Relationship: ನಿಮ್ಮ ಪತಿ ಸದಾ ಸಂತೋಷದಿಂದರಬೇಕು ಎಂದರೆ ಹೀಗೆ ಮಾಡಿ

| Updated By: ನಯನಾ ರಾಜೀವ್

Updated on: May 28, 2022 | 3:05 PM

ಪತಿ ಮತ್ತು ಪತ್ನಿ ನಡುವಿನ ಸಂಬಂಧವು ಪ್ರೀತಿ, ನಂಬಿಕೆ ಹಾಗೂ ವಿಶ್ವಾಸದ ಮೇಲೆ ನಿಂತಿದೆ. ನೀವು ನಿಮ್ಮವರೊಂದಿಗೆ ಹೇಗೆ ನಡೆದುಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಸಂಬಂಧವು ನಿಂತಿರುತ್ತದೆ. ಧಾವಂತದ ಬದುಕಿನಲ್ಲಿ ಕಾಲಕ್ಕೆ ತಕ್ಕಂತೆ ಸಂಬಂಧದಲ್ಲಿ ಕಹಿ ಉಂಟಾಗುತ್ತದೆ.

Relationship: ನಿಮ್ಮ ಪತಿ ಸದಾ ಸಂತೋಷದಿಂದರಬೇಕು ಎಂದರೆ ಹೀಗೆ ಮಾಡಿ
Relationship
Follow us on

ಪತಿ ಮತ್ತು ಪತ್ನಿ ನಡುವಿನ ಸಂಬಂಧವು ಪ್ರೀತಿ, ನಂಬಿಕೆ ಹಾಗೂ ವಿಶ್ವಾಸದ ಮೇಲೆ ನಿಂತಿದೆ. ನೀವು ನಿಮ್ಮವರೊಂದಿಗೆ ಹೇಗೆ ನಡೆದುಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಸಂಬಂಧವು ನಿಂತಿರುತ್ತದೆ. ಧಾವಂತದ ಬದುಕಿನಲ್ಲಿ ಕಾಲಕ್ಕೆ ತಕ್ಕಂತೆ ಸಂಬಂಧದಲ್ಲಿ ಕಹಿ ಉಂಟಾಗುತ್ತದೆ.

ಏಕೆಂದರೆ ಕುಟುಂಬ ಮತ್ತು ಕೆಲಸದ ನಡುವೆ ಸಮತೋಲನವನ್ನು ಸಾಧಿಸುವುದು ತುಂಬಾ ಕಷ್ಟಕರವಾಗುತ್ತದೆ ಮತ್ತು ಈ ಕಾರಣದಿಂದಾಗಿ, ಕೆಲವೊಮ್ಮೆ, ಬಯಸದೆಯೂ, ಇಬ್ಬರ ನಡುವೆ ಬಿರುಕು ಉಂಟಾಗುತ್ತದೆ. ಪತಿಯನ್ನು ಸದಾ ಸಂತೋಷವಾಗಿರಿಸಲು ಏನು ಮಾಡಬೇಕು ಕೆಲವು ಸಲಹೆಗಳು ಇಲ್ಲಿವೆ.

ಐ ಲವ್ ಯೂ ಹೇಳುತ್ತಿರಿ: ನಿತ್ಯವೂ ನೂರಾರು ಬಾರಿ ಪತಿಗೆ ಐ ಲವ್​ ಯೂ ಹೇಳುತ್ತಿರಿ ಅದರಿಂದ ಪತಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಾಗುತ್ತದೆ.
ಸಣ್ಣ ಸಣ್ಣ ವಿಷಯವೇ ದೊಡ್ಡ ಆನಂದಕ್ಕೆ ಕಾರಣ: ನಿಮಗೆ ಚಿಕ್ಕ ವಿಷಯವೆನಿಸಬಹುದು ಆದರೆ ಕೆಲವು ಚಿಕ್ಕಚಿಕ್ಕ ವಿಷಯಗಳೇ ಹೆಚ್ಚು ಖುಷಿ ಕೊಡುತ್ತವೆ. ಹಾಗೆಯೇ ಪತಿ ಮಾಡುವ ಕೆಲಸಗಳಿಗೆ ಅಪ್ರಿಷಿಯೇಟ್ ಮಾಡುವುದನ್ನು ಮಾತ್ರ ಮರೀಬೇಡಿ.

ವಿವಾದವನ್ನು ನೀವೇ ಬಗೆಹರಿಸಿ: ನಿಮ್ಮ ನಡುವೆ ಯಾವಾಗಲಾದರೂ ವಿವಾದ ಉಂಟಾಗಿದ್ದರೆ ಅದನ್ನು ನೀವೇ ಸ್ವತಃ ಬಗೆಹರಿಸಿ. ಮೂರನೇ ವ್ಯಕ್ತಿ ಅದರಲ್ಲಿ ಹಸ್ತಕ್ಷೇಪ ಮಾಡಲು ಅಕಾಶ ಕೊಡಬೇಡಿ.

ಹೆಚ್ಚಿನ ಸಮಯ ಮೀಸಲಿಡಿ: ಪತಿ ಜತೆಗೆ ಹೆಚ್ಚು ಸಮಯವನ್ನು ಕಳೆಯಿರಿ, ಅವರ ಚಿಕ್ಕ ಪುಟ್ಟ ಖುಷಿಯ ಬಗ್ಗೆ ಗಮನವಿರಲಿ.

ಬೆದರಿಕೆ ಹಾಕಬೇಡಿ: ಗಂಡ ಹೆಂಡತಿ ನಡುವೆ ಅಷ್ಟಿಷ್ಟು ಮನಸ್ತಾಪ, ಜಗಳ ಇದ್ದದ್ದೇ. ಅದರಿಂದ ಪ್ರೀತಿಯೇನೂ ಕಡಿಮೆಯಾಗುವುದಿಲ್ಲ. ಮುನಿಸಿಕೊಳ್ಳುವಿಕೆ, ರಮಿಸುವಿಕೆಯಿಂದ ಆ ಪ್ರೀತಿ ಇನ್ನಷ್ಟು ಹೆಚ್ಚುತ್ತದೆ. ಆದರೆ ಸಣ್ಣ ಪುಟ್ಟ ಮನಸ್ತಾಪದ ಸಂದರ್ಭದಲ್ಲಿ ನೀವು ಗಂಡನಿಗೆ ಬೆದರಿಕೆ ಹಾಕುವ ಮಟ್ಟಿಗೆ ಇಳಿದರೆ, ಅದು ಒಳ್ಳೆಯ ಬೆಳವಣಿಗೆ ಅಲ್ಲ.

ತಲೆ ತಗ್ಗಿಸುವಂತೆ ಮಾಡಬೇಡಿ: ಒಮ್ಮೊಮ್ಮೆ ಎಂತಹ ಘಟನೆ ಘಟಿಸಿ ಬಿಡುತ್ತದೆಂದರೆ, ಅದರಲ್ಲಿ ನಿಮ್ಮ ಪತಿಯದ್ದೇ ತಪ್ಪು ಇರುತ್ತದೆ. ಆದರೆ ಇಂತಹ ಸ್ಥಿತಿಯಲ್ಲಿ ನೀವು ತಿಳಿವಳಿಕೆಯುಳ್ಳ ಪತ್ನಿಯಾಗಿದ್ದರೆ, ನೀವು ನಿಮ್ಮ ಗಂಡನನ್ನು ಸಂಕೋಚದಿಂದ ಕುಗ್ಗುವುದರಿಂದ ಬಚಾವ್ ಮಾಡಬಹುದು.

ಪತಿಯನ್ನು ಗುರುತಿಸಿ: ಕೆಲವು ಪತ್ನಿಯರು ನಾನು ಪತಿಯನ್ನು ಯಾವಾಗ ಗೌರವಿಸುತ್ತೇನೆಂದರೆ ಅವರು ಯಾವಾಗ ಅದಕ್ಕೆ ಲಾಯಕ್‌ ಆಗುತ್ತಾರೊ ಆಗ ಎಂದು ಹೇಳುತ್ತಾರೆ. ಹೀಗೆ ಹೇಳುವುದರ ಮೂಲಕ ನೀವು ಗೊತ್ತಿಲ್ಲದೆಯೇ ನಿಮ್ಮ ಪತಿಗೆ ಅಗೌರವ ಸೂಚಿಸಿ ಎಂದು ಸಲಹೆ ಕೊಟ್ಟಂತೆ.

ಕೆಲಸದ ಪಟ್ಟಿ ಹೇಳಬೇಡಿ: ಪತ್ನಿಯರು ತಮ್ಮ ಪತಿಯಂದಿರಿಗಾಗಿ ಸದಾ ಕೆಲಸಗಳ ಉದ್ದನೆಯ ಪಟ್ಟಿ ತಯಾರಿಸಿ ಇಟ್ಟಿರುತ್ತಾರೆ. ಇಂದು ಅದನ್ನು ಮಾಡಬೇಕು, ರಾತ್ರಿ ಮನೆಗೆ ಬರುವಾಗ ಇದನ್ನು ಮಾಡಬೇಕು ಎಂದೆಲ್ಲ ಹೇಳುವುದರ ಮೂಲಕ ನೀವು ಪತಿಗೆ ದಾಂಪತ್ಯ ಜೀವನವನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುವಲ್ಲಿ ವಿಫಲರಾಗುತ್ತಿದ್ದೀರಿ ಎಂದು ನೆನಪಿಸಿದಂತೆ. ಇದು ಅವರಿಗೆ ಸದಾ ಕೆಲಸದ ಹೊರೆ ಎಂಬಂತೆ ಭಾಸವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ