ಹಿರಿಯ ವ್ಯಕ್ತಿಗಳು ಕುಟುಂಬದ ಆಧಾರ ಸ್ತಂಭ. ಜೀವನ ಪಾಠವನ್ನು ಹೇಳುವ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಹೇಳಿಕೊಡುತ್ತಾರೆ. ನಮಗೆಲ್ಲರಿಗೂ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಬದುಕಲು ಸರಿಯಾದ ದಾರಿಯನ್ನು ತೋರುವವರು ಹಿರಿಯರು. ಆದ್ದರಿಂದ ನಾವು ಅವರನ್ನು ಎಂದಿಗೂ ನಿರ್ಲಕ್ಷಿಬಾರದು. ಆದರೆ ಇಂದು ಹಿರಿಯ ವ್ಯಕ್ತಿಗಳಿಗೆ ಸರಿಯಾದ ಆರೈಕೆ ಸಿಗುತ್ತಿಲ್ಲ. ಸ್ವತಃ ಮನೆಯವರೇ ಅವರನ್ನು ವೃದ್ಧಾಶ್ರಮಕ್ಕೆ ನೂಕುತ್ತಿದ್ದಾರೆ. ಇನ್ನೂ ಹೆಚ್ಚಿನ ವೃದ್ಧರು ಮನೆಯಲ್ಲಿದ್ದರೂ ಅವರಿಗೆ ತಮ್ಮ ಮಕ್ಕಳಿಂದ ಸರಿಯಾದ ಆರೈಕೆ ಮತ್ತು ಪ್ರೀತಿ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಹಿರಿಯರನ್ನು ಪುಟ್ಟ ಮಕ್ಕಳಂತೆ ನೋಡಿಕೊಳ್ಳಬೇಕು,. ವೃದ್ಧಾಪ್ಯದಲ್ಲಿ ಅವರಿಗೆ ಸರಿಯಾದ ಪ್ರೀತಿ ಮತ್ತು ಕಾಳಜಿಯನ್ನು ತೋರಬೇಕೆಂದು ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರತಿವರ್ಷ ಅಕ್ಟೋಬರ್ 1 ರಂದು ವಿಶ್ವದಾದ್ಯಂತ ಹಿರಿಯರ ದಿನವನ್ನು ಆಚರಿಸಲಾಗುತ್ತದೆ.
ವೃದ್ಧರ ಮೇಲಿನ ದೌರ್ಜನ್ಯ ಮತ್ತು ಅನ್ಯಾಯವನ್ನು ತಡೆಯಲು ಹಾಗೂ ಸಮಾಜದಲ್ಲಿ ಅವರಿಗೆ ಸರಿಯಾದ ಸ್ಥಾನಮಾನ ಮತ್ತು ಗೌರವ ಸಿಗಬೇಕು ಎನ್ನುವ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 14 ಡಿಸೆಂಬರ್ ಅಕ್ಟೋಬರ್ 1990 ರಂದು ಹಿರಿಯರ ದಿನವನ್ನು ಆಚರಿಸಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡಿತು. ಮತ್ತು ಅಕ್ಟೋಬರ್ 1 ರಂದು ಅಂತರಾಷ್ಟ್ರೀಯ ಹಿರಿಯರ ದಿನವನ್ನು ಆಚರಿಸುವುದಾಗಿ ಘೋಷಿಸಿತು. ನಂತರ 1991, ಅಕ್ಟೋಬರ್ 1 ರಂದು ಮೊದಲ ಬಾರಿಗೆ ವಿಶ್ವ ಹಿರಿಯರ ದಿನವನ್ನು ಆಚರಿಸಲಾಯಿತು.
ಇದನ್ನೂ ಓದಿ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಇತಿಹಾಸ, ಮಹತ್ವ ಇಲ್ಲಿದೆ
ಹಿರಿಯ ವ್ಯಕ್ತಿಗಳು ಪ್ರತಿಯೊಂದು ಕುಟುಂಬದ ಆಧಾರಸ್ತಂಭವಾಗಿದ್ದು, ಜೀವನ ಪಾಠವನ್ನು ಹೇಳುವ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಹೇಳಿಕೊಡುತ್ತಾರೆ. ನಮಗೆ ಬದುಕಲು ಸರಿಯಾದ ದಾರಿಯನ್ನು ತೋರುವವರು ಹಿರಿಯರು, ಆದ್ದರಿಂದ ನಾವು ಅವರನ್ನು ಎಂದಿಗೂ ನಿರ್ಲಕ್ಷಿಬಾರದು. ಹಿರಿಯರ ಆರೋಗ್ಯ ಮತ್ತು ಆರೈಕೆಯ ಬಗ್ಗೆ ಗಮನವನ್ನು ನೀಡಬೇಕು. ಅವರಿಗಾಗಿ ಒಂದಷ್ಟು ಸಮಯವನ್ನು ಮೀಸಲಿಡಬೇಕು. ಹಾಗೂ ಹಿರಿಯರಿಗೆ ನಿಂದಿಸದೆ ಅವರನ್ನು ಗೌರವಭಾವದಿಂದ ನೋಡಿಕೊಳ್ಳಬೇಕೆಂದು ವಿಶ್ವ ಹಿರಿಯರ ದಿನದ ಮೂಲಕ ಜಾಗೃತಿಯನ್ನು ಮೂಡಿಸಲಾಗುತ್ತದೆ. ಅಲ್ಲದೆ ಈ ದಿನವು ನಮ್ಮ ಸಮಾಜಕ್ಕೆ ಹಿರಿಯರ ಕೊಡುಗೆಯನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ. ಹಿರಿಯ ವ್ಯಕ್ತಿಗಳ ಬಗ್ಗೆ ತಾರತಮ್ಯ, ಆರೈಕೆಯ ನಿರ್ಲಕ್ಷ್ಯವನ್ನು ಮತ್ತು ಅನ್ಯಾಯವನ್ನು ನಿಲ್ಲಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಅನೇಕ ಸಂಸ್ಥೆಗಳು ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಅಭಿಯಾನಗಳನ್ನು ನಡೆಸುತ್ತವೆ. ಹಾಗೂ ಈ ದಿನ ಹಿರಿಯರನ್ನು ಸಂತೋಷವಾಗಿರಿಸಲು ವೃದ್ಧಾಶ್ರಮಗಳಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ