AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sugarcane Juice: ಅತಿಯಾಗಿ ಕಬ್ಬಿನ ಹಾಲು ಕುಡಿಯಬೇಡಿ, ಆರೋಗ್ಯಕ್ಕೆ ಒಳ್ಳೆಯದಲ್ಲ

ಬ್ರೆಜಿಲ್ ಹೆಚ್ಚು ಸಕ್ಕರೆಯನ್ನು ಉತ್ಪಾದಿಸುತ್ತದೆಯಾದರೂ, ಭಾರತವು ವಿಶ್ವದ "ಮಧುಮೇಹ ರಾಜಧಾನಿ" ಎಂಬ ಬಿರುದನ್ನು ಹೊಂದಿದೆ ಎಂದು ಡಾ. ಪಾಲ್ ಮಾಣಿಕಂ ಹೇಳಿದ್ದಾರೆ. ಹಾಗಾಗಿ ಈ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಯಾಕಾಗಿ ಅತಿಯಾದ ಕಬ್ಬಿನ ರಸವನ್ನು ಕುಡಿಯಬಾರದು ಎಂಬುದರ ಬಗ್ಗೆ ತಿಳಿಸಿದ್ದಾರೆ.

Sugarcane Juice: ಅತಿಯಾಗಿ ಕಬ್ಬಿನ ಹಾಲು ಕುಡಿಯಬೇಡಿ, ಆರೋಗ್ಯಕ್ಕೆ ಒಳ್ಳೆಯದಲ್ಲ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on:Aug 14, 2023 | 2:54 PM

Share

ಮಳೆಗಾಲವಾದರೂ ಸುಡುವ ಬಿಸಿಲು ಮಾತ್ರ ಕಡಿಮೆಯಾಗಿಲ್ಲ. ಒಂದು ದಿನ ಮಳೆ ಮತ್ತೆ ನಾಲ್ಕು ದಿನ ಬಿಸಿಲು. ಇಂತಹ ಹವಾಮಾನದಿಂದ ಬಾಯಾರಿಕೆ ಹೆಚ್ಚಾಗುತ್ತದೆ. ಎಷ್ಟು ನೀರು ಕುಡಿದರೂ ಸಾಲುವುದಿಲ್ಲ. ಆ ನೀರಿನ ದಾಹ ತಣಿಸಲು ಹಲವು ಜ್ಯೂಸ್​​​​ಗಳ ಮೊರೆ ಹೋಗುತ್ತೇವೆ. ಅದರಲ್ಲಿ ತಾಜಾ ಕಬ್ಬಿನ ರಸವೂ (Sugarcane) ಒಂದು. ಇದನ್ನು ಪ್ರತಿದಿನ ಕುಡಿಯಲು ಹಾತೊರೆಯುತ್ತೇವೆ. ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಹಿಂಡಿ, ಪುದೀನಾ ಎಲೆಗಳನ್ನು ಸಣ್ಣದಾಗಿ ಕಟ್ ಮಾಡಿ ಹಾಕಿ ಅದಕ್ಕೆ ಸ್ವಲ್ಪ ಚಾಟ್ ಮಸಾಲಾ ಸೇರಿಸಿದರೇ, ಆಹಾ! ಈ ರುಚಿ ನೆನಸಿಕೊಂಡರೆ ಖುಷಿಯಾಗುತ್ತದೆ. ಇನ್ನು ಕುಡಿದರೇ? ಇನ್ನೆಷ್ಟು ತೃಪ್ತಿ ನೀಡಬಹುದು ಅಲ್ಲವಾ? ಆದರೆ ಅದರ ಉಲ್ಲಾಸದಾಯಕ ರುಚಿಯ ಹೊರತಾಗಿ, ಅನೇಕರು ಇದನ್ನು ದೇಹಕ್ಕೆ ಒಳ್ಳೆಯದಲ್ಲ ಎಂದು ಪರಿಗಣಿಸುತ್ತಾರೆ. ಯಾಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಪಾಲ್ ಮಾಣಿಕಂ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್​​ನಲ್ಲಿ ಕರುಳಿನ ಆರೋಗ್ಯದ ಮೇಲೆ ಕಬ್ಬಿನ ರಸದ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ. ಇದಲ್ಲದೆ, ಅವರು ಈ ಪಾನೀಯವನ್ನು ಮಿತವಾಗಿ ಸೇವಿಸಲು ಸಲಹೆಯನ್ನೂ ನೀಡಿದ್ದಾರೆ. “ಭಾರತವು ವಿಶ್ವದ ಮಧುಮೇಹ ರಾಜಧಾನಿಯಾಗಿರುವುದರಿಂದ, ಹೆಚ್ಚಿನ ನೈಸರ್ಗಿಕ ಸಕ್ಕರೆ ಅಂಶದಿಂದಾಗಿ ಕಬ್ಬಿನ ರಸವನ್ನು ಮಿತವಾಗಿ ಸೇವಿಸುವುದು ಬಹಳ ಮುಖ್ಯ” ಎಂದು ಮಾಣಿಕಂ ಹೇಳಿದ್ದಾರೆ.

ವೀಡಿಯೊದಲ್ಲಿ ಅವರು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣಾಂಶ ಮತ್ತು ಬಿ ಕಾಂಪ್ಲೆಕ್ಸ್ ಜೀವಸತ್ವಗಳು ಸೇರಿದಂತೆ ಕಬ್ಬಿನ ರಸದ ಸಮೃದ್ಧ ಪೋಷಕಾಂಶಗಳ ಅಂಶವಿದ್ದು, ಇದು ಪರಿಪೂರ್ಣ ಪಾನೀಯವಾಗಿದೆ. ಅದಲ್ಲದೆ ಕಬ್ಬಿನ ರಸವು ಅಮೂಲ್ಯವಾದ ಫೈಬರ್​​ನ್ನು ಹೊಂದಿರುತ್ತದೆ ಮತ್ತು ಕರುಳಿನ ಆರೋಗ್ಯಕ್ಕೂ ಪ್ರಯೋಜನಕಾರಿ ಎಂದು ಮಾಣಿಕಂ ವಿವರಿಸಿದ್ದಾರೆ. ಆದರೆ ಕಬ್ಬಿನ ರಸವನ್ನು ಅತಿಯಾಗಿ ಕುಡಿಯಬಾರದು. ಏಕೆಂದರೆ ಇವು ಪ್ರಾಥಮಿಕವಾಗಿ ನೈಸರ್ಗಿಕ ಸಕ್ಕರೆಗಳನ್ನು, ವಿಶೇಷವಾಗಿ “ಸುಕ್ರೋಸ್” ಅನ್ನು ಹೊಂದಿರುತ್ತದೆ ಆದ್ದರಿಂದ ಇದನ್ನು ಮಿತವಾಗಿ ಸೇವಿಸಬೇಕು ಎಂಬುದನ್ನು ಅವರು ಪೋಸ್ಟ್​​​ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಕಬ್ಬಿನ ಹಾಲು ದೇಹಕ್ಕೆ ತುಂಬಾ ಸಹಕಾರಿ, ಆದರೆ ಈ ಸಮಸ್ಯೆ ಇರುವವರು ಕುಡೀಬೇಡಿ

ಬ್ರೆಜಿಲ್ ಹೆಚ್ಚು ಸಕ್ಕರೆಯನ್ನು ಉತ್ಪಾದಿಸುತ್ತಿದ್ದರೂ, ಭಾರತವು ವಿಶ್ವದ “ಮಧುಮೇಹ ರಾಜಧಾನಿ” ಎಂಬ ಬಿರುದನ್ನು ಹೊಂದಿದೆ. “ಅವರಲ್ಲಿ ಫುಟ್ಬಾಲ್ ಆಡುತ್ತಾರೆ, ಆದರೆ ನಾವಿಲ್ಲಿ ಮಧುಮೇಹದಿಂದ ಪಾದದ ಶಸ್ತ್ರಚಿಕಿತ್ಸೆಗಳನ್ನು ಪಡೆಯುತ್ತಿದ್ದೇವೆ.” ಎಂದು ಮಾಣಿಕಂ ಹೇಳಿದ್ದಾರೆ. ಅಲ್ಲದೆ ನೈರ್ಮಲ್ಯಕ್ಕಾಗಿ, ರಸ್ತೆ ಬದಿಯಲ್ಲಿ ಈ ಜ್ಯೂಸ್ ಮಾರಾಟ ಮಾಡುವವರ ಬಳಿ ಕುಡಿಯದಿದ್ದರೇ ಮನೆಯಲ್ಲಿಯೇ ನೀವು ಕಬ್ಬಿನ ರಸ ತಯಾರಿಸಿ ಆನಂದಿಸಬಹುದು. ಆದರೆ ಅದನ್ನು ಅತಿಯಾಗಿ ಸೇವಿಸಬೇಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Mon, 14 August 23

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?