AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gadgets: ಬಾಲ್ಯದಲ್ಲೇ ಗ್ಯಾಜೆಟ್ ಬಳಕೆ: ಮಕ್ಕಳ ಮಾತು ವಿಳಂಬಕ್ಕೆ ಕಾರಣವಾಗಬಹುದು

Gadgets: ಬಾಲ್ಯದಲ್ಲಿಯೇ ಗ್ಯಾಜೆಟ್(Gadgets) ​ಗಳ ಗೀಳು ಮಗುವಿನ ಮಾತು ವಿಳಂಬಕ್ಕೆ ಕಾರಣವಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

Gadgets: ಬಾಲ್ಯದಲ್ಲೇ ಗ್ಯಾಜೆಟ್ ಬಳಕೆ: ಮಕ್ಕಳ ಮಾತು ವಿಳಂಬಕ್ಕೆ ಕಾರಣವಾಗಬಹುದು
Gadgets
TV9 Web
| Updated By: ನಯನಾ ರಾಜೀವ್|

Updated on: May 29, 2022 | 10:40 AM

Share

ಬಾಲ್ಯದಲ್ಲಿಯೇ ಗ್ಯಾಜೆಟ್(Gadgets) ​ಗಳ ಗೀಳು ಮಗುವಿನ ಮಾತು ವಿಳಂಬಕ್ಕೆ ಕಾರಣವಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ.  ಅಂಬೆಗಾಲಿಡುವ ಮುನ್ನವೇ ಮಗು ಮೊಬೈಲ್​ ಅನ್ನು ಹಿಡಿದುಕೊಳ್ಳಲು ಆರಂಭಿಸಿದೆ, ಅಮ್ಮನ ಜೋಗುಳದ ಬದಲು ಮೊಬೈಲ್​ನಲ್ಲಿ ಸಿನೆಮಾ ಹಾಡುಗಳನ್ನು ಕೇಳುತ್ತಿದೆ. ಇದು ವಿಪರೀತವಾದರೆ ಮಗುವಿಗೆ ಮಾತುಬರುವುದು ತಡವಾಗಬಹುದು ಎಂದು ಹೇಳಲಾಗಿದೆ.

ಕೊರೊನಾ ಸೋಂಕಿಗೂ ಮೊದಲು ಮುನ್ನ ಶಾಲೆ, ಆಟ-ಪಾಠಗಳತ್ತ ಮುಳುಗಿ ಗ್ಯಾಜೆಟ್ ಹಾಗೂ ಮೊಬೈಲ್ ಗಳನ್ನು ಅಲ್ಪಸ್ವಲ್ಪ ಬಳಕೆ ಮಾಡುತ್ತಿದ್ದ ಮಕ್ಕಳು, ಸಾಂಕ್ರಾಮಿಕ ರೋಗ ಎದುರಾದ ಬಳಿಕ ಗ್ಯಾಜೆಟ್​ಗಳು, ಮೊಬೈಗಳ ವಿಡಿಯೋ ಹಾಗೂ ಆಟಗಳಲ್ಲಿ ಮುಳುಗಿ ಹೋಗುತ್ತಿದ್ದಾರೆ. ತಾಯಂದಿರು ಮಕ್ಕಳು ತಮಗೆ ತೊಂದರೆ ಕೊಡಬಾರದು ಎಂದು ಮೊಬೈಲ್​ಅನ್ನು ಮಕ್ಕಳ ಕೈಯಲ್ಲಿರಿಸಿ ತಾವು ಕೆಲಸ ಮಾಡಿಕೊಳ್ಳುತ್ತಿದ್ದಾರೆ.

ಈ ಸಾಧನಗಳು ಮಕ್ಕಳ ಮನಸ್ಸು ಹಾಗೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.

ಮೂರು ವರ್ಷಕ್ಕಿಂತ ಕಡಿಮೆ ಮಕ್ಕಳಲ್ಲಿ ಮಾತು ವಿಳಂಬ 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮಾತು ವಿಳಂಬವಾಗುತ್ತಿರುವ ಬಗ್ಗೆ ಪೋಷಕರು ಅಳಲು ತೋಡಿಕೊಂಡಿದ್ದಾರೆ. 1-3 ವರ್ಷ ಮಕ್ಕಳು ಮಾತು ಕಲಿಯಲು ನಿರ್ಣಾಯಕ ಸಮಯವಾಗಿರುತ್ತದೆ. ಇಂತಹ ಸಮಯದಲ್ಲಿ ಪೋಷಕರ ಪಾತ್ರ, ಮನೆಯ ವಾತಾವರಣ ಮುಖ್ಯ ಪಾತ್ರವಹಿಸುತ್ತದೆ.

ಈ ವಿಚಾರಗಳ ಬಗ್ಗೆ ಗಮನವಿರಲಿ ಕಡಿಮೆ ಬುದ್ಧಿಮತ್ತೆಯ ಸಾಮರ್ಥ್ಯಗಳು ವ್ಯಕ್ತಪಡಿಸುವ ಭಾಷಾ ತೊಂದರೆಗಳು ದೈಹಿಕ ಚಟುವಟಿಕೆಗಳಿಲ್ಲದೆ ಬೊಜ್ಜ ಸಮಸ್ಯೆ ಕಾಡಬಹುದು. ಅರಿವಿನ ಕೊರತೆ ಆಟಿಸಂ ಸಮಸ್ಯೆ ಸಾಮಾನ್ಯ ಬೆಳವಣಿಗೆಯಲ್ಲಿ ವಿಳಂಬ ಆಲಿಸುವಿಕೆಯ ಕೊರತೆ

ಪಾಲಕರೊಂದಿಗೆ ಮಕ್ಕಳು ಸಮಯ ಕಳೆಯಲಿ ಮಕ್ಕಳಿಗೆ ಇಷ್ಟವಾಗುವ ಹಾಡುಗಳು, ರೈಮ್ಸ್ ಗಳನ್ನು ಹಾಕಿ, ಮಕ್ಕಳೊಂದಿಗೆ ಸಂವಹನ ನಡೆಯುವುದು ಬಹಳ ಮುಖ್ಯ.ಪಾಲಕರು ಮಕ್ಕಳೊಂದಿಗೆ ಸಾಕಷ್ಟು ಸಮಯ ಕಳೆಯಬೇಕು.

ಮಾತಿನ ಮೇಲೆ ಪರಿಣಾಮ ಬೀರಲಿದೆ ಗ್ಯಾಜೆಟ್, ಮೊಬೈಲ್ ಬಳಕೆ ಮತ್ತು ಮಕ್ಕಳ ಮಾತು, ತೊದಲು ನುಡಿ ನಡುವೆ ಮಹತ್ವದ ಸಂಬಂಧವಿದೆ ಎಂದು ಈಗಾಗಲೇ ಸಾಕಷ್ಟು ಅಧ್ಯಯನಗಳು ಸಾಬೀತುಪಡಿಸಿವೆ. ಮಕ್ಕಳು 30 ನಿಮಿಷ ಮೊಬೈಲ್ ಹಾಗೂ ಗ್ಯಾಜೆಟ್​ಗಳನ್ನು ಬಳಕೆ ಮಾಡಿದರೂ, ಅದು ಅವರ ಮಾತಿನ ಮೇಲೆ ಶೇ.49ರಷ್ಟು ಪರಿಣಾಮ ಬೀರಲಿದೆ ಎಂದು ಅಧ್ಯಯನಗಳು ಹೇಳಿವೆ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಲ್ಲ, ಕೆಲವು ಅಧ್ಯಯನಗಳ ಮಾಹಿತಿಯನ್ನೊಳಗೊಂಡಿದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ