Headphones: ಹೆಡ್​ಫೋನ್​ಗಳ ಅತಿಯಾದ ಬಳಕೆಯಿಂದ ಏಕಾಗ್ರತೆ ಮಟ್ಟ ಕುಸಿತ

ಇಯರ್​ಫೋನ್​ಗಳ ಬಳಕೆ ಮಾಡುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ನಿತ್ಯ ಹತ್ತಕ್ಕೂ ಹೆಚ್ಚು ಗಂಟೆಗಳ ಕಾಲ ಇಯರ್​ಫೋನ್​ಗಳನ್ನು ಬಳಕೆ ಮಾಡುವುದು ಆರೋಗ್ಯದ ಮೇಲೆ ವ್ಯಕ್ತಿರಿಕ್ತ ಪರಿಣಾಮವನ್ನು ಬೀರುತ್ತಿದೆ.

Headphones: ಹೆಡ್​ಫೋನ್​ಗಳ ಅತಿಯಾದ ಬಳಕೆಯಿಂದ ಏಕಾಗ್ರತೆ ಮಟ್ಟ ಕುಸಿತ
Earphone
Follow us
TV9 Web
| Updated By: ನಯನಾ ರಾಜೀವ್

Updated on: May 29, 2022 | 8:00 AM

ಹೆಡ್​ಫೋನ್​(Headphone)ಗಳ ಬಳಕೆ ಮಾಡುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ನಿತ್ಯ ಹತ್ತಕ್ಕೂ ಹೆಚ್ಚು ಗಂಟೆಗಳ ಕಾಲ ಇಯರ್​ಫೋನ್​ಗಳನ್ನು ಬಳಕೆ ಮಾಡುವುದು ಆರೋಗ್ಯದ ಮೇಲೆ ವ್ಯಕ್ತಿರಿಕ್ತ ಪರಿಣಾಮವನ್ನು ಬೀರುತ್ತಿದೆ.

ಹೆಡ್‌ಫೋನ್‌ಗಳು ಹಾಗೂ ಇಯರ್ ‌ಬಡ್ಸ್‌ ಬಳಕೆಯಿಂದಾಗಿ ಕಿವಿಯ ತೊಂದರೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮಕ್ಕಳ ಶ್ರವಣೇಂದ್ರಿಯ ವ್ಯವಸ್ಥೆಯ ಪಕ್ವತೆಯು ಅಪೂರ್ಣವಾಗಿರುವುದರಿಂದ ತಜ್ಞರು ಈ ಎಚ್ಚರಿಕೆಗಳನ್ನು ನೀಡಿದ್ದಾರೆ.

ಮಕ್ಕಳು, ಹದಿಹರೆಯದವರು ಮತ್ತು ಯುವ ವಯಸ್ಕರು ಪ್ರತಿದಿನ ಹಲವು ಗಂಟೆಗಳ ಕಾಲ ಹೆಚ್ಚು ಶಬ್ದ ಕೊಟ್ಟುಕೊಂಡು ಸಂಗೀತವನ್ನು ಕೇಳುತ್ತಿದ್ದಾರೆ. 70 ಡೆಸಿಬಲ್​ ಇದು ಒಂದು ವರ್ಷದಲ್ಲಿ ಒಂದು ದಿನದ ಸರಾಸರಿ ವಿರಾಮ ಶಬ್ದ. ಇದನ್ನು ಜಾಗತಿಕವಾಗಿ ಶಿಫಾರಸ್ಸು ಮಾಡಲಾಗಿದೆ.

ವೈಯಕ್ತಿಕ ಆಡಿಯೋ ವ್ಯವಸ್ಥೆಯನ್ನು ಬಳಸುವ ಜನರಿಗೆ ಶ್ರವಣೇಂದ್ರಿಯ ಆರೋಗ್ಯದ ಅಪಾಯವು ಐದು ವರ್ಷಗಳ ಅವಧಿಯಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ದಿನಕ್ಕೆ ಒಂದು ಗಂಟೆಗೂ ಹೆಚ್ಚು ಕಾಲ ಇರುತ್ತದೆ.

85 ಡೆಸಿಬಲ್ ಮಕ್ಕಳು ಮತ್ತು ಹದಿಹರೆಯದವರಿಗೆ ಸುರಕ್ಷಿತವಾಗಿದೆ ಎಂದು ಇತ್ತೀಚಿನ ವಾಲ್ ಸ್ಟ್ರೀಟ್ ಜರ್ನಲ್ ಲೇಖನದ ಬಗ್ಗೆ ಪ್ರಶ್ನೆ ಮಾಡಿದ ಫಿಂಕ್, 85 ಡೆಸಿಬಲ್‌ಗಳು ಯಾರಿಗೂ ಸುರಕ್ಷಿತ ಮಾನ್ಯತೆ ಅಲ್ಲ ಎಂದು ಹೇಳಿದ್ದರು.

ದೈನಂದಿನ ಜೀವನದಲ್ಲಿ ವೈಯಕ್ತಿಕವಾಗಿ ಆಲಿಸುವ ವ್ಯವಸ್ಥೆಗಳು, ಸಾರಿಗೆ ಶಬ್ದ, ಗೃಹೋಪಯೋಗಿ ವಸ್ತುಗಳು, ವಿದ್ಯುತ್ ಉಪಕರಣಗಳು ಮತ್ತು ಮನರಂಜನೆ ಇತ್ಯಾದಿ ಶಬ್ದ ಮೂಲಗಳಿಂದ ವಿಶೇಷವಾಗಿ ಕಿರಿಯರಿಗೆ ಹಾಗೂ ಯುವಕರ ಶ್ರವಣದ ತೊಂದರೆ ಹೆಚ್ಚಳ ಮಾಡುತ್ತದೆ.

ಏಕಾಗ್ರತೆ ಮಟ್ಟ ಕುಸಿತ

ಇಯರ್​ಫೋನ್ ಅಥವಾ ಹೆಡ್​ಫೋನ್ ಬಳಕೆಯಿಂದ ಏಕಾಗ್ರತೆ ಮಟ್ಟ ಕುಸಿಯುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಹಾಗೆಯೇ ಮೂರು ಹೊತ್ತು ಇಯರ್​ಫೋನ್​ ಬಳಸುವವರು ತಮ್ಮದೇ ಆದ ಪ್ರಪಂಚದಲ್ಲಿರುತ್ತಾರೆ. ಹೊರ ಜಗತ್ತಿನಲ್ಲಿ ಏನೇ ನಡೆಯುತ್ತಿದ್ದರೂ ಸ್ಪಂದಿಸದ, ತಲೆಕೆಡಿಸಿಕೊಳ್ಳದ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ.

ಕಿವಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ

ನೀವು ಹೆಚ್ಚು ಹೆಡ್‌ಫೋನ್ ಬಳಸಿದರೆ ಅದು ನಿಮ್ಮ ಕಿವಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದರಿಂದ ಶ್ರವಣದೋಷ ಉಂಟಾಗುವ ಸಾಧ್ಯತೆಯೂ ಇದೆ. ಮೊದಲು ಕಿವಿ ನೋವು ಶುರುವಾಗುತ್ತದೆ ಬಳಿಕ ನೋವಿನ ನಂತರ, ನಿಮ್ಮ ಕಿವಿಯಲ್ಲಿ ಸೋಂಕು ಉಂಟಾಗುವ ಅಪಾಯವಿದೆ. ಅಷ್ಟೇ ಅಲ್ಲ ಇದರಿಂದ ಕೆಲವರಿಗೆ ತಲೆ ಸುತ್ತುವಿಕೆಯ ಅನುಭವ ಕೂಡ ಆಗಬಹುದು.

ಕಿವುಡುತನ ಉಂಟಾಗಬಹುದು ಪ್ರತಿದಿನ ಹೆಚ್ಚು ಕಾಲ ಇಯರ್‌ಫೋನ್‌, ಹೆಡ್‌ಫೋನ್‌ ಬಳಸುವವರಿಗೆ ಕಿವಿ ನೋವು, ಜುಮ್ಮೆನುವಿಕೆಯಿಂದ ಶುರುವಾಗಿ ಸ್ವಲ್ಪ ಸಮಯದ ನಂತರ ಸಾಮನ್ಯವಾಗುತ್ತದೆ. ಆದರೆ ಇಂತಹ ಸಮಸ್ಯೆಯೇ ಮುಂದೆ ಕಿವಿಡುತನಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ಕಿವಿಯಲ್ಲಿ ತುರಿಕೆ, ಕಿರಿಕಿರಿ

ಕಿವಿಯಲ್ಲಿ ತುರಿಕೆ, ಕಿರಿಕಿರಿಯಾದ ಅನುಭವವಾಗುತ್ತದೆ. . ಹೆಡ್‌ಫೋನ್‌ಗಳನ್ನು ಹಲವು ಬಾರಿ ಅನ್ವಯಿಸುವುದರಿಂದ ಕಿವಿ ತುರಿಕೆ ಉಂಟಾಗುತ್ತದೆ, ಇದಕ್ಕಾಗಿ ನಾವು ಇಯರ್‌ಬಡ್‌ಗಳನ್ನು ಬಳಸುತ್ತೇವೆ. ಆದರೆ ಇದು ಕಿವಿಯಲ್ಲಿರುವ ಮೇಣವನ್ನು ತೆಗೆದುಹಾಕುತ್ತದೆ ಮತ್ತು ಕಿವಿಯ ಒಳ ಭಾಗಕ್ಕೆ ರೋಗಾಣುಗಳ ಸೋಂಕಿನ ಅಪಾಯ ಇದು ಹೆಚ್ಚಿಸುತ್ತದೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ