Travel: ಪ್ರವಾಸಿಗರಿಗೆ ಸಿಹಿಸುದ್ದಿ ನೀಡಿದ ಪೆರು ಸರ್ಕಾರ, ಮಾಚು ಪಿಚುಗೆ ಮತ್ತೆ ಪ್ರವಾಸ ಆರಂಭ

|

Updated on: Feb 18, 2023 | 7:06 PM

ರಾಜಕೀಯ ಅಶಾಂತಿಯ ಕಾರಣದಿಂದಾಗಿ ಪ್ರವಾಸಿಗರ ಹಿತ ದೃಷ್ಟಿಯಿಂದ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ಮಚು ಪಿಚುವಿನ ಪ್ರವಾಸಕ್ಕೆ ನಿರ್ಬಂಧವನ್ನು ಹೇರಳಾಗಿತ್ತು. ಇದೀಗ ಮತ್ತೊಮ್ಮೆ ಪ್ರವಾಸಿಗರಿಗಾಗಿ ಈ ಸ್ಥಳ ತೆರೆಯುತ್ತಿದೆ.

Travel: ಪ್ರವಾಸಿಗರಿಗೆ ಸಿಹಿಸುದ್ದಿ ನೀಡಿದ ಪೆರು ಸರ್ಕಾರ, ಮಾಚು ಪಿಚುಗೆ ಮತ್ತೆ ಪ್ರವಾಸ ಆರಂಭ
ಮಾಚು-ಪಿಚು
Follow us on

ರಾಜಕೀಯ ಅಶಾಂತಿಯ ಕಾರಣದಿಂದಾಗಿ ಪ್ರವಾಸಿಗರ ಹಿತ ದೃಷ್ಟಿಯಿಂದ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ಮಾಚು ಪಿಚುವಿನ ಪ್ರವಾಸಕ್ಕೆ ನಿರ್ಬಂಧವನ್ನು ಹೇರಳಾಗಿತ್ತು. ಇದೀಗ ಮತ್ತೊಮ್ಮೆ ಪ್ರವಾಸಿಗರಿಗಾಗಿ ಈ ಸ್ಥಳ ತೆರೆಯುತ್ತಿದೆ. ಜನವರಿ 2023ರಲ್ಲಿ ಲಿಮಾ ಮತ್ತು ಕುಸ್ಕೊದಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದು ಅದು ಹಿಂಚಾಚಾರಕ್ಕೆ ತಿರುಗಿದಾಗ, ಪೆರುವಿನ ಪ್ರವಾಸೋದ್ಯವು, ಪ್ರವಾಸಿಗರ ಹಿತದೃಷ್ಟಿಯಿಂದ ಮಚು ಪಿಚುವಿಗೆ ಪ್ರವಾಸ ಕೈಗೊಳ್ಳುವುದನ್ನು ನಿರ್ಬಂಧಿಸಿತ್ತು. ಇದಾದ ಒಂದು ತಿಂಗಳ ಬಳಿಕ ಪೆರು ತನ್ನ ಪ್ರವಾಸಿಗರನ್ನು ಕರೆತರಲು ಬಯಸುತ್ತಿದೆ. ಜನವರಿ 21ರಂದು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದ್ದ ಮಚು ಪಿಚು ಪ್ರವಾಸಿ ಸ್ಥಳವನ್ನು ಫೆಬ್ರವರಿ 15 ರಿಂದ ಮತ್ತೆ ತೆರೆಯಲಾಗಿದೆ. ಮತ್ತು ಟಿಕೆಟ್ ಮಾರಾಟ ಪುನರಾರಂಭಗೊಂಡಿದೆ ಎಂದು ಅಲ್ಲಿನ ರಾಷ್ಟ್ರೀಯ ಸರ್ಕಾರ ಖಚಿತಪಡಿಸಿದೆ.

‘ಸುಮಾರು ಮೂರು ನಾಲ್ಕು ವಾರಗಳ ಹಿಂದೆ ಇಲ್ಲಿನ ಪರಿಸ್ಥಿತಿಯು ತುಂಬಾ ಕೆಟ್ಟದಾಗಿತ್ತು. ಇದು ನಮಗೆ ಬಹಳ ಕಷ್ಟಕರವಾಗಿತ್ತು. ಏಕೆಂದರೆ ಪ್ರವಾಸೋದ್ಯಮವು ಬಹಳ ಸೂಕ್ಷ್ಮ ಉದ್ಯಮವಾಗಿದೆ’ ಎಂದು ಕುಸ್ಕೋ ಮೂಲದ ಸ್ಥಳೀಯ ಟ್ರೆಕ್ಕಿಂಗ್ ಕಂಪೆನಿಯಾದ ಅಲ್ಪಕಾ ಎಕ್ಸ್ಪೆಟಿಶನ್ಸ್ನ ಮಾರ್ಗದರ್ಶಿ ಹಾಗೂ ಸಂಸ್ಥಾಪಕರಾದ ರೌಲ್ ಕೋಲ್ಕ್ ಹೇಳಿದ್ದಾರೆ.

ಸದ್ಯಕ್ಕೆ ಪೆರುವಿನಲ್ಲಿ ಶಾಂತಿ ನೆಲೆಸುತ್ತಿದೆ. ಕುಸ್ಕೋದಲ್ಲಿ ಅಂಗಡಿ ಮುಂಗಟ್ಟು, ಹೋಟೆಲ್‌ಗಳು ತೆರೆದು ಎಲ್ಲವೂ ಶಾಂತಿಯುತವಾಗಿ ನಡೆಯುತ್ತಿದೆ. ಪ್ರವಾಸೋದ್ಯಮಕ್ಕಾಗಿ ಇಂಕಾ ಸಿಟಾಡೆಲ್‌ನ್ನು ಪುನಃ ತೆರೆಯಲಾಗಿದೆ. ಹಾಗೂ ಪ್ರವಾಸಿ ಚಟುವಟಿಕೆ, ಸಾರಿಗೆ ಮತ್ತು ಮಚು ಪಿಚುವಿನ ಸಿಬ್ಬಂದಿಗಳಿಗೆ ಬೆದರಿಕೆ ಹಾಕುವ ಯಾವುದೇ ಪ್ರತಿಭಟನೆಗಳು ನಡೆದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅಲ್ಲಿನ ಸರ್ಕಾರಿ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ಇತ್ತೀಚಿನ ಮಾಹಿತಿಯ ಪ್ರಕಾರ ಅಲ್ಲಿನ ಪ್ರವಾಸೋದ್ಯಮದ ನಷ್ಟವು 400 ಮಿಲಿಯನ್ ಡಲರ್ ಮೀರುವುದರಲ್ಲಿದೆ. ಲಿಮಾ, ಕುಸ್ಕೋ, ಪುನೋ ಮತ್ತು ಅರೆಕ್ವಿಪಾ ಹೆಚ್ಚು ಪ್ರಭಾವಿತ ಪ್ರವಾಸೋದ್ಯಮ ಪ್ರದೇಶಗಳಾಗಿವೆ ಎಂದು ಗ್ಲೋಬಲ್ ಅಡ್ವೆಂಚರ್ ಔಟ್‌ಫಿಟ್ ಇಂಟ್ರೆಪಿಡ್ ಟ್ರಾವೆಲ್‌ನ ಜನರಲ್ ಮ್ಯಾನೆಜರ್ ಫರ್ನಾಂಡೋ ರೋಡ್ರಿಗಸ್ ಹೇಳುತ್ತಾರೆ. ಈ ಟ್ರಾವೆಲ್ ಕಂಪೆನಿ ಆಸ್ಟ್ರೇಲಿಯ ಮೂಲದ್ದಾಗಿದ್ದರೂ ಪಿಮಾ ಮತ್ತು ಕುಸ್ಕೋದಲ್ಲಿ ತನ್ನ ಕಚೇರಿಗಳನ್ನು ಹೊಂದಿದೆ.

ಮಾರ್ಚ್ 19ರಂದು ಲಿಮಾದಿಂದ 15 ದಿನಗಳ 25 ಟ್ರಿಪ್‌ಗಳನ್ನು ಕಾಯ್ದಿರಿಸಲಾಗಿದೆ ಮತ್ತು ನಿಗದಿಪಡಿಸಿದಂತೆ ಮಾರ್ಚ್ 1ರಂದು ಪೆರು ತನ್ನ ಪ್ರವಾಸಗಳನ್ನು ಪ್ರಾರಂಭಿಸಲಿವೆ. ಎಂದು ಇಂಟ್ರೆಪಿಡ್ ಟ್ರಾವೆಲ್ಸ್, ಬ್ಲೂಮ್‌ಬರ್ಗ್ ದೃಢಪಡಿಸಿದೆ. ಕೆಲವು ರಾಜಕಿಯ ಮುಷ್ಕರಗಳು ಇನ್ನೂ ಸಂಭವಿಸಬಹುದು, ಆದರೆ ಸಾಮಾನ್ಯವಾಗಿ ಪ್ರತಿಭಟನಾಕಾರರು ಜನರ ಮೇಲೆ ದಾಳಿ ಮಾಡುವುದಿಲ್ಲ. ‘ಪ್ರವಾಸ ಬರಲು ಪೆರು ಸುರಕ್ಷಿತ ದೇಶ ಎಂದು ನಾನು ಭಾವಿಸುತ್ತೇನೆ’ ಎಂದು ಕೋಲ್ಕ್ ಹೇಳುತ್ತಾರೆ. ಮಾಚು ಪಿಚುವಿಗೆ ಬರಲು ರೈಲು ಸೇವೆ ಮತ್ತೆ ಆರಂಭವಾಗಿದೆ, ಬೇಡಿಕೆ ಹೆಚ್ಚಾದಂತೆ ಸೇವೆಯು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಬ್ಲೂಮ್‌ಬರ್ಗ್ನೊಂದಿಗೆ ಮಾತನಾಡಿದ ಪ್ರವಾಸ ನಿರ್ವಾಹಕರು ದೃಢಪಡಿಸಿದರು.

ಇದನ್ನೂ ಓದಿ:Travel: ಕರ್ನಾಟಕ ಸೇರಿದಂತೆ ಭಾರತದ ಜನರು ರೈಲುಯಾನ ಉತ್ತಮ ಎನ್ನುತ್ತಿದ್ದಾರೆ, ಯಾಕೆ ಗೊತ್ತಾ?

ಇಂಕಾ ಟ್ರಯಲ್‌ನ್ನು ಪ್ರಸ್ತುತ ಮುಚ್ಚಲಾಗಿದೆ, ಇದು ಪ್ರತಿವರ್ಷ ಈ ಸಮಯದಲ್ಲಿ ಸಾಮಾನ್ಯವಾಗಿದೆ. ಏಕೆಂದರೆ ಜನವರಿ ಮತ್ತು ಫೆಬ್ರವರಿಯಲ್ಲಿ ಮಳೆ ಇರುವ ಕಾರಣ ಇದನ್ನು ಮುಚ್ಚಲಾಗುತ್ತದೆ. ಮಾರ್ಚ್ 1 ರಿಂದ ಮತ್ತೆ ಅದು ಪ್ರವಾಸಕ್ಕೆ ಅನುವು ಮಾಡಿಕೊಡುತ್ತದೆ.

ನೀವು ಇಲ್ಲಿಗೆ ಹೋಗಬೆಕೆಂದು ಬಯಸಿದರೆ ಈಗಲೇ ಸಿದ್ದರಾಗಿ:

ಪೆರು ಮತ್ತು ಮಚು ಪಿಚುವಿನ ಬಿಡುವಿಲ್ಲದ ಪ್ರವಾಸಿ ಋತು ಮಾರ್ಚ್​ನಲ್ಲಿ ಪ್ರಾರಂಭವಾಗುತ್ತದೆ. ಮತ್ತು ಮುಂಬಿತವಾಗಿ ಟ್ರಿಪ್ ಬುಕ್ ಮಾಡಬಹುದು. ಮಚು ಪಿಚುವಿಗೆ ಪ್ರವೇಶ ಶುಲ್ಕ ದಿನಕ್ಕೆ 4,500 ಆಗಿದೆ. ಹಾಗೂ ಮುಂಗಡವಾಗಿ ಟಿಕೆಟ್ ಖರೀದಿ ಮಾಡಬೇಕಾಗುತ್ತದೆ. ಪೆರು ಪ್ರವಾಸಿ ಸಂರಕ್ಷಣಾ ನೆಟ್‌ವರ್ಕ್​ನ್ನು ಸಹ ಸ್ಥಾಪಿಸಿದೆ. ಇದರಿಂದಾಗಿ ಪ್ರವಾಸ ನಿರ್ವಾಹಕರು, ಟ್ರಾವೆಲ್ ಏಜೆನ್ಸಿಗಳು ಮತ್ತು ಮತ್ತು ಇತರ ಸೇವೆಗಳ ಅಡೆತಡೆಗಳ ಸಂದಂರ್ಭದಲ್ಲಿ ಪ್ರವಾಸಿಗರು ಹಾಗೂ ಸಂದರ್ಶಕರಿಗೆ ಸಹಾಯ ಮಾಡಲು ಪೆರುವಿನ ರಾಷ್ಟ್ರೀಯ ಪೋಲಿಸ್ ಪ್ರವಾಸಿ ವಿಭಾಗದೊಂದಿಗೆ ತ್ವರಿತವಾಗಿ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಪೆರುವಿನ ಪ್ರವಾಸೋದ್ಯಮ ಮಂಡಳಿಯು ಪ್ರವಾಸಿಗರು ತಮ್ಮ ಸ್ಮಾರ್ಟ್ಫೋನ್‌ನಲ್ಲಿ ಟೂರಿಸ್ಟ್ ಪೋಲಿನ್ ಪೆರು ಅಪ್ಲಿಕೇಷನ್‌ನನ್ನು ಡೌನ್‌ಲೋಡ್ ಮಾಡಲು ಶಿಫಾರಸ್ಸು ಮಾಡುತ್ತದೆ. ಮತ್ತು ಟೂರಿಸ್ಟ್ ಪೋಲಿಸ್, ಸೆಂಟ್ರಲ್ ಪೋಲ್ಟೂರ್ (01 460-1060), ಮತ್ತು ಪೆರುವಿನ ಪ್ರವಾಸಿ ಮಾಹಿತಿ ಕಛೇರಿಯಾದ ಐಪೆರುವಿನ (01 574-8000) ತುರ್ತುಸಂಖ್ಯೆಗಳನ್ನು ಕೈಯಲ್ಲಿ ಇಟ್ಟುಕೊಳ್ಳುವಂತೆ ಶಿಫಾರಸ್ಸು ಮಾಡಿದೆ.

Published On - 7:06 pm, Sat, 18 February 23