Vidura Niti : ಜೀವನದಲ್ಲಿ ಯಶಸ್ಸು ಗಳಿಸಲು ಈ ಗುಣಗಳು ನಿಮ್ಮರಲಿ ಎನ್ನುತ್ತಾನೆ ವಿದುರ

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಏನನ್ನಾದರೂ ಸಾಧಿಸಬೇಕು, ಎಲ್ಲರಂತೆ ಇರಬಾರದು ಎನ್ನುವುದಿರುತ್ತದೆ. ಹೀಗಾಗಿ ಕೆಲವರು ತಮ್ಮದೇ ಹಾದಿ ಸೃಷ್ಟಿಸಿ ಜೀವನದಲ್ಲಿ ಯಶಸ್ಸು ಗಳಿಸಿ ನಾಲ್ಕು ಜನರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಆದರೆ ಈ ಕೆಲವು ಗುಣಗಳು ವ್ಯಕ್ತಿಯಲ್ಲಿದ್ದರೆ ಜೀವನದಲ್ಲಿ ಗೆಲ್ಲಲು ಸಾಧ್ಯವಂತೆ. ಹಾಗಾಗಿ ವಿದುರನು ತನ್ನ ನೀತಿಯಲ್ಲಿ ಆ ಗುಣಗಳನ್ನು ಉಲ್ಲೇಖಿಸಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Vidura Niti : ಜೀವನದಲ್ಲಿ ಯಶಸ್ಸು ಗಳಿಸಲು ಈ ಗುಣಗಳು ನಿಮ್ಮರಲಿ ಎನ್ನುತ್ತಾನೆ ವಿದುರ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 03, 2025 | 10:32 AM

ಯಶಸ್ಸು ಯಾರಿಗೆ ತಾನೇ ಬೇಡ ಹೇಳಿ, ಎಲ್ಲರೂ ಕೂಡ ತಮ್ಮ ಜೀವನದಲ್ಲಿ ತಾನು ಅಂದುಕೊಂಡದ್ದನ್ನು ಸಾಧಿಸಬೇಕು, ಗೆಲುವು ನಮ್ಮದಾಗಬೇಕೆಂದು ಬಯಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದುದ್ದಕ್ಕೂ ಈ ಯಶಸ್ಸಿಗಾಗಿ ಹೋರಾಡುತ್ತಿರುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿ ಯಶಸ್ಸು ಬೇಕು ಎನ್ನುವುದಿರುತ್ತದೆ. ಆದರೆ ವಿದುರನು ಈ ಕೆಲವು ಗುಣಗಳನ್ನು ಅಳವಡಿಸಿಕೊಂಡರೆ ಯಶಸ್ಸು ನಿಮ್ಮದಾಗುತ್ತದೆ. ಜೀವನ ಎನ್ನುವ ಯುದ್ಧವನ್ನು ಸುಲಭವಾಗಿ ಗೆಲ್ಲಬಹುದು ಎಂದಿದ್ದಾನೆ.

  • ಈ ಜನರನ್ನು ಮಾತ್ರ ನಂಬಿ : ನಂಬಿಕೆ ಗಳಿಸಿಕೊಳ್ಳುವುದು ಬಹಳ ಕಷ್ಟಕರ. ಹೀಗಾಗಿ ಎಲ್ಲರನ್ನು ಕಣ್ಣು ಮುಚ್ಚಿ ನಂಬಬೇಡಿ. ಹೀಗಾಗಿ ಒಬ್ಬ ವ್ಯಕ್ತಿಯನ್ನು ನಂಬಿ ಎಲ್ಲವನ್ನು ಹೇಳಿಕೊಳ್ಳುವ ಮೂಲಕ ಆ ವ್ಯಕ್ತಿಯೂ ನಂಬಿಕೆ ಅರ್ಹನೇ ಇಲ್ಲವೇ ಎನ್ನುವುದನ್ನು ನೂರು ಬಾರಿ ಯೋಚಿಸುವುದು ಬಹಳ ಮುಖ್ಯ. ಹೀಗಾಗಿ ಜೀವನದಲ್ಲಿ ಗೆಲ್ಲಲು ನಂಬಿಕೆ ಯೋಗ್ಯರಾದವರನ್ನು ಮಾತ್ರ ನಂಬಿ ಎನ್ನುವ ಸಲಹೆ ನೀಡುತ್ತಾನೆ ವಿದುರ.
  • ಈ ಮೂರು ಅಂಶದಿಂದ ದೂರವಿರಿ : ಗೆಲುವು ಸಾಧಿಸಲು ಈ ಮೂರು ವಿಷಯಗಳು ದೂರವಿರಲಿ ಎನ್ನುತ್ತಾನೆ ವಿದುರ. ಕಾಮ, ಕ್ರೋಧ ಹಾಗೂ ದುರಾಸೆ ಎನ್ನುವ ಮೂರು ಅಂಶಗಳು ಮನುಷ್ಯನನ್ನು ಸೋಲಿನಿಂದ ದೂರವಿಡುತ್ತದೆ. ಹೀಗಾಗಿ ನಿಮ್ಮ ಜೀವನದಲ್ಲಿ ಈ ಮೂರಕ್ಕೆ ಹೆಚ್ಚು ಮಹತ್ವ ನೀಡದಿರುವುದು ಉತ್ತಮ.
  • ಕೆಟ್ಟ ಕೆಲಸಕ್ಕೆ ಕೈ ಹಾಕಬೇಡಿ : ಒಳ್ಳೆಯ ಕೆಲಸವನ್ನು ಮಾಡುವವನು ಹಾಗೂ ಕೆಟ್ಟ ಕೆಲಸಗಳಿಂದ ದೂರವಿರುವವನನ್ನು ಯೋಗ್ಯ ವ್ಯಕ್ತಿ ಎಂದು ಕರೆಯಲಾಗುತ್ತದೆ. ಹೀಗಾಗಿ ಕೆಟ್ಟ ಕೆಲಸವು ಗೆಲುವಿನ ಹಾದಿಗೆ ತೊಡಕಾಗಬಹುದು. ಇದರಿಂದ ಸದಾ ಒಳ್ಳೆಯದ್ದನ್ನೇ ಮಾಡುತ್ತಾ ಇತರರಿಗೂ ಒಳ್ಳೆಯದ್ದನ್ನೇ ಬಯಸುವ ಮನಸ್ಥಿತಿ ನಿಮ್ಮದಾಗಲಿ.
  • ಸಮಾನವಾಗಿ ಸ್ವೀಕರಿಸುವ ಗುಣ : ನಿಮ್ಮ ಸುತ್ತಮುತ್ತಲಿನ ವ್ಯಕ್ತಿಗಳು ನಿಮ್ಮನ್ನು ಹೊಗಳಿದರೆ ಹಿಗ್ಗಿ ಹೀರೆಕಾಯಿಯಂತಾಗಬೇಡಿ. ಇನ್ಯಾರದೋ ನೋವು ಮಾಡಿದರೆ ಅಥವಾ ಅವಮಾನ ಮಾಡಿದರೆ ಅದಕ್ಕೂ ಕುಗ್ಗಬೇಡಿ. ಎರಡನ್ನು ಸಮಾನವಾಗಿ ಸ್ವೀಕರಿಸುವ ಗುಣವು ವ್ಯಕ್ತಿಯನ್ನು ಗೆಲುವಿನ ಉತ್ತುಂಗಕ್ಕೆ ಕರೆದುಕೊಂಡು ಹೋಗುತ್ತದೆ.
  • ಶ್ರಮ ವಹಿಸಿ ಪೂರ್ಣ ಮನಸ್ಸಿನಿಂದ ಕೆಲಸ ಮಾಡಿ : ಕೆಲಸವನ್ನು ಮಾಡಿ ಮುಗಿಸಬೇಕೆಲ್ಲವೇ ಎಂದು ಆ ಕಾರ್ಯ ಮಾಡಬೇಡಿ. ಅದು ಗೆಲುವನ್ನು ತಂದು ಕೊಡುವುದಿಲ್ಲ. ಕೆಲವೊಮ್ಮೆ ಬೇಕೋ ಬೇಡವೋ ಎನ್ನುವಂತೆ ಕೆಲಸ ಮಾಡಿದರೆ ಅದು ಪೂರ್ಣವಾಗದೇ ಅರ್ಧಕ್ಕೆ ನಿಂತು ಹೋಗಬಹುದು. ಹೀಗಾಗಿ ಪೂರ್ಣ ಮನಸ್ಸಿನಿಂದ ಮಾಡಿದ ಕಷ್ಟ ಪಟ್ಟು ಮಾಡಿದ ಕೆಲಸವು ಒಂದೊಳ್ಳೆ ಫಲವನ್ನೇ ತಂದು ಕೊಡುತ್ತದೆ.
  • ಮನಸ್ಸನ್ನು ನಿಯಂತ್ರಿಸುವ ಕಲೆ ಗೊತ್ತಿರಲಿ : ಹುಚ್ಚುಕೋಡಿ ಮನಸ್ಸು ಹೇಳಿದ ಮಾತನ್ನು ಕೇಳುವುದೇ ಇಲ್ಲ. ಹೀಗಾಗಿ ಜೀವನದಲ್ಲಿ ಯಶಸ್ಸು ಸಾಧಿಸಲು ಮನಸ್ಸನ್ನು ನಿಗ್ರಹಿಸುವುದು ತಿಳಿದಿರಬೇಕು. ಹೀಗಾಗಿದ್ದಾಗ ಮಾತ್ರ ಹಿಡಿದ ಕೆಲಸವನ್ನು ಮಾಡಿ ಮುಗಿಸಲು ಸಾಧ್ಯ. ಯಾರಿಗೆ ಮನಸ್ಸನ್ನು ಹತೋಟಿಯಲ್ಲಿಡಲು ತಿಳಿದಿದೆಯೋ ಆ ವ್ಯಕ್ತಿಯೂ ಗೆಲುವಿನತ್ತ ಹೆಜ್ಜೆ ಹಾಕಲು ಸಾಧ್ಯವಾಗುತ್ತದೆ.
  • ದಾನ ಮಾಡುವ ಗುಣ ಇರಲಿ : ವಿದುರನ ಪ್ರಕಾರ ದಾನ ಮಾಡುವುದು ಒಳ್ಳೆಯ ಗುಣಗಳಲ್ಲಿ ಒಂದು ವ್ಯಕ್ತಿಯೂ ಬಲಿಷ್ಠನಾಗಿದ್ದಾಗ ಇತರರನ್ನು ಯಾರು ಕ್ಷಮಿಸುತ್ತಾನೋ ಅಥವಾ ಬಡವನಾಗಿದ್ದಾಗಲೂ ದಾನ ಮಾಡುವ ಗುಣ ಹೊಂದಿರುವ ವ್ಯಕ್ತಿಯೂ ಸ್ವರ್ಗದಲ್ಲಿ ನೆಲೆಸುತ್ತಾನಂತೆ. ಈ ಗುಣವಿದ್ದರೆ ಜೀವನದಲ್ಲಿ ಗೆದ್ದಂತೆ ಲೆಕ್ಕ. ಹೀಗಾಗಿ ದಾನ ಮಾಡುವ ಗುಣವನ್ನು ಅಳವಡಿಸಿಕೊಳ್ಳಿ ಎಂದು ವಿದುರ ಸಲಹೆ ನೀಡುತ್ತಾನೆ.
  • ರೋಗದಿಂದ ದೂರವಾಗಿರಿ : ಅನಾರೋಗ್ಯವಿದ್ದರೆ ಹಣವು ಖರ್ಚಾಗುತ್ತದೆ. ಹೀಗಾಗಿ ಸರಿಯಾದ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ. ರೋಗ ಮುಕ್ತರಾಗುವುದು ಕೂಡ ಯಶಸ್ಸಿನಲ್ಲಿ ಒಂದು. ಆರೋಗ್ಯವಿದ್ದರೆ ಅಂದುಕೊಂಡದ್ದನು ಸಾಧಿಸಬಹುದು. ರೋಗದಿಂದ ಮುಕ್ತರಾಗುವುದು ಕೂಡ ಯಶಸ್ಸಿನ ದಾರಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ.
  • ಸೋಮಾರಿಗಳಿಗೆ ಕಿಂಚಿತ್ತೂ ಸಹಾಯ ಮಾಡಬೇಡಿ : ಸೋಮಾರಿ ವ್ಯಕ್ತಿಗಳು ನಿಮ್ಮ ಸುತ್ತ ಮುತ್ತಲಿನಲ್ಲಿದ್ದರೆ ಅವರಿಗೆ ಸಹಾಯ ಮಾಡಬೇಡಿ. ಹಣ ನೀಡುವುದು ಹಾಗೂ ಸಹಾಯ ಮಾಡುವುದನ್ನೇ ಬಂಡವಾಳವಾಗಿಸಿಕೊಳ್ಳುತ್ತಾರೆ. ನೀವು ಮಾಡುವ ಸಹಾಯದಿಂದ ಕೆಲಸ ಕಾರ್ಯ ಮಾಡುವುದಿಲ್ಲ. ಅವರೊಂದಿಗಿನ ಸಹವಾಸವು ನಿಮ್ಮನ್ನು ಕೂಡ ಸೋಮಾರಿಯನ್ನಾಗಿಸುತ್ತದೆ. ಹೀಗಾಗಿ ಈ ವ್ಯಕ್ತಿಗಳ ಸಹವಾಸ ಹಾಗೂ ಇವರಿಗೆ ಸಹಾಯ ಮಾಡಬೇಡಿ ಎನ್ನುತ್ತಾನೆ ವಿದುರ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ