Sign In

By signing in or creating an account, you agree with Associated Broadcasting Company's Terms & Conditions and Privacy Policy.

World Anesthesia Day 2021: ಇಂದು ವಿಶ್ವ ಅನಸ್ತೇಷಿಯಾ ದಿನ; ಈ ಕುರಿತ ವಿಶೇಷ ಮಾಹಿತಿ ಇಲ್ಲಿದೆ

ವಿಶ್ವ ಅನಸ್ತೇಷಿಯಾ ದಿನ 2021: ಇಂದು ವಿಶ್ವ ಅನಸ್ತೇಷಿಯಾ ದಿನ. ಈ ಹಿನ್ನೆಲೆಯಲ್ಲಿ ಅನಸ್ತೇಷಿಯಾದ ಮಹತ್ವ ಹಾಗೂ ಅದರ ಕುರಿತಾದ ಹಿನ್ನೆಲೆಯನ್ನು ಇಲ್ಲಿ ನೀಡಲಾಗಿದೆ.

World Anesthesia Day 2021: ಇಂದು ವಿಶ್ವ ಅನಸ್ತೇಷಿಯಾ ದಿನ; ಈ ಕುರಿತ ವಿಶೇಷ ಮಾಹಿತಿ ಇಲ್ಲಿದೆ
ಸಾಂಕೇತಿಕ ಚಿತ್ರ
Follow us
TV9 Web
| Updated By: shivaprasad.hs

Updated on: Oct 16, 2021 | 2:36 PM

ಇಂದು (ಅಕ್ಟೋಬರ್ 16) ಜಗತ್ತಿನಾದ್ಯಂತ ‘ವಿಶ್ವ ಅನಸ್ತೇಷಿಯಾ ದಿನ’ವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತಿದ್ದು, ಆರೋಗ್ಯ ಕ್ಷೇತ್ರದಲ್ಲಿ ಈ ದಿನಕ್ಕೆ ಬಹಳ ಪ್ರಮುಖ ಸ್ಥಾನವಿದೆ. 1846ರಲ್ಲಿ ಮೊಟ್ಟಮೊದಲ ಬಾರಿಗೆ ಡೈಇಥೈಲ್ ಏಥರ್ ಅನಸ್ತೇಷಿಯಾವನ್ನು ತಯಾರಿಸಲಾಯಿತು. ಅನಸ್ತೇಷಿಯಾವನ್ನು ಚಿಕಿತ್ಸೆಯ ಸಂದರ್ಭದಲ್ಲಿ ದೇಹದ ಸಂವೇದನೆ ಕಳೆಯುವಂತೆ ಮಾಡಲು ಅಥವಾ ಪ್ರಜ್ಞೆ ತಪ್ಪುವಂತೆ ಮಾಡಲು ಕೂಡ ಬಳಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದೊಂದು ಪ್ರಮುಖ ಸಾಧನವಾಗಿದ್ದು, ಆ ನಿಟ್ಟಿನಲ್ಲಿ 1846ರಲ್ಲಿ ಕಂಡುಹಿಡಿದ ಡೈಇಥೈಲ್ ಈಥರ್ ಅನಸ್ತೇಷಿಯಾ ಪ್ರಮುಖ ಹೆಜ್ಜೆಯಾಯಿತು.

ವಿಶ್ವ ಅನಸ್ತೇಷಿಯಾ ದಿನದ ಪ್ರಾಮುಖ್ಯತೆ ಮತ್ತು ಹಿನ್ನೆಲೆ: ಪ್ರಸ್ತುತ ನಡೆಸಲಾಗುವ ಯಾವುದೇ ಶಸ್ತ್ರಚಿಕಿತ್ಸೆಗಳಲ್ಲಿ ರೋಗಿಗಳು ನೋವನ್ನು ಅನುಭವಿಸುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಅನಸ್ತೇಷಿಯಾದ ಪರಿಣಾಮ. ಆದ್ದರಿಂದಲೇ ಇದರ ಮಹತ್ವವನ್ನು ಸಾರಲು ಪ್ರತಿ ವರ್ಷ ಅಕ್ಟೋಬರ್ 16ರಂದು ವಿಶ್ವ ಅನಸ್ತೇಷಿಯಾ ದಿನವನ್ನಾಗಿ ಆಚರಿಸಲಾಗುತ್ತದೆ.

ಸುಮಾರು 173 ವರ್ಷದ ಹಿಂದೆ ಡಬ್ಲ್ಯೂ.ಟಿ.ಜಿ ಮಾರ್ಟನ್ ಎಂಬುವವರುಮೊದಲ ಬಾರಿಗೆ ಈಥರ್​ ಅನ್ನು ಅನಸ್ತೇಷಿಯಾ ಆಗಿ ಬಳಸಿ ಯಶಸ್ವಿಯಾದರು. ನಂತರದಲ್ಲಿ ವೈದ್ಯಕೀಯ ಲೋಕದಲ್ಲಿ ಅನಸ್ತೇಷಿಯಾ ಕುರಿತ ಪ್ರತ್ಯೇಕ ಶಾಖೆಯೇ ಬೆಳೆದಿದ್ದು, ‘ಅನಸ್ತೇಷಿಯಾಲಜಿ’ ಎಂದು ಅದನ್ನು ಕರೆಯಲಾಗುತ್ತದೆ. ಪ್ರಸ್ತುತದ ವೈದ್ಯಕೀಯ ಲೋಕವನ್ನು ಅನಸ್ತೇಷಿಯಾವಿಲ್ಲದೇ ಕಲ್ಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಅಕ್ಟೋಬರ್ 16ರಂದು ‘ವಿಶ್ವ ಅನಸ್ತೇಷಿಯಾ ದಿನ’ವನ್ನುಆಚರಿಸಲಾಗುತ್ತಿದ್ದು, ಇಂದು ವಿಶ್ವದೆಲ್ಲೆಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅನಸ್ತೇಷಿಯಾದಲ್ಲಿ ಮೂರು ವಿಧಗಳಿವೆ. ಒಂದು, ಜನರಲ್ ಅನಸ್ತೇಷಿಯಾ. ಇದರಲ್ಲಿ ರೋಗಿಯನ್ನು ಸಂಪೂರ್ಣವಾಗಿ ಪ್ರಜ್ಞೆ ತಪ್ಪಿಸಲಾಗುತ್ತದೆ. ಇದರಲ್ಲಿ ಉಸಿರಾಟ ಅಥವಾ ಐವಿ ಮುಖಾಂತರ ಔಷಧವನ್ನು ನೀಡಲಾಗುತ್ತದೆ. ಎರಡನೆಯದು, ಲೋಕಲ್ ಅನಸ್ತೇಷಿಯಾ. ಇದರಲ್ಲಿ ರೋಗಿಯು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ರೋಗಿ ತುಸು ಎಚ್ಚರದಿಂದಿರುತ್ತಾನೆ. ಮೂರನೆಯದು, ರೀಜಿನಲ್ ಅನಸ್ತೇಷಿಯಾ. ಇದರಲ್ಲಿ ರೋಗಿ ಎಚ್ಚರದಿಂದಿರುತ್ತಾನೆ. ಆದರೆ ಆತನ ದೇಹದ ಭಾಗಗಳು ಸಂವೇದನೆ ಕಳೆದುಕೊಂಡಿರುತ್ತವೆ. ಇದರಿಂದ ರೋಗಿಗೆ ನೋವಾಗುವುದಿಲ್ಲ. ಅನಸ್ತೇಷಿಯಾದಿಂದ ಇನ್ನೂ ಹಲವಾರು ಪ್ರಯೋಜನಗಳಿದ್ದು, ವೈದ್ಯಕೀಯ ಲೋಕವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಇದು ಸಹಾಯ ಮಾಡಿದೆ.

ಇದನ್ನೂ ಓದಿ:

World Food Day 2021: ಇಂದು ವಿಶ್ವ ಆಹಾರ ದಿನ; ಹಿನ್ನೆಲೆ, ಉದ್ದೇಶ ಹಾಗೂ ಈ ವರ್ಷದ ಪರಿಕಲ್ಪನೆಯ ಕುರಿತ ಮಾಹಿತಿ ಇಲ್ಲಿದೆ

Flipkart Big Diwali Sale 2021: ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ದೀಪಾವಳಿ ಸೇಲ್: ಸ್ಮಾರ್ಟ್​ಫೋನ್, ಸ್ಮಾರ್ಟ್​ ಟಿವಿಗಳ ಮೇಲೆ ಬಂಪರ್ ಆಫರ್

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !