Valentine’s day 2024: ಪ್ರೀತಿಯ ಜಲಧಾರೆ ನೀನು, ನಮ್ಮ ಪ್ರೀತಿ ಶುರುವಾಗಿ ಇಂದಿಗೆ ಆರು ವರ್ಷ

ಒಂಥರಾ ಮುಂಗಾರು ಮಳೆಯಂತೆ ನಮ್ಮ ಪ್ರೀತಿ ಒಮ್ಮೆ ಖುಷಿಯಾಗಿ ಹೃದಯ ಹೂವಾದರೆ, ಮತ್ತೊಮ್ಮೆ ಅತ್ತು ಕಲ್ಲಾಗುತ್ತೆ ನೆನಪುಗಳು ಕಾಡಿ ಬೇಡಿದರೂ ಕೊನೆಗೇ ಕಣ್ಣಿರಾಗಿ ಮೌನದಿಂದ ಮುಕ್ತಾಯವಾಗುತ್ತವೆ. ಆದರೂ ಬರೆದೆ ನಾನು ನಿನ್ನ ಹೆಸರ ನನ್ನ ಬಾಳ ಪುಟದಲ್ಲಿ.

Valentine’s day 2024: ಪ್ರೀತಿಯ ಜಲಧಾರೆ ನೀನು, ನಮ್ಮ ಪ್ರೀತಿ ಶುರುವಾಗಿ ಇಂದಿಗೆ ಆರು ವರ್ಷ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 14, 2024 | 12:28 PM

ನಮ್ಮ ಪ್ರೀತಿ ಶುರುವಾಗಿ ಇಂದಿಗೆ ಆರು ವರ್ಷಗಳು ತುಂಬಿ ಏಳುನೇ ವರುಷ. ಈ ಏಳು ವರುಷದಲ್ಲಿ ಆಡಿದ ಮಾತುಗಳೇಷ್ಟೋ, ನೋವುಗಳನ್ನು ಅನುಭವಿಸಿದ ಪ್ರಸಂಗಳೇಷ್ಟೋ ನೋವಿನಲ್ಲೂ ಅನಂದ ಕಂಡ ಪ್ರೇಮಿಗಳೆಂದರೆ ನಾವೇ ಇರಬಹುದು ಅಲ್ಲವೇ..? ನಮ್ಮ ನೆನಪುಗಳ ಸಂಕೋಲೆಯಲ್ಲಿ ಕಾಡಿ-ಬೇಡಿ ಗೋಳಾಡಿಸಿ, ತೋಳಲಾಡಿಸುವ ನನ್ನೊಳಗೇ ಎಂದೂ ಮರೆಯದ ಮಾಸದ ನಿನ್ನ ನೆನಪುಗಳು ಜೀವನದ ಜೀವಾಳ ಕಹಿ ನೆನಪುಗಳು ಜೀವನದ ಮೆಟ್ಟಲುಗಳಾದರೆ, ಸವಿ ನೆನಪುಗಳು ನನ್ನ ಜೀವನಕ್ಕೇ ಮುನ್ನುಡಿಯಾಗಿದೆ.

ಒಂಥರಾ ಮುಂಗಾರು ಮಳೆಯಂತೆ ನಮ್ಮ ಪ್ರೀತಿ ಒಮ್ಮೆ ಖುಷಿಯಾಗಿ ಹೃದಯ ಹೂವಾದರೆ, ಮತ್ತೊಮ್ಮೆ ಅತ್ತು ಕಲ್ಲಾಗುತ್ತೆ ನೆನಪುಗಳು ಕಾಡಿ ಬೇಡಿದರೂ ಕೊನೆಗೇ ಕಣ್ಣಿರಾಗಿ ಮೌನದಿಂದ ಮುಕ್ತಾಯವಾಗುತ್ತವೆ. ಆದರೂ ಬರೆದೆ ನಾನು ನಿನ್ನ ಹೆಸರ ನನ್ನ ಬಾಳ ಪುಟದಲ್ಲಿ.

ಪ್ರೀತಿ ಮಾಡಿ ಮದುವೆಯಾದರೆ ಅದರಲ್ಲಿ ಇರೋ ಖಷಿಯ ಪರಿಯೇ ಬೇರೆ. ನೀ.. ನನ್ನ ಬದುಕಿಗೆ ಬರಲಿಲ್ಲವೆಂದರೆ ನನ್ನ ಆಸೆ ಆಕ್ಷಾಂಶೆಯಲ್ಲವೂ ಆಗಿ ಉಳಿದುಕೊಳ್ಳತ್ತಿದವು ನೀ ನನ್ನ ಗುರಿಗಳಿಗೆ ರೆಕ್ಕೆ ಕೊಟ್ಟಿದ್ದೀಯಾ ಯಾರು ನನ್ನ ಜೊತೆ ಇಲ್ಲದಿದ್ದಾಗ ನೀ ನನಗೆ ಆಸರೆಯಾಗಿ ನಿಂತಿದ್ದೀಯಾ, ನಮ್ಮ ಇಬ್ಬರೂ ಪ್ರೀತಿ ಹೀಗೆ ಇರುತ್ತದೆ ಎಂದು ನಾನು ಎಂದೂ ಊಹಿಸಿಕೊಂಡಿರಲಿಲ್ಲ ಆರು ವರ್ಷದ ಪ್ರೀತಿ ಏಳುನೇ ವರ್ಷದಲ್ಲಿ ಸಪ್ತಪದಿ ತುಳಿಯುವಂತೆ ಆಗಿತ್ತು.

ಪ್ರೀತಿ ಮಾಡಿದವರೆಲ್ಲೂ ಮದುವೆಯಾಗುವುದಿಲ್ಲ ಎಂಬ ಮಾತುಗಳು ನಮ್ಮ ಜೀವನದಲ್ಲಿ ಸುಳ್ಳು ಆಗಿದೆ. ನಾವೀಗ ಮದುವೆಯಾಗಿ ಒಂದು ವರ್ಷ ತುಂಬುವ ಸಂತಸದಲ್ಲಿದ್ದೇವೆ. ಈ ಒಂದು ವರುಷದ ಜೀವನದಲ್ಲಿ ನಾವೂ ಕೂಡ ಎಲ್ಲರಂತೆ ಸುಖ-ದುಃಖಗಳನ್ನೂ ಅನುಭವಿಸಿದ್ದೇವೆ. ನಮ್ಮ ಇಬ್ಬರ ಜಗಳ  ಒಂದು ಗಂಟೆ ಮೀರಿ ಅತಿಯಾಗುವುದೇ ಇಲ್ಲ ನೀ ನನ್ನೊಂದಿಗೆ ಕೋಪನೇ ಮಾಡಿಕೊಳ್ಳುವುದಿಲ್ಲ ಯಾಕೆ..? ಯಾಕಿಷ್ಟು ನನ್ನ ಮೇಲೆ ನಿನಗೆ ಅತಿಯಾದ ಕಾಳಜಿ..? ನೀ ಇಷ್ಟೋಂದು ಪ್ರೀತಿ ಮಾಡುತ್ತೀಯಾ..?

ಇದನ್ನೂ ಓದಿ: ಜಾತಿ, ಅಂತಸ್ತು ನನ್ನ ಪ್ರೀತಿಗೆ ಮುಳುವಾಯ್ತು

ನೀನು ಯಾವಾಗ್ಲೂ ನನ್ನ ಜೊತೆಗೇ ಇರಬೇಕು ಅಂತ ಬಯಸುವ ಹಠಮಾರಿ ಮನಸ್ಸು ನನ್ನದು ನಿನ್ನ ಮೇಲೆ ನನಗೆ ಸಾಕಷ್ಟು ಪ್ರೀತಿ ಇದೆ ಅದನ್ನು ನಾನು ವ್ಯಕ್ತಪಡಿಸಿಲ್ಲ ನಿನ್ನನ್ನು ನಾನು ನನ್ನ ಪ್ರೀತಿಸುವುದಕ್ಕಿಂತಲೂ ಜಾಸ್ತಿ ಪ್ರೀತಿಸುತ್ತೇನೆ. ನಮ್ಮಿಬ್ಬರ ನಡುವೆ ಆ ದೇವರು ಪ್ರೀತಿ ಕರುಣಿಸಿದಕ್ಕೆ ನೀ ನನಗೆ ಸಿಕ್ಕಿದಕ್ಕೆ ಆ ದೇವರನ್ನು ಕೇಳೊದೊಂದೇ ನಾನು ಒಂದೇ ನಮ್ಮ ಪ್ರೀತಿ ಶಾಶ್ವತವಾಗಿರಲಿ ಮತ್ತು ಪರಿಪೂರ್ಣವಾಗಿರಲಿ….

ಸವಿತ. ಜಿ,  ನೆಲಮಂಗಲ, ಬೆಂಗಳೂರು

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ