Valentine’s Day 2023: ನಿಮ್ಮಿಂದ ದೂರವಾಗಿರುವ ಪ್ರೀತಿಯನ್ನು ಮತ್ತೆ ಪಡೆಯಬೇಕೇ? ಇಲ್ಲಿದೆ ಬ್ಯೂಟಿಫುಲ್ ಟಿಪ್ಸ್

|

Updated on: Feb 06, 2023 | 6:51 PM

Valentine's Day: ಈ ಪ್ರೇಮಿಗಳ ದಿನವನ್ನು ನಿಮ್ಮ ದೂರವಾದ ಸಂಗಾತಿಗಾಗಿ ಪ್ರೀತಿಯ ಭಾಷಾ ಕಲ್ಪನೆಯೊಂದಿಗೆ ಹೆಚ್ಚು ವಿಶೇಷವಾಗಿಸಿ. ಇದು ಸಂಗಾತಿಗಳ ನಡುವಿನ ಸಂಪರ್ಕವನ್ನು ಗಾಢವಾಗಿಸಲು ಸಹಾಯ ಮಾಡುತ್ತದೆ. ಸಂತೋಷವನ್ನು ತರುತ್ತದೆ ಹಾಗೂ ಪರಸ್ಪರ ದೂರದಲ್ಲಿದ್ದೇವೆ ಎಂಬ ಭಾವನೆಯನ್ನು ಸ್ವಲ್ಪ ಕಡಿಮೆ ಮಾಡುತ್ತದೆ.

Valentines Day 2023: ನಿಮ್ಮಿಂದ ದೂರವಾಗಿರುವ ಪ್ರೀತಿಯನ್ನು ಮತ್ತೆ ಪಡೆಯಬೇಕೇ? ಇಲ್ಲಿದೆ ಬ್ಯೂಟಿಫುಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Follow us on

ದೂರವಾಗಿರುವ ಸಂಬಂಧಗಳನ್ನು (long-distance relationship) ಮತ್ತೆ ಪಡೆಯುವುದು (ಲಾಂಗ್ ಡಿಸ್ಟೆನ್ಸ್ ರಿಲೇಷನ್‌ಶಿಪ್) ಬಹಳ ಕಷ್ಟಕರವಾಗಿರುತ್ತದೆ. ವಿಶೇಷವಾಗಿ ಸಂಗಾತಿಯೊಂದಿಗೆ ಬಲವಾದ ಸಂಪರ್ಕವನ್ನು ಕಾಪಾಡಿಕೊಳ್ಳಲು ಬಂದಾಗ. ಲಾಂಗ್ ಡಿಸ್ಟೆನ್ಸ್ ಸಂಬಂಧದಲ್ಲಿ ಸಂಗಾತಿಯ ಭೌತಿಕ ಉಪಸ್ಥಿಯ ಕೊರತೆಯು ಕಾಡಬಹುದು. ಹಾಗೂ ಸಂಗಾತಿಯನ್ನು ಪ್ರೀತಿಸುವಂತೆ ಮತ್ತು ಪ್ರಶಂಸಿಸುವಂತೆ ಮಾಡಲು ಸವಾಲಾಗಿರಬಹುದು. ಪ್ರಯತ್ನ, ಸೃಜನಶೀಲತೆ ಹಾಗೂ ಸಂಗಾತಿಗಳು ಪರಸ್ಪರ ಅನುರಣಿಸುವ ಪ್ರೀತಿಯ ಭಾಷೆಯೊಂದಿಗೆ, ದೂರವಾದ ಸಂಬಂಧವನ್ನು ಗಟ್ಟಿಯಾಗಿರಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಆದ್ಯತೆ ನೀಡುವ ಪ್ರಾಥಮಿಕ ಪ್ರೀತಿಯ ಭಾಷೆಯನ್ನು ಹೊಂದಿರುತ್ತಾರೆ. ನಿಮ್ಮ ಸಂಗಾತಿಯ ಪ್ರೀತಿಯ ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ನೀವು ಪ್ರೀತಿಯ ಭಾಷೆಯನ್ನು ವ್ಯಕ್ತಪಡಿಸುವುದು ನಿಮ್ಮ ಸಂಬಂಧದ ಯಶಸ್ಸು ಮತ್ತು ಸಂತೋಷದಲ್ಲಿ ದೊಡ್ಡ ಬದಲಾವಣೆಯನ್ನು ಮಾಡುತ್ತದೆ.

ಥೆರಪಿಸ್ಟ್ ಜೋರ್ಡಾನ್ ಗ್ರೀನ್ ಅವರು ಸಂಗಾತಿಗಳ ನಡುವಿನ ಸಂಪರ್ಕವನ್ನು ಗಾಢವಾಗಿಸಲು, ಸೌಕರ್ಯ ಮತ್ತು ಸಂತೋಷವನ್ನು ತರಲು ಹಾಗೂ ದೂರವನ್ನು ಕಡಿಮೆ ಮಾಡಲು ಸಹಾಯ ಮಾಡುವ ಪ್ರೀತಿಯ ಭಾಷಾ ಕಲ್ಪನೆಗಳನ್ನು ಸೂಚಿಸಿದ್ದಾರೆ.

ಧೃಡೀಕರಣದ ಪದಗಳು:

ಸಂಗಾತಿಗಾಗಿ ಪ್ರೇಮ ಪತ್ರಗಳು ಅಥವಾ ಕವಿತೆಗಳನ್ನು ಬರೆಯಿರಿ:
ಮೆಸೇಜ್ ಮಾಡುವ ಮೂಲಕ ಆಗಿರಬಹುದು, ವಿಡಿಯೋ ಕಾಲ್ ಮೂಲಕ ಅಥವಾ ವಾಯ್ಸ್ ಮೆಸೇಜ್ ಮೂಲಕ ಶುಭ ಮುಂಜಾನೆ ಮತ್ತು ಶುಭರಾತ್ರಿಯ ಸಂದೇಶವನ್ನು ಕಳುಹಿಸಿ.
ನಿಮ್ಮ ಮೆಚ್ಚಿನ ನೆನಪುಗಳ ಫೋಟೋ ಆಲ್ಬಮ್‌ಗಳನ್ನು ರಚಿಸಿ ಮತ್ತು ಅವು ನಿಮಗೆ ಎಷ್ಟು ಸ್ಪೆಷಲ್ ಎಂಬುದನ್ನು ಸಂಗಾತಿಗಳಿಗೆ ವಿವರಿಸಿ. ಒಂದೊಳ್ಳೆ ಬರಹದೊಂದಿಗೆ ಕಸ್ಟಮೈಸ್ಡ್ ಆಭರಣಗಳನ್ನು ತಯಾರಿಸಿ

ಸೇವಾ ಕಾರ್ಯಗಳು:

ಸಂಗಾತಿಗಾಗಿ ಊಟವನ್ನು ಆರ್ಡರ್ ಮಾಡಿ. ಅವರು ಮಾಡಲು ಇಷ್ಟ ಪಡದ ಆನ್‌ಲೈನ್ ಶಾಪಿಂಗ್‌ನ್ನು ಅವರಿಗಾಗಿ ನೀವು ಮಾಡಿ. ಅವರು ಯಾವುದನ್ನಾದರೂ ನೋಡಲು ಬಯಸುವ ವಿಷಯದ ಬಗ್ಗೆ ಸಂಶೋಧನೆ ಮಾಡಿ. ಮನೆಯ ಸುಚಿತ್ವ ಕೆಲಸಕ್ಕೆ ಉಪಯೋಗಕಾರಿಯಾಗುವ ಯಾವುದೇ ರೀತಿಯ ವಸ್ತುಗಳನ್ನು ಖರೀದಿಸಿ ಕೊಡಿ.

ಇದನ್ನೂ ಓದಿ:  ಮಾಜಿ ಪ್ರಿಯಕರನ ಮೇಲೆ ಸಿಟ್ಟಿದೆಯೇ? ಜಿರಳೆಗೆ ಹೆಸರಿಡುವ ಮೂಲಕ ತೀರಿಸಿಕೊಳ್ಳಿ

ಗುಣಮಟ್ಟದ ಸಮಯ:

ದೂರ ದೂರವಿದ್ದ ಸಮಯದಲ್ಲಿ ವರ್ಚುವಲ್ ಡೇಟ್‌ಗಳನ್ನು ಆಯೋಜಿಸಿ. ಜೊತೆಯಾಗಿ ಆನ್‌ಲೈನ್ ಆಟಗಳನ್ನು ಆಡಿ. ಆದಷ್ಟು ಸಂಗಾತಿಗಾಗಿ ಸಮಯವನ್ನು ಮೀಸಲಿಡಲು ಪ್ರಯತ್ನಿಸಿ. ಇವೆಲ್ಲ ಅವರಿಗೆ ದೂರವಿರುವ ಭಾವನೆಯನ್ನು ಕಡಿಮೆಗೊಳಿಸುತ್ತದೆ.

ಉಡುಗೊರೆಗಳು:

ಮನೆಯಲ್ಲಿ ನಿಮ್ಮ ಕೈಯಾರೆ ಉಡುಗೊರೆಗಳನ್ನು ತಯಾರಿಸಿ ಅದನ್ನು ಸಂಗಾತಿಗೆ ಕಳುಹಿಸಿಕೊಡಿ. ತಿಂಗಳಿಗೊಮ್ಮೆಯಾದರೂ ಹೂವು ಅಥವಾ ಇತರ ಉಡುಗೊರೆಗಳನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ಸಂಗಾತಿಗೆ ಸರ್ಪ್ರೈಸ್ ಮಾಡಿ.

ದೈಹಿಕ ಸ್ವರ್ಶ

ಅಪ್ಪುಗೆಗಳ ಬಗ್ಗೆ ಮಾತನಾಡಿ, ಒಟ್ಟಿಗೆ ಮಾತನಾಡುತ್ತಾ ಹಳೆಯ ನೆನಪುಗಳನ್ನು ಮೆಲುಕು ಹಾಕಿ. ಬ್ರೆಸ್‌ಲೇಟ್‌ಗಳು, ದಪ್ಪದ ಹೊದಿಕೆಗಳನ್ನು ಸಂಗಾತಿಗಾಗಿ ಖರೀದಿಸಿ. ನಿಮ್ಮನ್ನು ಜ್ಞಾಪಿಸುತ್ತಿರಲು ಸಹಾಯ ಮಾಡುವ ಯಾವುದೇ ವಸ್ತುಗಳನ್ನಾದರೂ ಸಂಗಾತಿಗೆ ನೀಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 6:51 pm, Mon, 6 February 23