Propose Day 2024: ನೀವು ಪ್ರೀತಿಸುವ ವ್ಯಕ್ತಿಯ ಮುಂದೆ ಹೀಗೆ ಪ್ರಪೋಸ್ ಮಾಡಿದರೆ ನೋ ಎನ್ನಲು ಸಾಧ್ಯವೇ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

Valentine,s Day: ಎಷ್ಟೇ ಧೈರ್ಯವಂತನಿಗೂ ತನ್ನ ಪ್ರೀತಿಯನ್ನು ಪ್ರೀತಿಸುವ ವ್ಯಕ್ತಿಯ ಮುಂದೆ ಹೇಳುವುದಕ್ಕೆ ಧೈರ್ಯ ಸಾಕಾಗುವುದಿಲ್ಲ. ಪ್ರೀತಿಸುವ ಹುಡುಗಿಯ ಮುಂದೆ ಪ್ರೇಮನಿವೇದನೆಯನ್ನು ಮಾಡಿಕೊಳ್ಳಲು ಎಂಟೆದೆ ಗುಂಡಿಗೆ ಇದ್ದರೂ ಕಡಿಮೆಯೇ. ಹುಡುಗರಿಗೆ ಪ್ರೇಮ ನಿವೇದನೆಯ ಬಳಿಕ ಆಕೆಯಿಂದ ಏನು ಉತ್ತರ ಬರುತ್ತದೆ ಎನ್ನುವ ಭಯ ಸಹಜವಾಗಿಯೇ ಕಾಡುತ್ತದೆ. ಹೀಗಾಗಿ ಪ್ರಪೋಸ್ ಮಾಡಬೇಕೋ, ಬೇಡವೋ ಎನ್ನುವ ಗೊಂದಲೇದಲ್ಲೇ ಇರುತ್ತಾರೆ. ಆದರೆ ಹೆಚ್ಚಿನವರು ಫೆಬ್ರವರಿ 8 ಪ್ರಪೋಸ್ ಡೇ ಯಂದು, ಪ್ರೇಮ ನಿವೇದನೆಯನ್ನು ಮಾಡಿದರೆ ಒಪ್ಪುತ್ತಾರೆ ಎನ್ನುವ ಕಾರಣಕ್ಕೆ ಆ ದಿನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ವೇಳೆ ನೀವು ನಿಮ್ಮ ಮನದರಸಿಗೆ ನಿಮ್ಮ ಪ್ರೀತಿಯ ವಿಚಾರವನ್ನು ತಿಳಿಸುವಾಗ ಕೆಲವು ವಿಚಾರಗಳ ಕುರಿತು ಗಮನ ಹರಿಸುವುದು ಅಗತ್ಯ. ಒಂದು ವೇಳೆ ವಿಭಿನ್ನವಾಗಿ ಪ್ರಪೋಸ್ ಮಾಡಿದರೆ ನೋ ಎನ್ನುವ ಹುಡುಗಿಯೂ ಯೆಸ್ ಎನ್ನುತ್ತಾಳೆ.

Propose Day 2024: ನೀವು ಪ್ರೀತಿಸುವ ವ್ಯಕ್ತಿಯ ಮುಂದೆ ಹೀಗೆ ಪ್ರಪೋಸ್ ಮಾಡಿದರೆ ನೋ ಎನ್ನಲು ಸಾಧ್ಯವೇ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 07, 2024 | 12:34 PM

ಪ್ರೀತಿ ಹೇಳಿ ಕೇಳಿ ಹುಟ್ಟುವುದಿಲ್ಲ. ಪ್ರೀತಿಗೆ ಜಾತಿ, ಭಾಷೆ, ಅಂತಸ್ತು ಯಾವುದು ಬೇಕಾಗಿಲ್ಲ. ಪ್ರೀತಿಯಲ್ಲಿ ಬಿದ್ದವರು ಸದಾ ಹೇಳುವ ಮಾತುಗಳಿವು. ಆದರೆ ಫೆಬ್ರವರಿ ತಿಂಗಳು ಪ್ರೇಮಿಗಳ ಪಾಲಿಗೆ ಪ್ರೀತಿಯನ್ನು ನಾನಾ ರೀತಿಯಲ್ಲಿ ವ್ಯಕ್ತಪಡಿಸುವ ಸಾಧ್ಯವಾಗುವ ತಿಂಗಳು. ಸಹಜವಾಗಿಯೇ ಫೆಬ್ರವರಿ ಎಂದಾಕ್ಷಣ ಪ್ರೇಮಿಗಳು ಪ್ರೀತಿಯಲ್ಲಿ ತೇಲಾಡುತ್ತಿರುತ್ತಾರೆ. ಈಗಾಗಲೇ ಪ್ರೇಮಿಗಳ ವಾರ ಆರಂಭವಾಗಿದ್ದು , ಪ್ರತಿಯೊಂದು ದಿನವು ವಿಶೇಷತೆಯಿಂದ ಕೂಡಿದೆ. ಪ್ರೀತಿಯಲ್ಲಿ ಬಿದ್ದವರು ಈ ಎಲ್ಲಾ ದಿನ ವನ್ನು ವಿಶೇಷವಾಗಿಯೇ ಸೆಲೆಬ್ರೇಟ್ ಮಾಡುವ ಮೂಲಕ ತನ್ನ ಮನದರಸಿಗೆ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಆದರೆ ಇನ್ನೇನು ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಸಜ್ಜಾಗಿರುವ ನವ ಪ್ರೇಮಿಗಳಂತೂ ಕಾಯುವುದೇ ಈ ಪ್ರಪೋಸ್ ಡೇ ಗಾಗಿ. ಫೆಬ್ರವರಿ 8 ಪ್ರಪೋಸ್ ಡೇಯಂದು ಪ್ರೀತಿಯ ವಿಚಾರವನ್ನು ತಾನು ಪ್ರೀತಿಸುವವರಿಗೆ ಹೇಳಿಕೊಳ್ಳಲು ಬಯಸಿದ್ದರೆ ವಿಭಿನ್ನವಾಗಿ ಪ್ರಪೋಸ್ ಮಾಡಿ ಮನಸ್ಸು ಗೆಲ್ಲುವುದು ಮುಖ್ಯವಾಗುತ್ತದೆ.

ಪ್ರೇಮ ನಿವೇದನೆ ಮಾಡಬೇಕೆನ್ನುವವರು ಈ ಟಿಪ್ಸ್ ಪಾಲಿಸಿ

*ಇಷ್ಟವಾದ ಸ್ಥಳವನ್ನು ಆಯ್ಕೆ ಮಾಡಿ : ಪ್ರೀತಿಸುವ ವ್ಯಕ್ತಪಡಿಸುವ ಘಳಿಗೆಯಲ್ಲಿ ಇಷ್ಟವಾಗುವ ಸ್ಥಳವಿದ್ದರೆ ಆ ಕ್ಷಣವು ಇನ್ನಷ್ಟು ಅದ್ಭುತವಾಗಿರುತ್ತದೆ. ಹೀಗಾಗಿ ಇಷ್ಟವಾದ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರೆ ನೀವು ಪ್ರೀತಿಸುವ ವ್ಯಕ್ತಿಯ ಮನಸ್ಸನ್ನು ನೂರಕ್ಕೆ ನೂರರಷ್ಟು ಗೆದ್ದಂತೆಯೇ. ಆಕೆಗೆ ಇಷ್ಟವಾಗುವ ಸ್ಥಳವು ನಿಮಗೆ ಗೊತ್ತಿದ್ದರೆ ಆ ಸ್ಥಳದಲ್ಲಿ ಪ್ರೀತಿಯನ್ನು ಹೇಳಿಕೊಂಡರೆ ಬೆಸ್ಟ್.

* ಪ್ರೇಮ ಪತ್ರವನ್ನು ನೀಡಿ: ಈ ಲವ್ ಲೆಟರ್ ನಲ್ಲಿ ಹೃದಯದ ಭಾವನೆಯನ್ನು ಬರೆಯುವ ಮೂಲಕ ನೀವು ಪ್ರೀತಿಸುವ ವ್ಯಕ್ತಿಗೆ ಪ್ರೀತಿಯನ್ನು ತಿಳಿಸಬಹುದು. ನಿಮ್ಮ ಪ್ರೀತಿಯನ್ನು ಅಕ್ಷರ ರೂಪಕ್ಕೆ ಇಳಿಸುವುದರಿಂದ, ಆಕೆಯು ಓದುವ ಮೂಲಕ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಈ ಪ್ರೇಮ ಪತ್ರದಲ್ಲಿ ಆಕೆಯನ್ನು ಅಥವಾ ಆತನನ್ನು ಹೊಗಳುವಂತಹ ಕವನಗಳಿದ್ದರೆ ಇಂಪ್ರೆಸ್ ಆಗಿ ಪ್ರೀತಿಗೂ ಓಕೆ ಎನ್ನಲು ಬಹುದು.

* ಭಿತ್ತಿಪತ್ರದ ಮೂಲಕ ಪ್ರೇಮ ನಿವೇದಿಸಿಕೊಳ್ಳಿ : ಭಿತ್ತಿ ಪತ್ರದಲ್ಲಿ ನೀವು ಪ್ರೀತಿಸುವ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿ, ಪ್ರೀತಿಯನ್ನು ತಿಳಿಸಿ. ಅದಲ್ಲದೆ ಆ ಪತ್ರದಲ್ಲಿ ನಿಮಗೆ ಇಷ್ಟವಿದೆಯೇ, ಇದ್ದರೆ ಉತ್ತರಿಸಿ ಎಂದು ಪ್ರಶ್ನೆಯು ಇರಲಿ. ಆ ಭಿತ್ತಿ ಪತ್ರವನ್ನು ಆಕೆಯ ಮನೆಯ ಕಿಟಕಿಯಲ್ಲಿಡಿ. ಈ ಭಿತ್ತಿ ಪತ್ರವನ್ನು ನೋಡಿದ ಆಕೆಯು ಕ್ರಿಯೇಟಿವ್ ಆಗಿ ನೀವು ಪ್ರಪೋಸ್ ಮಾಡಿದ ರೀತಿಗೆ ಆಕೆಯು ಪ್ರೀತಿಯಲ್ಲಿ ಬೀಳುವುದು ಪಕ್ಕಾ.

ಇದನ್ನೂ ಓದಿ: ಪ್ರೇಮಿಗಳ ದಿನದಂದು ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ಈ ಟಿಪ್ಸ್ ಪಾಲಿಸಿ

*ಚಾಕೊಲೇಟ್ ಹಾಗೂ ಹೂಗುಚ್ಛಗಳು ನೀಡಿ ಪ್ರಪೋಸ್ ಮಾಡಿ: ಎಲ್ಲಾ ಹುಡುಗಿಯರಿಗೆ ಹೂವುಗಳು, ಚಾಕೊಲೇಟ್ ಗಳೆಂದರೆ ಇಷ್ಟ. ಹೀಗಾಗಿ ನೀವು ಪ್ರೀತಿಸುವ ವ್ಯಕ್ತಿಗೆ ಚಾಕೊಲೇಟ್ ಗಳೊಂದಿಗೆ ಹೂಗುಚ್ಛಗಳನ್ನು ನೀಡಿ ಪ್ರಪೋಸ್ ಮಾಡಿದರೆ ನೀವು ಬೇಗನೇ ಇಷ್ಟವಾಗುತ್ತೀರಿ.

* ಪ್ರೀತಿಯ ಸಂದೇಶವನ್ನು ಕಳುಹಿಸಿ: ಹೆಚ್ಚಿನವರಿಗೆ ಪ್ರೀತಿಯನ್ನು ನೇರವಾಗಿ ವ್ಯಕ್ತಪಡಿಸುವುದು ಕಷ್ಟವಾಗುತ್ತದೆ. ಒಂದು ವೇಳೆ ನಿಮಗೆ ಆ ರೀತಿಯ ಸಮಸ್ಯೆಯಿದ್ದರೆ, ಸಂದೇಶದ ಮೂಲಕ ಪ್ರೀತಿಯನ್ನು ಹೇಳಿಕೊಳ್ಳಿ. ಆದರೆ ಮೆಸೇಜ್ ನಲ್ಲಿ ನೇರವಾಗಿ ಐ ಲವ್ ಯು ಎಂದು ಹೇಳುವ ಬದಲು, ಮನಸ್ಸಿನ ಭಾವನೆಗಳನ್ನು ಕವನಗಳಲ್ಲಿ ಬರೆದರೆ ಹುಡುಗಿಯ ಮನಸ್ಸು ಗೆಲ್ಲಬಹುದು.

Published On - 12:33 pm, Wed, 7 February 24

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ