Father’s Role in Parenting: ಮಕ್ಕಳ ಲಾಲನೆ ಪಾಲನೆಯಲ್ಲಿ ತಂದೆಯ ಪಾತ್ರವೇನು?

ಮಕ್ಕಳ ಲಾಲನೆ ಪಾಲನೆಯಲ್ಲಿ ತಂದೆಯ ಪಾತ್ರವೇನು?, ತಂದೆ ಅನುಭವಿಸುವ ಸಂಕಟಗಳೇನು? ಎಲ್ಲದರ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ.

Fathers Role in Parenting: ಮಕ್ಕಳ ಲಾಲನೆ ಪಾಲನೆಯಲ್ಲಿ ತಂದೆಯ ಪಾತ್ರವೇನು?
Kamala Bharadwaj
Updated By: ನಯನಾ ರಾಜೀವ್

Updated on: Jul 17, 2022 | 11:02 AM

ಮಕ್ಕಳ ಲಾಲನೆ ಪಾಲನೆಯಲ್ಲಿ ತಂದೆಯ ಪಾತ್ರವೇನು?, ತಂದೆ ಅನುಭವಿಸುವ ಸಂಕಟಗಳೇನು? ಎಲ್ಲದರ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ. ಯಾರು ಕೂಡ ಹುಟ್ಟುತ್ತಲೇ ತಂದೆ-ತಾಯಿಯಾಗಿರುವುದಿಲ್ಲ, ತಾಯಿಯಷ್ಟೇ ತಂದೆ ಕೂಡ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬಲ್ಲ, ಲಾಲನೆ ಪಾಲನೆ ಮಾಡಬಲ್ಲ, ಪ್ರೀತಿಸಬಲ್ಲ.

ಇತ್ತೀಚಿನ ವರ್ಷಗಳಲ್ಲಿ ಜೀವನ ಬದಲಾಗಿದೆ, ಜನರು ವಿಭಿನ್ನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಹೆತ್ತವರ ಪಾತ್ರ ಅಂತ ಬಂದಾಗ , ತಂದೆ ತಾಯಿ ಇವರಿಬ್ಬರ ಪಾತ್ರ , ವ್ಯಕ್ತಿತ್ವ ಯಾವಾಗಲೂ ಮಗುವಿನ ಜೀವಿನದಲ್ಲಿ ಸಮಾನ ಇರುತ್ತೆ. ಹಾಗೂ ತಂದೆ ಪಾತ್ರ ಬಂದಾಗ ಅದೊಂದು , ಧೈರ್ಯ , ಗತ್ತು ಹೆಚ್ಚು  ಎಂದೇ ಹೇಳಬಹುದು.

ಮಕ್ಕಳ ಆರೈಕೆಯಲ್ಲಿ ತಾಯಿಯಷ್ಟೇ ತಂದೆಯು ಕೂಡ ಇನ್​ವಾಲ್ವ್​ ಆಗಿರುತ್ತಾರೆ. ಸಾಮಾನ್ಯವಾಗಿ ಗಂಡ, ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರಾಗಿರುತ್ತಾರೆ, ಮಕ್ಕಳು, ಕುಟುಂಬ, ಕಚೇರಿ ಹೀಗೆ ಎಲ್ಲಾ ಕಡೆಯೂ ಜವಾಬ್ದಾರಿಯನ್ನು ಒಂದೇ ರೀತಿ ನಿರ್ವಹಿಸುತ್ತಿರುತ್ತಾರೆ.

ಇನ್ನೂ ಸಾಕಷ್ಟು ಮನೆಗಳಲ್ಲಿ ಮಕ್ಕಳನ್ನು ಚೈಲ್ಡ್​ ಕೇರ್​ನಲ್ಲಿ ಬಿಡುವ ಮಾತೇ ಇಲ್ಲ ಒಂದು ದಿನ ತಂದೆ ಮನೆಯಲ್ಲಿದ್ದರೆ ಇನ್ನೊಂದು ದಿನ ತಾಯಿ ಮನೆಯಲ್ಲಿದ್ದು ಮಗುವನ್ನು ನೋಡಿಕೊಳ್ಳುತ್ತಾಳೆ.

ತಂದೆಯಂದಿರುವ ಕೂಡ ತಾಯಿಯಂತೆಯೇ ಮಗುವಿನ ಪಾಲನೆಯನ್ನು ಮಾಡುತ್ತಾ ಜೀವನವನ್ನು ಎಂಜಾಯ್ ಮಾಡುತ್ತಿರುತ್ತಾರೆ.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಗರ್ಭಾವಸ್ಥೆ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.

Published On - 4:43 pm, Fri, 15 July 22