ಪ್ರಪೋಸ್ ಡೇ (Propose Day) ಪ್ರತಿ ವರ್ಷವೂ ಫೆಬ್ರವರಿ 8ರಂದು ಬರುತ್ತದೆ. ಈ ದಿನದಂದು ಜನರು ತಮ್ಮ ಭಾವನೆಗಳನ್ನು ಮತ್ತು ಪ್ರೀತಿಯನ್ನು ಯಾರಿಗಾದರೂ ಪ್ರಪೋಸ್ ಮಾಡುವ ಮೂಲಕ ವ್ಯಕ್ತಪಡಿಸುತ್ತಾರೆ. ಪ್ರೇಮಿಗಳ ವಾರದಲ್ಲಿ 2ನೇ ದಿನವೇ ಪ್ರಪೋಸ್ ಡೇ. ಪ್ರಪೋಸ್ ಡೇ ಸಂಪ್ರದಾಯವು ವ್ಯಾಲೆಂಟೈನ್ಸ್ ಡೇಯ ದೊಡ್ಡ ಆಚರಣೆಗೆ ಸಂಬಂಧಿಸಿದೆ. ಪ್ರಪೋಸ್ ದಿನದಂದು ಜನರು ತಮ್ಮ ಭಾವನೆಗಳನ್ನು ತಿಳಿಸಲು ಹೂವುಗಳು, ಕಾರ್ಡ್‌ಗಳು ಮತ್ತು ಉಡುಗೊರೆಗಳನ್ನು ನೀಡುತ್ತಾರೆ.
ಪ್ರಪೋಸ್ ದಿನದಂದು ನೀವೇನಾದರೂ ನಿಮಗಿಷ್ಟದ ವ್ಯಕ್ತಿಗೆ ಪ್ರಪೋಸ್ ಮಾಡಲು ಯೋಚನೆ ಮಾಡಿದ್ದರೆ ಅವರಿಗಾಗಿ ಯಾವ ವಿಶೇಷ ಉಡುಗೊರೆಗಳನ್ನು ನೀಡಬಹುದು ಎಂಬ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.
ಹೂವುಗಳು:
ಹೂವುಗಳು ಪ್ರೀತಿಯ ಭಾಷೆಯನ್ನು ಅತ್ಯಂತ ಸುಂದರವಾಗಿ ಮಾತನಾಡುತ್ತವೆ. ಆದ್ದರಿಂದ ನೀವು ನಿಮ್ಮ ಜೀವನದ ಪ್ರೀತಿಯನ್ನು ಪ್ರಸ್ತಾಪಿಸುವಾಗ ಸುಂದರವಾದ ಹೂವುಗಳನ್ನು ನೀಡಿ ಪ್ರೇಮ ನಿವೇದನೆ ಮಾಡಿಕೊಳ್ಳಿ.
ಇದನ್ನೂ ಓದಿ: Propose Day 2024 Date: ಪ್ರಪೋಸ್ ಡೇ ಯಾವಾಗ?; ಅದರ ಇತಿಹಾಸ, ಪ್ರಾಮುಖ್ಯತೆಯೇನು?
ಹೃದಯ ಆಕಾರದ ಕೇಕ್:
ಪ್ರೀತಿಗೆ ಸಂಬಂಧಿಸಿದ ಎಲ್ಲಾ ವಿಷಯಗಳೂ ರೊಮ್ಯಾಂಟಿಕ್ ಆಗಿರುತ್ತವೆ. ‘ಐ ಲವ್ ಯೂ’ ಅಥವಾ ‘ವಿಲ್ ಯು ಬಿ ಮೈನ್?’ ಎಂದು ಬರೆದಿರುವ ಹೃದಯದ ಆಕಾರದ ಕೇಕ್ ಅನ್ನು ನೀಡುವ ಮೂಲಕ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಬಹುದು. ಪ್ರಪೋಸ್ ದಿನದಂದು ನಿಮ್ಮ ದೀರ್ಘಕಾಲದ ಗೆಳತಿಯನ್ನು ಮದುವೆಗೆ ಪ್ರಪೋಸ್ ಮಾಡಲು ಆಲೋಚಿಸುತ್ತಿದ್ದರೆ ಆಕೆಯ ನೆಚ್ಚಿನ ಫ್ಲೇವರ್ನ ಹೃದಯದ ಆಕಾರದ ಕೇಕ್ ಅನ್ನು ನೀಡಿ, ಆಕೆಗೆ ಸರ್ಪ್ರೈಸ್ ನೀಡಿ. ಆಗ ನಿಮ್ಮ ಪ್ರಪೋಸ್ಗೆ ಆಕೆ ಓಕೆ ಎನ್ನದಿರಲು ಸಾಧ್ಯವೇ ಇಲ್ಲ.
ಪ್ರಪೋಸ್ ವಾಲ್ ಕ್ಲಾಕ್:
ನಿಮಮ್ ಪ್ರೀತಿಯನ್ನು ಪ್ರಸ್ತಾಪಿಸಲು ನೀವು ವಿಶೇಷವಾದ ಉಡುಗೊರೆಯ ಹುಡುಕಾಟದಲ್ಲಿದ್ದರೆ ನಿಮ್ಮ ಸಂಗಾತಿಗೆ ಟ್ರೆಂಡಿ ಪ್ರಪೋಸ್ ವಾಲ್ ಗಡಿಯಾರವನ್ನು ಉಡುಗೊರೆಯಾಗಿ ನೀಡಬಹುದು. ಆ ಗಡಿಯಾರವನ್ನು ಪ್ರತಿ ಬಾರಿ ನೋಡಿದಾಗಲೂ ನೀವಿಬ್ಬರು ಒಟ್ಟಿಗೆ ಕಳೆದ ದಿನಗಳ ನೆನಪು ಮರುಕಳಿಸುತ್ತದೆ.
ಕುಶನ್ ಮತ್ತು ಮಗ್:
ನಿಮ್ಮ ಹುಡುಗಿ ಹೂವುಗಳು ಅಥವಾ ರೊಮ್ಯಾಂಟಿಕ್ ಉಡುಗೊರೆಗಳ ದೊಡ್ಡ ಅಭಿಮಾನಿಯಲ್ಲದಿದ್ದರೆ ಆಕೆಗೆ ನಿಮ್ಮಿಬ್ಬರ ಫೋಟೋ ಇರುವ ಅಥವಾ ಆಕೆಯ ಇಷ್ಟದ ಚಿತ್ರವಿರುವ ಅಥವಾ ನಿಮ್ಮ ಪ್ರೇಮ ನಿವೇದನೆ ಇರುವ ಪರ್ಸನಲೈಸ್ಡ್ ಮಗ್ ಹಾಗೂ ಕುಶನ್ ನೀಡಿ ಪ್ರಪೋಸ್ ಮಾಡಿ. ಕುಶನ್ ಅವಳಿಗೆ ನಿಮ್ಮ ಪ್ರೀತಿಯ ಆರಾಮವನ್ನು ನೀಡುತ್ತದೆ ಮತ್ತು ಆ ಮಗ್‌ನಲ್ಲಿ ಆಕೆ ದಿನವೂ ತನ್ನ ಚಹಾ ಅಥವಾ ಕಾಫಿಯನ್ನು ಸೇವಿಸಬಹುದು.
ಇದನ್ನೂ ಓದಿ: Rose Day 2024 Date: ರೋಸ್ ಡೇ ಯಾವಾಗ?; ಅದರ ಇತಿಹಾಸ, ಮಹತ್ವದ ಬಗ್ಗೆಯೂ ನಿಮಗೆ ಗೊತ್ತಿರಲಿ
ಟೆಡ್ಡಿ ಬೇರ್:
ಹೆಣ್ಣುಮಕ್ಕಳಿಗೆ ಟೆಡ್ಡಿ ಬೇರ್ ಎಂದರೆ ಬಹಳ ಇಷ್ಟ. ಮೃದುವಾದ ಟಾಯ್ಸ್ ಯಾವಾಗಲೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪ್ರೇಮಿಗಳ ಪ್ರಧಾನ ಆಯ್ಕೆಯಾಗಿದೆ. ನಿಮ್ಮ ಕನಸಿನ ಪುರುಷ ಅಥವಾ ಮಹಿಳೆಗೆ ಟೆಡ್ಡಿ ಬೇರ್ ನೀಡಿ ಪ್ರಪೋಸ್ ಮಾಡಿ.
ಚಾಕೊಲೇಟ್ ಬಾಕ್ಸ್:
ಪ್ರತಿಯೊಬ್ಬರೂ ಚಾಕೊಲೇಟ್‌ಗಳನ್ನು ಇಷ್ಟಪಡುತ್ತಾರೆ. ಚಾಕೋಲೇಟ್ ಬಾಕ್ಸ್ ನೀಡಿ ‘ಐ ಲವ್ ಯೂ’ ಎಂದು ಹೇಳಿದರೆ ನಿಮ್ಮ ಸಂಗಾತಿ ನೋ ಎನ್ನಲು ಸಾಧ್ಯವೇ ಇಲ್ಲ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ