Kannada News Lifestyle Women's Day 2025 : Best wishes, quotes to express your gratitude for the amazing women in your life Kannada News
Women’s Day 2025: ಮಹಿಳಾ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಶುಭ ಕೋರಲು ಇಲ್ಲಿದೆ ಸಂದೇಶಗಳು
ಮಾರ್ಚ್ 8 ಮಹಿಳೆಯರಿಗೆ ಮೀಸಲಾಗಿರುವ ದಿನ. ಪ್ರತಿ ವರ್ಷ ಮಾರ್ಚ್ 8 ರಂದು ಭಾರತ ಮಾತ್ರವಲ್ಲದೇ, ವಿಶ್ವದಾದಂತ್ಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಮಹಿಳೆಯರ ಕೊಡುಗೆಗಳನ್ನು ಹಾಗೂ ಅವರು ಮಾಡಿದ ಸಾಧನೆಗಳನ್ನು ಗುರುತಿಸಿ ಗೌರವಿಸುವ ದಿನವಾಗಿದೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಕುಟುಂಬಕ್ಕೆ ಸಾಕಷ್ಟು ತ್ಯಾಗಗಳನ್ನು ಮಾಡಿರುತ್ತಾಳೆ. ಅವರ ತ್ಯಾಗದ ಬಗ್ಗೆ ಯಾರು ಕೂಡ ಮಾತನಾಡುವುದೇ ಇಲ್ಲ. ತನ್ನ ಕುಟುಂಬ ಹಾಗೂ ಸಂಸಾರಕ್ಕಾಗಿ ಬದುಕನ್ನು ಸವೆಸುವ ಹೆಣ್ಣು ಮಕ್ಕಳಿಗೆ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು.
ಹೆಣ್ಣು ಇಲ್ಲದೇ ಹೋದರೆ ಸೃಷ್ಟಿಯೇ ಆಗದು. ಹಾಗಾಗಿ ಈ ಸೃಷ್ಟಿಯೇ ಹೆಣ್ಣು. ಹೆಣ್ಣೆಂಬ ಜೀವವೂ ತಾಯಿ, ಸ್ನೇಹಿತೆ, ಪತ್ನಿ, ಸಹೋದ್ಯೋಗಿ, ಮಗಳು ಹೀಗೆ ಹಲವು ಪಾತ್ರಗಳನ್ನು ನಿಭಾಯಿಸುತ್ತಾಳೆ. ಪ್ರತಿಯೊಬ್ಬರ ಜೀವನದಲ್ಲಿಯೂ ಹೆಣ್ಣಿನ ಪಾತ್ರವೂ ಅಗಾಧವಾದದ್ದು, ಹೀಗಾಗಿ ಆಕೆಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಹೌದು, ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Womens Day)ಯನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನವನ್ನು ಮಹಿಳೆಯರ ಸಾಧನೆಗಳನ್ನು ಆಚರಿಸಲು, ಮಹಿಳಾ ಸಮಾನತೆ, ಲಿಂಗ ಅಸಮಾನತೆಯ ಬಗ್ಗೆ ಜಾಗೃತಿ ಮೂಡಿಸಲು ಮೀಸಲಿಡಲಾಗಿದೆ. ಹಲವು ಪಾತ್ರದ ಮೂಲಕ ನಿಮ್ಮ ಬದುಕನ್ನು ಸುಂದರ ಮಾಡಿದ ಹೆಣ್ಣಿಗೆ ಈ ರೀತಿ ಸಂದೇಶ ಕಳುಹಿಸುವ ಮೂಲಕ ಶುಭಾಶಯ ಕೋರಬಹುದು.
ಮಹಿಳಾ ದಿನಕ್ಕೆ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು
ನಿನ್ನ ಬದುಕಿನಲ್ಲಿ ನೀನು ಬಯಸಿದ ಎಲ್ಲವೂ ಸಿಗುವಂತಾಗಲಿ, ಮಹಿಳಾ ದಿನಾಚರಣೆ ಶುಭಾಶಯಗಳು.
ನನ್ನ ಬದುಕಿಗೆ ದಿಟ್ಟ ಮಹಿಳೆಯನ್ನು ಕೊಟ್ಟಿದ್ದಕ್ಕೆ ದೇವರಿಗೆ ಧನ್ಯವಾದಗಳು ಹೇಳಲು ಬಯಸುತ್ತೇನೆ. ಮಹಿಳಾ ದಿನಾಚರಣೆ ಶುಭಾಶಯಗಳು.
ನೀನೊಂದು ಅದ್ಭುತವಾದ ವ್ಯಕ್ತಿ, ನಿನ್ನ ವ್ಯಕ್ತಿತ್ವವೇ ನಿನಗೆ ಆಭರಣ. ನನಗೆ ನೀನು ಸಿಕ್ಕಿರುವುದು ನನ್ನ ಅದೃಷ್ಟ, ನನ್ನ ಜೀವನದ ಪ್ರಮುಖ ವ್ಯಕ್ತಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
ಹೆಣ್ಣಾಗಿ ಹುಟ್ಟಿರುವುದೇ ಒಂದು ಅದೃಷ್ಟ. ಅದನ್ನು ಸಂತಸದಿಂದ ಸಂಭ್ರಮಿಸಿ. ಮಹಿಳಾ ದಿನದ ಶುಭಾಶಯಗಳು.
ತಾಯ್ತನದಿಂದ ಹಿಡಿದು ಹೆಂಡತಿಯ ತನಕ, ಸಹೋದರಿಯಿಂದ ಹಿಡಿದು ಮಗಳವರೆಗೆ ಜೀವನದ ಪ್ರತಿಯೊಂದು ಹಂತದಲ್ಲೂ ‘ಮಹಿಳೆ’ಯ ಪಾತ್ರ ಅಗಾಧ. ಆ ಜೀವವೇ ಇಲ್ಲದೇ ಹೋದರೆ ಈ ಜೀವಕ್ಕೆ ಅಸ್ತಿತ್ವವಿಲ್ಲ. ಮಹಿಳಾ ದಿನಾಚರಣೆಯ ಶುಭಾಶಯಗಳು.
ವಿದ್ಯೆಗೆ ಸರಸ್ವತಿ, ಸಂಪತ್ತಿಗೆ ಲಕ್ಷ್ಮಿ, ಶಕ್ತಿಗೆ ಪಾರ್ವತಿ, ಎಲ್ಲಕ್ಕೂ ಮಿಗಿಲಾಗಿ ಜನ್ಮ ಕೊಟ್ಟವಳು ಈ ಹೆಣ್ಣು. ಕಣ್ಣಿಗೆ ಕಾಣುವ ತ್ಯಾಗ ಮೂರ್ತಿಯೇ ಹೆಣ್ಣು. ಜೀವನದ ಎಲ್ಲಾ ಹಂತದಲ್ಲಿಯೂ ಜೊತೆ ನಿಲ್ಲುವ ಹೆಣ್ಣಿಗೆ ಕೋಟಿ ಕೋಟಿ ನಮನಗಳು, ಮಹಿಳಾ ದಿನದ ಶುಭಾಶಯಗಳು.
ತಾಯಿಯಾಗಿ, ಸಹೋದರಿಯಾಗಿ, ಮಡದಿಯಾಗಿ, ಮಗಳಾಗಿ ಹಾಗೂ ಸ್ನೇಹಿತೆಯಾಗಿ ನನ್ನ ಬದುಕಿನ ಪ್ರತಿ ಕ್ಷಣದಲ್ಲೂ ಬೆಂಬಲವಾಗಿ ನಿಂತಿದ್ದೀರಿ. ತಮ್ಮ ಈ ನಿಸ್ವಾರ್ಥ ಪ್ರೀತಿಗೆ ನಾನು ಸದಾ ಋಣಿ. ತಮಗೆಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.
ತಂದೆಗೆ ಮಗಳಾಗಿ, ಗಂಡನಿಗೆ ಬೆಳವಣಿಗೆಯಾಗಿ, ಸಹೋದರನಿಗೆ ಆಸರೆಯಾಗಿ, ಮಗುವಿಗೆ ತಾಯಿಯಾಗಿ, ಸಾಧನೆಯಲ್ಲಿ ಸ್ಫೂರ್ತಿಯಾಗಿ, ಪ್ರೇಮಿಗೆ ಪ್ರೀತಿಯಾಗಿ, ಮನೆಗೆ ಬೆಳಗುವ ಬೆಳಕಾಗಿ ಜಗತ್ತಿನ ಎಲ್ಲಾ ಮನಸ್ಸಿನ ಹೆಣ್ಣು ಮಕ್ಕಳಿಗೆ ಮಹಿಳಾ ದಿನದ ಶುಭಾಶಯಗಳು.
ಮತ್ತೊಂದು ಜೀವಕ್ಕೆ ಉಸಿರು ನೀಡುವ ಶಕ್ತಿ ಇರುವುದು ಮಹಿಳೆಗೆ ಮಾತ್ರವೇ. ಹೆಣ್ಣಾಗಿ ಹುಟ್ಟಿದ್ದಕ್ಕೆ ಖುಷಿ ಪಡಿ, ಪ್ರತಿಕ್ಷಣವನ್ನು ಹೆಮ್ಮೆಯಿಂದಲೇ ಸಂಭ್ರಮಿಸಿ, ಮಹಿಳಾ ದಿನದ ಶುಭಾಶಯಗಳು.
ನನ್ನ ಬದುಕಿಗೆ ಹೊಸ ಅರ್ಥ ನೀಡಿದ ಸುಂದರವಾದ ಶಿಲ್ಪಿ ನೀನು, ಇಂದು ನಾನು ಏನು ಆಗಿದ್ದೇನೋ ಅದಕ್ಕೆಲ್ಲಾ ನೀನೇ ಕಾರಣ. ಮಹಿಳಾ ದಿನಾಚರಣೆಯ ಶುಭಾಶಯಗಳು.
ನಾನು ಬಯಸಿದ ಎಲ್ಲಾ ಗುಣಗಳಿರುವ ಹೆಣ್ಣು ನೀನು. ಹೇಗೋ ಇದ್ದ ನನ್ನ ಬದುಕಿಗೆ ಒಂದು ಸುಂದರವಾದ ಅರ್ಥ ಕಲ್ಪಿಸಿಕೊಟ್ಟೆ, ನನ್ನ ಪ್ರತೀ ಹೆಜ್ಜೆಗೂ ಸ್ಪೂರ್ತಿ ನೀನು. ಜಗತ್ತು ಬೆಳಗುವ ಸೂರ್ಯನಂತೆ ನನ್ನ ಬಾಳು ಬೆಳಗುತ್ತಿರುವ ದೀಪ ನೀನು. ನನ್ನ ಮನದರಸಿಗೆ ಮಹಿಳಾ ದಿನಾಚರಣೆಯ ಹಾರ್ಥಿಕ ಶುಭಾಶಯಗಳು.