Winter Skin Care Tips: ಚಳಿಗಾದಲ್ಲಿ ಉತ್ತಮ ತ್ವಚೆ ನಿಮ್ಮದಾಗಿಸಿಕೊಳ್ಳಬೇಕೆಂದರೆ ಈ ಆಹಾರಗಳನ್ನು ಸೇವಿಸಿ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 25, 2022 | 8:50 PM

ಪೌಷ್ಟಿಕಾಂಶ ಮತ್ತು ಹೆಚ್ಚಿನ ನೀರಿನ ಸೇವನೆಯಿಂದ ಚಳಿಗಾಲದ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎನ್ನುತ್ತಾರೆ ಚರ್ಮ ರೋಗ ತಜ್ಞರು.

Winter Skin Care Tips: ಚಳಿಗಾದಲ್ಲಿ ಉತ್ತಮ ತ್ವಚೆ ನಿಮ್ಮದಾಗಿಸಿಕೊಳ್ಳಬೇಕೆಂದರೆ ಈ ಆಹಾರಗಳನ್ನು ಸೇವಿಸಿ
ಪ್ರಾತಿನಿಧಿಕ ಚಿತ್ರ
Image Credit source: healthshots.com
Follow us on

ಚಳಿಗಾಲ (Winter) ದಲ್ಲಿ ತ್ವಚೆಯಲ್ಲಿ ಶುಷ್ಕತೆ, ಚರ್ಮ ಕಪ್ಪಾಗುವುದು ಮತ್ತು ತ್ವಚೆ (Skin) ಬಿರುಕು ಬಿಡುವುದು ಸಾಮಾನ್ಯ. ಈ ಸಮಯದಲ್ಲಿ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿ (Skin Care) ವಹಿಸಬೇಕಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಚರ್ಮವು ಹೆಚ್ಚಾಗಿ ಒಣಗುತ್ತದೆ. ಅನೇಕ ಮಹಿಳೆಯರು ಈ ಸಮಯದಲ್ಲಿ ತ್ವಚೆಯ ಆರೈಕೆಗೆ ಪಾರ್ಲರ್​​ಗೆ ಹೋಗುತ್ತಾರೆ. ಆದರೆ ಅನೇಕ ಬಾರಿ ಸಮಯದ ಕೊರತೆಯಿಂದಾಗಿ ಮಹಿಳೆಯರು ಪಾರ್ಲರ್‌ಗೆ ಹೋಗಲು ಸಾಧ್ಯವಾಗುವುದಿಲ್ಲ. ಇಂಹತ ಸಂದರ್ಭದಲ್ಲಿ ಮನೆಯಲ್ಲಿಯೇ ತ್ವಚೆಯ ಆರೈಕೆ ಮಾಡಬೇಕಾಗುತ್ತದೆ. ಚಳಿಗಾಲದಲ್ಲಿ ಉಂಟಾಗುವ ಸಮಸ್ಯೆಗಳಿಂದ ನಮ್ಮ ತ್ವಚೆ ಚೆನ್ನಾಗಿ ಕಾಣುವುದಿಲ್ಲ. ಆದರೆ ಅಂತಹ ಸಮಯದಲ್ಲಿ ನಾವು ಹೆಚ್ಚಾಗಿ ಮಾಯಿಶ್ಚರೈಸರ್‌ ಬಳಸುತ್ತೇವೆ. ಇದು ಸ್ವಲ್ಪ ಸಮಯದವರೆಗೆ ತ್ವಚೆ ಹೊಳೆಯುವಂತೆ ಮಾಡುತ್ತದೆ. ಆದರೆ ಶಾಶ್ವತವಾಗಿ ಪರಿಹಾರ ನೀಡುವುದಿಲ್ಲ. ಹಾಗಾಗಿ ಸೌಂದರ್ಯ ವರ್ಧಕಗಳ ಬದಲಾಗಿ ಆಹಾರದ ಮೂಲಕವೂ ನಾವು ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: 40 ವರ್ಷ ದಾಟಿದ ಮೇಲೆ ಏನೇನೋ ತಿನ್ಬೇಡಿ, ಆರೋಗ್ಯ ಚೆನ್ನಾಗಿರ್ಬೇಕಂದ್ರೆ ಹೀಗೆ ಮಾಡಿ

  1. ಗಜ್ಜರಿ: ಗಜ್ಜರಿ ಚಳಿಗಾಲದ ಅದ್ಭುತ ಆಹಾರವಾಗಿದೆ. ಚಳಿಗಾಲದಲ್ಲಿ ಕ್ಯಾರೆಟ್ ಸೇವನೆ ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು. ಇದು ದೇಹದಲ್ಲಿನ ವಿಷವನ್ನು ಹೊರಹಾಕುತ್ತದೆ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
  2. ಪಾಲಕ್ ಸೊಪ್ಪು: ಪಾಲಕ್ ಸೊಪ್ಪಿನಲ್ಲಿ ಇರುವ ವಿವಿಧ ವಿಟಮಿನ್​ಗಳು ಚರ್ಮವನ್ನು ಕಾಪಾಡಲು ಉಪಯುಕ್ತವಾಗಿದೆ. ತಜ್ಞರ ಪ್ರಕಾರ, ಇದರಲ್ಲಿರುವ ವಿಟಮಿನ್ ಎ ಮತ್ತು ಸಿ ಚರ್ಮದ ರಕ್ಷಣೆಗೆ ಬಹಳ ಮುಖ್ಯ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ನಿರ್ಜಲೀಕರಣ, ಉರಿಯೂತ ಮತ್ತು ವೈರಲ್ ಪರಿಣಾಮಗಳಿಂದ ಮುಕ್ತಗೊಳಿಸುತ್ತದೆ. ಪಾಲಕ್ ಸೊಪ್ಪನ್ನು ಹೆಚ್ಚು ಸೇವಿಸಿದರೆ ವಯಸ್ಸಿಗೆ ಸಂಬಂಧಿಸಿದ ಚರ್ಮದ ಸುಕ್ಕುಗಳನ್ನು ಹೋಗಲಾಡಿಸಬಹುದು.
  3. ದಾಳಿಂಬೆ: ದಾಳಿಂಬೆ ಚರ್ಮದ ಮೇಲೆ ಆಂಟಿಮೈಕ್ರೊಬಿಯಲ್ ಪರಿಣಾಮವನ್ನು ಹೊಂದಿದೆ. ಇದು ಮುಖದ ಮೇಲಿನ ಮೊಡವೆಗಳ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತ್ವಚೆಯಲ್ಲಿ ಎಣ್ಣೆಯ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
  4. ಕಿತ್ತಳೆ ಹಣ್ಣು: ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಪ್ರತಿದಿನ ಕಿತ್ತಳೆ ಹಣ್ಣು ತಿನ್ನುವುದರಿಂದ ಚರ್ಮದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ತಜ್ಞರು.
  5. ಪೇರಲೆ ಹಣ್ಣು: ಪೇರಲೆ ಬೀಜಗಳಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ. ಇದರಲ್ಲಿ ಬೀಟಾ ಕ್ಯಾರೋಟಿನ್ ಮತ್ತು ಲೈಕೋಪೀನ್ ಕೂಡ ಸಮೃದ್ಧವಾಗಿದೆ. ಚರ್ಮದ ರಕ್ಷಣೆಗೆ ಅಗತ್ಯ ಪೊಂಷಕಾಂಶಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಪೇರಲೆ ಹಣ್ಣನ್ನು ತಿನ್ನುವುದರಿಂದ ವಯಸ್ಸನಲ್ಲಿ ಉಂಟಾಗುವ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.