AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day 2024: ಪ್ರೇಮಿಗಳ ದಿನದಂದು ಯಾವ ಬಣ್ಣಕ್ಕೆ ಏನು ಅರ್ಥ?

Valentine’s Week 2024: ಇಂದು ಪ್ರೇಮಿಗಳ ದಿನ. ಪ್ರತಿವರ್ಷ ಫೆ. 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಇದು ಪ್ರೇಮಿಗಳು ತಮ್ಮ ಸಂಗಾತಿಗೆ ಪ್ರೇಮ ನಿವೇದನೆ ಮಾಡಿಕೊಳ್ಳುವ ದಿನ. ಪ್ರೀತಿಯ ಬಣ್ಣ ಕೆಂಪು. ಈ ದಿನ ಯಾವ ಬಣ್ಣಕ್ಕೆ ಯಾವ ಅರ್ಥವಿದೆ? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Valentine’s Day 2024: ಪ್ರೇಮಿಗಳ ದಿನದಂದು ಯಾವ ಬಣ್ಣಕ್ಕೆ ಏನು ಅರ್ಥ?
ಪ್ರೇಮಿಗಳ ದಿನImage Credit source: iStock
Digi Tech Desk
| Edited By: |

Updated on: Feb 14, 2024 | 9:45 AM

Share

ಪ್ರತಿ ವರ್ಷ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು (Valentine’s Day) ಆಚರಿಸಲಾಗುತ್ತದೆ. ಇಂದು ಪ್ರೇಮಿಗಳಿಗಾಗಿ ಮೀಸಲಾದ ದಿನ. ಈ ದಿನ ಸಂಗಾತಿಗಳು ಪರಸ್ಪರರಿಗೆ ಉಡುಗೊರೆಗಳನ್ನು ನೀಡುತ್ತಾರೆ, ಸರ್​ಪ್ರೈಸ್ ಕೊಡುತ್ತಾರೆ, ಡಿನ್ನರ್ ಪಾರ್ಟಿ ಮಾಡುತ್ತಾರೆ. ನಿಮಗೆ ಕೆಂಪು, ಬಿಳಿ ಮತ್ತು ಗುಲಾಬಿಯಂತಹ ಸಾಂಪ್ರದಾಯಿಕ ವ್ಯಾಲೆಂಟೈನ್ಸ್ ಡೇ ಬಣ್ಣಗಳ ಹಿಂದಿನ ಅರ್ಥವನ್ನು ತಿಳಿಯಬೇಕೆಂಬ ಮನಸಿದ್ದರೆ ಅದರ ಬಗ್ಗೆ ಮಾಹಿತಿ ಇಲ್ಲಿದೆ.

ಫ್ಲೋರಿಯೋಗ್ರಫಿ ಎಂಬುದು 19ನೇ ಶತಮಾನದ ಇಂಗ್ಲೆಂಡ್‌ನ ಪರಿಕಲ್ಪನೆಯಾಗಿದೆ. ಇದರಲ್ಲಿ ನೀವು ನಿಮ್ಮ ವಿಶೇಷ ವ್ಯಕ್ತಿಗೆ ಕಳುಹಿಸಿದ ಹೂವುಗಳ ಬಣ್ಣವು ನಿಮ್ಮ ನಿಜವಾದ ಭಾವನೆಗಳನ್ನು ತಿಳಿಸುತ್ತದೆ. 1819ರಲ್ಲಿ ಪ್ರಕಟವಾದ ಲೇಖಕ ಚಾರ್ಲೊಟ್ ಡೆ ಲಾ ಟೂರ್‌ನ ಲೆ ಲ್ಯಾಂಗೇಜ್ ಡೆಸ್ ಫ್ಲ್ಯೂರ್ಸ್ ಸೇರಿದಂತೆ ಹೂವಿನ ಅರ್ಥದ ಬಗ್ಗೆ ಬರೆಯಲಾದ ಅನೇಕ ಪುಸ್ತಕಗಳಿವೆ.

ಇದನ್ನೂ ಓದಿ: Rose Day 2024: ಪ್ರತಿ ಬಣ್ಣದ ಗುಲಾಬಿಗೂ ಒಂದೊಂದು ಅರ್ಥ; ರೋಸ್ ಡೇ ವಿಶೇಷತೆಯಿದು

ಈ ಪ್ರೇಮಿಗಳ ದಿನದಂದು ನೀವು ಹೇಗೆ ಭಾವಿಸುತ್ತೀರಿ ಎಂಬುದನ್ನು ವ್ಯಕ್ತಪಡಿಸಲು ಹೂಗುಚ್ಛಗಳು ಏಕೈಕ ಮಾರ್ಗವಲ್ಲ. ಇಂದು ನೋವು ಉಪಯೋಗಿಸುವ ಟೇಬಲ್‌ಸ್ಕೇಪ್, ಕಾರ್ಡ್‌ಗಳ ಬಣ್ಣಗಳು ನಿಮ್ಮ ಪ್ರೀತಿಪಾತ್ರರಿಗೆ ಸೂಕ್ಷ್ಮ ಸಂದೇಶಗಳನ್ನು ಸಹ ರವಾನಿಸಬಹುದು. ಬಣ್ಣಗಳ ಮೂಲಕ ನಿಮ್ಮ ಇಷ್ಟದವರಿಗೆ ನಿಮ್ಮ ಮನಸಿನ ಸಂದೇಶವನ್ನು ರವಾನಿಸುವುದು ಹೇಗೆ?

ಕೆಂಪು, ಬಿಳಿ ಮತ್ತು ಗುಲಾಬಿ ಬಣ್ಣಗಳು ಪ್ರೀತಿಯೊಂದಿಗೆ ಸಂಬಂಧ ಹೊಂದಿದೆ.

ಕೆಂಪು ಬಣ್ಣದ ಅರ್ಥವೇನು?:

ಸೊಸೈಟಿ ಆಫ್ ಅಮೇರಿಕನ್ ಫ್ಲೋರಿಸ್ಟ್ಸ್ ಪ್ರಕಾರ, ವ್ಯಾಲೆಂಟೈನ್ಸ್ ಡೇಗೆ ಕೆಂಪು ಗುಲಾಬಿಗಳು ಹೆಚ್ಚು ಜನಪ್ರಿಯವಾದ ಹೂವುಗಳಾಗಿವೆ. ಒಟ್ಟು ಶೇ. 60ರಷ್ಟು ಕೆಂಪು ಹೂವುಗಳು ಇಂದು ಮಾರಾಟವಾಗುತ್ತವೆ. ಕೆಂಪು ಬಣ್ಣವು ಪ್ರೀತಿ, ಪ್ರಣಯ ಮತ್ತು ಬಯಕೆಯ ಸಂಕೇತವಾಗಿದೆ. ಇದು ಪ್ರೇಮಿಗಳ ದಿನಕ್ಕೆ ಸೂಕ್ತವಾದ ಬಣ್ಣವಾಗಿದೆ. ಇದಲ್ಲದೆ, ಭಾರತೀಯ ಮತ್ತು ಚೀನೀ ಸಂಸ್ಕೃತಿಗಳಲ್ಲಿ, ಕೆಂಪು ಬಣ್ಣವು ಅದೃಷ್ಟ ಮತ್ತು ಮದುವೆಯೊಂದಿಗೆ ಸಂಪರ್ಕ ಹೊಂದಿದೆ. ಹಾಗೇ, ಕೆಂಪು ನಮ್ಮ ಹೃದಯದ ಮೂಲಕ ಪಂಪ್ ಮಾಡುವ ರಕ್ತದ ಬಣ್ಣವಾಗಿದೆ. ಇದು ಪ್ರೀತಿ ಮತ್ತು ಉತ್ಸಾಹ ಮತ್ತು ಪ್ರಣಯವನ್ನು ಪ್ರತಿನಿಧಿಸುತ್ತದೆ. ರೋಮ್‌ನ ಲುಪರ್ಕಾಲಿಯಾದಲ್ಲಿ ಪ್ರೇಮಿಗಳ ದಿನದೊಂದಿಗೆ ಮೊದಲ ಬಣ್ಣವು ಕೆಂಪು ಬಣ್ಣದ್ದಾಗಿದೆ. ಇದು ಪ್ರತಿ ವರ್ಷ ಫೆಬ್ರವರಿ 15ರಂದು ನಡೆಯುವ ಪುರಾತನ ಪೇಗನ್ ಹಬ್ಬವಾಗಿದೆ.

ಬಿಳಿ ಬಣ್ಣದ ಅರ್ಥವೇನು?:

ಪ್ರೇಮಿಗಳ ದಿನದಂದು ಬಿಳಿ ಗುಲಾಬಿಗಳನ್ನು ನೀಡುವುದು ಸಾಮಾನ್ಯವಾಗಿದೆ. ನಿಮ್ಮ ಸಂಗಾತಿಗೆ ಈ ಹಿಮದ ಬಣ್ಣದ ಹೂವುಗಳನ್ನು ನೀಡುವುದು ನಿಮ್ಮ ಪ್ರೀತಿಯು ಶುದ್ಧವಾಗಿದೆ ಎಂದು ತೋರಿಸುತ್ತದೆ. ಪಾಶ್ಚಿಮಾತ್ಯ ವಿವಾಹಗಳಲ್ಲಿ ಬಿಳಿ ಜನಪ್ರಿಯ ಆಯ್ಕೆಯಾಗಿರುವುದರಿಂದ ಇದು ಶಾಶ್ವತ ಪ್ರೀತಿಯ ಧಾರ್ಮಿಕ ವ್ಯಾಖ್ಯಾನವೂ ಆಗಿದೆ.

ಇದನ್ನೂ ಓದಿ: ಸಂಬಂಧವನ್ನು ಒತ್ತಡದಿಂದ ರಕ್ಷಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಗುಲಾಬಿ ಬಣ್ಣದ ಅರ್ಥವೇನು?:

ಪ್ರೇಮಿಗಳ ದಿನ ಕೇವಲ ಲವರ್​ಗಳಿಗೆ ಸೀಮಿತವಲ್ಲ. ನೀವು ಸ್ನೇಹಿತರು ಅಥವಾ ಕುಟುಂಬದೊಂದಿಗೆ ಪ್ರೇಮಿಗಳ ದಿನವನ್ನು ಆಚರಿಸಲು ಬಯಸಿದರೆ ಗುಲಾಬಿ ಪರಿಪೂರ್ಣ ಬಣ್ಣವಾಗಿದೆ. ಏಕೆಂದರೆ ಇದು ಯುವ ಪ್ರೀತಿ ಅಥವಾ ಪ್ರಣಯವಿಲ್ಲದ ಸಹಾನುಭೂತಿ ಮತ್ತು ದಯೆಯನ್ನು ತಿಳಿಸುತ್ತದೆ. ಗುಲಾಬಿ ಕಾರ್ನೇಷನ್‌ಗಳು, ಪಿಯೋನಿಗಳು ಅಥವಾ ಟುಲಿಪ್‌ಗಳನ್ನು ನಿಮ್ಮ ಮನೆಗೆ ಸಂತೋಷಕ್ಕಾಗಿ ಅಥವಾ ನೀವು ಯಾರೊಂದಿಗೆ ಆಚರಿಸುತ್ತೀರೋ ಅವರಿಗೆ ಉಡುಗೊರೆಯಾಗಿ ನೀಡಲು ಬಳಸಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ