World Elephant Day 2023: ವಿಶ್ವ ಆನೆ ದಿನ ಯಾವಾಗ? ಈ ದಿನವನ್ನು ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ

ಪರಿಸರ ವ್ಯವಸ್ಥೆಯಲ್ಲಿ ಆನೆಗಳ ಮಹತ್ವವನ್ನು ಸಾರಲು ಹಾಗೂ ಆನೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 12 ರಂದು ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಯಾವಾಗ ಪ್ರಾರಂಭವಾಯಿತು ಹಾಗೂ ಆನೆಗಳ ಸಂತತಿ ನಾಶವಾಗದಂತೆ ಅವುಗಳನ್ನು ಕಾಪಾಡಿಕೊಳ್ಳುವುದು ಏಕೆ ಮುಖ್ಯ ಎಂಬುದರ ಬಗ್ಗೆ ನೋಡೋಣ.

World Elephant Day 2023: ವಿಶ್ವ ಆನೆ ದಿನ ಯಾವಾಗ? ಈ ದಿನವನ್ನು ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 10, 2023 | 3:59 PM

ಹೆಚ್ಚುತ್ತಿರುವ ನಗರೀಕರಣ, ಆಧುನೀಕರಣದ ಕಾರಣದಿಂದಾಗಿ ಕಾಡುಪ್ರಾಣಿಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಿದೆ. ಹುಲಿ,  ಸಿಂಹಗಳಂತೆ ಕಾಡಿನ ದೈತ್ಯ ಪ್ರಾಣಿಯಾದ ಗಜರಾಜನ ಸಂತತಿಯೂ ಇಂದು ಕಡಿಮೆಯಾಗುತ್ತಿದೆ. ಕಾಡುಗಳ ನಾಶದಿಂದಾಗಿ ಹಲವಾರು ಆನೆಗಳು ನಾಡಿನತ್ತ ಲಗ್ಗೆಯಿಡುತ್ತಿವೆ. ಅಲ್ಲದೆ ಅಕ್ರಮ ಬೇಟೆಯಿಂದ ವಿಶ್ವದಾದ್ಯಂತ ಆನೆಗಳ ಸಂಖ್ಯೆ ಕ್ಷೀಣಿಸುತ್ತಿದೆ. ಭಾರತದಲ್ಲಿ 2017ನೇ ಇಸವಿಯಲ್ಲಿ ಆನೆಗಳ ಗಣತಿಯನ್ನು ಮಾಡಲಾಯಿತು. ಆಗ ಭಾರತದಲ್ಲಿ ಒಟ್ಟು 30 ಸಾವಿರ ಆನೆಗಳಿದ್ದವು. ಆದರೆ ವರ್ಷ ಕಳೆದಂತೆ ಆನೆಗಳ ಸಂಖ್ಯೆಯು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಹಲವೆಡೆ ಕಡಿಮೆಯಾಗುತ್ತಾ ಬರುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ವ್ಯವಸ್ಥೆಯಲ್ಲಿ ಆನೆಗಳ ಮಹತ್ವವನ್ನು ಗುರುತಿಸುವ ಉದ್ದೇಶದಿಂದ ವಿಶ್ವದಾದ್ಯಂತ ಪ್ರತಿವರ್ಷ ಆಗಸ್ಟ್ 12ರಂದು ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಆನೆ ದಿನಾಚರಣೆ ಪ್ರಾರಂಭವಾದ್ದು ಯಾವಾಗ?

2011ರಲ್ಲಿ ಸಿಮ್ಸ್ ಮತ್ತು ಎಲಿಫೆಂಟ್ ಇಂಟ್ರಡಕ್ಷನ್ ಫೌಂಡೇಶನ್ ವಿಶ್ವ ಆನೆ ದಿನವನ್ನು ಆಚರಿಸಲು ನಿರ್ಧರಿಸಿತು. ಹಾಗೂ ಆಗಸ್ಟ್ 12, 2012 ರಂದು ವಿಶ್ವ ಆನೆ ದಿನವನ್ನು ಆಚರಿಸಲು ಅಧಿಕೃತವಾಗಿ ಘೋಷಿಸಲಾಯಿತು.

ಅಂದಿನಿಂದ ಪ್ರತಿ ವರ್ಷ ಆಗಸ್ಟ್ 12 ರಂದು ಆಚರಿಸಲಾಗುವ ವಿಶ್ವ ಆನೆ ದಿನದ ಉದ್ದೇಶವು ಆನೆಗಳನ್ನು ರಕ್ಷಿಸುವುದು ಮತ್ತು ಅವುಗಳ ಆವಾಸಸ್ಥಾನವಾದ ಕಾಡುಗಳನ್ನು ರಕ್ಷಿಸುವುದಾಗಿದೆ. ಇದರೊಂದಿಗೆ ಆನೆಗಳ ಸಂರಕ್ಷಣಾ ಕ್ರಮಗಳು, ಪುನರ್ವಸತಿ, ಅವುಗಳ ಉತ್ತಮ ಆರೋಗ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಆನೆಗಳ ಅಕ್ರಮ ಸಾಗಣೆಯನ್ನು ತಡೆಯುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ವಿಶ್ವ ಸಿಂಹ ದಿನದ ಇತಿಹಾಸ ಏನು? ಕಾಡಿನ ರಾಜನ ಸಂತತಿ ಅಳಿವಿನಂಚಿನಲ್ಲಿ

ಆನೆಗಳು ಏಕೆ ಮುಖ್ಯ:

ಆನೆ ಜಗತ್ತಿಗೆ ಬಹಳ ಮುಖ್ಯವಾದ ಪ್ರಾಣಿ. ಕಾಡಿನಲ್ಲಿ ವಾಸಿಸುವ ಇತರ ವನ್ಯಜೀವಿಗಳಿಗೆ ಪರಿಸರ ವ್ಯವಸ್ಥೆಯನ್ನು ನಿರ್ವಹಿಸಲು ಆನೆಗಳು ಸಹಾಯ ಮಾಡುತ್ತದೆ. ಆನೆಗಳು ಹಿಂಡುಗಳಲ್ಲಿ ನಡೆಯುತ್ತದೆ, ಇದು ದಟ್ಟವಾದ ಕಾಡುಗಳ ಮೂಲಕ ದಾರಿ ಮಾಡುತ್ತದೆ, ಇದು ಇತರ ಪ್ರಾಣಿಗಳಿಗೆ ತುಂಬಾ ಸಹಾಯವಾಗುತ್ತದೆ. ಆನೆಗಳ ಸಂತತಿಯ ನಾಶವು ಪರಿಸರಕ್ಕೆ ಹಾನಿಕಾರಕವಾಗಿದೆ ಏಕೆಂದರೆ ಇದು ಪ್ರಕೃತಿಯ ರಚನೆಯನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಪ್ರಕೃತಿಯು ಸಮತೋಲನದಲ್ಲಿರಲು ಆನೆಗಳು ಬಹಳ ಮುಖ್ಯ. ಪ್ರಸ್ತುತ ದೇಶದ 14 ರಾಜ್ಯಗಳಲ್ಲಿ ಸುಮಾರು 65000 ಚದರ ಕಿಲೋಮೀಟರ್ ಗಳಷ್ಟು ೩೦ ಅರಣ್ಯ ಪ್ರದೇಶಗಳನ್ನು ಆನೆಗಳಿಗಾಗಿ ರಕ್ಷಿಸಲಾಗಿದೆ. ಏಷ್ಯಾದಲ್ಲಿನ 60% ಶೇಕಡಾದಷ್ಟು ಆನೆಗಳು ಭಾರತದಲ್ಲಿ ನೆಲೆಯಾಗಿವೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಮಾನವ-ಆನೆ ಸಂಘರ್ಷದ ಘಟನೆಗಳು ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿದ್ದು, ಇದು ಆತಂಕಕಾರಿಯಾದ ಸಂಗತಿಯಾಗಿದೆ. ಆದ್ದರಿಂದ ಆನೆಗಳ ರಕ್ಷಣೆಗಾಗಿ ಅರಣ್ಯ ಇಲಾಖೆ, ಸರ್ಕಾರೇತರ ಸಂಸ್ಥೆಗಳು ಮತ್ತು ಪರಿಸರ ಪ್ರೇಮಿಗಳು ಜಂಟಿಯಾಗಿ ಆನೆಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮತ್ತು ಆನೆಗಳ ಪುನರ್ವಸತಿಗೆ ಅರ್ಥಪೂರ್ಣ ಪ್ರಯತ್ನಗಳನ್ನು ಮಾಡುವುದು ಅವಶ್ಯಕ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್