Travel: ಕರ್ನಾಟಕ ಸೇರಿದಂತೆ ಭಾರತದ ಜನರು ರೈಲುಯಾನ ಉತ್ತಮ ಎನ್ನುತ್ತಿದ್ದಾರೆ, ಯಾಕೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ರೈಲಿನಲ್ಲಿ ಪ್ರಯಾಣ ಮಾಡಲು ಇಷ್ಟಪಡುತ್ತಾರೆ. ಹೌದು ಮಾಹಿತಿಗಳ ಪ್ರಕಾರ ರೈಲಿನಲ್ಲಿ ಪ್ರಯಾಣ ಸಂಖ್ಯೆ ಹೆಚ್ಚಾಗಿದೆ. ಮತ್ತು ಪ್ರವಾಸಿಗರು ಈಗ ಭಾರತದ ನೈಸರ್ಗಿಕ ಅಧ್ಭುತಗಳನ್ನು ವೀಕ್ಷಿಸಲು ರೈಲು ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

Travel: ಕರ್ನಾಟಕ ಸೇರಿದಂತೆ ಭಾರತದ ಜನರು ರೈಲುಯಾನ ಉತ್ತಮ ಎನ್ನುತ್ತಿದ್ದಾರೆ, ಯಾಕೆ ಗೊತ್ತಾ?
train travel
Follow us
|

Updated on:Feb 10, 2023 | 1:09 PM

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ರೈಲಿನಲ್ಲಿ ಪ್ರಯಾಣ (train travel) ಮಾಡಲು ಇಷ್ಟಪಡುತ್ತಾರೆ. ಹೌದು ಮಾಹಿತಿಗಳ ಪ್ರಕಾರ ರೈಲಿನಲ್ಲಿ ಪ್ರಯಾಣ ಸಂಖ್ಯೆ ಹೆಚ್ಚಾಗಿದೆ. ಮತ್ತು ಪ್ರವಾಸಿಗರು ಈಗ ಭಾರತದ ನೈಸರ್ಗಿಕ ಅಧ್ಭುತಗಳನ್ನು ವೀಕ್ಷಿಸಲು ರೈಲು ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ರೈಲ್ವೆ ವಲಯದಲ್ಲಿನ ಇತ್ತೀಚಿನ ಪ್ರಗತಿಯೊಂದಿಗೆ ಪ್ರಯಾಣಿಕರು ಈಗ ಈ ಕೆಲವು ಸ್ಥಳಗಳಿಗೆ ರೈಲ್ವೆಗಳ ಮೂಲಕ ಪ್ರವಾಸವನ್ನು ಕೈಗೊಳ್ಳಬಹುದು. ಮತ್ತು ನಿಸರ್ಗದ ಸೌಂದರ್ಯದೊಂದಿಗೆ ಪ್ರಯಾಣದ ಅನುಭವವನ್ನು ಆನಂದಿಸಬಹುದು. ರೈಲು ಪ್ರಯಾಣವು ಪ್ರಯಾಣಿಕರಿಗೆ ಹೆಚ್ಚಿನ ಮಟ್ಟದ ಉತ್ಸಾಹವನ್ನು ನೀಡುತ್ತದೆ. ರಜಾದಿನಗಳು ನಮ್ಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ರಜಾದಿನಗಳಲ್ಲಿ ಮನಸ್ಸಿಗೆ ನೆಮ್ಮದಿ ನೀಡುವ ಪ್ರಯಾಣಗಳು ಒತ್ತಡದ ಜೀವನ ಶೈಲಿಯಿಂದ ನಮಗೆ ಅಗತ್ಯವಾದ ವಿರಾಮವನ್ನು ನೀಡುತ್ತದೆ. ಅದರೆ ಇತ್ತೀಚಿಗೆ ರಸ್ತೆಯ ಪ್ರಯಾಣವು ಹೆಚ್ಚು ಕಷ್ಟಕರವಾಗುತ್ತಿದೆ. ಟ್ರಾಫಿಕ್ ಜಾಮ್, ರಸ್ತೆಯಲ್ಲಿ ಹೊಂಡ, ಗುಂಡಿಗಳು ನಮ್ಮ ಪ್ರಯಾಣದಲ್ಲಿ ಕಿರಿಕಿರಿಯನ್ನು ಉಂಟುಮಾಡಬಹುದು.

ಇದರ ಬದಲು ರೈಲು ಪ್ರಯಾಣವು ಉತ್ತಮವಾದ ಆಯ್ಕೆಯಾಗಿದೆ. ಮತ್ತು ಇತ್ತೀಚಿಗೆ ಪ್ರವಾಸಿಗರು ಭಾರತದ ನೈಸರ್ಗಿಕ ಅದ್ಭುತಗಳಿಗೆ ಭೇಟಿ ನೀಡಲು ಆದ್ಯತೆ ನೀಡುವುದರಿಂದ ರೈಲು ಪ್ರಯಾಣದಲ್ಲಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ರೈಲ್ವೆ ಸಚಿವಾಲಯದ ಪ್ರಕಾರ, ಈ ಬಾರಿಯ ಹಣಕಾಸು ವರ್ಷದ ಮೊದಲ ಎಂಟು ತಿಂಗಳಲ್ಲಿ ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ 76 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.

ಇದನ್ನು ಓದಿ: Free Flight Travel: ಉಚಿತ ವಿಮಾನ ಪ್ರಯಾಣ: ಹೀಗೊಂದು ಅಫರ್ ಕೊಟ್ಟ ಮ.ಪ್ರ. ಸಿಎಂ

ಡ್ರೀಮ್‌ಫೋಕ್ಸ್ ಸರ್ವಿಸಸ್ ಲಿಮಿಟೆಡ್‌ನ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಲಿಬರಥಾ ಕಲ್ಲಟ್ ಅವರು ‘ಭಾರತವು ವೈವಿಧ್ಯತೆ ಮತ್ತು ವೈಭವದ ದೇಶವಾಗಿದೆ. ಅದರ ಸೌಂದರ್ಯವನ್ನು ಅನುಭವಿಸಲು ಉತ್ತಮ ಮಾರ್ಗವೆಂದರೆ ರೈಲ್ವೇ ಮೂಲಕ ಪ್ರಯಾಣಿಸುವುದು. ರೈಲ್ವೆ ವಲಯದಲ್ಲಿನ ಇತ್ತೀಚಿನ ಪ್ರಗತಿಯೊಂದಿಗೆ, ಪ್ರಯಾಣಿಕರು ಈಗ ಸಾಟಿಯಿಲ್ಲದ ಪ್ರಯಾಣದ ಅನುಭವವನ್ನು ಆನಂದಿಸಬಹದು. ಆನ್‌ಲೈನ್ ಟಿಕೆಟಿಂಗ್, ನೈಜ-ಸಮಯದ ಟ್ರ್ಯಾಕಿಂಗ್, ಮೊಬೈಲ್ ಅಪ್ಲಿಕೆಶನ್‌ಗಳು ಹಾಗೂ ಸುಧಾರಿತ ರೈಲು ವ್ಯವಸ್ಥೆಗಳ ಮೂಲಕ ಭಾರತವನ್ನು ಆರಾಮವಾಗಿ ಮತ್ತು ಸುಂದರವಾಗಿ ಅನ್ವೇಷಿಸಬಹುದು. ಈಗ ರೈಲ್ವೆಗಳು ಹೊಸದಾಗಿ ಪರಿಚಯಿಸಲಾದ ಐಷಾರಾಮಿ ರೈಲ್ವೆ ಲಾಂಜ್‌ಗಳನ್ನು ಸಹ ನೀಡುತ್ತಿವೆ. ಇದು ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದೆ ಎಂದು ಹೇಳಿದರು.

‘ಆಗ್ರಾ, ಅಹಮದಬಾದ್, ಅಸನ್ಸೋಲ್, ದೆಹಲಿ, ಜೈಪುರ, ಕೋಲ್ಕತ್ತಾ, ಮಧುರೈ, ವಾರಣಾಸಿ ಹಾಗೂ ಕರ್ನಾಟಕ ಕೆಲವು ಭಾಗಗಳಲ್ಲಿ ರೈಲ್ವೆ ಲಾಂಜ್‌ಗಳು ಆಧುನಿಕ ಸೌಕರ್ಯಗಳೊಂದಿಗೆ ಸಾಂಪ್ರದಾಯಿಕ ಭಾರತೀಯ ಆತಿಥ್ಯದ ಪರಿಪೂರ್ಣ ಮಿಶ್ರಣವನ್ನು ನೀಡುತ್ತವೆ, ಈ ವಿಶ್ರಾಂತಿ ಕೊಣೆಗಳು ಪ್ರಯಾಣದ ಅನುಭವಿಗಳಿಗೆ ಸೌಕರ್ಯವನ್ನು ಹೆಚ್ಚಿಸವೆ. ಸಂಕಾಶ್‌ನ ಸಹ ಸಂಸ್ಥಾಪಕಿ ಅಭಿಲಾಶಾ ನೇಗಿ ಅವರ ಪ್ರಕಾರ ಗೋವಾ ಭಾರತದ ಪಾರ್ಟಿಯ ರಾಜಧಾನಿಯಾಗಿದೆ. ಮತ್ತು ಮುಂಬೈನಂತಹ ಒತ್ತಡದ ಜೀವನಶೈಲಿಯಿಂದ ತ್ವರಿತ ವಿರಾಮವನ್ನು ತೆಗೆದುಕೊಳ್ಳಲು ಯೋಚಿಸಿದಾಗ ಗೋವಾ ನಮ್ಮ ಮನಸ್ಸಿಗೆ ಬರುವ ಮೊದಲ ಸ್ಥಳವಾಗಿದೆ. ಮತ್ತು ‘ವಿಮಾನದಲ್ಲಿ ಪ್ರಯಾಣ ಮಾಡುವುದು ಯಾವಾಗಲೂ ಪ್ರವಾಸಿಗರಿಗೆ ಒಂದು ಆಯ್ಕೆಯಾಗಿದೆ, ಮುಂಬೈನಿಂದ ಗೋವಾಕ್ಕೆ ರೈಲಿನಲ್ಲಿ ಪ್ರಯಾಣಿಸುವುದು ಒಂದು ಅನನ್ಯ ಅನುಭವವನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕರು ಕಲ್ಕಾದಿಂದ ಶಿಮ್ಲಾಕ್ಕೆ ರೈಲಿನಲ್ಲಿ ಹೋಗಲು ಬಯಸುತ್ತಾರೆ.

ಅವರು ಹೇಳುತ್ತಾರೆ ಕಲ್ಕಾ ಮತ್ತು ಶಿಮ್ಲಾ ನಡುವಿನ ಸಣ್ಣ ಗೇಜ್‌ನಲ್ಲಿ ಚಲಿಸುವ ಹಿಮಾಲಯನ್ ಕ್ವೀನ್ ರೈಲು ಆಟಿಕೆ ರೈಲಿಗೆ ಹೆಚ್ಚು ಹೋಲುತ್ತದೆ. ಇದು ಕಲ್ಕಾದಿಂದ ನಿರ್ಗಮಿಸುತ್ತದೆ ಮತ್ತು ಸುಮಾರು 96 ಕಿಲೋ ಮೀಟರ್‌ಗಳಷ್ಟು ಕ್ರಮಿಸುತ್ತದೆ. ಈ ಸ್ಥಳಗಳಲ್ಲಿ ರೈಲು ಚಲಿಸುವಾಗ ಪ್ರಯಾಣಿಕರಿಗೆ ಈ ಪ್ರದೇಶಗಳ ಪೈನ್ ಕಾಡುಗಳು, ಸುಂದರ ಕಣಿವೆಗಳು ಮತ್ತು ಶಾಂತಿಯುತ ಬೆಟ್ಟದ ಪಟ್ಟಣಗಳ ಅದ್ಭುತ ನೋಟಗಳನ್ನು ನೀಡುತ್ತದೆ. ರೈಲು 102 ಸುರಂಗ ಮಾರ್ಗಗಳ ಮೂಲಕ ಚಲಿಸುತ್ತದೆ, 964 ಸೇತುವೆಗಳನ್ನು ದಾಟುತ್ತದೆ ಮತ್ತು ಪ್ರಯಾಣದಲ್ಲಿ 919 ವಕ್ರಾಕೃತಿ ಮಾರ್ಗಗಳು ಸಿಗುತ್ತವೆ. ಈ ಎಲ್ಲಾ ಅಂಶಗಳಿಂದ ಕಲ್ಕಾ ಟು ಶಿಮ್ಲಾ ಪ್ರಯಾಣ ಅದ್ಬೂತವಾಗಿರುತ್ತದೆ. ಹೆಚ್ಚುವರಿಯಾಗಿ ಧಾರ್ಮಿಕ ಸ್ಥಳಗಳಿಗೆ ರೈಲ್ವೆ ಮಾರ್ಗವಾಗಿ ಹೋಗುವುದು ಏರಿಕೆ ಕಂಡುಬಂದಿದೆ. ವಾರಣಾಸಿ, ತಿರುಪತಿಗೆ ರೈಲು ಪ್ರಯಾಣದ ಮೂಲಕ ಹೋಗುವವರ ಸಂಖ್ಯೆ ಹೆಚ್ಚಾಗಿದೆ.

Published On - 1:09 pm, Fri, 10 February 23

Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ