
ಮನೆಯನ್ನು ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೂ ಜಿರಳೆಗಳ (cockroach) ಹಾವಳಿ ಇದ್ದೇ ಇರುತ್ತದೆ. ಅದರಲ್ಲೂ ಅಡುಗೆ ಮನೆಯಲ್ಲಿ ಇವುಗಳ ಕಾಟ ತುಸು ಹೆಚ್ಚೇ ಇರುತ್ತದೆ. ಆಹಾರ ಪದಾರ್ಥಗಳನ್ನಿಟ್ಟಿರುವ ಸ್ಥಳ, ಸಿಂಕ್, ಕಸದ ಬುಟ್ಟಿ ಇತ್ಯಾದಿ ಸ್ಥಳಗಳಲ್ಲಿ ಜಿರಳೆಗಳು ಹೆಚ್ಚಾಗಿ ಓಡಾಡುತ್ತಿರುತ್ತವೆ. ಹೀಗೆ ಸುಳಿದಾಡುವ ಇವು ಪಾತ್ರೆಗಳು, ಆಹಾರ ಪದಾರ್ಥಗಳನ್ನು ಸ್ಪರ್ಶಿಸುವ ಮೂಲಕ ನಮಗೆ ರೋಗಗಳನ್ನು ಹರಡುತ್ತವೆ. ಇದು ಅಲರ್ಜಿ, ಕೆಂಪು, ತುರಿಕೆ ಮತ್ತು ಉಸಿರಾಟದ ಸಮಸ್ಯೆಗಳು ಸೇರಿದಂತೆ ಹಲವು ಕಾಯಿಲೆಗಳನ್ನು ಉಂಟು ಮಾಡಬಹುದು. ಹಾಗಾಗಿ ಇವುಗಳ ಹಾವಳಿಯಿಂದ ಮುಕ್ತಿ ಪಡೆಯಲು ಬಹುತೇಕರು ರಾಸಯನಿಕಯುಕ್ತ ಸ್ಪ್ರೇ ಇತ್ಯಾದಿ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಅಷ್ಟೇನೂ ಒಳ್ಳೆಯದಲ್ಲ. ಹೀಗಿರುವಾಗ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಜೊತೆಗೆ ಟೊಮೆಟೋದಲ್ಲಿ ಈ ಎರಡು ವಸ್ತುಗಳನ್ನು ಬೆರೆಸಿ ಜಿರಳೆಗಳು ಓಡಾಡುವ ಸ್ಥಳದಲ್ಲಿ ಇರುವ ಮೂಲಕ ಇವುಗಳ ಹಾವಳಿಯಿಂದ ಮುಕ್ತಿ ಪಡೆಯಬಹುದು.
ನಿಮ್ಮ ಅಡುಗೆಮನೆಯಲ್ಲಿ ಮತ್ತು ನಿಮ್ಮ ಕೋಣೆಗಳಲ್ಲಿ ಜಿರಳೆಗಳು ಓಡಾಡುವುದನ್ನು ನೀವು ನೋಡಿದರೆ, ಅವುಗಳು ಎಲ್ಲಿ ಓಡಾಡುತ್ತದೆಯೋ ಅಲ್ಲಿ ಟೊಮೆಟೊದಲ್ಲಿ ಅಡುಗೆ ಸೋಡಾ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಇಟ್ಟುಬಿಡಿ. ಈ ಪರಿಣಾಮಕಾರಿ ಮನೆಮದ್ದು ಜಿರಳೆಗಳನ್ನು ಪರಿಣಾಮಕಾರಿಯಾಗಿ ತೊಡೆದು ಹಾಕುತ್ತವೆ. ಇದಕ್ಕಾಗಿ ಟೊಮೆಟೊವನ್ನು ಕತ್ತರಿಸಿ, ಅದರ ಬೀಜಗಳು ಮತ್ತು ತಿರುಳನ್ನು ತೆಗೆದುಹಾಕಿ ಬಳಿಕ ಅದಕ್ಕೆ ಅರ್ಧ ಟೀಚಮಚ ಅಡಿಗೆ ಸೋಡಾ ಮತ್ತು ಒಂದು ಟೀಚಮಚ ಸಕ್ಕರೆಯನ್ನು ಹಾಕಿ ಮಿಶ್ರಣ ಮಾಡಿ, ಜಿರಳೆಗಳು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಇರಿಸಿ. ಸಕ್ಕರೆ ಮತ್ತು ಟೊಮೆಟೊದ ವಾಸನೆಗೆ ಈ ಮಿಶ್ರಣದತ್ತ ಬರುವ ಜಿರಳೆಗಳು ಈ ಮಿಶ್ರಣವನ್ನು ತಿಂದು ಸಾಯುತ್ತವೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಹಾವುಗಳು ಪದೇ ಪದೇ ಮನೆ ಬಳಿ ಕಾಣಿಸಿಕೊಳ್ಳಲು ಈ ಮರ ಗಿಡಗಳೇ ಮುಖ್ಯ ಕಾರಣ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:12 pm, Sat, 16 May 26