ಬೆಕ್ಕು ಆದಾಗೇ ನಿಮ್ಮ ಮನೆಗೆ ಕಾಲಿಟ್ರೆ ಅದೃಷ್ಟವೋ ಅದೃಷ್ಟ, ಹೇಗೆ ಗೊತ್ತಾ?

ಬೆಕ್ಕು ಅಂದರೆ ಬಹುತೇಕರಿಗೆ ಇಷ್ಟ. ಹೀಗಾಗಿ ಹೆಚ್ಚಿನವರು ಮನೆಯಲ್ಲಿ ಬೆಕ್ಕನ್ನು ಸಾಕುತ್ತಾರೆ. ಆದರೆ ಕೆಲವೊಮ್ಮೆ ಬೇರೆಯವರ ಮನೆಯ ಬೆಕ್ಕು ಅಥವಾ ಊರಿನಲ್ಲಿರುವ ಬೆಕ್ಕು ನಿಮ್ಮ ಮನೆಗೆ ಬಂದು ಸೇರಿಕೊಳ್ಳುತ್ತವೆ. ಹಾಗಾದ್ರೆ ನಿಮ್ಮ ಮನೆಗೆ ಬೆಕ್ಕು ಬಂದರೆ ಏನರ್ಥ, ಇದರಿಂದ ನಿಮ್ಮ ಜೀವನದಲ್ಲಿ ಏನಾದ್ರೂ ಬದಲಾವಣೆಗಳು ಆಗುತ್ತಾ? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಕ್ಕು ಆದಾಗೇ ನಿಮ್ಮ ಮನೆಗೆ ಕಾಲಿಟ್ರೆ ಅದೃಷ್ಟವೋ ಅದೃಷ್ಟ, ಹೇಗೆ ಗೊತ್ತಾ?
ಮನೆಗೆ ಬೆಕ್ಕು ಕಾಲಿಟ್ರೆ ಅದೃಷ್ಟ
Image Credit source: Getty Images

Updated on: Jun 11, 2025 | 7:58 PM

ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಬೆಕ್ಕ (cat) ನ್ನು ಸಾಕುತ್ತಾರೆ. ಹೀಗಿದ್ದರೂ ಕೂಡ ಕೆಲವೊಮ್ಮೆ ಬೇರೆಯವರ ಮನೆಯ ಬೆಕ್ಕು ನಿಮ್ಮ ಮನೆಗೆ ಬರುತ್ತದೆ. ಹೀಗೆ ಬಂದ ಬೆಕ್ಕು ಕೊಡುವ ಉಪಟಳ ಅಷ್ಟಿಷ್ಟಲ್ಲ. ಹೌದು, ಆಹಾರ (food) ವನ್ನು ಕದ್ದು ತಿನ್ನುವುದು, ಪಾತ್ರೆಯನ್ನು ಬೀಳಿಸುವುದು ಹೀಗೆ ಕೊಡುವ ಕಾಟ ಹೇಳಿ ಪ್ರಯೋಜನವಿಲ್ಲ. ನಂಬಿಕೆಯ ಪ್ರಕಾರ ಏಕಾಏಕಿ ಬೇರೆಯವರ ಮನೆಯ ಬೆಕ್ಕು ಆದಾಗೇ  ಮನೆಗೆ ಬಂದರೆ ಒಳ್ಳೆಯದಾಗುತ್ತದೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ಶಾಸ್ತ್ರದ ಪ್ರಕಾರ ಬೆಕ್ಕು ಮನೆಗೆ ಬರುವುದು ಶುಭವೇ, ಅಶುಭವೇ ಎನ್ನುವುದನ್ನು ತಿಳಿದು ಕೊಳ್ಳಿ.

ಮನೆಗೆ ಬೆಕ್ಕು ಆದಾಗೇ ಬಂದರೆ ಶುಭದ ಸಂಕೇತವಂತೆ. ಯಾರದೋ ಮನೆಯ ಬೆಕ್ಕು ನಿಮ್ಮ ಮನೆಗೆ ಬಂದು ಉಳಿದು ಕೊಂಡರೆ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಮನೆಯಲ್ಲಿ ಮದುವೆ ಸೇರಿದಂತೆ ಶುಭ ಕಾರ್ಯದ ಊಟ ಸವಿದೇ ಅವು ಹೋಗುತ್ತದೆ ಎನ್ನಲಾಗುತ್ತದೆ. ಬೆಕ್ಕು ಮನೆಗೆ ಬಂದರೆ, ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಕರಾತ್ಮಕ ಶಕ್ತಿಯನ್ನು ದೂರ ಮಾಡಿ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆಯಂತೆ. ಆದರೆ ಈ ಕಪ್ಪು ಬೆಕ್ಕು ಮನೆಗೆ ಬರಬಾರದು ಎನ್ನುತ್ತಾರೆ. ಈ ಬೆಕ್ಕು ಬಂದರೆ ನಕಾರಾತ್ಮಕತೆಯೂ ಮನೆಗೆ ಬರುತ್ತದೆ ಎನ್ನುವ ನಂಬಿಕೆಯಿದೆ.

ಇದನ್ನೂ ಓದಿ
ಮಾಜಿ ಸೈನಿಕನ ಕುಟುಂಬದ ಪರಿಸರ ಪ್ರೇಮ ಹೇಗಿದೆ ನೋಡಿ
ಈ ಚಿತ್ರದ ಮೂಲಕ ನಿಮ್ಮ ವ್ಯಕ್ತಿತ್ವ ಹೇಗಿದೆ ಪರೀಕ್ಷಿಸಿ
ಜೂನ್​ 26ರಿಂದ ಆಷಾಢ ಮಾಸ ಆರಂಭ, ಈ ಕೆಲಸಗಳನ್ನು ತಪ್ಪಾಗಿ ಕೂಡ ಮಾಡಬೇಡಿ
ವ್ಯಕ್ತಿಯ ಕಿವಿಯಲ್ಲಿ ಕೂದಲು ಬೆಳೆದ್ರೆ ಏನರ್ಥ ಗೊತ್ತಾ?

ನಿಮ್ಮ ಮನೆಗೆ ಕಂದು ಬಣ್ಣದ ಬೆಕ್ಕು ಬಂದರೆ ಮನೆಯಲ್ಲಿರುವ ಐಶ್ವರ್ಯ, ಸಂಪತ್ತು ಹೆಚ್ಚಾಗುತ್ತದೆಯಂತೆ. ಈಗಾಗಲೇ ಅರ್ಧಕ್ಕೆ ನಿಂತು ಹೋಗಿದ್ದ ಕೆಲಸ ಮತ್ತೆ ಆರಂಭವಾಗಿ ಕೆಲಸವು ಪೂರ್ಣಗೊಳ್ಳುತ್ತದೆ, ಜೊತೆಗೆ ಕೈಗೆ ಹಣ ಬಂದು ಸೇರುತ್ತದೆ ಎನ್ನಲಾಗಿದೆ. ಬೇರೆಯವರ ಮನೆಯ ಬೆಕ್ಕು ನಿಮ್ಮ ಮನೆಗೆ ಬಂದು ಮರಿಗಳಿಗೆ ಜನ್ಮ ನೀಡಿದರೆ ಬಹಳ ಅದೃಷ್ಟ ಸಂಕೇತವಂತೆ. ಇದರಿಂದ ಮನೆಯ ಯಜಮಾನದ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಒಳ್ಳೆಯ ಫಲಗಳು ಲಭಿಸುತ್ತದೆ. ಜೀವನದಲ್ಲಿ ಪ್ರಗತಿ ಸಾಧಿಸುತ್ತಾನೆ ಎನ್ನುವ ನಂಬಿಕೆ ಇದೆ.

ಇದನ್ನೂ ಓದಿ : ಕುಟುಂಬದ ಜೊತೆ ಸೇರಿ ಬೋಳುಬೆಟ್ಟದಲ್ಲಿ 450 ಕ್ಕೂ ಹೆಚ್ಚು ಗಿಡ-ಮರ ನೆಟ್ಟು ಪರಿಸರ ಪ್ರೇಮ ಮೆರೆದ ಮಾಜಿ ಯೋಧ

ಬೇರೆಯವರ ಮನೆಯ ಬೆಕ್ಕು ನಿಮ್ಮ ಮನೆಗೆ ಬಂದು ಮೂತ್ರ ವಿಸರ್ಜನೆ ಮಾಡಿದರೆ ಅದು ಅಶುಭದ ಸಂಕೇತ ಎನ್ನಲಾಗಿದೆ. ಇದರಿಂದ ಮನೆಯಲ್ಲಿ ಅಹಿತಕರ ಘಟನೆಗಳು ಸಂಭವಿಸುತ್ತದೆ. ಮನೆಯ ಸುಖ ಶಾಂತಿ ನೆಮ್ಮದಿಯೂ ಹಾಳಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಬೇರೆ ಮನೆಯ ಬೆಕ್ಕು ಆಗಾಗ ಬಂದು ಹೋಗುತ್ತಿದ್ದರೆ ಅದು ಒಳ್ಳೆಯದಲ್ಲವಂತೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ