ಎಲ್ಲರಿಗೂ ಕೂಡ ತಮ್ಮ ಮದುವೆ (Marriage) ಯ ಬಗ್ಗೆ ಕನಸಿರುತ್ತದೆ. ತಮ್ಮ ಜೀವನದ ಪ್ರಮುಖ ಘಟ್ಟವಾದ ಮದುವೆಯಲ್ಲಿ ವಿಭಿನ್ನವಾಗಿ ಸುಂದರವಾಗಿ ಕಾಣಬೇಕೆಂದು ಸಾಕಷ್ಟು ತಯಾರಿ ನಡೆಸುತ್ತಾರೆ. ಹುಡುಗಿಯರು ಮಾತ್ರವಲ್ಲ ಹುಡುಗರು ಕೂಡ ಸ್ಟೈಲಿಶ್ ಆಗಿ ಕಾಣಬೇಕೆಂದು ಬಯಸುತ್ತಾರೆ. ಒಂದು ವೇಳೆ ನೀವು ಮದುವೆಗೆ ಧರಿಸಲು ಲೆಹೆಂಗಾ (Lehenga) ಅಥವಾ ಶೇರ್ವಾನಿ (Sherwani) ಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದಾದರೆ ಆ ಉಡುಗೆಯೂ ನಿಮಗೆ ಹೊಂದುತ್ತದೆಯೇ ಎಂದು ನೋಡುವುದು ಬಹಳ ಮುಖ್ಯ ನಿಮ್ಮ ಚರ್ಮದ ಬಣ್ಣ (Skin tone) ಕ್ಕೆ ಅನುಗುಣವಾಗಿ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳಿ.
ಹೀಗೆ ಮಾಡಿದ್ರೆ ಮೈಬಣ್ಣವು ಪ್ರಕಾಶಮಾನವಾಗಿ ಕಾಣುವುದಲ್ಲದೆ ಸ್ಟೈಲಿಶ್ ಆಗಿ ಕಾಣಲು ಸಾಧ್ಯ. ನೀವು ಮದುವೆಗೆ ಲೆಹೆಂಗಾ ಅಥವಾ ಶೇರ್ವಾನಿ ಆಯ್ಕೆಮಾಡುವಾಗ ನಿಮ್ಮ ಚರ್ಮದ ಬಣ್ಣಕ್ಕೆ ಅನುಗುಣವಾಗಿ ಯಾವ ಬಣ್ಣದ ಬಟ್ಟೆಗಳನ್ನು ಖರೀದಿ ಮಾಡಬೇಕು ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳಬಹುದು.
* ಫೇರ್ ಸ್ಕಿನ್ ಟೋನ್ : ನಿಮ್ಮದು ಫೇರ್ ಸ್ಕಿನ್ ಆಗಿದ್ದರೆ ಪ್ರಕಾಶಮಾನವಾದ ಹಸಿರು, ನೇವಿ ಬ್ಲೂ, ವೈನ್, ನೇರಳೆ ಮುಂತಾದ ಪ್ರಕಾಶಮಾನವಾದ ಬಣ್ಣಗಳ ಉಡುಗೆಯನ್ನೇ ಆಯ್ಕೆ ಮಾಡಿ. ಅದಲ್ಲದೇ ಹುಡುಗಿಯೂ ಬಿಳಿಯಾಗಿದ್ದರೆ ಕೆಂಪು, ಟೊಮೆಟೊ ಕೆಂಪು, ಮೆರೂನ್, ಗಾಢ ಗುಲಾಬಿ, ಬೆಳ್ಳಿ, ನೀಲಿ, ಲ್ಯಾವೆಂಡರ್, ಚಿನ್ನದ ಬಣ್ಣಗಳ ಉಡುಪು ತುಂಬಾ ಸುಂದರವಾಗಿ ಕಾಣುವಂತೆ ಮಾಡುತ್ತದೆ.
ಮತ್ತಷ್ಟು ಓದಿ: ಯಾವುದೇ ಕಾರಣಕ್ಕೂ ಈ ಮೂರು ವಸ್ತುಗಳನ್ನು ಯಾರ ಮನೆಯಿಂದಲೂ ತರಬೇಡಿ
* ಡಾರ್ಕ್ ಸ್ಕಿನ್ ಟೋನ್ : ಲೆಹೆಂಗಾ ಮತ್ತು ಶೆರ್ವಾನಿ ಆಯ್ಕೆ ಮಾಡಿಕೊಳ್ಳುವಾಗ ಡಾರ್ಕ್ ಸ್ಕಿನ್ ಟೋನ್ ಹೊಂದಿರುವವರು ಪ್ರಕಾಶಮಾನವಾದ ಮತ್ತು ಮಿನುಗುವ ಬಣ್ಣಗಳನ್ನು ಆದಷ್ಟು ತಪ್ಪಿಸಿ. ಬೂದು ಮತ್ತು ಕಪ್ಪು ಬಣ್ಣಗಳಂತಹ ಬಣ್ಣಗಳ ಉಡುಪು ಧರಿಸಬಹುದು. ಚರ್ಮದ ಟೋನ್ ಮಂದವಾಗಿ ಕಾಣದೆ ಕಾಂತಿಯುತವಾಗಿ ಕಾಣಬೇಕೆಂದರೆ ಗಾಢ ಕೆಂಪು, ಕೆನ್ನೇರಳೆ, ಕಡು ನೀಲಿ ಮತ್ತು ಗಾಢ ನೇರಳೆ ಬಣ್ಣಗಳ ಉಡುಗೆಯನ್ನೇ ಆಯ್ಕೆ ಮಾಡಿಕೊಳ್ಳಿ, ಇದು ನಿಮ್ಮ ಸೌಂದರ್ಯವನ್ನು ಹೆಚ್ಚಿಸಿ ಸ್ಟೈಲಿಶ್ ಹಾಗೂ ಆಕರ್ಷಕವಾಗಿ ಕಾಣುವಿರಿ.
* ಡಸ್ಕಿ ಸ್ಕಿನ್ ಟೋನ್: ನೀವು ಗಾಢವಾದ ಚರ್ಮ ಹೊಂದಿದ್ದರೆ, ನೀವು ಬೆಚ್ಚಗಿನ ಮತ್ತು ಸ್ವಲ್ಪ ಮ್ಯಾಟ್ ಬಣ್ಣಗಳನ್ನು ಆರಿಸಿಕೊಳ್ಳುವುದು ಸೂಕ್ತ. ಮದುವೆಗೆ ಲೆಹೆಂಗಾ ಅಥವಾ ಶೇರ್ವಾನಿ ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ ಎಂದಾದರೆ ಗಾಢ ಕಿತ್ತಳೆ, ಹಳದಿ, ಕೆಂಪು, ಮೆಜೆಂಟಾ ಗುಲಾಬಿ, ಪೀಚ್ ಮುಂತಾದ ಬಣ್ಣಗಳನ್ನು ಆಯ್ಕೆ ಮಾಡಬಹುದು. ರಾಯಲ್ ನೀಲಿ ಮತ್ತು ಡಸ್ಕಿ ಪಿಂಕ್ ಬಣ್ಣಗಳು ಮಧ್ಯಮ ಟೋನ್ ಹೊಂದಿರುವವರಿಗೆ ಹೊಂದುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ