Promise Day Gift Ideas: ನಿಮ್ಮ ಮನದರಸಿಗೆ ಪ್ರಾಮಿಸ್ ಮಾಡುವಾಗ ತಪ್ಪದೇ ಈ ಉಡುಗೊರೆ ನೀಡಿ

Valentine’s Week 2025 : ಪ್ರೇಮಿಗಳ ವಾರದ ಐದನೇ ದಿನವನ್ನು ಪ್ರಾಮಿಸ್ ಡೇಯಾಗಿ ಆಚರಿಸಲಾಗುತ್ತದೆ. ಪ್ರಾಮಿಸ್ ಡೇ ಬದ್ಧತೆಯನ್ನು ನೀಡುವುದರೊಂದಿಗೆ ಬಂಧಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಈ ವಿಶೇಷ ದಿನದಂದು ಸದಾ ಸಂಗಾತಿಯ ಜೊತೆಗಿರುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತಾರೆ. ಈ ಪ್ರಾಮಿಸ್ ಡೇಯಂದು ಸಂಗಾತಿಗಳು ಹಾಗೂ ಪ್ರೇಮಿಗಳು ಭರವಸೆ ನೀಡುವ ಮೂಲಕ ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗಾದ್ರೆ ಈ ಬಾರಿಯ ಪ್ರಾಮಿಸ್ ಡೇ ಗಿಫ್ಟ್ ಕೊಡಲು ಯೋಚಿಸುತ್ತಿದ್ದರೆ ಈ ಕುರಿತಾದ ಕೆಲವು ಟಿಪ್ಸ್ ಇಲ್ಲಿದೆ.

Promise Day Gift Ideas: ನಿಮ್ಮ ಮನದರಸಿಗೆ ಪ್ರಾಮಿಸ್ ಮಾಡುವಾಗ ತಪ್ಪದೇ ಈ ಉಡುಗೊರೆ ನೀಡಿ
ಸಾಂದರ್ಭಿಕ ಚಿತ್ರ
Edited By:

Updated on: Feb 10, 2025 | 5:44 PM

ಪ್ರತಿಯೊಂದು ಸಂಬಂಧದಲ್ಲಿ ಭರವಸೆ ನೀಡುವುದು ಇಬ್ಬರ ನಡುವಿನ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಹೌದು, ಪ್ರೇಮಿಗಳ ವಾರದಲ್ಲಿ ಫೆಬ್ರವರಿ 11 ಪ್ರಾಮಿಸ್ ಮಾಡಲೆಂದೇ ಮೀಸಲಿಡಲಾಗಿದ್ದು, ಈ ದಿನವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಜೀವನದಲ್ಲಿ ಬರುವ ಕಷ್ಟ-ಸುಖ, ದುಃಖ, ನೋವು ನಲಿವುಗಳನ್ನು ಸಮಾನಾಗಿ ಹಂಚಿಕೊಂಡು ಬಾಳುತ್ತೇವೆಂದು ತಮ್ಮ ಸಂಗಾತಿ ಹಾಗೂ ಪ್ರೇಮಿಗೆ ಮಾತು ಕೊಡುತ್ತಾರೆ. ನೀವು ಕೂಡ ಈ ದಿನವನ್ನು ನಿಮ್ಮ ಪ್ರೀತಿಪಾತ್ರರ ಜೊತೆಗೆ ರೋಮಾಂಚನಕಾರಿಯಾಗಿ ಆಚರಿಸಲು ಬಯಸಿದರೆ ಈ ಕೆಲವು ಉಡುಗೊರೆಯನ್ನು ನೀಡಬಹುದು.

  • ಪ್ರಾಮಿಸ್ ರಿಂಗ್ : ಮಹಿಳೆಯರಿಗೆ ಆಭರಣಗಳ ಮೇಲೆ ವ್ಯಾಮೋಹ ಹೆಚ್ಚು. ನಿಮ್ಮ ಸಂಗಾತಿಗೆ ಸಂತೋಷ ತುಂಬಿದ ಜೀವನವನ್ನು ನೀಡುವ ಭರವಸೆ ನೀಡುವಿರಿಯಾದರೆ ಆಕೆಗೆ ಕೈಗೆ ಗೋಲ್ಡ್ ರಿಂಗ್ ಹಾಕಿ ಪ್ರಾಮಿಸ್ ಮಾಡಿ. ಈ ದುಬಾರಿ ಬೆಲೆ ಹಾಗೂ ನಿರೀಕ್ಷೆ ಮಾಡದ ಉಂಗುರವು ನಿಮ್ಮ ಸಂಗಾತಿ ಅಥವಾ ಪ್ರೇಮಿಗೆ ನಿಮ್ಮ ಮೇಲಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ರೀತಿಯ ಉಡುಗೊರೆಗಳು ದೀರ್ಘಕಾಲ ಜೊತೆಗೆ ಉಳಿಯುವುದರೊಂದಿಗೆ ಸದಾ ಕಾಲ ಖುಷಿಕೊಡುತ್ತದೆ.
  • ವೈಯಕ್ತಿಕಗೊಳಿಸಿದ ಉಡುಗೊರೆಗಳು : ನೀವೇನಾದ್ರು ವೈಯುಕ್ತಿಕಗೊಳಿಸಿದ ಉಡುಗೊರೆಗಳನ್ನು ಕೊಡಬೇಕೆಂದುಕೊಂಡಿದ್ದರೆ ಈ ಕೆಲವು ಗಿಫ್ಟ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಫೋಟೋ ಕೊಲಾಜ್, ಕಾಫಿ ಮಗ್‌ಗಳು, ಕಸ್ಟಮೈಸ್ ಮಾಡಿದ ಟಿ-ಶರ್ಟ್‌ಗಳು ಮತ್ತು ಫೋಟೋ ಫ್ರೇಮ್ ಸೇರಿದಂತೆ ಇನ್ನಿತ್ತರ ಉಡುಗೊರೆಗೆ ಬೆಸ್ಟ್ ಆಯ್ಕೆಯಾಗಿದೆ.
  • ಹೂಗುಚ್ಛ : ಹೂಗುಚ್ಚ ನೀಡುವುದು ಪ್ರತಿಯೊಂದು ಸಂಬಂಧ ಹಾಗೂ ಸಂದರ್ಭಕ್ಕೆ ಹೊಂದುವ ಅತ್ಯುತ್ತಮ ಉಡುಗೊರೆ ಆಯ್ಕೆಯಾಗಿದೆ. ಹೀಗಾಗಿ ಹೂಗುಚ್ಛದೊಂದಿಗೆ ನಿಮ್ಮ ಸಂಗಾತಿ ಅಥವಾ ಪ್ರೇಮಿಯ ಮುಂದೆ ಮಂಡಿಯೂರಿ ಪ್ರಾಮಿಸ್ ಮಾಡಿ. ಸಹಜವಾಗಿ ಹೂಗುಚ್ಛದಂತಹ ಉಡುಗೊರೆ ಎಲ್ಲರನ್ನು ಖುಷಿಯಾಗಿಸುತ್ತದೆ. ಈ ರೀತಿ ವಿಭಿನ್ನವಾಗಿ ಪ್ರಾಮಿಸ್ ಮಾಡುವುದು ನಿಮ್ಮವರ ಮುಖದಲ್ಲಿ ನಗು ತರಿಸುತ್ತದೆ.
  • ಪ್ರಾಮಿಸ್ ಡೇಗೆ ಕೇಕ್ ಕತ್ತರಿಸಿ : ನಿಮ್ಮ ಸಂಗಾತಿ ಹಾಗೂ ಪ್ರೇಮಿಗೆ ವಿಭಿನ್ನವಾಗಿ ಪ್ರಾಮಿಸ್ ಮಾಡಲು ಬಯಸಿದರೆ ಸರ್ಪ್ರೈಸ್ ಕೇಕ್ ಆರ್ಡರ್ ಮಾಡಿ ಕತ್ತರಿಸಬಹುದು. ಅದರಲ್ಲಿಯೂ ಪ್ರಾಮಿಸ್ ಡೇ ಥೀಮ್ ಆಧಾರಿತ ಕೇಕ್ ಗಳಿದ್ದರೆ ಬೆಸ್ಟ್. ಹೀಗಾಗಿ ಕೇಕ್ ಮೇಲೆ ಪ್ರಾಮಿಸ್ ಡೇ ಕ್ವೋಟ್ಸ್ ಗಳಿರಲಿ. ಕೇಕ್ ಕತ್ತರಿಸಿ ತಿನ್ನಿಸುವ ಮೂಲಕ ನಿಮ್ಮ ಮನದರಸಿಗೆ ಈ ರೀತಿ ಭರವಸೆ ನೀಡಬಹುದು.
  • ನಿಮ್ಮ ಕೈಯಾರೆ ಸ್ವೀಟ್ ತಯಾರಿಸಿ ತಿನ್ನಿಸಿ : ಪ್ರೀತಿಯಿಂದ ಕೈಯಾರೆ ಅಡುಗೆ ಮಾಡಿ ತಿನ್ನಿಸಿದರೆ ಖುಷಿಯಾಗುತ್ತದೆ. ಹೀಗಾಗಿ ಪ್ರಾಮಿಸ್ ಡೇಯಂದು ಕೈಯಾರೆ ಕ್ಯಾರೆಟ್ ಹಲ್ವಾ, ಖೀರ್ ಪಾಯಸ, ಕೇಸರಿ ಬಾತ್ ಹೀಗೆ ಸ್ವೀಟ್ ತಯಾರಿಸಿ ತಿನ್ನಿಸುವ ಮೂಲಕ ಸಂಗಾತಿಯನ್ನು ಖುಷಿ ಪಡಿಸಬಹುದು. ಈ ಸುಮಧುರ ಘಳಿಗೆಯಲ್ಲಿ ಭರವಸೆ ನೀಡಿದರೆ ಅರ್ಥ ಪೂರ್ಣವಾಗಿ ದಿನವನ್ನು ಆಚರಿಸಿದಂತಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ