AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Safety: ಹೆಣ್ಣುಮಕ್ಕಳು ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡುವಾಗ ಈ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಿ

ಹೆಣ್ಣು, ಗಂಡು ಯಾರೇ ಇರಲಿ ನೈಟ್​ ಶಿಫ್ಟ್​ನಲ್ಲಿ ಕೆಲಸ ಮಾಡುವುದು ಅಷ್ಟು ಸುರಕ್ಷಿತವಲ್ಲ, ಅದರಲ್ಲೂ ಹೆಣ್ಣುಮಕ್ಕಳಂತೂ ಎಷ್ಟು ಜಾಗೃತವಾಗಿದ್ದರೂ ಸಾಲದು.

Women Safety: ಹೆಣ್ಣುಮಕ್ಕಳು ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡುವಾಗ ಈ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಿ
SafetyImage Credit source: Sayfty
TV9 Web
| Updated By: ನಯನಾ ರಾಜೀವ್|

Updated on: Sep 28, 2022 | 10:20 AM

Share

ಹೆಣ್ಣು, ಗಂಡು ಯಾರೇ ಇರಲಿ ನೈಟ್​ ಶಿಫ್ಟ್​ನಲ್ಲಿ ಕೆಲಸ ಮಾಡುವುದು ಅಷ್ಟು ಸುರಕ್ಷಿತವಲ್ಲ, ಅದರಲ್ಲೂ ಹೆಣ್ಣುಮಕ್ಕಳಂತೂ ಎಷ್ಟು ಜಾಗೃತವಾಗಿದ್ದರೂ ಸಾಲದು. ಕಚೇರಿ ಒಳಗಡೆ, ಕಚೇರಿ ಹೊರಗಡೆ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಹಲವು ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ, ಹೀಗಿರುವಾಗ ಒಂದೊಮ್ಮೆ ಹೆಣ್ಣುಮಕ್ಕಳು ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡುತ್ತಿದ್ದರೆ ಈ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು.

ಕಚೇರಿಯಿಂದ ರಾತ್ರಿ ಕೆಲಸ ಮುಗಿಸಿ ಹೊರಟರೂ ಸುರಕ್ಷಿತವಾಗಿ ಮನೆಗೆ ತಲುಪುತ್ತೇನೆ ಎನ್ನುವ ನಂಬಿಕೆ ಇಲ್ಲದಂತಹ ಸಂದರ್ಭ ಎದುರಾಗಿದೆ. ಆದರೆ ಒಂಟಿಯಾಗಿ ನೀವು ಕಚೇರಿಯಿಂದ ಪ್ರಯಾಣಿಸುತ್ತಿದ್ದರೆ ಭಯ ಪಡುವ ಅಗತ್ಯವಿಲ್ಲ, ಯಾವುದೇ ಅಪಾಯವನ್ನು ಎದುರಿಸಲು ಮಾನಸಿಕವಾಗಿ ನೀವು ಸಿದ್ಧರಾಗಿರಬೇಕಷ್ಟೆ. ಹಾಗಾಗಿ ನೀವು ಯಾವುದೇ ಸಮಸ್ಯೆಗಳು ಬಂದರೂ ತಕ್ಷಣವೇ ತಪ್ಪಿಸಬಹುದು.

ಯಾವಾಗಲೂ ಜಾಗರೂಕರಾಗಿರಿ ಆಫೀಸ್ ಕ್ಯಾಬ್‌ಗಳು ಸುರಕ್ಷಿತವೆಂದು ತೋರುತ್ತದೆಯಾದರೂ, ಯಾವಾಗಲೂ ಜಾಗರೂಕರಾಗಿರಿ. ಕ್ಯಾಬ್‌ನಲ್ಲಿ ನಿಮ್ಮ ಮೊಬೈಲ್‌ನಲ್ಲಿ ಕಳೆದುಹೋಗಬೇಡಿ, ಹೋಗುತ್ತಿರುವ ದಾರಿಯ ಮೇಲೆ ನಿಗಾ ಇರಿಸಿ ಮತ್ತು ಗೂಗಲ್​ ಮ್ಯಾಪ್ ಆನ್​ ಇಟ್ಟಿರಿ. ಕ್ಯಾಬ್‌ನಲ್ಲಿ ಮಲಗುವುದು ಸುರಕ್ಷಿತವಲ್ಲ, ಹಾಗಾಗಿ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿರಿ.

ಸ್ಪೀಡ್ ಡಯಲ್‌ನಲ್ಲಿ ತುರ್ತು ಸಂಖ್ಯೆಗಳನ್ನು ಇರಿಸಿ ಸುರಕ್ಷತೆಗಾಗಿ ಮಹಿಳಾ ಸಹಾಯವಾಣಿ ಮತ್ತು ಪೊಲೀಸ್ ಸಂಖ್ಯೆ ಹೊಂದಿರುವುದು ಬಹಳ ಮುಖ್ಯ. ಮಹಿಳಾ ಸಹಾಯವಾಣಿ ತಕ್ಷಣವೇ ರಕ್ಷಣೆ ನೀಡಬಹುದು. ಇದಲ್ಲದೆ, ನೀವು ಸ್ಪೀಡ್ ಡಯಲ್‌ನಲ್ಲಿ ಕೆಲವು ಸಂಖ್ಯೆಗಳನ್ನು ನಮೂದಿಸಬಹುದು. ಇದರಲ್ಲಿ ನಿಮ್ಮ ಆಪ್ತರು ಮತ್ತು ಕಚೇರಿಯಲ್ಲಿರುವ ಹಿರಿಯ ಮತ್ತು ಸಹಾಯಕ ಸಹೋದ್ಯೋಗಿಗಳ ಸಂಖ್ಯೆಗಳನ್ನು ನೀವು ಸೇರಿಸಬಹುದು. ಸ್ಪೀಡ್ ಡಯಲ್‌ನಲ್ಲಿ 5-6 ಸಂಖ್ಯೆಗಳು ಇರಬೇಕು.

ಈ ಸುರಕ್ಷತಾ ಸಾಧನಗಳನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ ಸುರಕ್ಷತೆಗಾಗಿ, ಕೆಲವು ಸುರಕ್ಷತಾ ಸಾಧನಗಳನ್ನು ಬಳಸಬಹುದು. ಪೇಪರ್ ಸ್ಪ್ರೇ ಮತ್ತು ಹರಿತವಾದ ಚಾಕುಗಳಂತಹ ವಸ್ತುಗಳನ್ನು ನಿಮ್ಮ ಜತೆ ಇರಿಸಿಕೊಳ್ಳಿ. ಕಚೇರಿಯಿಂದ ಹೊರಡುವ ಮೊದಲು ಮನೆಯವರಿಗೆ ಮಾಹಿತಿ ನೀಡಿ.

ಒಬ್ಬಂಟಿಯಾಗಿ ಹೋಗುವುದು ಸುರಕ್ಷಿತವಲ್ಲ

ನೀವು ಆಫೀಸ್ ಕ್ಯಾಬ್ ಇಲ್ಲದೆ ಹೋದರೆ ಒಬ್ಬರೇ ಹೋಗುವುದು ಸುರಕ್ಷಿತವಲ್ಲ. ಕುಟುಂಬದ ಸದಸ್ಯರನ್ನು ಕಚೇರಿಗೆ ಕರೆಯಲು ಪ್ರಯತ್ನಿಸಿ ಅಥವಾ ವಿಶ್ವಾಸಾರ್ಹ ಸಹೋದ್ಯೋಗಿಯೊಂದಿಗೆ ಹೋಗಿ. ಮನೆ, ಕಚೇರಿ ಎರಡರಲ್ಲೂ ಯಾರ ಜೊತೆ ಹೋದರೂ ಮಾಹಿತಿ ನೀಡಿದರೆ ಸುರಕ್ಷತೆ ಇರುತ್ತದೆ. ಒಂಟಿಯಾಗಿ ಹೋಗುವಾಗ ನಿರ್ಜನ ರಸ್ತೆಯಲ್ಲಿ ಹೋಗುವುದನ್ನು ತಪ್ಪಿಸಬೇಕು.

ಸಾಧ್ಯವಾದಷ್ಟು ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡಬೇಡಿ ರಾತ್ರಿ ಪಾಳಿ ತಪ್ಪಿಸಲು ಪ್ರಯತ್ನಿಸಿ. ನೀವು ಪ್ರತಿದಿನ ಅಸುರಕ್ಷಿತರಾಗಿದ್ದರೆ, ನಿಮ್ಮ ಸಮಸ್ಯೆಗಳನ್ನು ಕಚೇರಿಯಲ್ಲಿ ಹೇಳಿ. ರಾತ್ರಿ ಪಾಳಿಯಲ್ಲ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನೇರವಾಗಿಯೇ ಹೇಳಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?