Crash Diet: ಕ್ರ್ಯಾಶ್ ಡಯಟ್ ಎಂದರೇನು? ಈ ಡಯಟ್ ಪಾಲನೆ ನಟಿ ಶ್ರೀದೇವಿ ಪ್ರಾಣಕ್ಕೆ ಮುಳುವಾಯಿತೇ? 

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 04, 2023 | 6:27 PM

ಇತ್ತೀಚಿನ  ದಿನಗಳಲ್ಲಿ ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಹೆಚ್ಚಿನವರು ಕ್ರ್ಯಾಶ್ ಡಯಟ್ ಕ್ರಮವನ್ನು ಪಾಲನೆ ಮಾಡುತ್ತಿದ್ದಾರೆ. ಆದರೆ ವಿಪರೀತವಾದ ಕ್ರ್ಯಾಶ್ ಡಯಟ್ ಪ್ರಾಣಕ್ಕೆ ಮುಳುವಾಗಬಹುದು.   ವಿಪರೀತ ಕ್ರ್ಯಾಶ್ ಡಯೆಟ್ ಕಾರಣದಿಂದಾಗಿ  ಶ್ರೀದೇವಿಯವರ  ಆರೋಗ್ಯ ಹದಗೆಟ್ಟಿತ್ತು ಮತ್ತು ಇದು ಕೂಡಾ ಅವರ ಅಕಾಲಿಕ ನಿಧನಕ್ಕೆ ಕಾರಣವಾಗಿರಬಹುದೆಂದು  ಇತ್ತೀಚಿಗೆ  ಸಂದರ್ಶನವೊಂದರಲ್ಲಿ ಬೋನಿಕಪೂರ್ ತನ್ನ ಪತ್ನಿ ಶ್ರೀದೇವಿ ಸಾವಿನ ಕುರಿತು ಮೌನ ಮುರಿದಿದ್ದಾರೆ.  ಅಷ್ಟಕ್ಕೂ ಈ ಕ್ರ್ಯಾಶ್ ಡಯೆಟ್ ಎಂದರೇನು? ಇದರಲ್ಲಿ ಮಾರಣಾಂತಿಕವಾಗಿ ಪರಿಣಾಮಿಸಬಹುದುದಾದ ಅಂಶಗಳು ಏನಿದೆ ಎಂಬುದನ್ನು ತಿಳಿಯಿರಿ.

Crash Diet: ಕ್ರ್ಯಾಶ್ ಡಯಟ್ ಎಂದರೇನು? ಈ ಡಯಟ್ ಪಾಲನೆ ನಟಿ ಶ್ರೀದೇವಿ ಪ್ರಾಣಕ್ಕೆ ಮುಳುವಾಯಿತೇ? 
ಶ್ರೀದೇವಿ ಮತ್ತು ಬೋನಿಕಪೂರ್
Follow us on

ಹೆಚ್ಚುತ್ತಿರುವ ದೇಹತೂಕವನ್ನು ನಿಯಂತ್ರಣದಲ್ಲಿಡುವುದು ಸುಲಭವಲ್ಲ. ಒಮ್ಮೆ ತೂಕ ಹೆಚ್ಚಾದರೆ ಅದನ್ನು ಹತೋಟಿಯಲ್ಲಿಡಲು ಕಠಿಣ ಪ್ರರಿಶ್ರಮ ಪಡಬೇಕಾಗುತ್ತದೆ. ಇದಕ್ಕಾಗಿ ಹೆಚ್ಚಿನವರು ವ್ಯಾಯಾಮ ಮತ್ತು ಜಿಮ್ ಮೊರೆ ಹೋಗುತ್ತಾರೆ. ಅಲ್ಲದೆ ಹೆಚ್ಚುತ್ತಿರುವ ತೂಕವನ್ನು ತಕ್ಷಣವೇ ನಿಯಂತ್ರಿಸಲು  ಅನೇಕ ಜನರು ಡಯಟ್ ಕ್ರಮವನ್ನು ಪಾಲಿಸುತ್ತಾರೆ. ತಜ್ಞರ ಪ್ರಕಾರ ಇತ್ತೀಚಿನ ದಿನಗಳಲ್ಲಿ ತೂಕವನ್ನು ನಿಯಂತ್ರಿಸಲು ಅನೇಕ ರೀತಿಯ ಡಯೆಂಟಿಗ್ ಕ್ರಮಗಳಿವೆ. ಇವುಗಳಲ್ಲಿ ಕ್ರ್ಯಾಶ್ ಡಯಟ್ ಕೂಡ ಒಂದು. ಈ ಡಯಟ್ ಸಹಾಯದಿಂದ ಒಂದು ವಾರದಲ್ಲಿ ಸುಮಾರು 3 ಕೆಜಿಯಷ್ಟು ತೂಕವನ್ನು ಕಡಿಮೆ ಮಾಡಬಹುದು. ಆದರೆ ಈ ಡಯಟ್ನ ಅತಿಯಾದ ಪಾಲನೆ ಮಾರಕವಾಗಿ ಪರಿಣಾಮಿಸಬಹುದು.

ದಿ ನ್ಯೂ ಇಂಡಿಯನ್​​​ಗೆ ನೀಡಿದ ಸಂದರ್ಶನದಲ್ಲಿ ಬೋನಿ ಕಪೂರ್ ತನ್ನ ಪತ್ನಿ ಶ್ರೀದೇವಿಯವರ ಸಾವಿನ ಕುರಿತು ಮಾತನಾಡಿದ್ದಾರೆ. ನನ್ನ ಪತ್ನಿಯದ್ದು ಸಹಜ ಸಾವಲ್ಲ, ಅದೊಂದು ಆಕಸ್ಮಿಕ, ಆಕೆಯ ಸಾವಿಗೆ ವಿಪರೀತ ಕ್ರ್ಯಾಶ್ ಡಯಟ್ ಕೂಡ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.  ಶ್ರೀದೇವಿಯವರು ಚೆನ್ನಾಗಿ ಕಾಣಬೇಕೆನ್ನುವ ಸಲುವಾಗಿ ಕ್ರ್ಯಾಶ್ ಡಯಟ್ ಅನುಸರಿಸುತ್ತಿದ್ದರಂತೆ, ಹಾಗೂ  ಶ್ರೀದೇವಿ ಕಟ್ಟುನಿಟ್ಟಾದ ಆಹಾರಕ್ರಮವನ್ನು ಕೂಡಾ ಅನುಸರಿಸುತ್ತಿದ್ದರು ಎಂದು ಹೇಳಿದ್ದಾರೆ.  ಅಲ್ಲದೆ ಆಕೆ  ಆಗಾಗ್ಗೆ ಹಸಿವಿನಿಂದ ಬಳಲುತ್ತಿದ್ದಳು ಮತ್ತು ಆಕೆಗೆ  ಲೋ ಬಿಪಿ ಇದ್ದ ಕಾರಣ  ವೈದ್ಯರು ಆಹಾರದಲ್ಲಿ ಉಪ್ಪನ್ನು ಸೇರಿಸಿ ಎಂದರೂ ಆಕೆ  ಸೇರಿಸುತ್ತಿರಲಿಲ್ಲ. ವಿಪರೀತ  ಕ್ರ್ಯಾಶ್ ಡಯಟ್ ಕಾರಣ ಆಕೆಯ ಆರೋಗ್ಯ ಹದಗೆಟಿದ್ದು, ಇದು ಕೂಡಾ ಆಕೆಯ ಪ್ರಾಣಕ್ಕೆ ಮುಳುವಾಗಿರಬಹುದು  ಎಂದು  ಬೋನಿ ಕಪೂರ್ ಹೇಳಿದ್ದಾರೆ.  ಅಷ್ಟಕ್ಕೂ ಈ ಕ್ರ್ಯಾಶ್ ಡಯೆಟ್ ಎಂದರೇನು? ಇದರಲ್ಲಿ ಮಾರಣಾಂತಿಕವಾಗಿ ಪರಿಣಾಮಿಸಬಹುದುದಾದ ಅಂಶಗಳು ಏನಿದೆ ಎಂಬುದನ್ನು ತಿಳಿಯಿರಿ.

ಕ್ರ್ಯಾಶ್ ಡಯಟ್ ಎಂದರೇನು?

ಕ್ಷಿಪ್ರವಾಗಿ ತೂಕ ಇಳಿಸಿಕೊಳ್ಳಲು ಇತ್ತೀಚಿನ ದಿನಗಳಲ್ಲಿ ಕ್ರ್ಯಾಶ್ ಡಯಟ್ಗಳನ್ನು ಅನುಸರಿಸಲಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದು ಒಂದು ರೀತಿಯ ಡಯಟ್  ಪ್ರಕ್ರಿಯೆಯಾಗಿದ್ದು, ಇದರಲ್ಲಿ ಡಯೆಟ್ ಮಾಡುವವರು ಕಡಿಮೆ ಕ್ಯಾಲೊರಿಗಳನ್ನು ತಿನ್ನುವ ಮೂಲಕ ತೂಕವನ್ನು ಕಳೆದುಕೊಳ್ಳುತ್ತಾರೆ. ಉದಾಹರಣೆಗೆ, ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ ಸುಮಾರು 2500 ಕ್ಯಾಲೋರಿಗಳು ಬೇಕಾಗುತ್ತವೆ. ಆದರೆ ಕ್ರ್ಯಾಶ್ ಡಯಟ್ ಮಾಡುವ ವ್ಯಕ್ತಿಯು ದಿನಕ್ಕೆ 700 ರಿಂದ 900 ಕ್ಯಾಲೋರಿಗಳನ್ನು ಮಾತ್ರ ಸೇವಿಸುತ್ತಾನೆ. ಕ್ರ್ಯಾಶ್ ಡಯಟ್ ಮಾಡುವುದರಿಂದ ಒಂದು ವಾರದಲ್ಲಿ ಮೂರು ಕೆಜಿಯಷ್ಟು ತೂಕವನ್ನು ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಈ ಡಯಟ್ ಪಾಲನೆಯಲ್ಲಿ ಕೆಲವರು ಉಪ್ಪನ್ನು ಕೂಡ ತಿನ್ನುವುದಿಲ್ಲ. ಇದರ ಹೊರತಾಗಿ ಅವರು ದೈನಂದಿನ ಕ್ಯಾಲೋರಿ ಸೇವನೆಯಲ್ಲಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಒಂದು ವಾರದಲ್ಲಿ ಸಾಕಷ್ಟು ತೂಕ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿಯ ಸಪೂರ ದೇಹದ ಗುಟ್ಟೇನು ಗೊತ್ತೆ: ಶಿಲ್ಪಾ ಡಯಟ್ ಹೀಗಿದೆ

ಕ್ರ್ಯಾಶ್ ಡಯಟ್ ಅಪಾಯಗಳು:

ಕ್ರ್ಯಾಶ್ ಡಯೆಟ್ನಲ್ಲಿ ದೇಹವು ತುಂಬಾ ಕಡಿಮೆ ಪೋಷಣೆಯನ್ನು ಪಡೆಯುವುದರಿಂದ, ದೇಹಕ್ಕೆ ಅನೇಕ ಅಪಾಯಗಳು ಎದುರಾಗುತ್ತವೆ.  ಈಗಾಗಲೇ ಯಾವುದಾದರೂ ಕಾಯಿಲೆ ಇದ್ದಲ್ಲಿ ಕ್ರ್ಯಾಶ್ ಡಯೆಟ್ ಮಾರಕವಾಗಬಹುದು.  ಬಿಪಿ ಸಮಸ್ಯೆ ಇರುವವರಿಗೂ ಕೂಡಾ  ಕ್ರ್ಯಾಶ್ ಡಯೆಟ್  ಅಪಾಯಕಾರಿ. ಯಾರಾದರೂ ದೀರ್ಘಕಾಲದಿಂದ ಕ್ರ್ಯಾಶ್ ಡಯಟ್ ಮಾಡುತ್ತಿದ್ದರೆ ಅವರು ಖಿನ್ನತೆ, ಆತಂಕ, ಸ್ನಾಯು ಮತ್ತು ಮೂಳೆಗಳ ದೌರ್ಬಲ್ಯ, ಕೂದಲು ಉದುರುವಿಕೆ, ರಕ್ತಹೀನತೆ, ಮುಧುಮೇಹ, ನಿದ್ರೆಯ ಕೊರತೆ ಹಾಗೂ ಪೋಷಕಾಂಶಗಳ ಕೊರತೆಯಿಂದ  ಬಳಲುವ ಸಾಧ್ಯತೆಯಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ