AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಸೊಪ್ಪನ್ನು ತಿನ್ನುವುದರಿಂದ ನಿಮ್ಮ ಮೂಳೆಗಳು ಸದೃಢವಾಗುತ್ತವೆ, ವಿವರ ಇಲ್ಲಿದೆ

Leafy Greens: ಎಲೆಗಳುಳ್ಳ ಹಸಿರು ಸೊಪ್ಪು ತರಕಾರಿಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ. ವಾರಕ್ಕೆ ಕನಿಷ್ಠ ಎರಡು ಅಥವಾ ಮೂರು ಬಾರಿ ಹಸಿರು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಎಲೆಗಳುಳ್ಳ ತರಕಾರಿಗಳಾದ ದಂಟಿನ ಸೊಪ್ಪು, ಮೆಂತ್ಯೆ ಸೊಪ್ಪೊ, ನುಗ್ಗೆಕಾಯಿ ಸೊಪ್ಪು, ಅಗಸೆ ಸೊಪ್ಪು, ಕರಿಬೇವಿನ ಎಲೆಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ, ಫಾಸ್ಫರಸ್, ವಿಟಮಿನ್ ಡಿ ಮತ್ತು ಕೆ ಮುಂತಾದ ಪೋಷಕಾಂಶಗಳು ಈ ಸೊಪ್ಪುಗಳಲ್ಲಿ ಲಭ್ಯವಿವೆ.

ಈ ಸೊಪ್ಪನ್ನು ತಿನ್ನುವುದರಿಂದ ನಿಮ್ಮ ಮೂಳೆಗಳು ಸದೃಢವಾಗುತ್ತವೆ, ವಿವರ ಇಲ್ಲಿದೆ
ಹಸಿರು ಸೊಪ್ಪು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ
ಸಾಧು ಶ್ರೀನಾಥ್​
|

Updated on: Aug 15, 2023 | 6:06 AM

Share

ಮೂಳೆಗಳು ಬಲವಾಗಿದ್ದರೆ, ನಮ್ಮ ಒಳಗಿನ ಅಸ್ಥಿಪಂಜರವು ಸದೃಢವಾಗಿರುತ್ತದೆ. ನಮ್ಮ ಮೂಳೆಗಳು ಉತ್ತಮವಾದ್ದರಷ್ಟೇ ನಾವು ಉತ್ತಮವಾಗಿ ನಮ್ಮ ಕಾಲ ಮೇಲೆ ನಾವು ಬಲಶಾಲಿಯಾಗಿ ನಿಲ್ಲುತ್ತೇವೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮೂಳೆಗಳನ್ನು ಬಲಪಡಿಸಲು ಅತ್ಯವಶ್ಯ. ಆರೋಗ್ಯಕರ ಮೂಳೆಗಳಿಗಾಗಿ ಇವೆರಡೂ ಅತ್ಯಗತ್ಯ. ಇವುಗಳ ಜೊತೆಗೆ ದೈನಂದಿನ ವ್ಯಾಯಾಮವೂ ಅಷ್ಟೇ ಮುಖ್ಯ. ವ್ಯಾಯಾಮ ಮಾಡದಿದ್ದರೆ.. ದೇಹದ ಚಲನೆ ಅಥವಾ ಮೂಳೆಗಳ ಆರೋಗ್ಯ ಹಾಳಾಗುತ್ತದೆ. ಸಣ್ಣ ಏಟಿನಿಂದಲೂ ಮೂಳೆ ಮುರಿಯುವ ಅಪಾಯವಿರುತ್ತದೆ. ನಿಮಗೆ ವಿಟಮಿನ್ ಡಿ ಕೊರತೆ (Vitamin D Deficiency) ಇದೆ ಎಂದು ಗೊತ್ತಾದರೆ.. ನೀವು ಮುಂಜಾನೆ ಬಿಸಿಲಿನಲ್ಲಿ ಇರಬೇಕು. ಅಲ್ಲದೆ ವಿಟಮಿನ್ ಡಿ ಇರುವ ಆಹಾರಗಳನ್ನು (Leafy Greens) ಸೇವಿಸಿ.

ಈ ಹಸಿರು ಸೊಪ್ಪು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ:

ವಿಶೇಷವಾಗಿ ಎಲೆಗಳುಳ್ಳ ಹಸಿರು ಸೊಪ್ಪು ತರಕಾರಿಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ. ವಾರಕ್ಕೆ ಕನಿಷ್ಠ ಎರಡು ಅಥವಾ ಮೂರು ಬಾರಿ ಹಸಿರು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಎಲೆಗಳುಳ್ಳ ತರಕಾರಿಗಳಾದ ದಂಟಿನ ಸೊಪ್ಪು, ಮೆಂತ್ಯೆ ಸೊಪ್ಪೊ, ನುಗ್ಗೆಕಾಯಿ ಸೊಪ್ಪು, ಅಗಸೆ ಸೊಪ್ಪು, ಕರಿಬೇವಿನ ಎಲೆಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ, ಫಾಸ್ಫರಸ್, ವಿಟಮಿನ್ ಡಿ ಮತ್ತು ಕೆ ಮುಂತಾದ ಪೋಷಕಾಂಶಗಳು ಈ ಸೊಪ್ಪುಗಳಲ್ಲಿ ಲಭ್ಯವಿವೆ. ಹಸಿರು ಸೊಪ್ಪು ತರಕಾರಿಗಳು ಕಣ್ಣಿನ ಆರೋಗ್ಯಕ್ಕೆ ಹಾಗೂ ಮೂಳೆಗಳಿಗೆ ಒಳ್ಳೆಯದೇ. ಆದ್ದರಿಂದ ನೀವು ಸೊಪ್ಪನ್ನು ಸೇವಿಸಿದರೆ ಅದರಿಂದ ಪ್ರಯೋಜನಗಳೇ ಹೊರತು, ಯಾವುದೇ ಹಾನಿಯಾಗುವುದಿಲ್ಲ.

ದಿನವೂ ವ್ಯಾಯಾಮ ಮಾಡಿ:

ಮೂಳೆಗಳು ಗಟ್ಟಿಯಾಗಿರಲು ವ್ಯಾಯಾಮ ಕೂಡ ತುಂಬಾ ಒಳ್ಳೆಯದು. ದಿನನಿತ್ಯದ ವ್ಯಾಯಾಮವು ಸ್ನಾಯುಗಳನ್ನು ಚಲಿಸುವಂತೆ ಮಾಡುತ್ತದೆ ಮತ್ತು ನೈಟ್ರಿಕ್ ಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಮೂಳೆ ಅಂಗಾಂಶಕ್ಕೆ ರಕ್ತ ಪರಿಚಲನೆಯು ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಪಡೆಯುತ್ತದೆ. ಅದಕ್ಕಾಗಿಯೇ ವೈದ್ಯರು ದಿನಕ್ಕೆ ಒಂದರಿಂದ ಎರಡು ಗಂಟೆಗಳ ಕಾಲ ವ್ಯಾಯಾಮ ಮಾಡಲು ಸೂಚಿಸುತ್ತಾರೆ. ಅಲ್ಲದೆ, ದೈನಂದಿನ ವ್ಯಾಯಾಮವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಮೂಳೆಗಳು ಆರೋಗ್ಯಕರವಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ವಿಟಮಿನ್ ಡಿ ಪರೀಕ್ಷೆಗಳನ್ನು ಮಾಡಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ