
ನಡಿಗೆ (walking) ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ. ರಕ್ತಪರಿಚಲನೆಯಿಂದ ಹಿಡಿದು ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದು. ಈ ಯೋಗದಲ್ಲಿ ಬೇರೆ ರೀತಿಯ ವಿಧಗಳು ಇದೆ. ಆದರೆ ನಡಿಗೆಯು ಒಂದು ವಿಧದ ಯೋಗ ಎಂದು ಹೇಳಲಾಗಿದೆ. ಇದು ಸರಳ ಯೋಗಕ್ಕೆ (yoga) ಸಮಾನವಾಗಿದೆ. ಜತೆಗೆ ಇದೊಂದು ಒಳ್ಳೆಯ ಅಭ್ಯಾಸ. ಈ ನಡಿಗೆ ಎಂಬ ಯೋಗ ದೇಹವನ್ನು ಪೋಷಿಸಲು ಹಾಗೂ ಮನಸ್ಸನ್ನು ಶಾಂತಗೊಳಿಸಲು , ಆಂತರಿಕ ಆತ್ಮದೊಂದಿಗೆ ಸಂಪರ್ಕ ಸಾಧಿಸಲು ಇದು ಉತ್ತಮ ಅಭ್ಯಾಸವಾಗಿದೆ. ಇದು ದೇಹಕ್ಕೆ ಶಾಂತಿ ಹಾಗೂ ಸೌಮ್ಯವಾದ ಮನಸ್ಥಿತಿಯನ್ನು ನೀಡುತ್ತದೆ.
ಸಾಮಾನ್ಯವಾಗಿ ಮಾಡುವ ಯೋಗಕ್ಕಿಂತ ಇದು ತುಂಬಾ ಭಿನ್ನವಾಗಿದೆ. ವಾಕಿಂಗ್ ಯೋಗವನ್ನು ಬುದ್ಧಿವಂತಿಯ ಚಲನೆ ಎಂದು ಹೇಳಬಹುದು. ನಡಿಗೆಯ ಪ್ರತಿಯೊಂದು ಹೆಜ್ಜೆಯೂ ಉಸಿರಾಟದ ಲಯ ಮತ್ತು ದೇಹ ಹಾಗೂ ಭೂಮಿಯ ನಡುವಿನ ಸಂಪರ್ಕವಾಗಿದೆ. ನಡಿಗೆ ಯೋಗವನ್ನು ಪಾರ್ಕ್, ಕಡಲತೀರ, ಮನೆ ಎಲ್ಲಿ ಮಾಡಿದ್ರು ಸರಿ, ಅದು ಪ್ರತಿಯೊಂದು ಹೆಜ್ಜೆಯಲ್ಲೂ ಆರೋಗ್ಯ ಸೂಚನೆಯನ್ನು ನೀಡುತ್ತದೆ.
ಇದನ್ನೂ ಓದಿ: ಓ ಗಂಡಸರೇ… ಇಂತಹ ಮಹಿಳೆಯನ್ನು ನೀವು ಎಂದಿಗೂ ಮದುವೆಯಾಗಬಾರದಂತೆ
ಆರೋಗ್ಯ ತಜ್ಞರು ಹೇಳಿರುವ ಪ್ರಕಾರ, ವಾಕಿಂಗ್ ಯೋಗವು ಭಾವನಾತ್ಮಕ ನೆಲೆಗಟ್ಟು ಮತ್ತು ಸಂಪರ್ಕವನ್ನು ಬೆಳೆಸುತ್ತದೆ. ಜತೆಗೆ ಇದು ಆಧ್ಯಾತ್ಮಿಕ ಪ್ರಭಾವವನ್ನು ಉಂಟು ಮಾಡುತ್ತದೆ. ವಾಕಿಂಗ್ ಯೋಗವು ಪ್ರಕೃತಿ ಮತ್ತು ಮನುಷ್ಯನ ಆಂತರಿಕ ಆತ್ಮ ಸಂಪರ್ಕವನ್ನು ಬೆಳೆಸುತ್ತದೆ. ಮನಸ್ಸಿನ ಒಳಗೆ ಶಾಂತಿ ಮತ್ತು ಸಾಮರಸ್ಯವನ್ನು ಬೆಳೆಸುತ್ತದೆ. ಇದರಿಂದ ಜೀವನದಲ್ಲಿ ಸಮತೋಲನ, ಸಾವಧಾನತೆ ಮತ್ತು ಸಂತೋಷ ಪಡೆಯಬಹುದು ಎಂದು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.