ಮಂಡ್ಯದ ಪ್ರವಾಸಿ ತಾಣ ಬಂದ್; ಲಾಕ್​ಡೌನ್​ನಿಂದ ಕುದುರೆ ನಂಬಿ ಬದುಕುತ್ತಿದ್ದ 40 ಕ್ಕೂ ಹೆಚ್ಚು ಕುಟುಂಬಕ್ಕೆ ಸಂಕಷ್ಟ

ಬೆಳಗಾಗುತ್ತಲೇ ಕುದುರೆಗಳನ್ನು ಅಲಂಕಾರ ಮಾಡಿ ಗುಂಬಸ್, ನಿಮಿಷಾಂಭ ದೇವಾಲಯ ಸೇರಿದಂತೆ ಹಲವು ಕಡೆಗಳಲ್ಲಿ ನಿಂತುಕೊಳ್ಳುವುದು ಮತ್ತು ಅಲ್ಲಿಗೆ ಬರುವ ಪ್ರವಾಸಿಗರನ್ನು ಕುದುರೆಗಳ ಮೇಲೆ ಸವಾರಿ ಹೊರಡುವಂತೆ ಮಾಡುತ್ತಿದ್ದರು. ಆದರೆ, ಈಗ ಪ್ರವಾಸಿ ತಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದು ಕುದುರೆ ನಂಬಿಕೊಂಡು ಬದುಕುತ್ತಿದ್ದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಂಡ್ಯದ ಪ್ರವಾಸಿ ತಾಣ ಬಂದ್; ಲಾಕ್​ಡೌನ್​ನಿಂದ ಕುದುರೆ ನಂಬಿ ಬದುಕುತ್ತಿದ್ದ 40 ಕ್ಕೂ ಹೆಚ್ಚು ಕುಟುಂಬಕ್ಕೆ ಸಂಕಷ್ಟ
ಲಾಕ್​ಡೌನ್​ನಿಂದ ಕುದುರೆ ನಂಬಿ ಬದುಕುತ್ತಿದ್ದ 40 ಕ್ಕೂ ಹೆಚ್ಚು ಕುಟುಂಬಕ್ಕೆ ಸಂಕಷ್ಟ
Follow us
| Updated By: preethi shettigar

Updated on:Jun 07, 2021 | 2:33 PM

ಮಂಡ್ಯ: ಕೊರೊನಾ ಎರಡನೇ ಅಲೆಯು ತೀವ್ರವಾಗಿದ್ದು, ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಲಾಕ್​ಡೌನ್​ ಜಾರಿಗೆ ತಂದಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಆದರೆ ಲಾಕ್​ಡೌನ್​ನಿಂದಾಗಿ ದಿನಗೂಲಿ ಕಾರ್ಮಿಕರು, ರೈತರು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಪ್ರವಾಸಿತಾಣಗಳಲ್ಲಿ ಜೀವನ ಸಾಗಿಸುತ್ತಿದ್ದ ಕೂಲಿ ಕಾರ್ಮಿಕರಿಗೆ ನಷ್ಟ ಎದುರಾಗಿದೆ. ಇಂತಹದ್ದೇ ಪರಿಸ್ಥಿತಿ ಸದ್ಯ ಮಂಡ್ಯ ಜಿಲ್ಲೆಯ ಕುದುರೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಜನರದ್ದಾಗಿದ್ದು, 40 ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಮಂಡ್ಯ ಜಿಲ್ಲೆಯಲ್ಲಿ ಶ್ರೀರಂಗಪಟ್ಟಣದಲ್ಲಿನ ಶ್ರೀರಂಗನಾಥಸ್ವಾಮಿ ದೇವಾಲಯ, ಗಂಜಾಂ ಗ್ರಾಮದಲ್ಲಿರುವ ನಿಮಿಷಾಂಭ ದೇವಾಲಯ ಹಾಗೂ ಗುಂಬಸ್ ಸೇರಿದಂತೆ ಹತ್ತಾರು ಪ್ರವಾಸಿ ತಾಣಗಳಿವೆ. ಈ ಪ್ರವಾಸಿ ತಾಣಗಳಿಗೆ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹೋಗುತ್ತಿದ್ದರು. ಹೀಗೆ ಬರುವ ಪ್ರವಾಸಿಗರನ್ನು ತಮ್ಮ ತಮ್ಮ ಕುದುರೆಗಳ ಮೇಲೆ ಕೂರಿಸಿ ಒಂದು ಸುತ್ತು ಸುತ್ತಾಡಿಸುವುದು, ಫೋಟೊ ತೆಗೆಸುವ ಕೆಲಸ ಮಾಡುವ ಮಾಡುವ ಮೂಲಕ ಅದರಿಂದ ಬಂದ ಹಣದಲ್ಲಿ ಇಲ್ಲಿನ ಕುಟುಂಬ ಬದುಕು ಸಾಗಿಸುತ್ತಿದ್ದವು

ಕುದುರೆಗಳನ್ನೇ ನಂಬಿ ಗಂಜಾಂ ಗ್ರಾಮದ 40 ಕ್ಕೂ ಹೆಚ್ಚು ಕುಟುಂಬಗಳು ಜೀವನ ಸಾಗಿಸುತ್ತಿವೆ. ಈ ಕುದುರೆಗಳೇ ಇಲ್ಲಿನ ಜನರಿಗೆ ಬದುಕಿನ ಆಧಾರಸ್ತಂಭವಾಗಿವೆ. ಬೆಳಗಾಗುತ್ತಲೇ ಈ ಕುದುರೆಗಳನ್ನು ಅಲಂಕಾರ ಮಾಡಿ ಗುಂಬಸ್, ನಿಮಿಷಾಂಭ ದೇವಾಲಯ ಸೇರಿದಂತೆ ಹಲವು ಕಡೆಗಳಲ್ಲಿ ನಿಂತುಕೊಳ್ಳುವುದು ಮತ್ತು ಅಲ್ಲಿಗೆ ಬರುವ ಪ್ರವಾಸಿಗರನ್ನು ಕುದುರೆಗಳ ಮೇಲೆ ಸವಾರಿ ಹೊರಡುವಂತೆ ಮಾಡುತ್ತಿದ್ದರು. ಆದರೆ, ಈಗ ಪ್ರವಾಸಿ ತಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದು ಕುದುರೆ ನಂಬಿಕೊಂಡು ಬದುಕುತ್ತಿದ್ದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜ್ಯದಲ್ಲಿ ಲಾಕ್​ಡೌನ್ ಘೋಷಣೆಯಾಗುವುದಕ್ಕೂ ಮೊದಲು ಜೀವನ ನಡೆಸುವುದು ಅಷ್ಟೇನು ಕಷ್ಟಕರವಾಗಿರಲಿಲ್ಲ. ಏಕೆಂದರೆ ಇಲ್ಲಿನ ಪ್ರವಾಸಿ ತಾಣಗಳಿಗೆ ಪ್ರತಿನಿತ್ಯ ಪ್ರವಾಸಿಗರು ಬರುತ್ತಿದ್ದರು. ಒಂದಷ್ಟು ಸಂಪಾದನೆಯಾಗುತ್ತಿತ್ತು. ಅದರಲ್ಲಿ ಕುದುರೆಯ ಮೇವನ್ನ ಖರೀದಿಸಿ ಉಳಿಯುತ್ತಿದ್ದ ಅಷ್ಟೊ ಇಷ್ಟೊ ಹಣದಲ್ಲಿ ಬದುಕು ಸಾಗಿಸುತ್ತಿದ್ದೇವು. ಇನ್ನು ಕೊರೊನಾ ಕಡಿಮೆಯಾಗುತ್ತಿದ್ದಂತೆ ಒಂದಷ್ಟು ಸಮಾಧಾನಗೊಂಡಿದ್ದೇವು. ಮತ್ತೆ ನಮ್ಮ ಬದುಕು ಸರಿ ಹೋಗಬಹುದು ಅಂದುಕೊಂಡು ಮತ್ತೆ ಕುದುರೆಯ ಮೇಲೆ ನಮ್ಮ ಬದುಕು ಕಟ್ಟಿಕೊಳ್ಳಬಹುದೆಂದು ನಂಬಿದ್ದೇವು ಆದರೆ ಈಗ ಮತ್ತೆ ಲಾಕ್​ಡೌನ್​ ಆಗಿ ನಷ್ಟ ಅನುಭವಿಸುವಂತಾಗಿದೆ ಎಂದು ಕುದುರೆ ಸಾಕುತ್ತಿರುವ ಪ್ರಭು ಬೇಸರ ವ್ಯಕ್ತಪಡಿಸಿದ್ದಾರೆ.

ಲಾಕ್​ಡೌನ್​ ಸಡಿಲಿಕೆಯಿಂದಾಗಿ 1 ಲಕ್ಷದಿಂದ 2 ಲಕ್ಷದ ವರೆಗೂ ಸಾಲ ಮಾಡಿ ಹೊಸದಾಗಿ ಮತ್ತೆ ಒಂದಷ್ಟು ಕುದುರೆಗಳನ್ನು ತಂದಿದ್ದೆವು. ಕಳೆದ ವರ್ಷದ ಕೊರೊನಾ ಆರ್ಭಟ ಕಡಿಮೆಯಾಗಿ ಎಲ್ಲವೂ ನಾವು ಅಂದುಕೊಂಡಂತೆ ನಡೆಯುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಕೊರೊನಾ ಎರಡನೇ ಅಲೆ ಬಂದು ಅಪ್ಪಳಿಸಿದೆ. ಈಗ ಎಲ್ಲಾ ವರ್ಗಕ್ಕೂ ಒಂದಷ್ಟು ಪರಿಹಾರ ನೀಡಿ ಬೆಂಬಲವನ್ನು ಸರ್ಕಾರ ನೀಡಿದೆ. ನಮಗೂ ಒಂದಷ್ಟು ಪರಿಹಾರ ಘೋಷಣೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಕುದುರೆ ಸಾಕುವವರಾದ ಜಗದೀಶ್ ತಿಳಿಸಿದ್ದಾರೆ.

ಇದನ್ನೂ ಓದಿ:

ಲಾಕ್​ಡೌನ್​ ಸಮಯದ ಸದುಪಯೋಗ; 32 ಅಡಿ ಬಾವಿ ತೋಡಿ ಗ್ರಾಮಸ್ಥರಿಗೆ ನೆರವಾದ ಉತ್ತರ ಕನ್ನಡದ ವ್ಯಕ್ತಿ

ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವ ಕೊಡಗು ಪ್ರವಾಸಿ ತಾಣ; ಪ್ರವಾಸೋದ್ಯಮಕ್ಕೆ 2 ಕೋಟಿ ರೂಪಾಯಿ ನಷ್ಟ

Published On - 2:32 pm, Mon, 7 June 21