Valentine’s day 2024: ಜಾತಿ, ಅಂತಸ್ತು ನನ್ನ ಪ್ರೀತಿಗೆ ಮುಳುವಾಯ್ತು

ಪ್ರೀತಿ ಪ್ರೇಮ ಅನ್ನೋದು ಸಿನಿಮಾಗಷ್ಟೇ ಸರಿ ಅನ್ನೋದನ್ನ ತಿಳಿಸೋಕೆ ಬದುಕಿನಲ್ಲಿ ಬಹುದೊಡ್ಡ ಬೆಲೆನೇ ತರುವಂತೆ ಮಾಡಿದ್ಯ. ನನಗೆ ಗೊತ್ತಿದೆ ಈ ಪತ್ರ ನೀನು ಓದಲ್ಲ ಅಂತಾ, ಮನದಲ್ಲೇ ಉಳಿದ ಮಾತುಗಳು ಹೇಳದೆ ಹೋದ್ರೆ, ಅದರ ನೋವು ಕೂಡ ನನಗೇನೆ. ಮುಂದೆ ಹೇಳೋದು ಏನಿಲ್ಲ ಲೋಕದ ಎಲ್ಲ ಸಿಹಿಯನ್ನ ನೀನೇ ಅನುಭವಿಸು.

Valentine’s day 2024: ಜಾತಿ, ಅಂತಸ್ತು ನನ್ನ ಪ್ರೀತಿಗೆ ಮುಳುವಾಯ್ತು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 14, 2024 | 12:10 PM

ಪರಿಚಯ ಅನ್ನೋದು ನಮ್ಮಿಬ್ಬರ ನಡುವೆ ಪ್ರೀತಿಯಾಗಿ ಬದಲಾದ್ದದ್ದು ಇದೇ ಕಳೆದ ಪ್ರೇಮಿಗಳ ದಿನ. ಇವತ್ತು ಎಲ್ಲರೂ ವ್ಯಾಲೆಂಟೆನ್ಸ್ ಡೇ ಸೆಲೆಬ್ರೇಟ್ ಮಾಡ್ತಿದ್ರೆ ನಾನು ಮಾತ್ರ ನಿನ್ನ ಬಿಟ್ಟು ಹೋಗಿರೋದ್ದನ್ನ ಸಹಿಸೋಕೆ ಆಗದೇ ಕಣ್ಣೀರಾಕ್ತಿದ್ದೀನಿ. ಪ್ರೀತಿ ನಿನ್ನ ಪಾಲಿಗೆ ಆಟಿಕೆ ಹೇಗಾಯ್ತು? ಜಾತಿ ಅನ್ನೋದು ಪ್ರೀತಿನೇ ಮರೆಸೋ ದೊಡ್ಡ ಅಸ್ತ್ರನಾ? ಅದು ನಿಜಾನೇ ಆಗಿದ್ರೆ ನೀನು ಯಾಕೆ ಗೊತ್ತಿದ್ರು ಪ್ರೀತಿ ಮಾಡಿದೆ ಇವತ್ತಿಗೂ ಗೊತ್ತಾಗ್ತಿಲ್ಲ.. ಅದೆಷ್ಟು ಸರಳವಾಗಿ ನನ್ನ ಬಿಟ್ಟು ಹೋದೆ, I can’t stop loving u chinna ಅಂತಿದ್ದೆ ಅದು ಬರೀ ಮಾತಷ್ಟೇ ಅಂತಾ ನೀನೆ ನಿರೂಪಿಸಿ ಬಿಟ್ಟೆ.

ಪರಿಚಯನಾ ಸ್ನೇಹಕ್ಕಷ್ಟೇ ಮೀಸಲಿಟ್ಟಿದ್ರೆ, ಬಹುಶಃ ನಾನು ಇಷ್ಟು ನೋವನ್ನ ಅನುಭವಿಸುತ್ತಿರಲಿಲ್ಲ..ಆಗ ನಿನಗೆ ನನ್ನ ಮೇಲೆದ್ದ ಹಂಬಲ, ಕಾಳಜಿ, ತುಡಿತ ಪ್ರೀತಿಯಾಯ್ತು.. ಆಗ ಪ್ರೀತಿ ಮೇಲೆ ನಿನಗಿದ್ದ ಗೌರವ ನನ್ನ  ನಂಬಿಕೆ ಹುಸಿ ಅಲ್ಲ ಅನ್ನೋತರ ಮಾಡಿತ್ತು. ಆದ್ರೆ ಈಗ ಯಾವುದು ನೀನು ಆಡಿದ ಮಾತುಗಳು ನಿಜ ಅಲ್ಲ ಅನ್ನೋದಕ್ಕೆ ಸಾಕ್ಷಿಯಾಗಿವೆ. ಸಂಬಂಧ ಉಳಿಸಿಕೊಳ್ಳಬೇಕು ಅನ್ನೋ ಹಂಬಲ ನನಗೆ ಮಾತ್ರ ಇತ್ತು ಅನ್ಸುತ್ತೆ.. ನನ್ನಿಂದ ದೂರಾಗೋಕೆ ನಿನ್ನ ತಗೋಂಡಿದ್ದೆ ಹದಿನೈದು ದಿನ ಅನ್ಸತ್ತೆ ಬೇರೊಂದು ಹುಡುಗಿ ಜೊತೆ ಮದುವೆ ಫಿಕ್ಸ್ ಮಾಡ್ಕೊಂಡ್ಯ. ಇದೆಲ್ಲಾ ಮೊದ್ಲೆ ಯೋಚಿಸಿದ್ಯ? ನಾನು ಯಾವಾಗ ಬೇಡವಾದೆ ನಿನಗೆ?

ಎಲ್ಲವೂ ಕಣ್ ರೆಪ್ಪೆ ಮುಚ್ಚಿ ತೆಗೆಯುವಷ್ಟ್ರಲ್ಲಿಯೇ ಮುಗಿಸಿ ಬಿಟ್ಯಲ್ಲ, ಇದೇ ಉದ್ದೇಶ ಆಗಿದ್ರೆ ಮೊದ್ಲೆ ಹೇಳಬಹುದಿತ್ತಲ್ವ, ಸಮಯ ಎಲ್ಲವನ್ನೂ ಮರೆಸುತ್ತೆ ಅನ್ನೋದಾಗಿದ್ರೆ ಅದಕ್ಕೆ ನನ್ನ ಪ್ರೀತಿನೇ ಬಲಿ ಕೊಟ್ಟೆ, ಈಗ ಮತ್ಯಾರದ್ದೋ ತೋಳಲಿ ಬೆಳಂದಿಗಳ ರಾತ್ರಿ ಕಳಿತಿದ್ಯ? ನೆನಪುಗಳು ನಿನಗೆ ಕಾಡಲ್ವ.? ಒಂದು ಭಾವನೆ ಇಷ್ಟು ತೀವ್ರವಾಗಿರುತ್ತೆ ಅಂತಾ ಊಹಿಸಿರಲಿಲ್ಲ ನೀನು ನನ್ನ ಬಿಟ್ಟು ಹೋಗುವ ತನಕ.. ಯಾವ ಪಾಪ ಪ್ರಜ್ಞೆ ಇಲ್ಲದೆ ಇರೋ ತರ ಅಷ್ಟು ಖುಷಿಯಾಗಿದ್ಯ?.. ನಮ್ಮ ಪ್ರೀತಿ ಮುಚ್ಚಿಟ್ಟು ಮದ್ವೆ  ಆಗಿದ್ಯ?, ಅತ್ತ ಅವಳಿಗೂ ಮೋಸ ಮಾಡಿದ್ಯ ಪ್ರೀತಿಸಿದ ತಪ್ಪಿಗೆ ನನಗೂ ಮೋಸ ಮಾಡಿದ್ಯಲ್ಲ ನೆಮ್ಮದಿಯಾಗಿ ನಿದ್ದೆ ಆದ್ರೂ ಹೇಗೆ ಮಾಡ್ಯ್ತ ಹೇಳು..?

ಇದನ್ನೂ ಓದಿ: ಪ್ರೇಮಿಗಳ ದಿನದಂದು ಯಾವ ಬಣ್ಣಕ್ಕೆ ಏನು ಅರ್ಥ?

ಮೋಸದ ಪ್ರೀತಿ ಅಂತಾ ನಿನ್ನ ಮರೆಯೋದಾ? ಅಥವಾ ಇಷ್ಟು ದಿನ ಜೊತೆಯಲ್ಲಿ ಕಳೆದ ದಿನಕ್ಕಾಗಿ ಕಣ್ಣೀರಾಕ್ಲ, ಪ್ರೀತಿಸಿದ ತಪ್ಪಿಗೆ ಚೆನ್ನಾಗಿರಲಿ ಅಂತಾ ಆಶಿಸಲಾ..? ನೀನು ಇಲ್ಲದೆ ಇರೋ ಜಾಗದಲ್ಲೂ ನನ್ನ ಕಣ್ಣುಗಳು ಸದಾ ನಿನ್ನನ್ನೇ ಹುಡುಕ್ತಿವೆ. ನೀನು ಈಗ ನನ್ನವನ್ನಲ್ಲ ಅನ್ನೋದನ್ನ ಹೇಗೆ ನಿನ್ನ ನೆನೆಪುಗಳಿಗೆ ಹೇಗೆ ಮನವರಿಕೆ ಮಾಡಿಕೊಡಲಿ,ಜಾತಿ ಹೆಸರಲ್ಲಿ ಯಾಕೆ ಬಿಟ್ಟು ಹೋದೆ, ವಿದ್ಯಾವಂತರಾಗಿದ್ರು ಅರ್ಥ ಮಾಡಿಕೊಳ್ಳುವುದ್ರಲ್ಲಿ ಎಡವಿದೆ. ನೀನು ನನ್ನಿಂದ ಬಹುದೂರ ಸಾಗಿದೆ. ಪ್ರೀತಿ ಪ್ರೇಮ ಅನ್ನೋದು ಸಿನಿಮಾಗಷ್ಟೇ ಸರಿ ಅನ್ನೋದನ್ನ ತಿಳಿಸೋಕೆ ಬದುಕಿನಲ್ಲಿ ಬಹುದೊಡ್ಡ ಬೆಲೆನೇ ತರುವಂತೆ ಮಾಡಿದ್ಯ. ನನಗೆ ಗೊತ್ತಿದೆ ಈ ಪತ್ರ ನೀನು ಓದಲ್ಲ ಅಂತಾ, ಮನದಲ್ಲೇ ಉಳಿದ ಮಾತುಗಳು ಹೇಳದೆ ಹೋದ್ರೆ, ಅದರ ನೋವು ಕೂಡ ನನಗೇನೆ. ಮುಂದೆ ಹೇಳೋದು ಏನಿಲ್ಲ ಲೋಕದ ಎಲ್ಲ ಸಿಹಿಯನ್ನ ನೀನೇ ಅನುಭವಿಸು.

ಇಂತಿ ನಿನ್ನವಳಲ್ಲ

ಲೇಖನ: ಕಾವ್ಯ, ತುಮಕೂರು

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ