Weight Loss Tips : ತ್ವರಿತವಾಗಿ ತೂಕ ಇಳಿಸೋಕೆ ಈ ಆಹಾರ ತ್ಯಜಿಸಿ, ತಿಂಗಳಲ್ಲೆ ದೇಹದಲ್ಲಾಗುವ ಬದಲಾವಣೆ ನೋಡಿ
ಇತ್ತೀಚೆಗಿನ ದಿನಗಳಲ್ಲಿ ಅಧಿಕ ತೂಕದ ಸಮಸ್ಯೆಯಿಂದ ಬಳಲುವವರೇ ಹೆಚ್ಚು. ಹೀಗಾಗಿ ತೂಕ ಇಳಿಕೆ ಹಾಗೂ ತೂಕ ನಿಯಂತ್ರಣ ಮಾಡುವುದು ಅಷ್ಟು ಸುಲಭದ ಮಾತಲ್ಲ, ತಿನ್ನುವ ಆಹಾರಕ್ರಮದಲ್ಲಿ ಸ್ವಲ್ಪ ಬದಲಾವಣೆಯಾದರೂ ಕೂಡ ಏಕಾಏಕಿ ತೂಕ ಏರಿಕೆಯಾಗುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳುವುದು ಒಂದು ತರಹದ ಜಪ ಎನ್ನುವಂತಾಗಿದೆ. ಒಂದು ವೇಳೆ ನೀವೇನಾದ್ರೂ ತೂಕ ಇಳಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದರೆ ಸಂಜೆಯ ವೇಳೆ ಈ ಆಹಾರಗಳಿಂದ ದೂರವಿರುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯವು ಹೆಚ್ಚಿನವರನ್ನು ಕಾಡುವ ಸಮಸ್ಯೆಗಳಲ್ಲಿ ಒಂದಾಗಿದೆ. ಅತಿಯಾದ ತೂಕವನ್ನು ಹೊಂದಿರುವವರು ತೂಕ ಇಳಿಸುವತ್ತ ಕಾರ್ಯಪ್ರವೃತ್ತರಾಗುತ್ತಾರೆ. ಆದರೆ ಈ ತೂಕ ಕಡಿಮೆ ಮಾಡಿಕೊಳ್ಳುವವರು ವ್ಯಾಯಾಮದೊಂದಿಗೆ ಸೇವಿಸುವ ಆಹಾರದೊಂದಿಗೆ ಹೆಚ್ಚು ಗಮನ ವಹಿಸಬೇಕು. ಆದರೆ ಕೆಲವೊಮ್ಮೆ ನಾನಾ ಬಗೆಯ ಖಾದ್ಯಗಳ ಘಮವು ಮೂಗಿಗೆ ಬಡಿದರೆ ಸಾಕು, ಡಯಟ್ ಎನ್ನುವುದನ್ನು ಮರೆತೇ ಬಿಡುತ್ತಾರೆ. ಆದರೆ ಸಂಜೆಯ ವೇಳೆ ಈ ಆಹಾರ ಸೇವನೆಯನ್ನು ಆದಷ್ಟು ತಪ್ಪಿಸುವುದು ಆರೋಗ್ಯ ಹಾಗೂ ತೂಕ ಇಳಿಕೆಗೆ ದೃಷ್ಟಿಯಿಂದ ಬಹಳ ಒಳ್ಳೆಯದು.
- ತಂಪು ಪಾನೀಯಗಳು : ಸಂಜೆಯ ಸಮಯದಲ್ಲಿ ಈ ತಂಪು ಪಾನೀಯಗಳ ಸೇವನೆಯನ್ನು ಆದಷ್ಟು ತಪ್ಪಿಸುವುದು ಒಳ್ಳೆಯದು. ಇದರಲ್ಲಿರುವ ಕೃತಕ ಸಿಹಿಕಾರಕ ಹಾಗೂ ಸೋಡಾ ಪಾನೀಯಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇವು ತೂಕವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತವೆ.
- ಚೀಸ್ : ತ್ವರಿತ ಆಹಾರಗಳಲ್ಲಿ ಪಿಜ್ಜಾ, ಬರ್ಗರ್, ಪಾಸ್ತಾ ಮುಂತಾದವುಗಳಲ್ಲಿ ಚೀಸ್ ಇದ್ದೆ ಇರುತ್ತದೆ. ಇದರಲ್ಲಿ ಉಪ್ಪು ಮತ್ತು ಸೋಡಿಯಂ ಅಧಿಕವಾಗಿದ್ದು ಸ್ಯಾಚುರೇಟೆಡ್ ಕೊಬ್ಬಿನಿಂದ ಕೂಡಿದೆ. ಇಂತಹ ಆಹಾರಗಳು ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
- ಸಂಸ್ಕರಿಸಿದ ಆಹಾರಗಳು : ಸಾಸೇಜ್‌ಗಳು ಮತ್ತು ಬೇಕರಿಯಲ್ಲಿ ಸಿಗುವ ತಿಂಡಿ ತಿನಿಸುಗಳಲ್ಲಿ ಸಕ್ಕರೆ ಮತ್ತು ಉಪ್ಪಿನ ಅಂಶಗಳು ಅಧಿಕವಾಗಿರುತ್ತವೆ. ಸಂಜೆಯ ವೇಳೆ ಈ ತಿನಿಸಿನ ಸೇವನೆಯು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ತೂಕ ಹೆಚ್ಚಳಕ್ಕೂ ಕಾರಣವಾಗುವುದರಿಂದ ಈ ಆಹಾರಗಳ ಸೇವನೆಯಿಂದ ದೂರವಿರುವುದು ಉತ್ತಮ.
ತೂಕ ನಷ್ಟಕ್ಕೆ ಈ ಆಹಾರಗಳನ್ನು ಸೇವಿಸಿ
ನೀವೇನಾದ್ರೂ ತೂಕವನ್ನು ಇಳಿಸಿಕೊಳ್ಳಲು ಬಯಸಿದರೆ ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಆಯ್ಕೆ ಮಾಡಿಕೊಳ್ಳಿ. ಪ್ರೋಟೀನ್ ಯುಕ್ತ ಆಹಾರಗಳು ಹೆಚ್ಚು ಕಾಲ ಹೊಟ್ಟೆ ತುಂಬಿರುವಂತೆ ಮಾಡುವುದರೊಂದಿಗೆ ಕೆಲಸ ಮಾಡಲು ಶಕ್ತಿಯನ್ನು ನೀಡುತ್ತದೆ. ಹೀಗಾಗಿ ಮಖಾನ ಮತ್ತು ಬೇಯಿಸಿದ ಕಡಲೆಯಂತಹ ಆಹಾರ ಸೇವನೆಯಿಂದ ಹಸಿವನ್ನು ತಗ್ಗಿಸಿ ತೂಕ ನಷ್ಟಕ್ಕೂ ಸಹಾಯ ಮಾಡುತ್ತವೆ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Fri, 27 September 24