Walking Benefits: ವಾಕಿಂಗ್ ಮಾಡುವುದರಿಂದ ಏನು ಪ್ರಯೋಜನ? ನಿಮ್ಮ ದಿನಚರಿಯಲ್ಲಿ ಊಟದ ನಂತರ ನಡೆಯುವುದು ಏಕೆ ಉತ್ತಮ? ಇಲ್ಲಿದೆ ಮಾಹಿತಿ
ಪ್ರತಿದಿನ ದಿನಕ್ಕೆ ಸುಮಾರು 10-15 ನಿಮಿಷಗಳ ಕಾಲ ನಡೆಯುವುದರಿಂದ ಹೃದಯಾಘಾತ ಮತ್ತು ಇತರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಈ ಬಗ್ಗೆ ಇಲ್ಲಿದೆ ಮಾಹಿತಿ.
ಒತ್ತಡದ ಜೀವನ ಶೈಲಿ ನಮ್ಮನ್ನು ಹೈರಾಣವಾಗಿಸಿಬಿಟ್ಟಿದೆ. ಇದರಿಂದ ದೇಹದ ಆರೋಗ್ಯ(Health) ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಹಾಗಾಗಿ ಇದರಿಂದ ಮುಕ್ತಿ ಪಡೆಯಲು ಸುಲಭ ಮಾರ್ಗವೆಂದರೆ, ಪ್ರತಿದಿನ ಕೇವಲ ಕೆಲವು 10-15 ನಿಮಿಷ ನಡಿಗೆ ಮಾಡುವುದು. ಇದರಿಂದ ಆರೋಗ್ಯಕರ ಜೀವನಶೈಲಿ(Lifestyle) ನಿಮ್ಮದಾಗುತ್ತದೆ. ನಿಮ್ಮ ದೇಹಕ್ಕೆ ನಿಯಮಿತ ದೈಹಿಕ ವ್ಯಾಯಾಮದ ಮಹತ್ವವನ್ನು ಯಾರೂ ಹೇಳಲು ಸಾಧ್ಯವಿಲ್ಲ. ಇದು ಸಾಮಾನ್ಯ ಜ್ಞಾನ ಅಲ್ಲದೆ ನೀವು ಮಾಡಿ ನೋಡಿದಾಗಲೇ ನಿಮಗೆ ಅರಿವಾಗುವುದು. ಈ ಸಮಯದಲ್ಲಿ ಜನರಲ್ಲಿ ದೀರ್ಘಕಾಲದ ಕಾಯಿಲೆಗಳು ಹೆಚ್ಚುತ್ತಿದ್ದು ನಮ್ಮ ಮುಂದೆಯೇ ಅಂತಹ ಘಟನೆ ನಡೆಯುತ್ತಿವೆ. ಹಾಗಾಗಿ ನಡಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕು, ವಿಶೇಷವಾಗಿ ಊಟದ ನಂತರ ಮಲಗಬಾರದು. ಊಟವು ಕೆಲವೊಮ್ಮೆ ನಮ್ಮನ್ನು ಸೋಮಾರಿ ಮತ್ತು ನಿಧಾನಗೊಳಿಸಿ ಬಿಡುತ್ತದೆ. ಹಾಗಾಗಿ ನಮ್ಮಲ್ಲಿ ಅಂತಹ ಅಭ್ಯಾಸಗಳಿದ್ದಲ್ಲಿ ನಾವು ಅದನ್ನು ಹೇಗೆ ನಿವಾರಿಸಬಹುದು? ಎಂಬುದಕ್ಕೆ ಇಲ್ಲಿದೆ ಮಾಹಿತಿ.
ಮತ್ತಷ್ಟು ಓದಿ: Lose Weight in Summer: ಬೇಸಿಗೆಯಲ್ಲಿ ದೇಹ ತೂಕ ಇಳಿಸಿಕೊಳ್ಳಲು ಇರುವ ಆರೋಗ್ಯಕರ ಮಾರ್ಗಗಳು
ಕೆಲವು ನಿಮಿಷಗಳ ನಡಿಗೆಯು ನಮ್ಮನ್ನು ಹಲವಾರು ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಬಹುದು. ಊಟದ ನಂತರ ಎರಡು ನಿಮಿಷಗಳ ಕಾಲ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಟೈಪ್ 2 ಮಧುಮೇಹವನ್ನು ಹೆಚ್ಚಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
ವಾಕಿಂಗ್ ಮಧುಮೇಹಕ್ಕೆ ಹೇಗೆ ಪ್ರಯೋಜನಕಾರಿ ಎಂದು ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಹಂಚಿಕೊಂಡಿದ್ದಾರೆ. “ಊಟದ ನಂತರ ಗ್ಲುಕೋಸ್ ಬಿಡುಗಡೆಯಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಸಣ್ಣ ಏರಿಕೆಗೆ ಕಾರಣವಾಗುತ್ತದೆ. ಸಣ್ಣ ಸಕ್ಕರೆ ಸ್ಪೈಕ್ಗಳು ಅಸಹಜವಲ್ಲವಾದರೂ, ಮಧುಮೇಹವನ್ನು ನಿರ್ವಹಿಸುವಲ್ಲಿ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಎಂದಿದ್ದಾರೆ.
ಊಟದ ನಂತರದ ನಡಿಗೆಯ ಪ್ರಯೋಜನಗಳೇನು? -ಪ್ರತಿದಿನ ಸಣ್ಣ ನಡಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. -ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. -ವಾಕಿಂಗ್ ಕೀಲು ನೋವನ್ನು ಕಡಿಮೆ ಮಾಡಲು ಸಹಕಾರಿ. -ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. -ಸ್ನಾಯುಗಳು, ಮೂಳೆಗಳು ಇತ್ಯಾದಿಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. -ರಕ್ತದ ಹರಿವನ್ನು ಹೆಚ್ಚಿಸುತ್ತದೆ. -ಡೋಪಮೈನ್, ಆಕ್ಸಿಟೋಸಿನ್, ಸೆರೊಟೋನಿನ್ ಮತ್ತು ಎಂಡಾರ್ಫಿನ್ಗಳು ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. -ಕರುಳಿನ ಆರೋಗ್ಯಕ್ಕೂ ಒಳ್ಳೆಯದು. -ದೀರ್ಘಕಾಲದ ಆರೋಗ್ಯಕರ ಜೀವನಶೈಲಿಗೆ ಪ್ರಯೋಜನಕಾರಿಯಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Wed, 3 May 23