ಒಂದು ದೇಶವು ಅಭಿವೃದ್ಧಿಯತ್ತ ಸಾಗುವಲ್ಲಿ ಆ ದೇಶದ ಯುವ ಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಯುವ ಶಕ್ತಿ ಎಂಬ ವಿಷಯಕ್ಕೆ ಬಂದಾಗ ನಮ್ಮ ಮನಸ್ಸಿನಲ್ಲಿ ಮೊದಲು ಬರುವುದೇ ಸ್ವಾಮಿ ವಿವೇಕಾನಂದರ ಹೆಸರು. ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದವರು. ಅವರು ತಮ್ಮ ಆಲೋಚನೆಗಳು ಮತ್ತು ಚಿಂತನೆಗಳೊಂದಿಗೆ ಯುವಕರನ್ನು ಒಗ್ಗೂಡಿಸಲು ಬಯಸಿದ್ದರು. ಅಲ್ಲದೆ ಯುವ ಪೀಳಿಗೆ ದೇಶಕ್ಕಾಗಿ ಮುನ್ನಡೆಯಬೇಕು ಎಂದು ಬಯಸಿದ್ದರು. ಅವರ ಶಿಕ್ಷಣ ಪ್ರೇಮ, ದೇಶ ಭಕ್ತಿ, ಚಿಂತನೆಗಳು ವಿಶೇಷವಾಗಿ ಯುವ ಜನರ ಮೇಲೆ ಹೆಚ್ಚು ಪ್ರಭಾವ ಬೀರಿದ್ದವು. ಇಂದಿಗೂ ಕೂಡಾ ಯುವ ಜನತೆ ಸ್ವಾಮಿ ವಿವೇಕಾನಂದರ ಸ್ಪೂರ್ತಿಯ ನೆರಳಲ್ಲಿ ಸಾಗುತ್ತಿದ್ದಾರೆ. ಇದೇ ಕಾರಣಕ್ಕಾಗಿ ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ, ಭವ್ಯ ಭಾರತದ ಹೆಮ್ಮೆಯ ಸ್ವಾಮಿ ವಿವೇಕಾನಂದರ ಜನ್ಮ ದಿನದಂದು ಪ್ರತಿವರ್ಷ ರಾಷ್ಟ್ರೀಯ ಯುವ ದಿನವನ್ನು (National Youth Day) ಆಚರಿಸಲಾಗುತ್ತದೆ.
ಒಂದು ದೇಶದ ಉತ್ತಮ ಭವಿಷ್ಯ, ಆ ದೇಶದ ಅಭಿವೃದ್ಧಿ ಯುವ ಜನತೆಯ ಮೇಲೆ ಅವಲಂಬಿತವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯುವ ಜನತೆಯು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸರಿಯಾದ ಮಾರ್ಗದರ್ಶನ, ಸ್ಪೂರ್ತಿಯನ್ನು ಪಡೆಯುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ 1984 ರಲ್ಲಿ ಭಾರತ ಸರ್ಕಾರವು ಯುವ ಜನತೆಯ ಪಾಲಿನ ಸ್ಪೂರ್ತಿಯ ಚಿಲುಮೆಯಾದ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಇದಾದ ನಂತರ 1985 ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಯುವ ದಿನವನ್ನು ಭಾರತದಾದ್ಯಂತ ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷವೂ ಭಾರತದಲ್ಲಿ ರಾಷ್ಟ್ರೀಯ ಯುವ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾ ಬರಲಾಗುತ್ತಿದೆ.
ಸ್ವಾಮಿ ವಿವೇಕಾನಂದರನ್ನು ಆಲ್ ರೌಂಡರ್ ಎಂದು ಕರೆಯಲಾಗುತ್ತದೆ. ಅವರು ಧರ್ಮ, ಆಧ್ಯಾತ್ಮ, ತತ್ವಶಾಸ್ತ್ರ, ಇತಿಹಾಸ ಕಲೆ, ಸಮಾಜ ವಿಜ್ಞಾನ ಮತ್ತು ಸಾಹಿತ್ಯದಲ್ಲಿ ಪರಿಣಿತರಾಗಿದ್ದರು. ಅಲ್ಲದೆ ಅವರು ಕ್ರೀಡೆ, ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿಯೂ ಆಳವಾದ ಆಸಕ್ತಿಯನ್ನು ಹೊಂದಿದ್ದರು. ಮುಖ್ಯವಾಗಿ ದೇಶದ ಅಭಿವೃದ್ಧಿಯು ಯುವಕರಿಂದ ಮಾತ್ರ ಎಂದು ನಂಬಿದ್ದ ವಿವೇಕಾನಂದರು ತಮ್ಮ ಆಲೋಚನೆಗಳು ಮತ್ತು ಚಿಂತನೆಗಳ ಮೂಲಕ ದೇಶವನ್ನು ಮುನ್ನಡೆಸಲು ಯುವಜನರಿಗೆ ಸ್ಪೂರ್ತಿಯನ್ನು ನೀಡಿದ್ದಾರೆ. ಇಂದಿಗೂ ಯುವ ಜನತೆ ವಿವೇಕಾನಂದರ ಸ್ಪೂರ್ತಿಯ ನೆರಳಲ್ಲಿ ಸಾಗುತ್ತಿದ್ದಾರೆ. ಇದೇ ಕಾರಣಕ್ಕಾಗಿ ಸ್ವಾಮಿ ವಿವೇಕನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.
ಇದನ್ನೂ ಓದಿ: ಅಂತರಾಷ್ಟ್ರೀಯ ಯುವ ದಿನದ ಇತಿಹಾಸ, ಪ್ರಾಮುಖ್ಯತೆ
ಒಂದು ದೇಶದ ಭವಿಷ್ಯ ಆ ದೇಶದ ಯುವ ಜನತೆಯ ಮೇಲೆ ಅವಲಂಬಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯುವಕರನ್ನು ಪ್ರೇರೇಪಿಸಲು ಸರಿಯಾದ ಮಾರ್ಗದರ್ಶನ ನೀಡುವುದು ಬಹಳ ಮುಖ್ಯವಾಗಿದೆ. ಈ ಉದ್ದೇಶಕ್ಕಾಗಿ ಸ್ವಾಮಿ ವಿವೇಕನಂದರ ಆದರ್ಶಗಳು, ಚಿಂತನೆಗಳನ್ನು ಬಿತ್ತರಿಸುವ ಮೂಲಕ ಯುವಕರಿಗೆ ಸ್ಪೂರ್ತಿ ತುಂಬಲು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಯುವ ಜನರಿಗೆ ವಿವೇಕಾನಂದರ ವಿಚಾರಧಾರೆಗಳ ಬಗ್ಗೆ ಅವರಿವು ಮೂಡಿಸುವ ಗುರಿಯನ್ನು ಹೊಂದಿದೆ.
ರಾಷ್ಟ್ರೀಯ ಯುವ ದಿನದಂದು ದೇಶಾದ್ಯಂತ ಶಾಲಾ ಕಾಲೇಜುಗಳಲ್ಲಿ ಭಾಷಣ, ಗೋಷ್ಠಿಗಳು, ಯು ಸಮ್ಮೇಳನಗಳು, ವಿಚಾರಗೋಷ್ಠಿಗಳು, ಪ್ರಬಂಧ ಬರಹ ಸೇರಿದಂತೆ ಅನೇಕ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: