Betel Leaf: ವೀಳ್ಯದೆಲೆ ತಿನ್ನುವುದು ಎಷ್ಟು ಪ್ರಯೋಜನಕಾರಿ, ಆಯುರ್ವೇದ ಏನು ಹೇಳುತ್ತೆ?

| Updated By: ನಯನಾ ರಾಜೀವ್

Updated on: May 22, 2022 | 7:30 AM

Betel Leaf: ಭಾರತೀಯ ಸಂಸ್ಕೃತಿಯಲ್ಲಿ ವೀಳ್ಯದೆಲೆ(Betel Leaf)ಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಮದುವೆ, ಮುಂಜಿ ಇರಲಿ, ನಾಮಕರಣ, ಪೂಜೆ ಇರಲಿ ವೀಳ್ಯದೆಲೆ ಇಲ್ಲದೆ ಯಾವ ಶುಭ ಸಮಾರಂಭವೂ ನಡೆಯುವುದಿಲ್ಲ.

Betel Leaf: ವೀಳ್ಯದೆಲೆ ತಿನ್ನುವುದು ಎಷ್ಟು ಪ್ರಯೋಜನಕಾರಿ, ಆಯುರ್ವೇದ ಏನು ಹೇಳುತ್ತೆ?
ವೀಳ್ಯದೆಲೆ
Follow us on

ಭಾರತೀಯ ಸಂಸ್ಕೃತಿಯಲ್ಲಿ ವೀಳ್ಯದೆಲೆ(Betel Leaf)ಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಮದುವೆ, ಮುಂಜಿ ಇರಲಿ, ನಾಮಕರಣ, ಪೂಜೆ ಇರಲಿ ವೀಳ್ಯದೆಲೆ ಇಲ್ಲದೆ ಯಾವ ಶುಭ ಸಮಾರಂಭವೂ ನಡೆಯುವುದಿಲ್ಲ. ಆರನೇ ಶತಮಾನದಷ್ಟು ಹಿಂದೆಯಿದ್ದ ಸ್ಕಂದ ಪುರಾಣದಲ್ಲಿ ಹೃದಯದ ಆಕಾರದಲ್ಲಿದ್ದ ವೀಳ್ಯದೆಲೆ ಉಲ್ಲೇಖವನ್ನು ಕಾಣಬಹುದು. ಸಮುದ್ರ ಮಂಥನದ ಸಮಯದಲ್ಲಿ ದೇವತೆಗಳು ಮತ್ತು ಅಸುರರಿಂದ ಸಾಗರಗಳ ಮಂಥನದಿಂದ ಹೊರಬಂದ ವಸ್ತುಗಳಲ್ಲಿ ವೀಳ್ಯದೆಲೆ ಒಂದು ಎಂದು ಹೇಳಲಾಗುತ್ತದೆ. ಹೀಗಾಗಿಯೇ ಇದನ್ನು ತುಂಬಾ ಪೂಜ್ಯನೀಯವೆಂದು ಪರಿಗಣಿಸುತ್ತಾರೆ.

ವೀಳ್ಯದೆಲೆ ಪೈಪೆರೇಸಿಯ ಕುಟುಂಬಕ್ಕೆ ಸೇರಿದ್ದಾಗಿದೆ. ವೀಳ್ಯದೆಲೆಯನ್ನು ತಾಂಬೂಲ, ತಮಲಪಾಕು, ನಾಗವಲ್ಲಿ. ನಾಗರಬೆಲ್ ಎಂದು ಸಹ ಕರೆಯುತ್ತಾರೆ. ಆಯುರ್ವೇದವು ಧಾರ್ಮಿಕ ವೀಳ್ಯದೆಲೆಯ ಔಷಧೀಯ ಗುಣಗಳನ್ನು ಹೇಳುತ್ತದೆ.

ಕೇವಲ ಧಾರ್ಮಿಕ ಉದ್ದೇಶಕ್ಕಾಗಿ ಮಾತ್ರವಲ್ಲ, ಪಾನ್ (Paan) ಎಂದೂ ಕರೆಯಲ್ಪಡುವ ವೀಳ್ಯದೆಲೆಯನ್ನು ಊಟದ ನಂತರ ಉಪಹಾರವಾಗಿ ಬಳಸಲಾಗುತ್ತದೆ. ಪರಿಮಳಯುಕ್ತ ಸುವಾಸೆಯು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಸಹ ಕಾರ್ಯನಿರ್ವಹಿಸುತ್ತದೆ.

ಆ್ಯಂಟಿಆಕ್ಸಿಡೆಂಟ್, ಆ್ಯಂಟಿಮೈಕ್ರೊಬಿಯಲ್ ಗುಣಗಳು ವೀಳ್ಯದೆಲೆಯೊಳಗೆ ಇರುತ್ತವೆ. ಇದರ ಸೇವನೆಯಿಂದ ಕೆಮ್ಮಿನ ಸಮಸ್ಯೆಯನ್ನು ಸಹ ನಿವಾರಿಸಿಕೊಳ್ಳಬಹುದು. ಅಲ್ಲದೆ ಗಂಟಲನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು.

ವೀಳ್ಯದೆಲೆಯನ್ನು ಜಗಿಯುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ. ಇದರ ಎಲೆಗಳನ್ನು ಜಗಿದು ತಯಾರಿಸಿದ ರಸವು ಬಾಯಿಯಲ್ಲಿ ಅಡಗಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ, ಇದರಿಂದ ನೀವು ವಾಸನೆಯ ಬಗ್ಗೆ ಚಿಂತಿಸದೆ ಇತರರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಬಹುದು.
ವೀಳ್ಯದೆಲೆಯು ಒಸಡುಗಳಲ್ಲಿನ ನೋವು ಅಥವಾ ಊತವನ್ನು ಕಡಿಮೆಮಾಡಲು ಕೂಡ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಇದಕ್ಕೆ ಕಾರಣವೆಂದರೆ ಅದರೊಳಗೆ ಇಂತಹ ಅನೇಕ ಗುಣಗಳು ಕಂಡುಬರುತ್ತವೆ, ಇದು ವಸಡುಗಳಲ್ಲಿ ಉರಿಯೂತವನ್ನು ತಡೆಯಲು ಕೆಲಸ ಮಾಡುತ್ತದೆ.

ವೀಳ್ಯದೆಲೆ ಹೊಟ್ಟೆಯ ಫಿಟ್‍ನೆಸ್‍ಗೆ ತುಂಬಾ ಉತ್ತಮ. ಇದರ ನಿಯಮಿತ ಸೇವನೆಯಿಂದ ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಬಹುದು. ವೀಳ್ಯದೆಲೆ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ.

ಈ ರೋಗಗಳಿಗೆ ರಾಮಬಾಣ
ಅಸ್ತಮಾ, ಕೆಮ್ಮು, ತಲೆನೋವು (Headache), ಮೂಗು ಸೋರುವಿಕೆ, ಸಂಧಿವಾತದ ಕೀಲು ನೋವು, ಅನೋರೆಕ್ಸಿಯಾ ಇತ್ಯಾದಿಗಳ ಚಿಕಿತ್ಸೆಯಲ್ಲಿ ವೀಳ್ಯದೆಲೆಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಇದು ನೋವು, ಉರಿಯೂತ ಮತ್ತು ಊತವನ್ನು ನಿವಾರಿಸುತ್ತದೆ. ವೀಳ್ಯದ ಎಲೆಗಳು ವಿಟಮಿನ್ ಸಿ, ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್ ಮತ್ತು ಕ್ಯಾರೋಟಿನ್‌ನಂತಹ ವಿಟಮಿನ್‌ಗಳಿಂದ ತುಂಬಿವೆ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ವೀಳ್ಯದೆಲೆಯನ್ನು ಜಗಿಯುವುದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುತ್ತದೆ ಎನ್ನುವುದು ನಂಬಿಕೆ.

ಹೆಚ್ಚು ಪ್ರೋಟೀನ್ ಹೊಂದಿದೆ
ಇದು ಅಯೋಡಿನ್, ಪೊಟ್ಯಾಶಿಯಮ್, ವಿಟಮಿನ್ ಎ, ವಿಟಮಿನ್ ಬಿ 1, ವಿಟಮಿನ್ ಬಿ 2 ಮತ್ತು ನಿಕೋಟಿನಿಕ್ ಆಮ್ಲದಂತಹ ಪೋಷಕಾಂಶಗಳಿಂದ ಕೂಡಿದೆ. ಮತ್ತು ಈ ಎಲೆಗಳು ವಿಟಮಿನ್ ಸಿ, ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್ ಮತ್ತು ಕ್ಯಾರೋಟಿನ್‌ನಂತಹ ವಿಟಮಿನ್‌ಗಳಿಂದ ತುಂಬಿವೆ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ.

ವೀಳ್ಯದೆಲೆ ಅಥವಾ ಪಾನ್ ಹೆಚ್ಚಿನ ನೀರಿನ ಅಂಶ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ಕಡಿಮೆ ಪ್ರಮಾಣದ ಕೊಬ್ಬು ಮತ್ತು ಮಧ್ಯಮ ಪ್ರಮಾಣದ ಪ್ರೋಟೀನ್ ಅನ್ನು ಸಹ ಹೊಂದಿದೆ.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ