
ಸೋಷಿಯಲ್ ಮೀಡಿಯಾ ಅಂದ್ರೆನೇ ಹಾಗೆ, ಇಲ್ಲಿ ಒಂದಲ್ಲಾ ಒಂದು ವಿಷಯ ಸಖತ್ ವೈರಲ್ ಆಗುತ್ತವೆ. ಯಾವುದಾದ್ರೂ ವಿಷ್ಯ ಟ್ರೆಂಡ್ ಆದ್ರೆ ಸಾಕು ಬಳಕೆದಾರರು ಅದೇ ವಿಷಯದ ಬಗ್ಗೆ ವಿಡಿಯೋ ಮಾಡಿ ಹರಿ ಬಿಡುತ್ತಾರೆ. ಇದಕ್ಕೆ ಬೆಸ್ಟ್ ಉದಾಹರಣೆ ಅಂದ್ರೆ ಇದೀಗ ಟ್ರೆಂಡ್ ಆಗ್ತಿರೋ ಅರಶಿನ ನೀರಿನ ಟ್ರೆಂಡ್ (Viral Turmeric Glass Trend). ಈಗಂತೂ ಯಾರು ನೋಡಿದ್ರೂ, ಕತ್ತಲೆ ಕೋಣೆಯಲ್ಲಿ ಮೊಬೈಲ್ ಟಾರ್ಚ್ ಆನ್ ಮಾಡಿ, ಅದರ ಮೇಲೆ ಒಂದು ಗ್ಲಾಸ್ ನೀರಿಟ್ಟು ಬಳಿಕ ಅದಕ್ಕೆ ಅರಶಿನ ಪುಡಿ ಹಾಕುವಂತಹ ವಿಡಿಯೋಗಳನ್ನೇ ಮಾಡುತ್ತಿದ್ದಾರೆ. ಆದ್ರೆ ಈ ಒಂದು ಪ್ರಯೋಗ ಮಾಡುವುದರಿಂದ ಮನೆಯಲ್ಲಿ ಏನೆಲ್ಲಾ ಸಮಸ್ಯೆ ಆಗುತ್ತೆ ಗೊತ್ತಾ? ಈ ಬಗೆಗಿನ ಒಂದಷ್ಟು ಮಾಹಿತಿಯನ್ನು ಟ್ಯಾರೋ ಕಾರ್ಡ್ ಎಕ್ಸರ್ಟ್ ನೀಲಂ ಟಿ. (Neelam T) ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕತ್ತಲೆ ಕೋಣೆಯಲ್ಲಿ ಒಂದು ಗ್ಲಾಸ್ ನೀರಿಗೆ ಅರಶಿನ ಹಾಕುವಂತಹ ರೀಲ್ಸ್ ವಿಡಿಯೋಗಳು ಭಾರೀ ಟ್ರೆಂಡ್ ಸೃಷ್ಟಿಸಿದೆ. ಇದಂತೂ ತುಂಬಾ ಮಜಾವಾಗಿದೆ ಎಂದು ಎಲ್ರೂ ತಮ್ಮ ತಮ್ಮ ಮನೆಗಳಲ್ಲಿ ಈ ಪ್ರಯೋಗವನ್ನು ಮಾಡ್ತಿದ್ದಾರೆ. ಆದ್ರೆ ಮಜಾವಾಗಿರುವ ಈ ಟ್ರೆಂಡ್‌ನಿಂದ ಮನೆಯಲ್ಲಿ ಸಾಕಷ್ಟು ಸಮಸ್ಯೆ ಉಂಟು ಮಾಡುತ್ತದೆ, ಇದು ಮುಖ್ಯವಾಗಿ ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂಬುದನ್ನು ಟ್ಯಾರೋ ಕಾರ್ಡ್ ಎಕ್ಸರ್ಟ್ ನೀಲಂ ಟಿ. (Kannada_tarot) ಹೇಳಿದ್ದಾರೆ. ಈ ಬಗ್ಗೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ವಾರದ ಯಾವ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಗೊತ್ತಾ?
ವಿಡಿಯೋ ಇಲ್ಲಿದೆ ನೋಡಿ:
ನೀರಿಗೆ ಅರಶಿನ ಹಾಕಿ ಅದಕ್ಕೆ ಲೈಟ್ ಹಾಕುವಂತಹದ್ದು ಅಥವಾ ಕೆಂಡ, ಬೆಂಕಿಯ ಮೇಲೆ ಇಡುವುದು ಹೀಗೆ ಈ ರೀತಿಯ ಮ್ಯಾಜಿಕ್ ಮಾಡೋದನ್ನು ತಂತ್ರಕ್ರಿಯೆ ಅಂತ ಕರಿತಾರೆ. ಮಾಟ-ಮಂತ್ರ, ವಶೀಕರಣ ಮಾಡುವವರು ಈ ತಂತ್ರಕ್ರಿಯೆಯನ್ನು ಅನುಸರಿತ್ತಾರೆ. ಈ ತಂತ್ರವನ್ನು ನೀವು ಮನೆಯಲ್ಲಿ ತಮಾಷೆಗಾಗಿ ಬಳಸಿದರೂ ನಿಮ್ಮ ಸುತ್ತಲೂ ಇರುವ ಋಣಾತ್ಮಕ ಶಕ್ತಿ ಅಂದ್ರೆ ಪ್ರೇತಾತ್ಮಗಳು ನಿಮ್ಮ ಮನೆಗೆ ಆಕರ್ಷಿಸುತ್ತವೆ. ಇದರಿಂದ ಮನೆಯಲ್ಲಿ ಜಗಳ, ಮನಸ್ತಾಪ, ಆರ್ಥಿಕ ಸಂಕಷ್ಟದಂತಹ ಸಮಸ್ಯೆಗಳು ಎದುರಾಗುತ್ತವೆ ಹಾಗಾಗಿ ತಮಾಷೆಗೂ ಕೂಡ ಈ ತಂತ್ರವನ್ನು ಟ್ರೈ ಮಾಡ್ಬೇಡಿ ಎಂದು ಹೇಳಿದ್ದಾರೆ. ಜೊತೆಗೆ ಯಾರಾದ್ರೂ ಈ ರೀತಿ ಮಾಡಿದ್ರೆ, ಅದಕ್ಕೆ ಪರಿಹಾರವನ್ನು ಕೂಡ ಅವರು ತೀಳಿಸಿಕೊಟ್ಟಿದ್ದಾರೆ ಅದೇನೆಂದರೆ, ನೀರು ಮತ್ತು ಅರಶಿನವನ್ನು ಮಿಕ್ಸ್ ಮಾಡಿ ಅದನ್ನು ತುಳಸಿ ಗಿಡಕ್ಕೆ ಹಾಕಿ ಕ್ಷಮೆ ಕೇಳಬೇಕು ಎಂದು ಅವರು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ