Travel: ಬೆಂಗಳೂರಿನ ಈ ಎರಡು ಸ್ಥಳಕ್ಕೆ ನೀವು ಹೋಗಿರಲು ಸಾಧ್ಯವೇ ಇಲ್ಲ? ಈ ವಿಕೇಂಡ್​ನಲ್ಲಿ ಹೋಗಿ ಬನ್ನಿ

|

Updated on: Feb 24, 2023 | 6:36 PM

ಈ ವಾರಪೂರ್ತಿಯ ಕೆಲಸದ ಒತ್ತಡದಲ್ಲಿ ಸ್ವಲ್ಪ ಬ್ರೇಕ್ ಪಡೆದುಕೊಂಡು ಎಲ್ಲಾದರೂ ಸಣ್ಣ ಟ್ರಿಪ್‌ಗೆ ಹೋಗಿ ವೀಕೆಂಡ್‌ನ್ನು ಖುಷಿಯಿಂದ ಕಳೆಯಬೇಕು ಎಂದು ಅನಿಸುತ್ತದೆಯೇ, ಹಾಗೂ ಯಾವ ಸ್ಥಳ ಟ್ರಿಪ್‌ಗೆ ಉತ್ತಮ ಎನ್ನುವ ಗೊಂದಲ ನಿಮಗಿದೆಯೇ.

Travel: ಬೆಂಗಳೂರಿನ ಈ ಎರಡು ಸ್ಥಳಕ್ಕೆ ನೀವು ಹೋಗಿರಲು ಸಾಧ್ಯವೇ ಇಲ್ಲ? ಈ ವಿಕೇಂಡ್​ನಲ್ಲಿ ಹೋಗಿ ಬನ್ನಿ
Follow us on

ಇನ್ನೇನು ವೀಕೆಂಡ್ ಬಂದೇ ಬಿಟ್ಟಿತು. ಈ ವಾರಪೂರ್ತಿಯ ಕೆಲಸದ ಒತ್ತಡದಲ್ಲಿ ಸ್ವಲ್ಪ ಬ್ರೇಕ್ ಪಡೆದುಕೊಂಡು ಎಲ್ಲಾದರೂ ಸಣ್ಣ ಟ್ರಿಪ್‌ಗೆ ಹೋಗಿ ವೀಕೆಂಡ್‌ನ್ನು ಖುಷಿಯಿಂದ ಕಳೆಯಬೇಕು ಎಂದು ಅನಿಸುತ್ತದೆಯೇ, ಹಾಗೂ ಯಾವ ಸ್ಥಳ ಟ್ರಿಪ್‌ಗೆ ಉತ್ತಮ ಎನ್ನುವ ಗೊಂದಲ ನಿಮಗಿದೆಯೇ. ಹಾಗಾದರೆ ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ. ಈ ಕೆಲವೊಂದು ಪ್ರದೇಶಗಳಿಗೆ ಪ್ರವಾಸ ಹೋಗುವ ಮೂಲಕ ವೀಕೆಂಡ್​ನ್ನು ಎಂಜಾಯ್ ಮಾಡುವುದರ ಜೊತೆಗೆ ನಿಮ್ಮ ಮನಸ್ಸನ್ನು ರಿಫ್ರೇಶ್ ಮಾಡಬಹುದು.

ಚೋಟಾ ಲಡಾಖ್(ದೊಡ್ಡ ಆಯುರ್)

ನೀವು ಈ ವೀಕೆಂಡ್‌ನಲ್ಲಿ ಬೆಂಗಳೂರಿಗೆ ಹತ್ತಿರವಾಗಿರುವ ಯಾವುದಾದರೂ ಸ್ಥಳಕ್ಕೆ ಟ್ರಿಪ್ ಹೋಗಬೇಕೆಂದು ಬಯಸಿದರೆ, ನೀವು ಚೋಟಾ ಲಡಾಖ್‌ಗೆ ಹೋಗಬಹುದು. ಈ ಪ್ರದೆಶವನ್ನು ದೊಡ್ಡ ಆಯುರ್ ಅಂತಲೂ ಕರೆಯುತ್ತಾರೆ. ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಈ ಚೋಟಾ ಲಡಾಖ್ ಮಳೆ ನೀರಿನಿಂದ ತುಂಬಿದ ಮತ್ತು ಘನವಾದ ಬಂಡೆಗಳಿಂದ ಸುತ್ತುವರೆದಿರುವ ಒಂದು ಕಲ್ಲಿನ ಕೋರೆಯ ಪ್ರದೇಶವಾಗಿದೆ. ಇದು ಲಡಾಖ್ ಭೂ ದೃಶ್ಯದ ಹೋಲಿಕೆಯನ್ನು ಹೊಂದಿರುವ ಕಾರಣ ಇದನ್ನು ಚೋಟಾ ಲಡಾಖ್ ಎಂದು ಕರೆಯುತ್ತಾರೆ. ಬೈಕ್ ರೈಡಿಂಗ್‌ಗೆ ಹೇಳಿ ಮಾಡಿಸಿದಂತಹ ಸ್ಥಳವಾಗಿದೆ.

ವೀಕೆಂಡ್‌ನ ಕಿರು ಪ್ರವಾಸ ಹಾಗೂ ಲಾಂಗ್ ಡ್ರೆವ್ ಬರಲು ಇಚ್ಛಿಸುವವರು ಈ ಪ್ರದೇಶಕ್ಕೆ ಭೇಟಿ ನೀಡಬಹುದು. ಅತ್ಯಂತ ಪ್ರಶಾಂತವಾದ ಹಾಗೂ ಶಾಂತಿಯುತವಾದ ಸ್ಥಳವಾಗಿದೆ. ಇದು ಕ್ವಾರೆ ಪ್ರದೇಶವಾಗಿರುವುದರಿಂದ ಇಲ್ಲಿ ಬಿಳಿ ಮತ್ತು ಸ್ಪಟಿಕ ಶುದ್ಧ ನೀರಿನಿಂದ ತುಂಬಿದ ಸರೋವರವನ್ನು ಕಾಣಬಹುದು. ಇದು ಕೂಡಾ ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದೆ.
ಇದು ತೆರೆದ ಸ್ಥಳವಾಗಿರುವುದರಿಂದ ಮಧ್ಯಾಹ್ನದ ಸುಡುವ ಶಾಖವನ್ನು ತಪ್ಪಿಸಲು ಬೆಳಗ್ಗೆ ಬೇಗನೆ ಈ ಸ್ಥಳಕ್ಕೆ ಭೇಟಿ ನೀಡಬಹುದು. ಹಾಗೂ ಮುಸ್ಸಂಜೆ ಹೊತ್ತಲ್ಲಿ ಭೇಟಿ ನೀಡಬಹುದು.

ಇಲ್ಲಿಗೆ ತಲುಪುವುದು ಹೇಗೆ:

ದೊಡ್ಡ ಆಯುರ್ ಬೆಂಗಳೂರಿನ ಪೂರ್ವಕ್ಕೆ 57 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ತಲುಪಲು NH 75ನಲ್ಲಿ ಹೋಗಿ ಗೂಗಲ್ ಮ್ಯಾಪ್‌ನ್ನು ಅನುಸರಿಸಿ. ಇನ್ನೊಂದು ಮಾರ್ಗವೆಂದರೆ ಹಳೆ ವಿಮಾನ ನಿಲ್ದಾಣದ ಮೂಲಕ ಹೋಗುವುದು. ಇಲ್ಲಿಂದ ಸುಮಾರು 2 ಗಂಟೆಗಳ ಪ್ರಯಾಣದ ಮೂಲಕ ಚೋಟಾ ಲಡಾಖ್‌ನ್ನು ತಲುಪಬಹುದು.

ಮೈತ್ರೇಯ ಬುದ್ಧ ಪಿರಮಿಡ್:

ವಾರಪೂರ್ತಿ ಆಫೀಸ್‌ನಲ್ಲಿ ಕೆಲಸ ಮಾಡಿ ಸುಸ್ತಾಗಿ ವೀಕೆಂಡ್‌ನಲ್ಲಿ ಮನಸ್ಸನ್ನು ರಿಫ್ರೇಶ್ ಮಾಡುವಂತಹ ಸ್ಥಳಕ್ಕೆ ಭೆಟಿ ನೀಡಬೇಕೆಂದೆನಿಸುತ್ತಿದ್ದೆಯೇ? ಇದಕ್ಕೆ ಬೆಸ್ಟ್ ಸ್ಥಳ ಎಂದರೆ ಅದುವೇ ಮೈತ್ರೇಯ ಬುದ್ಧ ಪಿರಮಿಡ್. ಬೆಂಗಳೂರಿನಿಂದ ಸುಮಾರು 40 ಕಿಲೋಮೀಟರ್ ದಾಟಿದರೆ ನಿಮಗೆ ಈ ಅದ್ಭುತ ಸ್ಥಳದ ದರ್ಶನವಾಗುತ್ತದೆ. ಬೆಂಗಳೂರಿನ ಕೆಬ್ಬೆದೊಡ್ಡಿಯಲ್ಲಿರುವ ಮೈತ್ರೇಯ ಬುದ್ಧ ಪಿರಮಿಡ್‌ನ್ನು ವಿಶ್ವದ ಅತೀ ದೊಡ್ಡ ಧ್ಯಾನ ಪಿರಮಿಡ್ ಎಂದು ಪರಿಗಣಿಸಲಾಗಿದೆ. ಕಲ್ಲಿನ ಬೆಟ್ಟಗಳು ಮತ್ತು ಹಚ್ಚಹಸಿರಿನ ಕಣಿವೆಯಲ್ಲಿ ನೆಲೆಯಾಗಿರುವ ಇದು ಬೆಂಗಳೂರಿನ ಸಮೀಪದಲ್ಲೇ ಇರುವ ಗುಪ್ತ ಸ್ಥಳವಾಗಿದೆ. ಸ್ಥಳೀಯರಿಗೂ ಈ ಪ್ರದೇಶದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಈ ಧ್ಯಾನ ಪಿರಮಿಡ್‌ನ್ನು 2005ರಲ್ಲಿ ನಿರ್ಮಿಸಲಾಯಿತು. ಇದು 102 ಅಡಿ ಎತ್ತರದ ಕಟ್ಟಡದಷ್ಟು ಎತ್ತರವಾಗಿದೆ. ಒಂದೇ ಸಮಯದಲ್ಲಿ 5,000 ಜನ ಇಲ್ಲಿ ಧ್ಯಾನ ಮಾಡಬಹುದು.

ಇದನ್ನೂ ಓದಿ: Travel: ಕರ್ನಾಟಕದ ಈ ಭಾಗಕ್ಕೆ ನೀವು ಪ್ರವಾಸ ಮಾಡಿದ್ದೀರಾ? ಹಾಗಿದ್ದರೆ ಈ ವಿಕೇಂಡ್​ನಲ್ಲಿ ಪ್ಲಾನ್ ಮಾಡಿ

ಇದು ಪಿರಮಿಡ್ ವ್ಯಾಲಿ ಇಂಟರ್‌ನ್ಯಾಷನಲ್‌ನ ಒಂದು ಭಾಗವಾಗಿದೆ. ಇದನ್ನು ಪಿರಮಿಡ್ ಸ್ಪಿರಿಚುವಲ್ ಸೊಸೈಟೀಸ್ ಮೂವ್‌ಮೆಂಟ್ ನಡೆಸುತ್ತಿದ್ದೆ. ವಾರಪೂರ್ತಿಯ ಒತ್ತಡದಿಂದ ಸ್ವಲ್ಪ ಮುಕ್ತಿಯನ್ನು ಪಡೆದು ಧ್ಯಾನದಲ್ಲಿ ನಿರತರಾಗರು ಈ ಸ್ಥಳಕ್ಕೆ ಒಮ್ಮೆಯಾದರೂ ಭೇಟಿ ನೀಡಲೇಬೇಕು. ಪ್ರಶಾಂತವಾದ ವಾತವರಣ, ಮರಗಿಡಗಳು, ತಂಪಾದ ಗಾಳಿ ಇವೆಲ್ಲವು ನಿಮ್ಮ ಮನಸ್ಸಿಗೆ ಮುದವನ್ನು ನೀಡುತ್ತದೆ. ಹಾಗಾಗಿ ಈ ಸ್ಥಳಕ್ಕೆ ಕಿರು ಪ್ರವಾಸವನ್ನು ಕೈಗೊಳ್ಳುವ ಮೂಲಕ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು. ಬೆಂಗಳೂರಿನಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಪಿರಮಿಡ್ ಕಣಿವೆಯು ರಸ್ತೆಗಳ ಮೂಲಕ ಸಂಪರ್ಕವನ್ನು ಹೊಂದಿದೆ. ಇಲ್ಲಿನ ಭೇಟಿಯ ಸಮಯ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ.

ಡೆಲ್ಟಾ ಬೀಚ್, ಕೋಡಿ-ಬೆಂಗ್ರೆ:

ನೀವು ಬೀಚ್‌ಗೆ ಹೋಗಲು ಇಷ್ಟ ಪಡುವವರಾಗಿದ್ದರೆ ಖಂಡಿತವಾಗಿಯೂ ಡೆಲ್ಟಾ ಬೀಚ್‌ಗೆ ಭೇಟಿ ನೀಡಬಹುದು. ಇದು ಉಡುಪಿ, ಮನಿಪಾಲಕ್ಕೆ ಹತ್ತಿರವಾಗಿರುವ ಬೀಚ್ ಆಗಿದೆ. ಹಳ್ಳಿಗಾಡಿನ ರಸ್ತೆಗಳ ಮೂಲಕ ಹಾದು ಹೋಗುವಾಗ ರಸ್ತೆಯ ಇಕ್ಕೆಳಗಳಲ್ಲೂ ತೆಂಗಿನ ಮರಗಳು ಸಾಲುಗಟ್ಟಿ ನಿಂತಿರುವುದನ್ನು ಕಂಡು ನೀವು ಪ್ರಕೃತಿಯ ಸೌಂದರ್ಯದಲ್ಲಿ ಕಳೆದೇ ಹೋಗುತ್ತೀರಿ. ಯಾಕೆಂದರೆ ಅಷ್ಟೊಂದು ಸುಂದರವಾಗಿದೆ ಈ ಪ್ರದೇಶ. ರಜಾದಿನವನ್ನು ಆನಂದಿಸಲು ಈ ಸ್ಥಳಕ್ಕೆ ಭೇಟಿ ನೀಡಬಹುದು.

ಇದು ನದಿಗಳು ಅರಬ್ಬಿ ಸಮುದ್ರ ಸಂಧಿಸುವಂತಹ ಸ್ಥಳವಾಗಿದೆ. ಈ ಕಡಲತೀರದ ಪ್ರಶಾಂತತೆಯಿಂದ ಯಾವುದೇ ಪ್ರವಾಸಿಗರು ಪುಳಕಿತರಾಗುವುದಂತು ನಿಜ. ಇಲ್ಲಿ ಬೀಚ್ ಸೌಂದರ್ಯವನ್ನು ಸವಿಯುವುದರ ಜೊತೆಗೆ ಹಲವು ರೀತಿಯ ಚಟುವಟಿಕೆಗಳನ್ನು ಮಾಡಬಹುದು. ಬೀಚ್ ಸ್ಟೊಲಿಂಗ್, ಕಯಾಕಿಂಗ್, ಹೌಸ್ ಬೋಟ್ ರೈಡ್ ಇತ್ಯಾದಿ ಚಟುವಟಿಕೆಗಳಿಗೂ ಇಲ್ಲಿ ಅವಕಾಶವಿದೆ.ಇಲ್ಲಿಗೆ ತಲುಪುವುದು ಹೇಗೆ: ಡೆಲ್ಟಾ ಬೀಚ್ ತಳುಪುದು ಸುಲಭ. ಉಡುಪಿ ಸಂತೆಕಟ್ಟೆಯಿಂದ ಬಸ್ ಮೂಲಕ ಕೋಡಿ ಬೆಂಗ್ರೆಗೆ ತಲುಪಬಹುದು. ನಿಮ್ಮ ಸ್ವಂತ ವಾಹನದ ಮೂಲಕ ಇದೇ ಹಾದಿಯಲ್ಲಿ ನೀವು ಬರಬಹುದು. ಇನ್ನೊಂದು ಆಯ್ಕೆಯೆಂದರೆ ಹಂಗರಕಟ್ಟೆಯನ್ನು ತಲುಪಿ ಅಲ್ಲಿಂದ ದೋಣಿಯ ಮೂಲಕ ಬೆಂಗ್ರೆಗೆ ಹೋಗಬಹುದು.

 

Published On - 6:36 pm, Fri, 24 February 23