International Human Solidarity Day 2023: ಅಂತರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ, ಈ ವಿಶೇಷ ದಿನದ ಮಹತ್ವ ಏನು? 

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 19, 2023 | 5:07 PM

ಈ ಸಮಾಜ ಮತ್ತು ದೇಶ ದೇಶಗಳ ನಡುವೆ ಹೆಚ್ಚುತ್ತಿರುವ ಮನಸ್ತಾಪಗಳನ್ನು ಕಡಿಮೆ ಮಾಡಲು,  ಜನರಲ್ಲಿ ಪರಸ್ಪರ ಸಹೋದರತ್ವವನ್ನು ಉತ್ತೇಜಿಸಲು ಮತ್ತು ಒಗ್ಗಟ್ಟಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಡಿಸೆಂಬರ್ 20 ರಂದು ಮಾನವ ಒಗ್ಗಟಿನ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ.

International Human Solidarity Day 2023: ಅಂತರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ, ಈ ವಿಶೇಷ ದಿನದ ಮಹತ್ವ ಏನು? 
ಸಾಂದರ್ಭಿಕ ಚಿತ್ರ
Follow us on

ಪ್ರಪಂಚವು ವೈವಿಧ್ಯತೆಯಿಂದ ಕೂಡಿದೆ. ಇಲ್ಲಿ ಅನೇಕ ಧರ್ಮಗಳು, ಸಂಸ್ಕೃತಿಗಳ  ಜನರಿದ್ದಾರೆ. ಈ ವೈವಿಧ್ಯತೆಯ ಕಾರಣದಿಂದಾಗಿ  ಜನರಲ್ಲಿ ಸಹಜವಾಗಿ  ಬೇರೆ ಧರ್ಮಗಳು, ಸಂಸ್ಕೃತಿ, ದೇಶಗಳ ಬಗ್ಗೆ ಭೇದಭಾವದ ಭಾವನೆ ಮೂಡತ್ತದೆ. ಇದರಿಂದಾಗಿ ಸಮಾಜ ಮತ್ತು ದೇಶ ದೇಶಗಳ ನಡುವೆ ಯುದ್ಧ, ಹಿಂಸಾಚಾರ, ಭಯೋತ್ಪಾದನೆ ಮತ್ತು ಇತರ ಸಮಸ್ಯೆಗಳು ಉದ್ಭವಿಸುತ್ತದೆ. ಈ ಎಲ್ಲಾ ಸಮಸ್ಯೆಗಳು ಇಡೀ ಮಾನವ ಜನಾಂಗಕ್ಕೆ ಹಾನಿಯುಂಟುಮಾಡುತ್ತದೆ. ಮತ್ತು ಶಾಂತಿಯು ಹದಗೆಡುತ್ತದೆ.  ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿದೆ.  ಅದೇ ರೀತಿ ಪ್ರತಿಯೊಂದು ದೇಶಗಳು ದ್ವೇಷವನ್ನು ಮರೆತು ಪರಸ್ಪರ ಒಗ್ಗಾಟ್ಟಾಗಿದ್ದಾ, ಅಲ್ಲಿ ಯಾವುದೇ ಸಮಸ್ಯೆಗಳು ಉದ್ಭವವಾಗುವುದಿಲ್ಲ, ಅಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ.  ಅದೇ ರೀತಿ ದೇಶಗಳ ನಡುವೆ ಒಂದು ಉತ್ತಮ ಸಂಬಂಧ ಏರ್ಪಡುತ್ತದೆ.   ಈ ನಿಟ್ಟಿನಲ್ಲಿ ʼವಸುದೈವ ಕುಟುಂಬಕಂʼ ಅಂದರೆ ಇಡೀ ಜಗತ್ತು ಒಂದೇ ಕುಟುಂಬ ಎಂಬ ಪರಿಕಲ್ಪನೆಯಂತೆ ಅಂತರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವ, ನಾಗರಿಕರಲ್ಲಿ ಏಕತೆ ಮತ್ತು ಸಹೋದರತ್ವ ಭಾವನೆಯನ್ನು ಮೂಡಿಸುವ ಮತ್ತು , ಜಗತ್ತಿನಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಉತ್ತೇಜಿಸುವ ಉದ್ದೇಶದಿಂದ  ಪ್ರತಿವರ್ಷ ಡಿಸೆಂಬರ್ 20 ರಂದು “ಅಂತರಾಷ್ಟ್ರೀಯ ಮಾನವ ಒಗಟ್ಟಿನ ದಿನ”ವನ್ನು ಆಚರಿಸಲಾಗುತ್ತದೆ.

ಅಂತರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನದ ಇತಿಹಾಸ:

ಈ ವಿಶೇಷ ದಿನದ ಆಚರಣೆಯನ್ನು ಮೊದಲ ಬಾರಿಗೆ  2005 ರಲ್ಲಿ ಪ್ರಾರಂಭಿಸಲಾಯಿತು. ವಿಶ್ವದಲ್ಲಿ ಪರಸ್ಪರ ಸಹಕಾರ ಮತ್ತು ಸಾಮರಸ್ಯವನ್ನು ಉತ್ತೇಜಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರಾಷ್ಟ್ರೀಯ ಮಾನವ ಏಕತಾ ದಿನವನ್ನು ಆಚರಿಸಲು ಮೊದಲು ಪ್ರಸ್ತಾಪಿಸಿತು. ಇದರ ನಂತರ 22 ಡಿಸೆಂಬರ್ 2005 ರಂದು 60/209 ನಿರ್ಣಯದ ಅಡಿಯಲ್ಲಿ ಡಿಸೆಂಬರ್ 20 ರಂದು ಅಂತರಾಷ್ಟ್ರೀಯ ಮಾನವ ಏಕತಾ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್  20 ರಂದು ಜಾಗತಿಕ ಮಟ್ಟದಲ್ಲಿ ಮಾನವ ಒಗ್ಗಟ್ಟಿನ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಅಂತರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನದ ಪ್ರಾಮುಖ್ಯತೆ:

ವಾಸ್ತವವಾಗಿ ನಮ್ಮ ಪ್ರಪಂಚವು ವೈವಿಧ್ಯತೆಯಿಂದ ಕೂಡಿದೆ. ಅನೇಕ ಧರ್ಮಗಳು, ಸಂಸ್ಕೃತಿಗಳ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಈ ವೈವಿಧ್ಯತೆಯಿಂದಾಗಿ ಜನರಲ್ಲಿ ಸಹಜವಾಗಿ  ಭೇದಭಾವಗಳ ಭಾವನೆ ಮೂಡತ್ತದೆ. ಈ ಕಾರಣದಿಂದಾಗಿ ಸಮಾಜ ಮತ್ತು ದೇಶ ದೇಶಗಳ ನಡುವೆ ಯುದ್ಧ, ಹಿಂಸಾಚಾರ, ಭಯೋತ್ಪಾದನೆ ಮತ್ತು ಇತರ ಸಮಸ್ಯೆಗಳು ಉದ್ಭವಿಸುತ್ತದೆ. ಇದು ಇಡೀ ಮಾನವ ಜನಾಂಗಕ್ಕೆ ಹಾನಿಯುಂಟುಮಾಡುತ್ತದೆ. ಅದೇ ದೇಶದೇಶಗಳು ಒಗ್ಗಟ್ಟಾಗಿದ್ದಾ  ಅಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ, ಅದೇ ರೀತಿ ದೇಶಗಳ ನಡುವೆ ಒಂದು ಉತ್ತಮ ಸಂಬಂಧ ಏರ್ಪಡುತ್ತದೆ. ಜಗತ್ತಿನಲ್ಲಿ ಶಾಂತಿಯು ನೆಲೆಸುತ್ತದೆ.
ಹೀಗೆ ಜಗತ್ತಿನ ಇತಿಹಾಸವನ್ನು ಅವಲೋಕಿಸಿದಾಗ,  ಈ ಪ್ರಪಂಚದಲ್ಲಿ ನಡೆದ  ಎಲ್ಲಾ ಮಹತ್ಕಾರ್ಯಗಳು ಸಾಧ್ಯವಾದದ್ದು ದೇಶ ದೇಶಗಳ ನಡುವಿನ   ಒಗ್ಗಟ್ಟು ಮತ್ತು ಸಹಕಾರದಿಂದಲೇ ಎಂಬುದು ತಿಳಿಯುತ್ತದೆ.  ಅಲ್ಲದೆ ನಾವು ಎದುರಿಸುತ್ತಿರುವ ಹಸಿವು, ಬಡತನ, ಭಯೋತ್ಪಾದನೆ ಮತ್ತು ಅನಕ್ಷರತೆಯಂತಹ ವಿವಿಧ ಸಮಸ್ಯೆಗಳನ್ನು ಸಾಮೂಹಿಕ ಪ್ರಯತ್ನಗಳ ಮೂಲಕ  ಮಾತ್ರ ಬಗೆಹರಿಸಲು ನಾವು ಸಾಧ್ಯ.  ಹಾಗಾಗಿ ಈ   ಮಹತ್ತರ ಉದ್ದೇಶದಿಂದಾಗಿ ಅಂತರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಅಂತರಾಷ್ಟ್ರೀಯ ವಿಶೇಷ ಚೇತನರ ದಿನದ ಇತಿಹಾಸ ಏನು? 

ಅಂತರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನದ ಗುರಿ:

• ವಿವಿಧತೆಯಲ್ಲಿ ಏಕತೆಯ ಪ್ರದರ್ಶನ

• ನಾಗರಿಕರಲ್ಲಿ ಏಕತೆ ಮತ್ತು ಸಹೋದರತ್ವವನ್ನು ಹೆಚ್ಚಿಸುವುದು

• ಅಂತರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವುದು

• ಒಟ್ಟಾರೆ ಅಭಿವೃದ್ಧಿಗಾಗಿ ಪರಸ್ಪರ ಸಹಕಾರವನ್ನು ಉತ್ತೇಜಿಸುವುದು

• ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವುದು

• ಜಗತ್ತಿನಲ್ಲಿ ಶಾಂತಿಯನ್ನು ಉತ್ತೇಜಿಸುವುದು

• ಈ ಪ್ರಪಂಚವನ್ನು ಪ್ರತಿಯೊಬ್ಬರಿಗೂ ವಾಸಸಲು ಉತ್ತಮ ಸ್ಥಳವನ್ನಾಗಿ ರೂಪಿಸುವುದು

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ