Relationship tips: ವಿಚ್ಛೇದನ ಹಂತದಲ್ಲಿರುವಾಗ ಈ ಕೆಲಸ ಮಾಡಿ, ನಿಮ್ಮ ಸಂಬಂಧ ಉಳಿಯಬಹುದು
Relationship tips:ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳದಿರುವುದು ಗಂಡ ಹೆಂಡತಿಯ ಸಂಬಂಧಕ್ಕೆ ಧಕ್ಕೆಯುಂಟಾಗುವುದು, ಈ ಸಣ್ಣ ಪುಟ್ಟ ವಿಷಯಗಳು ವಿಚ್ಛೇಧನದವರೆಗೂ ತಂದು ನಿಲ್ಲಿಸುತ್ತದೆ. ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ನಮ್ಮ ಈ ಸಲಹೆ ಸಹಾಯ ಮಾಡಬಹುದು.
Updated on: May 27, 2022 | 8:00 AM

Trip

Igo

ಸಂಬಂಧದಲ್ಲಿ ಖುಷಿಯಾಗಿರಲು ಈ ಟಿಪ್ಸ್ಗಳನ್ನು ಫಾಲೋಮಾಡಿ

ಮಾತುಗಳನ್ನಾಡಿ: ನಿಮ್ಮಿಬ್ಬರ ನಡುವೆ ಜಗಳ, ಮನಸ್ತಾಪವಿದ್ದರೆ ಅದನ್ನು ಬಗೆಹರಿಸಿಕೊಳ್ಳಲು ಒಂದೆಡೆ ಕುಳಿತು ಮಾತನಾಡಿ, ಬೇರೆಯಾಗಲು ನಿರ್ಧರಿಸುವವರು ಒಬ್ಬರ ಜತೆ ಒಬ್ಬರು ಮಾತನಾಡುವುದನ್ನೇ ನಿಲ್ಲಿಸಿರುತ್ತಾರೆ. ನಿಮಗೆ ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಬೇಕೆಂಬ ಹಂಬಲವಿದ್ದರೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.

ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಿ: ಸಂಬಂಧ ಯಾವುದೇ ಇರಲಿ ಆದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಮುಖ್ಯ. ಒಂದೊಮ್ಮೆ ನೀವು ಈ ಹಾದಿಯಲ್ಲಿ ಚಲಿಸದಿದ್ದರೆ ಸಂಬಂಧ ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ನೀವು ವಿಚ್ಛೇದನ ನೀಡಲು ಬಯಸುವುದಿಲ್ಲವೆಂದರೆ ಮೊದಲು ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳಿ.

ಆದ್ಯತೆ ಯಾರಿಗೆ ನೀಡಬೇಕು: ಕೆಲವೊಮ್ಮೆ ಆದ್ಯತೆ ಬದಲಾಗುತ್ತದೆ, ಸಂಬಂಧ ಹೊಸತಿರುವಾಗ ಬಹಳಷ್ಟು ಕಪಲ್ಗಳು ತಮ್ಮ ಸಂಗಾತಿಗೆ ಮೊದಲ ಆದ್ಯತೆ ನೀಡುತ್ತಾರೆ. ಆದರೆ ಸಮಯಕ್ಕೆ ತಕ್ಕಂತೆ ಆದ್ಯತೆ ಬದಲಾಗುತ್ತದೆ. ಎಂದಿಗೂ ನಿಮ್ಮವರಿಗೆ ಮೊದಲ ಆದ್ಯತೆ ನೀಡಿ.



















