Vidura Niti : ಈ ವ್ಯಕ್ತಿಗಳ ಬಳಿ ವೈಯುಕ್ತಿಕ ಜೀವನದ ರಹಸ್ಯಗಳನ್ನು ಹೇಳ್ಬೇಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 05, 2024 | 6:12 PM

ಪ್ರತಿಯೊಬ್ಬರ ಬದುಕಿನಲ್ಲಿ ಕೆಲವು ವೈಯುಕ್ತಿಕ ಹಾಗೂ ಯಾರ ಬಳಿಯೂ ಹಂಚಿಕೊಳ್ಳದ ವಿಷಯಗಳಿರುತ್ತದೆ. ಆದರೆ ಕೆಲವು ಆತ್ಮೀಯ ವ್ಯಕ್ತಿಗಳ ಮುಂದೆ ಎಷ್ಟೇ ವೈಯುಕ್ತಿಕ ವಿಚಾರವಾದರೂ ಸರಿಯೇ, ಅದನ್ನು ಹೇಳಿದರೆ ಮನಸ್ಸು ತಿಳಿಯಾಗುತ್ತದೆ. ಹಾಗಂತ ಈ ವ್ಯಕ್ತಿಗಳ ಬಳಿ ನಿಮ್ಮ ಜೀವನದ ಕೆಲವು ರಹಸ್ಯ ವಿಚಾರಗಳನ್ನು ಬಾಯಿ ಬಿಡಲೇ ಬೇಡಿ ಎಂದಿದ್ದಾನೆ ವಿದುರ. ಜೀವನದಲ್ಲಿ ಗುಟ್ಟಾದ ವಿಷಯಗಳನ್ನು ಈ ಮೂರು ವ್ಯಕ್ತಿಗಳ ಬಳಿ ಹೇಳಿಕೊಂಡರೆ ಅದನ್ನು ಅವರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಯೇ ಹೆಚ್ಚಂತೆ.

Vidura Niti : ಈ ವ್ಯಕ್ತಿಗಳ ಬಳಿ ವೈಯುಕ್ತಿಕ ಜೀವನದ ರಹಸ್ಯಗಳನ್ನು ಹೇಳ್ಬೇಡಿ
ಸಾಂದರ್ಭಿಕ ಚಿತ್ರ
Follow us on

ಜೀವನ ಎಂದ ಮೇಲೆ ನೋವು ನಲಿವು, ಸುಖ ದುಃಖ ಹಾಗೂ ಕೆಲವು ಸೀಕ್ರೆಟ್ ವಿಷಯಗಳಿರುತ್ತದೆ. ಅದಲ್ಲದೇ, ಯಶಸ್ಸು ಹಾಗೂ ನೆಮ್ಮದಿಯುತ ಜೀವನ ಬೇಕೆಂದರೆ ಕೆಲವು ರಹಸ್ಯಗಳನ್ನು ನಮ್ಮೊಳಗೇ ಇಟ್ಟುಕೊಳ್ಳಬೇಕಾಗುತ್ತದೆ. ಇನ್ನು ಕೆಲವು ವೈಯುಕ್ತಿಕ ವಿಚಾರಗಳನ್ನು ನಮ್ಮವರೆನಿಸಿಕೊಂಡ ವ್ಯಕ್ತಿಗಳ ಜೊತೆಗೆ ಮಾತ್ರ ಹಂಚಿಕೊಳ್ಳುತ್ತೇವೆ. ಈ ವೇಳೆಯಲ್ಲಿ ನಿಮ್ಮ ಎದುಗಿರುವ ವ್ಯಕ್ತಿಗಳಲ್ಲಿ ಈ ಗುಣಗಳಿದೆಯೇ ಎಂದು ನೋಡುವುದು ಬಹಳ ಮುಖ್ಯ. ಇಂತಹ ವ್ಯಕ್ತಿಗಳು ಬೇರೆಯವರ ಜೀವನದ ರಹಸ್ಯಗಳನ್ನೆ ಇಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂದು ವಿದುರ ತನ್ನ ನೀತಿಯಲ್ಲಿ ಹೇಳಿಕೊಂಡಿದ್ದಾನೆ.

* ಬುದ್ಧಿವಂತ ವ್ಯಕ್ತಿ: ವಿದುರನ ನೀತಿಯ ಪ್ರಕಾರ, ಬುದ್ಧಿವಂತರೆಲ್ಲರೂ ರಹಸ್ಯವನ್ನು ಕೇಳಲು ಹಾಗೂ ಕಾಯ್ದುಕೊಳ್ಳಲು ಯೋಗ್ಯ ವ್ಯಕ್ತಿಗಳಲ್ಲ. ಈ ವ್ಯಕ್ತಿಗಳು ಯಾರ ಭಾವನೆಗಳನ್ನೂ ಗೌರವಿಸುವುದಿಲ್ಲ. ಆದರೆ ಬೇರೆಯವರ ರಹಸ್ಯ ಹಾಗೂ ಆಲೋಚನೆಗಳನ್ನು ಕೇಳಿಸಿಕೊಳ್ಳುತ್ತಾರೆ. ಸಮಯ ಬಂದಾಗ ಅವುಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗಾಗಿ ನಿಮ್ಮ ಜೀವನದಲ್ಲಿ ಬುದ್ಧಿವಂತ ವ್ಯಕ್ತಿಗಳಿಗೆ ಪ್ರಾಮುಖ್ಯತೆಯನ್ನು ನೀಡಿ ಕೆಲವು ವೈಯುಕ್ತಿಕ ವಿಚಾರಗಳನ್ನು ಹೇಳಿಕೊಳ್ಳುವ ಮುನ್ನ ಸಾವಿರ ಸಲ ಯೋಚಿಸುವುದು ಬಹಳ ಮುಖ್ಯ ಎಂದಿದ್ದಾನೆ ವಿದುರ.

* ದುರಾಸೆಯುಳ್ಳ ವ್ಯಕ್ತಿ: ವಿದುರನು ದುರಾಸೆಯುಳ್ಳ ವ್ಯಕ್ತಿ ಯಾರೊಬ್ಬರ ಸಂಬಂಧಿಯಾಗಲು ಸಾಧ್ಯವಿಲ್ಲ. ಅತಿಯಾದ ಆಸೆಯಿಂದಾಗಿ ಈ ವ್ಯಕ್ತಿಗಳು ತನ್ನ ಆತ್ಮೀಯ ಬಂಧುಗಳಿಗೆ ಮೋಸ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಈ ದುರಾಸೆಯುಳ್ಳ ವ್ಯಕ್ತಿಯೊಂದಿಗೆ ಯಾವತ್ತಿಗೂ ಸಂಬಂಧವನ್ನು ಬೆಳೆಸಬೇಡಿ. ಒಂದು ವೇಳೆ ಸಂಬಂಧವಿಟ್ಟುಕೊಂಡರೆ ಊಟಕ್ಕೆ ಉಪ್ಪಿನಕಾಯಿ ಇರುವಂತೆ ಆ ಸಂಬಂಧವಿರಲಿ. ಅಪ್ಪಿ ತಪ್ಪಿಯೂ ಈ ವ್ಯಕ್ತಿಗಳ ಬಳಿ ತಮ್ಮ ರಹಸ್ಯಗಳನ್ನು ಹೇಳಬೇಡಿ. ದುರಾಸೆಯ ಸ್ವಭಾವದಿಂದಾಗಿ ಈ ವ್ಯಕ್ತಿಯೂ ಸ್ವಾರ್ಥಕ್ಕಾಗಿ ನಿಮ್ಮ ರಹಸ್ಯಗಳನ್ನು ಇಟ್ಟುಕೊಂಡೆ ನಿಮ್ಮೊಂದಿಗೆ ಆಟ ಆಡುವ ಸಾಧ್ಯತೆಯೇ ಹೆಚ್ಚು ಎಂದು ಎಚ್ಚರಿಸಿದ್ದಾನೆ ವಿದುರ.

* ಹೆಚ್ಚು ಮಾತನಾಡುವವರು: ಹೆಚ್ಚು ಮಾತನಾಡುವವರು, ಸದಾ ವಟ ವಟ ಎನ್ನುವವರ ಬಳಿ ರಹಸ್ಯಗಳನ್ನು ಹೇಳಲೇಬಾರದು. ಈ ವ್ಯಕ್ತಿಗಳ ಬಾಯಲ್ಲಿ ಯಾವ ವಿಷಯಗಳು ನಿಲ್ಲಲು ಸಾಧ್ಯವಿಲ್ಲ. ವಿದುರ ಹೇಳುವಂತೆ ಹೆಚ್ಚು ಮಾತನಾಡುವ ಜನರು ತಮ್ಮ ಬಗ್ಗೆ ಕಡಿಮೆ ವಿಷಯಗಳನ್ನು ಹೇಳುತ್ತಾರೆ. ಹಾಗೂ ಇತರರ ಬಗ್ಗೆ ಇಲ್ಲ ಸಲ್ಲದ ವಿಷಯಗಳನ್ನೆ ಹೇಳಿ ತಾವು ಹೇಳುವುದು ಸತ್ಯ ಎನ್ನುವಂತೆ ವರ್ತಿಸುತ್ತಾರೆ. ಹೀಗಾಗಿ ಈ ವ್ಯಕ್ತಿಗಳ ಬಾಯಿಂದ ರಹಸ್ಯಕಾರಿ ವಿಷಯಗಳು ಹೊರಬರುವ ಸಾಧ್ಯತೆಯೇ ಹೆಚ್ಚಂತೆ. ಹೀಗಾಗಿ ಈ ವೈಯುಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವಾಗ, ಇವರು ಹೆಚ್ಚು ಮಾತನಾಡುತ್ತಾರೆ ಎಂದು ತಿಳಿಯುವುದು ಸೂಕ್ತ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ