ಹಾಲು ನಮ್ಮ ದೇಹಕ್ಕೆ ಬೇಕಾದಂತಹ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಒಂದು ಸಂಪೂರ್ಣ ಆಹಾರವಾಗಿದೆ. ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿ ಇರಿಸಿಕೊಳ್ಳಲು ಬಯಸಿದರೆ, ಪ್ರತಿನಿತ್ಯ ಒಂದು ಲೋಟ ಹಾಲು ಸೇವಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ಹಾಲು ಆರೋಗ್ಯಕ್ಕೆ ಅಗತ್ಯವಾದ ಹಲವಾರು ಜೀವಸತ್ವಗಳು ಮತ್ತು ಖನಿಜಗಳನನ್ನು ಹೊಂದಿರುವುದರಿಂದ ಇದರ ಸೇವನೆಯಿಂದ ನಾವು ಹಲವಾರು ಆರೋಗ್ಯ ಪ್ರಯೋಜಗಳನ್ನು ಪಡೆಯಬಹುದು. ಮಾತ್ರವಲ್ಲದೆ ಪ್ರತಿ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲನ್ನು ಸೇವಿಸಿದರೆ ಉತ್ತಮ ಎಂದು ಅನೇಕ ತಜ್ಞರು ಸಲಹೆ ನೀಡುತ್ತಾರೆ. ಹಾಗಿದ್ದರೆ ರಾತ್ರಿ ಹಾಲು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ.
• ನಿದ್ರಾಹೀನತೆಯ ಸಮಸ್ಯೆ ಇರುವವರು ಅಥವಾ ಪೂರ್ಣ ನಿದ್ರೆಯನ್ನು ಪಡೆಯಲು ಸಾಧ್ಯವಾಗದವರು ರಾತ್ರಿ ಮಲಗುವ ಮೊದಲು ಒಂದು ಲೋಟ ಹಾಲು ಸೇವಿಸಿದರೆ, ಇದರಿಂದ ಪೂರ್ಣಪ್ರಮಾಣದ ನಿದ್ರೆಯನ್ನು ಪಡೆಯಬಹುದು.
• ಹಾಲು ಪೌಷ್ಟಿಕವಾದ ಆಹಾರವಾಗಿದೆ. ಖನಿಜಗಳು, ಜೀವಸತ್ವಗಳು ಮತ್ತು ಇದರ ಆರ್ಧ್ರಕ ಗುಣಲಕ್ಷಣಗಳ ಹೊರತಾಗಿ ಹಾಲು ಶಾಂತತೆ ಮತ್ತು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳುವ ಗುಣಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ಹಾಲು ಕುಡಿದು ಮಲಗುವುದರಿಂದ ಮನಸ್ಸು ಮತ್ತು ದೇಹ ಶಾಂತವಾಗಿರುತ್ತದೆ.
• ಹಾಲು ಕುಡಿಯುವುದರಿಂದ ದೇಹದಲ್ಲಿ ಡೋಪಮೈನ್ ಹಾರ್ಮೋನು ಸ್ರವಿಸುವಿಕೆಯು ಹೆಚ್ಚಾಗುತ್ತದೆ. ಡೊಪಮೈನ್ ಸಂತೋಷದ ಹಾರ್ಮೋನು ಆಗಿದ್ದು, ಅದು ಸಂತೋಷದ ಭಾವನೆಯನ್ನು ನೀಡುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ.
• ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಹೀಗಿರುವಾಗ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಜನರು ತಮ್ಮ ಆಹಾರಕ್ರಮದಲ್ಲಿ ಒಂದು ಲೋಟ ಹಾಲನ್ನು ಸೇರಿಸಬಹುದು.
• ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವುದರಿಂದ ಬೆಳಗ್ಗೆ ಮಲವಿಸರ್ಜನೆ ಸುಲಭವಾಗುತ್ತದೆ. ಇದು ನಿಮ್ಮ ಜೀರ್ಣಶಕ್ತಿಯನ್ನು ಬಲಪಡಿಸುತ್ತದೆ ಅಲ್ಲದೆ ಇದು ಮಲಬದ್ಧತೆಯನ್ನು ಹೋಗಲಾಡಿಸುವಲ್ಲಿ ಪರಿಣಾಮಕಾರಿಯಾಗಿದೆ.
• ಕೀಲುನೋವು ಇರುವವರು ಅಥವಾ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿರುವವರು ಪ್ರತಿ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯಬೇಕು. ಒಂದು ಲೋಟ ಹಾಲು ಕ್ಯಾಲ್ಸಿಯಂ ಜೊತೆಗೆ ಫಾಸ್ಫರಸ್, ವಿಟಮಿನ್ ಡಿ ಮತ್ತು ಪ್ರೋಟೀನ್ ನ್ನು ಒದಗಿಸುತ್ತದೆ. ಅಲ್ಲದೆ ಇದು ಮೂಳೆಯನ್ನು ಬಲಪಡಿಸಲು ಸಹಕಾರಿ.
• ಒತ್ತಡದಿಂದ ಬಳಲುತ್ತಿರುವವರು ಹಾಲು ಸೇವಿಸಬೇಕು. ಒತ್ತಡವನ್ನು ಉಂಟುಮಾಡುವ ಕಾರ್ಟಿಸೋಲ್ ಹಾರ್ಮೋನು ಮಟ್ಟವನ್ನು ಕಡಿಮೆ ಮಾಡಲು ಉಪಯುಕ್ತವಾದ ಅಮೈನೋ ಆಮ್ಲವು ಹಾನಿನಲ್ಲಿ ಕಂಡಬರುತ್ತದೆ. ಆದ್ದರಿಂದ ಹಾಲನ್ನು ಸೇವಿಸುವ ಮೂಲಕ ಒತ್ತಡವನ್ನು ನಿವಾರಿಸಬಹುದು.
ಇದನ್ನೂ ಓದಿ: ಅತಿಯಾಗಿ ಕಬ್ಬಿನ ಹಾಲು ಕುಡಿಯಬೇಡಿ, ಆರೋಗ್ಯಕ್ಕೆ ಒಳ್ಳೆಯದಲ್ಲ
• ಆಹಾರವನ್ನು ಸೇವಿಸಿದ ಬಳಿಕ ಮಲಗುವ ಮುನ್ನ ಎರಡು ಅಥವಾ ಒಂದು ಗಂಟೆಯ ಮೊದಲು ಯಾವಾಗಲೂ ಹಾಲು ಕುಡಿಯಬೇಕು.
• ಬಿಸಿ ಬಿಸಿಯಾದ ಹಾಲನ್ನು ಕುಡಿಯುವ ಬದಲು ಉಗುರು ಬೆಚ್ಚಗಿನ ಹಾಲನ್ನು ಕುಡಿಯಿರಿ. ಇದು ಹೆಚ್ಚು ರುಚಿಯನ್ನು ನೀಡುತ್ತದೆ.
• ಹಾಲನ್ನು ಒಂದೇ ಉಸಿರಿನಲ್ಲಿ ಗಟಗಟನೇ ಕುಡಿಯಬಾರದು. ಬದಲಿಗೆ ಸಿಪ್ ಬೈ ಸಿಪ್ ಕುಡಿಯಬೇಕು. ಒಂದೇ ಉಸಿರಿನಲ್ಲಿ ಹಾಲು ಕುಡಿಯುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಅಥವಾ ಹೊಟ್ಟೆ ನೋವು ಉಂಟಾಗುತ್ತದೆ.
• ಹಾಲನ್ನು ಬಿಸಿ ಮಾಡುವಾಗ ಅದಕ್ಕೆ ಸಕ್ಕರೆ ಹಾಕಬೇಡಿ, ಹಾಲನ್ನು ಉರಿಯಿಂದ ತೆಗೆದ ನಂತರ ಅದಕ್ಕೆ ಸಕ್ಕರೆ ಹಾಕಿ. ಏಕೆಂದರೆ ಹೆಚ್ಚಿನ ಶಾಖದಲ್ಲಿ ಸಕ್ಕರೆಯನ್ನು ಬೇಯಿಸುವುದು ವಿಷಕಾರಿಯಾಗಿದೆ.
• ಸಕ್ಕರೆಯ ಬದಲು ಬೆಲ್ಲದೊಂದಿಗೆ ಹಾಲು ಸೇವಿಸುವುದು ಉತ್ತಮ. ಹೀಗೆ ಮಾಡುವುದರಿಂದ ದೇಹದಲ್ಲಿ ಕಬ್ಬಿಣಾಂಶ ಮತ್ತು ಹಿಮೋಗ್ಲೋಬಿನ್ ಮಟ್ಟ ಸಮತೋಲನದಲ್ಲಿರುವುದರ ಜೊತೆಗೆ ಶಕ್ತಿಯೂ ಹೆಚ್ಚು ಲಭ್ಯವಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ