ಕೋವಿಡ್ ನಂತರ ಉದೋಗ್ಯ ಕ್ಷೇತ್ರದಲ್ಲಿ ವರ್ಕ್ ಫರ್ಮ್ ಹೋಮ್(Work From Home) ಎಂಬ ಕಾನ್ಸೆಪ್ಟ್ ಹೆಚ್ಚಾಗಿದೆ. ಇದು ಸಾಕಷ್ಟು ಉದ್ಯೋಗಿಗಳಲ್ಲಿ ಖುಷಿಯನ್ನು ತಂದುಕೊಟ್ಟಿದೆ. ಯಾಕೆಂದರೆ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವುದರಿಂದ, ಯಾವುದೇ ಭಯ ಇಲ್ಲ, ಜೊತೆಗೆ ಕೆಲಸ ಮಾಡದೇ ಒಂದಿಷ್ಟು ಹೊತ್ತು ಸಮಯ ವ್ಯರ್ಥ ಮಾಡಿದರೂ ಯಾರಿಗೂ ತಿಳಿಯುದಿಲ್ಲ ಎಂಬ ಭಾವನೆ. ಆದರೆ ಇನ್ನೂ ಮುಂದೆ ವರ್ಕ್ ಫರ್ಮ್ ಹೋಮ್ ಎಂದು ಸಮಯ ವ್ಯರ್ಥ ಮಾಡದಿರಿ, ಸಿಕ್ಕಿ ಬೀಳುವ ಸಾಧ್ಯತೆ ಹೆಚ್ಚಿದೆ. ಹೌದು ಬ್ರಿಟಿಷ್ ಕೊಲಂಬಿಯಾ ಮೂಲದ ಸಂಸ್ಥೆಯು ಮನೆಯಿಂದಲೇ ಕೆಲಸ ಮಾಡುವ ಜನರ ಮೇಲೆ ಕಣ್ಣಿಡಲು ಸಾಫ್ಟ್‌ವೇರ್ ಕಂಡು ಹಿಡಿದಿದೆ. ಜೊತೆಗೆ ಈ ಪ್ರಯತ್ನ ಈಗಾಗಲೇ ಯಶಸ್ವಿಯಾಗಿದೆ.
ಬ್ರಿಟಿಷ್ ಕೊಲಂಬಿಯಾ ಮೂಲದ ಸಂಸ್ಥೆಯು ಮನೆಯಿಂದ ಕೆಲಸ ಮಾಡುವ ಜನರ ಮೇಲೆ ಕಣ್ಣಿಡಲು ಟೈಮ್‌ಕ್ಯಾಂಪ್ ಸಾಫ್ಟ್‌ವೇರ್ ಒಂದನ್ನು ಅಭಿವೃದ್ಧಿಪಡಿಸಿದ್ದು, ವರ್ಕ್ ಫರ್ಮ್ ಹೋಮ್ ಎಂದು ಸಮಯ ವ್ಯರ್ಥ ಮಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಕೆನಡಾದ ಮಹಿಳೆಯೊಬ್ಬರು ಮನೆಯಿಂದ ಕೆಲಸದ ಸಮಯದಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಕಾರಣ ಅಕೌಂಟೆಂಟ್ ಆಗಿ ರಿಮೋಟ್ ಆಗಿ ಕೆಲಸ ಮಾಡುತ್ತಿದ್ದ ಕಾರ್ಲೀ ಬೆಸ್ಸೆ ಅವರ ಉದ್ಯೋಗದಾತರಿಗೆ ರೂ 3 ಲಕ್ಷ ಪಾವತಿಸಲು ಆದೇಶಿಸಲಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಇದಲ್ಲದೇ ಆಕೆಯನ್ನು ಕಂಪನಿಯಿಂದ ವಜಾ ಮಾಡಿದೆ.
ಇದನ್ನೂ ಓದಿ: ಪುರುಷರಿಗಿಂತ ಮಹಿಳೆಯರು 20 ನಿಮಿಷ ಹೆಚ್ಚು ನಿದ್ದೆ ಮಾಡಬೇಕಂತೆ, ಕಾರಣ ಇಲ್ಲಿದೆ
ಟೈಮ್‌ಕ್ಯಾಂಪ್ ಸಾಫ್ಟ್‌ವೇರ್ ಎಂಬುದು ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತದೆ. ಕೆಲಸದ ಸಮಯದಲ್ಲಿ ಬೆಸ್ಸೆ ಹೆಚ್ಚಾಗಿ ಕೆಲಸವನ್ನು ನಿರ್ಲಕ್ಷ್ಯಿಸುತ್ತಿದ್ದರೂ ಎಂದು ಈ ಸಾಫ್ಟ್‌ವೇರ್ ಕಂಡುಹಿಡಿದಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಆರೋಪವನ್ನು ತಳ್ಳಿಹಾಕಿದ ಮಹಿಳೆ, ಸಾಫ್ಟ್‌ವೇರ್ ತನ್ನ ಕೆಲಸ ಮತ್ತು ವೈಯಕ್ತಿಕ ಸಮಯದ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಗುರುತಿಸಲಿಲ್ಲ ಎಂದು ಹೇಳಿದ್ದಾಳೆ. ಜೊತೆಗೆ ಯಾವುದೇ ಪೂರ್ವ ಸೂಚನೆ ನೀಡದೇ ನನ್ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆಕೆ ಹೇಳಿಕೆ ನೀಡಿದ್ದಾಳೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:54 pm, Tue, 17 January 23