುತ್ತಾ ನಿಮ್ಮ ಚಿಂತೆಗಳನ್ನು ದೂರ ಮಾಡಿಕೊಳ್ಳಲು ಒಳ್ಳೆಯ ಪ್ರೇಕ್ಷಣೀಯ ಸ್ಥಳಗಳಿವು.

1) ಸ್ಕಂದಗಿರಿ

ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ರಸ್ತೆ ಹಿಡಿದು ಸಾಗುವಾಗ ಸ್ಕಂದ ಗಿರಿ ಸ್ಥಳವನ್ನು ತಲುಪಬಹುದು. ಬೆಂಗಳೂರಿನಿಂದ 70ಕಿ.ಮೀ ದೂರದಲ್ಲಿ ಈ ಸ್ಥಳವಿದೆ. ಸಾಮಾನ್ಯವಾಗಿ ಹುಣ್ಣಿಮೆಯ ದಿನವನ್ನು ನೋಡಲು ಈ ಬೆಟ್ಟವನ್ನು ಹತ್ತುತ್ತಾರೆ. ಅದೆಷ್ಟೋ ದೂರದಿಂದ ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಪ್ರಾಚೀನ ಕಾಲದ ಕೋಟೆಗಳಲ್ಲಿ ಇದೂ ಒಂದಾಗಿದೆ. ತಂಪಾದ ಗಾಳಿ ಜತೆ ಚಿಂತೆಯನ್ನೆಲ್ಲಾ ಮರೆಯಬಹುದು. ಈ ಸ್ಥಳದಲ್ಲಿ ನಿಂತರೆ ಮೋಡವನ್ನು ಇನ್ನೇನು ಹಿಡಿದೇ ಬಿಡುತ್ತೇವೆ ಅನ್ನುವಷ್ಟು ಹತ್ತಿರದಲ್ಲಿದ್ದೇವೆ ಎಂಬ ಭಾಸ. ಮಳೆಗಾಲದ ಸಮಯದಲ್ಲಂತೂ ಹಚ್ಚ-ಹಸಿರುನಿಂದ ತುಂಬಿದ ಬೆಟ್ಟವನ್ನು ಹತ್ತುವುದೇ ಒಂದು ದೊಡ್ಡ ಸಾಹಸ. ಆದರೂ ಸಹ ಜಿಟಿ ಜಿಟಿ ಮಳೆಯಲ್ಲಿ ಹಚ್ಚ-ಹಸಿರಿನ ಸೊಬಗಿನ ನಡುವೆ ಪ್ರವಾಸಿಗರು ಹೆಜ್ಜೆ ಇಡುತ್ತಾ ಸೌಂದರ್ಯವನ್ನು ಅನುಭವಿಸುತ್ತಾರೆ.

skanda giri

ಸ್ಕಂದಗಿರಿ

2) ಸಂಗಮ​  ಬೆಂಗಳೂರಿನಿಂದ ಒಂದು ದಿನದ ಪ್ರವಾಸ ಕೈಗೊಳ್ಳಲು ಹತ್ತಿರದ ಸ್ಥಳವಿದು. ಹೆಸರೇ ಸೂಚಿಸುವಂತೆ ಅರ್ಕಾವತಿ ಮತ್ತು ಕಾವೇರಿ ನದಿ ಸೇರುವ ಸ್ಥಳವಿದು. ಬೆಂಗಳೂರಿನಿಂದ 95 ಕಿ.ಮೀ ದೂರದಲ್ಲಿದೆ ಈ ಸ್ಥಳ. ಮಳೆಗಾಲದ ಸಮಯದಲ್ಲಂತೂ ನೀರು ತುಂಬಿ ಭೋರ್ಗರೆಯುತ್ತಿರುತ್ತವೆ. ಆ ಚಳಿ, ನೀರಿನ ಹನಿಯಲ್ಲಿ ಜಲಪಾತ ನೋಡುವುದೇ ಒಂದು ಖುಷಿ.

sangama

3) ಸಾವನದುರ್ಗ ಬೆಟ್ಟ ಏಷ್ಯಾದ ಅತಿ ದೊಡ್ಡ ಏಕಶಿಲೆಗಳಲ್ಲಿ ಒಂದಾದ ಸಾವನದುರ್ಗ ಬೆಟ್ಟ ನೋಡಲು ಅತ್ಯಾಕರ್ಷಕವಾಗಿದೆ. ಬೆಂಗಳೂರಿನಿಂದ ಕೇವಲ 50 ಕಿ.ಮೀ ಮಾತ್ರ ದೂರದಲ್ಲಿದೆ. ಒಂದು ತಾಸಿನೊಳಗೆ ಆರಾಮವಾಗಿ ಸ್ಥಳ ತಲುಪಬಹುದು. ಒಂದು ದಿನ ಇಲ್ಲಿ ನಿರಾಳವಾಗಿ ಸಮಯ ಕಳೆಯಲು ಅದ್ಭುತ ಸ್ಥಳವಿದು.

savandurga

4) ನಂದಿ ಬೆಟ್ಟ ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ಪ್ರವಾಸಿ ಸ್ಥಳಗಳಲ್ಲಿ ಒಂದು. ಸಾಮಾನ್ಯವಾಗಿ ಸೂರ್ಯೋದಯವನ್ನು ವೀಕ್ಷಿಸಲು ಪ್ರವಾಸಿಗರು ಬರುತ್ತಾರೆ. ಬೆಟ್ಟದ ಮೇಲೆ ನಿಂತು ಸೂರ್ಯನ ಉದಯ ಮನಸ್ಸಿಗೆ ನೆಮ್ಮದಿ ತಂದುಕೊಡುತ್ತದೆ.

nandihills

5) ಮಂಚನಬೆಲೆ ಸಾವನದುರ್ಗಾ ಬೆಟ್ಟದ ಸ್ವಲ್ಪ ಹಿಂದೆಯೇ ಮಂಚನ​ಬೆಲೆ ತಾಣ ಸಿಗುತ್ತವೆ. ಭವ್ಯವಾದ ನೈಸರ್ಗಿಕ ಸೌದಂರ್ಯ ಪ್ರವಾಸಿಗರ ಮನ ಗೆಲ್ಲುತ್ತದೆ. ಈ ಸ್ಥಳದಲ್ಲಿ ರಿವರ್​ ರಾಫ್ಟಿಂಗ್​, ನೀರಿನ ಆಟವನ್ನು ಆಡಬಹುದು. ಒಂದು ದಿನ ಆರಾಮವಾಗಿ ಈ ಸ್ಥಳದಲ್ಲಿ ಸಮಯ ಕಳೆಯಬಹುದು. ಬೆಂಗಳೂರಿನಿಂದ ಕೇಲವ 60 ಕಿ.ಮೀ ದೂರದಲ್ಲಿದೆ ಈ ಸ್ಥಳ.

manchibele

6) ಅವಲಬೆಟ್ಟ ಬೆಂಗಳೂರಿನಿಂದ ಸುಮಾರು 95 ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಬೆಟ್ಟವಿದು. ಆದರೆ ಹಚ್ಚಹಸಿನಿಂದ ಕೂಡಿದೆ. ಜತೆಗೆ ಬಂಡೆ ಕಲ್ಲಿಗಳ ಮೇಲೆ ಆರಾಮವಾಗಿ ಕೂತು ಸಮಯ ಕಳೆಯಬಹುದು. ಇಲ್ಲಿನ ದೇವಾಲಯ ಪ್ರಸಿದ್ಧತೆ ಪಡೆದಿದೆ.

avalabetta

7) ಭೀಮೇಶ್ವರಿ ಹಚ್ಚ ಹಸಿರಿನ ನಡುವೆ ಅತ್ಯಂತ ಪ್ರಸಿದ್ಧತೆ ಪಡೆದ ಸ್ಥಳವಿದು. ಕಾಡು ಪ್ರಾಣಿಗಳೂ ಸಹ ಕಂಡು ಬರುತ್ತವೆ. ಮಹ್ಸೀರ್​ ಎಂದು ಕರೆಯಲ್ಪಡುವ ಉಷ್ಣವಲಯದ ಆಟದ ಮೀನುಗಳನ್ನು ಹೊಂದಿದೆ. ಬೆಂಗಳೂರಿನಿಂದ 105 ಕಿ.ಮೀ ದೂರದಲ್ಲಿದೆ.

bheemeshwari

8) ಹೊಗೆನಕಲ್​ ಫಾಲ್ಸ್​ ಜಲಪಾತ ಅಂದಾಕ್ಷಣ ಎಲ್ಲರಿಗೂ ಇಷ್ಟವಾಗುವ ಸ್ಥಳಗಳಿವು. ತಂಪಾದ ವಾತಾವಣದಲ್ಲಿ ಭೋರ್ಗರೆಯುವ ನೀರನ್ನು ನೋಡುವುದೇ ಮನಸ್ಸಿಗೆ ಖುಷಿ. ಬೆಂಗಳೂರಿನಿಂದ 130 ಕಿ.ಮೀ ದೂರದಲ್ಲಿ ಈ ಜಲಪಾತ ಕಂಡು ಬರುತ್ತದೆ.

hogenakkal falls

9) ಮೈಸೂರು ಬೆಂಗಳೂರಿನಿಂದ ಸುಮಾರು 140 ಕಿ.ಮೀ ದೂರದಲ್ಲಿ ಮೈಸೂರನ್ನು ತಲುಪಬಹುದು. ಐತಿಹಾಸಿಕ ಪರಫರೆಗೆ ಹೆಸರುವಾಸಿಯಾಗಿದೆ. ಅತ್ಯಾಕರ್ಷಕ ಕೋಟೆಗಳು, ಅದ್ಧೂರಿಯಾದ ಅರೆಮನೆಯನ್ನು ನೋಡುವುದೇ ಮನಸ್ಸಿಗೆ ಖುಷಿ.

Mysore

10) ಬಿಳಿಗಿರಿರಂಗ ಬೆಟ್ಟ ಬೆಂಗಳೂರಿನಿಂದ ಸುಮಾರು 200 ಕಿ.ಮೀ ದೂರದಲ್ಲಿದೆ ಈ ಸ್ಥಳ. ಬಿಳಿಗಿರಿ ರಂಗಸ್ವಾಮಿ ಅಭಯಾರಣ್ಯ ಎಂದೂ ಈ ಸ್ಥಳವನ್ನು ಕರೆಯಲಾಗುತ್ತದೆ. ಆರಾಮವಾಗಿ ಸಮಯ ಕಳೆದು ವಿಶ್ರಾಂತಿ ಪಡೆಯಬಹುದು. ಕುಟುಂಬದವರೊಡನೆ ಸಮಯ ಕಳೆದು ಮೋಜಿ-ಮಸ್ತಿಯಿಂದ ಒಂದು ದಿನ ಸಮಯ ಕಳೆಯಲು ಒಳ್ಳೆಯ ತಾಣವಿದು.

biligiriranga hills

ಇದನ್ನೂ ಓದಿ:

ಮಂಡ್ಯದ ಪ್ರವಾಸಿ ತಾಣ ಬಂದ್; ಲಾಕ್​ಡೌನ್​ನಿಂದ ಕುದುರೆ ನಂಬಿ ಬದುಕುತ್ತಿದ್ದ 40 ಕ್ಕೂ ಹೆಚ್ಚು ಕುಟುಂಬಕ್ಕೆ ಸಂಕಷ್ಟ

ಮುಗಿಲೆತ್ತರದಿಂದ ಧುಮ್ಮಿಕ್ಕುವ ಜಲಧಾರೆಯ ಸೌಂದರ್ಯವನ್ನು ನೋಡಲು ಗೋಕಾಕ್ ಜಲಪಾತಕ್ಕೆ ಭೇಟಿ ನೀಡಿ

Published On - 1:11 pm, Sun, 11 July 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ