
ಕೆಲವರ ಬೆವರಿದಾಗ (sweat odor) ಕೆಟ್ಟ ವಾಸನೆಯನ್ನು ಬೀರುತ್ತಾರೆ, ಹೀಗಾಗಿ ಎಲ್ಲರ ಮುಂದೆ ಅಪ್ಪಿಕೊಳ್ಳಲು, ಕೈ ಮೇಲೆತ್ತಲು ಮುಜುಗರ ಆಗುವುದು ಸಹಜ. ಆದರೆ ಹೆಚ್ಚಿನವರು ಬೆವರಿನಿಂದ ಹಾಗೂ ದುರ್ನಾತದಿಂದ ತಪ್ಪಿಸಿಕೊಳ್ಳಲು ಬೇರೆ ಬೇರೆ ರೀತಿಯ ಕ್ರಮಗಳನ್ನು, ದುಬಾರಿ ಸುಗಂಧಗಳನ್ನು ಹಚ್ಚಿಕೊಳ್ಳುತ್ತಾರೆ. ಆದರೆ ಸುಲಭ ಪರಿಹಾರವನ್ನು ಕೇವಲ 20 ರೂಪಾಯಿಗಳಲ್ಲಿ ಮಾಡಬಹುದು. ಈ ವಸ್ತುವಿನಲ್ಲಿರುವ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ವಾಸನೆಯನ್ನು ನಿವಾರಿಸುವುದಲ್ಲದೇ ಬೆವರುವಿಕೆಯನ್ನು ಕಡಿಮೆ ಮಾಡುತ್ತದೆ.
ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸ್ಪಟಿಕದಲ್ಲಿ ಕಂಡುಬರುತ್ತವೆ. ಇದು ದೇಹದಲ್ಲಿ ಬೆವರಿನಿಂದ ಉಂಟಾಗುವ ವಾಸನೆಯನ್ನು ಹಾಗೂ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದರ ಸಂಕೋಚಕ ಗುಣಗಳು ಚರ್ಮದ ರಂಧ್ರಗಳನ್ನು ಕುಗ್ಗಿಸುತ್ತವೆ, ಜತೆಗೆ ಬೆವರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘಕಾಲದವರೆಗೆ ತಾಜಾವಾಗಿರಿಸುತ್ತದೆ.
ಇದನ್ನೂ ಓದಿ: ಚೀನೀಯರ ಈ ವ್ಯಾಯಮ ಮಾಡಿದ್ರೆ ಹೊಟ್ಟೆ ಮತ್ತು ಸೊಂಟದ ಕೊಬ್ಬು ಕಡಿಮೆ ಆಗುವುದು ಖಂಡಿತ
ದುಬಾರಿ ಸುಗಂಧ ದ್ರವ್ಯಗಳು ಮತ್ತು ಡಿಯೋಗಳು ಕೆಲವು ಗಂಟೆಗಳ ಕಾಲ ಮಾತ್ರ ಪರಿಮಳವನ್ನು ನೀಡುತ್ತವೆ. ಆದರೆ ಯಾವುದೇ ಬ್ಯಾಕ್ಟೀರಿಯಾವನ್ನು ನಿವಾರಿಸುವುದಿಲ್ಲ. ಸ್ಪಟಿಕವು ಬಜೆಟ್ ಸ್ನೇಹಿ ಮಾತ್ರವಲ್ಲದೇ ಸಮಸ್ಯೆಗೆ ಸುಲಭವಾಗಿ ಪರಿಹಾರವನ್ನು ನೀಡುತ್ತದೆ. ಅದಕ್ಕಾಗಿಯೇ ಇಂದಿಗೂ ಹಳ್ಳಿಗಳಲ್ಲಿ ಜನರು ಇದನ್ನು ದೇಹದ ಆರೈಕೆಯಲ್ಲಿ ಬಳಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ