World Hepatitis Day 2023: ಹೆಪಟೈಟಿಸ್ ಕಾಯಿಲೆಯನ್ನು ತಡೆಗಟ್ಟುವ ಕ್ರಮ, 5 ವಿಧದ ಹೆಪಟೈಟಿಸ್ ರೋಗಲಕ್ಷಣಗಳಾವುವು? ಇಲ್ಲಿದೆ ಮಾಹಿತಿ

ಹೆಪಟೈಟಿಸ್ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ ಮತ್ತು ಈ ಕಾಯಿಲೆಯನ್ನು ತಡೆಗಟ್ಟುವ ಕ್ರಮದ ಬಗ್ಗೆ ಇಲ್ಲಿದೆ ಮಾಹಿತಿ

World Hepatitis Day 2023: ಹೆಪಟೈಟಿಸ್ ಕಾಯಿಲೆಯನ್ನು ತಡೆಗಟ್ಟುವ ಕ್ರಮ, 5 ವಿಧದ ಹೆಪಟೈಟಿಸ್ ರೋಗಲಕ್ಷಣಗಳಾವುವು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 28, 2023 | 10:09 AM

ಹೆಪಟೈಟಿಸ್ ಯಕೃತ್ತಿನ (ಲಿವರ್) ಕಾಯಿಲೆಯಾಗಿದ್ದು, ಇದು ವೈರಲ್ ಸೋಂಕಿನಿಂದ ಹರಡುತ್ತದೆ. ಹೆಪಟೈಟಿಸ್ ಯಕೃತ್ತಿನ ಉರಿಯೂತವನ್ನು ಉಂಟುಮಾಡುತ್ತದೆ. ಹೆಪಟೈಟಿಸ್ ವೈರಸ್ ಗಳಲ್ಲಿ ಐದು ವಿಧಗಳಿವೆ. ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ. ಸಮಯಕ್ಕೆ ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಯ ಕೊರತೆಯಿಂದಾಗಿ ಹೆಪಟೈಟಿಸ್​​​ನ ಅಡ್ಡಪರಿಣಾಮಗಳಿಂದ ಯಕೃತ್ತಿನ ಕಾರ್ಯವು ಕ್ರಮೇಣ ದುರ್ಬಲಗೊಳ್ಳುತ್ತದೆ. ಪ್ರತಿ ವರ್ಷ ಲಕ್ಷಾಂತರ ಜನರು ಹೆಪಟೈಟಿಸ್ ಬಿ ಮತ್ತು ಸಿ ಗೆ ಬಲಿಯಾಗುತ್ತಾರೆ. ಹೆಪಟೈಟಿಸ್ ಒಂದು ಗಂಭೀರ ಕಾಯಿಲೆಯಾಗಿದ್ದು, ಈ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಹೆಪಟೈಟಿಸ್ ದಿನದ ಇತಿಹಾಸ:

ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಡಾ. ಬರೂಚ್ ಬ್ಲಂಬರ್ಗ್ ಅವರು ಹಪಟೈಟಿಸ್ ಬಿ ವೈರಸ್​​​ನ್ನು ಕಂಡು ಹಿಡಿದ ನಂತರ, ಇದರ ರೋಗ ನಿರ್ಣಯದ ಪರೀಕ್ಷೆ ಮತ್ತು ವೈರಸ್ ಚಿಕಿತ್ಸೆಗಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿದರು. ಡಾ. ಬ್ಲಂಬರ್ಗ್ ಅವರ ಆವಿಷ್ಕಾರದ ಗೌರವಾರ್ಥವಾಗಿ ಅವರ ಜನ್ಮದಿನವಾದ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತದೆ. ಮೊದಲ ಬಾರಿಗೆ 2008 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಹಪಟೈಟಿಸ್ ದಿನವನ್ನು ಆಚರಿಸಿತು. ಇದರ ನಂತರ ಪ್ರತಿವರ್ಷ ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಹಪಟೈಟಿಸ್ ದಿನಾಚರಣೆಯ ಉದ್ದೇಶ:

ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ ಸಾಂಕ್ರಮಿಕ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ. ಈ ರೋಗವು ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಈ ಅಪಾಯಕಾರಿ ಕಾಯಿಲೆಗೆ ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ವ್ಯಕ್ತಿಯು ಮರಣದ ಅಪಾಯ ಹೆಚ್ಚಿರುತ್ತದೆ. ಈ ಕಾಯಿಲೆಯ ಅರಿವಿನ ಕೊರತೆಯಿಂದಾಗಿ ಪ್ರತಿ ವರ್ಷ ಸಾವಿರಾರು ಜನರು ಈ ಕಾಯಿಲೆಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ 360 ಮಿಲಿಯನ್ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಈ ವರ್ಷದ ಥೀಮ್:

2023 ರಲ್ಲಿ ವಿಶ್ವ ಹೆಪಟೈಟಿಸ್ ದಿನನ ಥೀಮ್ ‘ಒಂದು ಜೀವನ, ಒಂದು ಯಕೃತ್ತು” ನಮಗೆ ಒಂದೇ ಜೀವನವಿರುವಂತಹದ್ದು ಹಾಗೂ ನಮ್ಮ ದೇಹದಲ್ಲಿ ಕೇವಲ ಒಂದು ಯಕೃತ್ತು ಇರುವಂತಹದ್ದು, ಹೆಪಟೈಟಿಸ್ ಎಂಬ ಲಿವರ್ ಸಂಬಂಧಿ ಕಾಯಿಲೆ ಈ ಎರಡನ್ನು ಹಾಳು ಮಾಡುತ್ತದೆ. ಈ ವರ್ಷದ ವಿಶ್ವ ಹೆಪಟೈಟಿಸ್ ದಿನದ ಗಮನವು ಜನರ ಒಟ್ಟಾರೆ ಯೋಗಕ್ಷೇಮಕ್ಕಾಗಿ ಆರೋಗ್ಯಕರ ಯಕೃತ್ತಿನ ಮಹತ್ವವನ್ನು ಒತ್ತಿ ಹೇಳುವುದಾಗಿದೆ.

ಹೆಪಟೈಟಿಸ್ ಸೋಂಕು ಹೇಗೆ ಹರಡುತ್ತದೆ:

ಹೆಪಟೈಟಿಸ್ ಎ ಮತ್ತು ಇ:

ಕಲುಷಿತ ನೀರು ಮತ್ತು ಅಶುಚಿಯಾದ ಆಹಾರ ಪದಾರ್ಥಗಳ ಸೇವನೆ ಹೆಪಟೈಟಿಸ್ ಎ ಮತ್ತು ಇ ಸೋಂಕು ಹರಡಲು ಮುಖ್ಯ ಕಾರಣ. ಈ ಸೋಂಕು ಹೆಪಟೈಟಿಸ್ ಬಿ ಮತ್ತು ಸಿ ಗಿಂತ ಕಡಿಮೆ ಹಾನಿಯುಂಟುಮಾಡುತ್ತದೆ. ಶುಚಿಯಾದ ಆಹಾರ ಸೇವನೆ ಮತ್ತು ಶುದ್ಧ ನೀರು ಕುಡಿಯುವ ಮೂಲಕ ಹಾಗೂ ಸರಿಯಾದ ಚಿಕಿತ್ಸೆಯನ್ನು ಪಡೆಯುವ ಮೂಲಕ ಈ ಎರಡೂ ರೋಗ ಹರಡುವುದನ್ನು ತಡೆಯಬಹುದು.

ಹೆಪಟೈಟಿಸ್ ಬಿ ಮತ್ತು ಸಿ:

ಹೆಪಟೈಟಿಸ್ ಬಿ ಮತ್ತು ಸಿ ಯಿಂದ ಗಂಭೀರ ಯಕೃತ್ತಿನ ಹಾನಿ ಉಂಟಾಗುತ್ತದೆ. ರಕ್ತ ವರ್ಗಾವಣೆ, ಸೋಂಕಿತ ವ್ಯಕ್ತಿಯ ವಸ್ತುಗಳನ್ನು ಇತರರರು ಬಳಸಿದಾಗ, ಆ ವೈರಸ್ ಇತರ ಆರೋಗ್ಯವಂತ ಜನರಿಗೂ ಭಾದಿಸಬಹುದು. ಅಲ್ಲದೆ ಸುರಕ್ಷಿತ ಲೈಂಗಿಕತೆಯಿಂದಲೂ ಈ ರೋಗ ಹರಡಬಹುದು.

ಹೆಪಟೈಟಿಸ್ ಡಿ:

ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಹೆಪಟೈಟಿಸ್ ಬಿ ಮತ್ತು ಸಿ ಯಿಂದ ಬಳಲುತ್ತಿದ್ದರೆ, ಹೆಪಟೈಟಿಸ್ ಡಿ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು. ಹೆಪಟೈಟಿಸ್ ಡಿ ಸಂದರ್ಭದಲ್ಲಿ ಯಕೃತ್ತಿನ ಉರಿಯೂತವು ದೀರ್ಘಕಾಲದವರೆಗೆ ಇರುತ್ತದೆ.

ಇದನ್ನೂ ಓದಿ: ವಿಶ್ವ ಹೆಪಟೈಟಿಸ್ ದಿನ, ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಒಂದಿಷ್ಟು ಮಾಹಿತಿ

ರೋಗ ಲಕ್ಷಣಗಳು:

ಸಾಮಾನ್ಯವಾಗಿ ಎಲ್ಲಾ ಐದು ವಿಧದ ಹೆಪಟೈಟಿಸ್ ರೋಗಲಕ್ಷಣಗಳು ಒಂದೇ ಆಗಿರುತ್ತವೆ,

• ಹೊಟ್ಟೆ ನೋವು

• ಆಗಾಗ್ಗೆ ಅಜೀರ್ಣ ಮತ್ತು ಅತಿಸಾರ

• ಜಾಂಡಿಸ್, ಚರ್ಮ, ಉಗುರುಗಳು ಮತ್ತು ಕಣ್ಣುಗಳು ಹಳದಿಗಟ್ಟುವುದು

• ವಾಕರಿಕೆ ಮತ್ತು ವಾಂತಿ

• ಹಸಿವಿನ ಕೊರತೆ ಮತ್ತು ನಿರಂತರ ತೂಕ ನಷ್ಟ

• ಸತತ ಬಿಡದೆ ಕಾಡುವ ಜ್ವರ

• ಆಯಾಸ

• ಕೀಲು ನೋವು

• ಮೂತ್ರದ ಬಣ್ಣ ಹಳದಿಯಾಗುವಂತಹದ್ದು

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು:

ಮೇಲಿನ ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಹೆಪಟೈಟಿಸ್ ಸೋಂಕಿಗೆ ಚಿಕಿತ್ಸೆ ಯಾವುವು?

ಹೆಪಟೈಟಿಸ್ ಎ ಮತ್ತು ಇ:

ಹೆಪಟೈಟಿಸ್ ಎ ಸೋಂಕಿನ ಹೆಚಿನ ಸಂದರ್ಭದಲ್ಲಿ ಸೋಂಕಿತ ವ್ಯಕ್ತಿಯ ದೇಹವು ಸ್ವಯಂ ಚೇತರಿಸಿಕೊಳ್ಳುತ್ತದೆ, ಆದರೂ ರೋಗಿಯು ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆಯನ್ನು ಪಡೆಯಬೇಕು. ಹೆಪಟೈಟಿಸ್ ಇ ಯ ಚಿಕಿತ್ಸೆಯು ಹೆಪಟೈಟಿಸ್ ಎ ನಂತೆಯೇ ಇರುತ್ತದೆ. ಆದರೆ ಹೆಪಟೈಟಿಸ್ ಇ ರೋಗದ ಅಪಾಯವು ಗರ್ಭಿಣಿಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವರು ವೈದ್ಯಕೀಯ ಮೇಲ್ವಿಚಾರಣೆಯನ್ನು ಆಗಾಗ್ಗೆ ಮಾಡುತ್ತಿರಬೇಕು.

ಹೆಪಟೈಟಿಸ್ ಬಿ ಚಿಕಿತ್ಸೆ:

ಈ ವೈರಸ್ ನ ಸೋಂಕು ದೀರ್ಘಕಾಲದ ಸೋಂಕಾಗಿಯೂ ಬದಲಾಗಬಹುದು ಮತ್ತು ಕೆಲವು ಸಂದರ್ಭದಲ್ಲಿ ಈ ಸಮಸ್ಯೆಯೂ ಜೀವನದುದ್ದಕ್ಕೂ ಕಾಡಬಹುದು. ಹೆಪಟೈಟಿಸ್ ಬಿ ಸೋಂಕು 6 ತಿಂಗಳಿಗಿಂತ ಹೆಚ್ಚು ಕಾಲ ಇದ್ದರೆ, ಅದನ್ನು ದೀರ್ಘಕಾಲದ ಹೆಪಟೈಟಿಸ್ ಬಿ ಎಂದು ಕರೆಯುತ್ತಾರೆ. ಈ ಸೋಂಕಿನ ಚಿಕಿತ್ಸೆಯಲ್ಲಿ ಚುಚ್ಚು ಮದ್ದು ಮತ್ತು ಮಾತ್ರೆಗಳನ್ನು ನೀಡಲಾಗುತ್ತದೆ. ಇದರ ಹೊರತಾಗಿಯೂ ಹೆಪಟೈಟಿಸ್ ಬಿ ಯಲ್ಲಿ ಚೇತರಿಕೆಯ ಪ್ರಮಾಣವು ತುಂಬಾ ಕಡಿಮೆಯಾಗಿರುತ್ತದೆ. ಪ್ರತಿ 3 ತಿಂಗಳಿಗೊಮ್ಮೆ ರೋಗಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಅವನು ಜೀವನದುದ್ದಕ್ಕೂ ಔಷಧಿಗಳನ್ನು ಪಡೆಯಬೇಕಾಗುತ್ತದೆ. ಅಲ್ಲದೆ ಈ ವಿಧದ ಸೋಂಕು ಲಿವರ್ ಕ್ಯಾನ್ಸರ್ ಮತ್ತು ಲಿವರ್ ಸಿರೋಸಿಸ್ ಗೆ ಕಾರಣವಾಗಬಹುದು. ಆದರೆ ಸರಿಯಾಧ ಚಿಕಿತ್ಸೆಯನ್ನು ಪಡೆಯುವ ಮೂಲಕ ಕ್ಯಾನ್ಸರ್ ಭಾದಿಸುವುದನ್ನು ತಪ್ಪಿಸಬಹುದು.

ಹೆಪಟೈಟಿಸ್ ಸಿ ಚಿಕಿತ್ಸೆ:

ಸರಿಯಾದ ವೈದ್ಯಕೀಯ ಚಿಕಿತ್ಸೆಯ ಮೂಲಕ ಈ ಸೋಂಕನ್ನು ತೊಡೆದುಹಾಕಬಹುದು. ಹೆಪಟೈಟಿಸ್ ಸಿ ಸೋಂಕಿಗೆ ಚಿಕಿತ್ಸೆ ನೀಡದೆ ಬಿಟ್ಟರೆ ಅದು ದೀರ್ಘಾವಧಿಯಲ್ಲಿ ಲಿವರ್ ಕ್ಯಾನ್ಸರ್ ಅಥವಾ ಲಿವರ್ ಸಿರೋಸಿಸ್ ಗೆ ಕಾರಣವಾಗಬಹುದು.

ಹೆಪಟೈಟಿಸ್ ಡಿ ಚಿಕಿತ್ಸೆ:

ದೇಶದಲ್ಲಿ ಕೆಲವೇ ಕೆಲವು ಹೆಪಟೈಟಿಸ್ ಡಿ ಪ್ರಕರಣಗಳು ಕಂಡುಬರುತ್ತವೆ. ಈ ಸೋಂಕಿಗೆ ಔಷಧಿಗಳ ಲಭ್ಯವಿದೆ. ವೈದ್ಯರ ಬಳಿ ಸೂಕ್ತ ಚಿಕಿತ್ಸೆಯನ್ನು ಪಡೆಯುವ ಮೂಲಕ ಈ ರೋಗವನ್ನು ತಡೆಗಟ್ಟಬಹುದು.

ಅಲ್ಲದೆ ಆರೋಗ್ಯಕರ ಆಹಾರ ಶುದ್ಧ ನೀರು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವ ಮೂಲಕ ಹೆಪಟೈಟಿಸ್ ಸೋಂಕು ಭಾದಿಸುವುದನ್ನು ತಡೆಗಟ್ಟಬಹುದು.

ಇನ್ನಷ್ಟು ಹೆಲ್ತ್​ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:05 am, Fri, 28 July 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ