Father’s Role in Parenting: ಮಗುವಿನ ನಿರೀಕ್ಷೆಯಲ್ಲಿರುವ ತಂದೆಯ ಆದ್ಯತೆ ಏನಿರಬೇಕು?
ತಂದೆಯಾಗುತ್ತಿರುವ ವಿಷಯ ಕಿವಿಗೆ ಬೀಳುತ್ತಿದ್ದಂತೆ ಖುಷಿಗೆ ಪಾರವೇ ಇರುವುದಿಲ್ಲ. ತಾಯಿಯಂತೆಯೇ ತಂದೆ ಕೂಡ ಅಂದಿನಿಂದಲೇ ಮಗುವಿನ ಕನಸ್ಸನ್ನು ಕಾಣಲು ಪ್ರಾರಂಭಿಸುತ್ತಾನೆ.
ತಂದೆಯಾಗುತ್ತಿರುವ ವಿಷಯ ಕಿವಿಗೆ ಬೀಳುತ್ತಿದ್ದಂತೆ ಖುಷಿಗೆ ಪಾರವೇ ಇರುವುದಿಲ್ಲ. ತಾಯಿಯಂತೆಯೇ ತಂದೆ ಕೂಡ ಅಂದಿನಿಂದಲೇ ಮಗುವಿನ ಕನಸ್ಸನ್ನು ಕಾಣಲು ಪ್ರಾರಂಭಿಸುತ್ತಾನೆ. ಆದರೆ ಈ ಸಂದರ್ಭದಲ್ಲಿ ನಿಮ್ಮ ಪತ್ನಿಯನ್ನು ಕಾಳಜಿಯಿಂದ ನೋಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಮಗುವಿನ ಆಗಮನದ ಖುಷಿಯಲ್ಲಿ ಸಂಗಾತಿಯ ಸಮಸ್ಯೆಗಳಿಗೆ ಕಿವಿಗೊಡುವುದನ್ನು ಮರೆಯಬಾರದು.
ಪತ್ನಿ ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸಿ ಜತೆಗೆ ಕುಳಿತು ಮಗು ಹುಟ್ಟಿದ ಮೇಲೆ ಏನೇನು ಜವಾಬ್ದಾರಿ ತಮ್ಮ ಮೇಲಿರಲಿದೆ ಎಂಬುದರ ಕಡೆಗೆ ಚರ್ಚೆ ನಡೆಸಬೇಕು. ಮಗುವು ನಿಮ್ಮ ಜೀವನ ಪ್ರಮುಖ ಅಂಗವಾಗಿರುತ್ತದೆ, ಮೊದಲು ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು.
ಮೊದಲ ಕೆಲವು ತಿಂಗಳು ನಿಮ್ಮ ಸಂಗಾತಿ ಮೊದಲು ಹೇಗಿದ್ದರೋ ಹಾಗೆಯೇ ಇರುತ್ತಾರೆ. ಆದರೆ ಮೊದಲ ಬಾರಿಗೆ ಗರ್ಭಿಣಿಯಾಗಿತ್ತಿರುವುದರಿಂದ ಆಕೆಯ ಮನಸ್ಸಿನಲ್ಲೂ ಗೊಂದಲ, ಭಯ ಇರುವುದು ಸಾಮಾನ್ಯ.
ಸ್ಕ್ಯಾನಿಂಗ್ ಮಾಡುವಾಗ ನೀವು ಮೊದಲ ಬಾರಿಗೆ ನಿಮ್ಮ ಮಗುವಿನ ಚಲನೆಯನ್ನು ಗಮನಿಸಿದಾಗ ನಿಮ್ಮ ಮಗುವಿನ ಬಗ್ಗೆ ಬೇರೆಯ ರೀತಿಯ ಪ್ರೀತಿಯೇ ಹುಟ್ಟಿಕೊಳ್ಳುತ್ತದೆ.
ನಿಮ್ಮ ಖುಷಿಯ ಭಾವನೆಯ ಜತೆಗೆ ಆತಂಕವೂ ಹುಟ್ಟಿಕೊಳ್ಳುತ್ತದೆ. ಮಗುವು ನಮ್ಮ ಜೀವನದ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ. ಹೌದು ಮಗು ಹುಟ್ಟುವುದರಿಂದ ಹೆಚ್ಚುವರಿ ಆರ್ಥಿಕ ಹೊರೆಯುಂಟಾಗಬಹುದು, ಆಗ ನೀವು ಕೆಲಸ ಬಿಟ್ಟು ಮಗುವನ್ನು ನೋಡಿಕೊಳ್ಳುವ ಸಂದರ್ಭವೂ ಬರಬಹುದು. ಆದರೆ ಜೀವನವನ್ನೇ ಬದಲಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಡಿ.
ಹೊಸ ಕೆಲಸವನ್ನು ಹುಡುಕುವುದು, ಪ್ರಮೋಷನ್ ಪಡೆಯುವುದರಿಂದ ಹೆಚ್ಚಿನ ಹಣ ಗಳಿಸಬಹುದು. ಆದರೆ ನೀವು ಹೆಚ್ಚುವರಿ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳುತ್ತೀರಿ ಎಂಬುದರ ಮೇಲೆ ಎಲ್ಲವೂ ನಿಂತಿರುತ್ತದೆ. ಮಕ್ಕಳ ಜತೆ ಸಮಯ ಕಳೆಯುವುದಕ್ಕೆ ನೀವು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ.
ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.
ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್ಗಳನ್ನು ಮಾಡಿದ್ದಾರೆ. ಗರ್ಭಾವಸ್ಥೆ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.