ಜಗತ್ತಿನಲ್ಲಿ ಮೊದಲ ಏಡ್ಸ್ ಪ್ರಕರಣ ವರದಿಯಾಗಿ ಇಂದಿಗೆ (ಡಿಸೆಂಬರ್ 01) 40 ವರ್ಷಗಳು ಕಳೆದಿವೆ. ಆದರೆ ಇನ್ನೂ ಕೂಡ ಈ ಕಾಯಿಲೆ ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಈ ಬಗ್ಗೆ ಸದಾ ಎಚ್ಚರ ವಹಿಸಿದ್ದು, 2030 ರ ವೇಳೆಗೆ ಏಡ್ಸ್ ಅನ್ನು ಕೊನೆಗೊಳಿಸಲು ಸರ್ಕಾರದೊಂದಿಗೆ ವೈದ್ಯರು ಮತ್ತು ಸಂಸ್ಥೆಗಳು ಬದ್ಧವಾಗಿವೆ. ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು (World AIDS Day 2021) ಆಚರಿಸಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್‌ಐವಿ ಕುರಿತು ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗಿತ್ತದೆ.
ಏಡ್ಸ್ ರೋಗಲಕ್ಷಣಗಳು
ಹೆಚ್‌ಐವಿಯಲ್ಲಿ ಹಲವಾರು ರೋಗಲಕ್ಷಣಗಳಿವೆ ಮತ್ತು ಈ ಕಾಯಿಲೆಗೆ ಗುರಿಯಾದ ಎಲ್ಲರೂ ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಪ್ರತಿ ವ್ಯಕ್ತಿಯು ಎದುರಿಸುವ ರೋಗಲಕ್ಷಣಗಳು ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಅವರಿಗೆ ಇರುವ ರೋಗದ ಹಂತವನ್ನು ಅವಲಂಬಿಸಿರುತ್ತದೆ. ಕೆಲವು ಸಾಮಾನ್ಯ ರೋಗಲಕ್ಷಣಗಳು ಎಂದರೆ ಜ್ವರ, ಶೀತ, ದದ್ದುಗಳು, ಸ್ನಾಯು ನೋವು, ಗಂಟಲು ನೋವು ಮತ್ತು ಬಾಯಿ ಹುಣ್ಣುಗಳನ್ನು ಒಳಗೊಂಡಿರುತ್ತದೆ. ಈ ರೋಗಲಕ್ಷಣಗಳು ಕೆಲವು ದಿನಗಳಿಂದ ವಾರಗಳವರೆಗೆ ಇರುತ್ತದೆ. ಇನ್ನೂ ಕೆಲವರಿಗೆ ಹೆಚ್‌ಐವಿಯ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.
ಏಡ್ಸ್ ಗಾಳಿಯ ಮೂಲಕ ಹರಡಬಹುದು ಎಂದು ಹಲವರು ಭಾವಿಸುತ್ತಾರೆ. ಆದಾಗ್ಯೂ, ರಕ್ತ, ವೀರ್ಯ, ಗುದನಾಳದ ದ್ರವ, ಯೋನಿ ದ್ರವಗಳು ಮತ್ತು ಎದೆ ಹಾಲಿನಂತಹ ಕೆಲವು ದೇಹದ ದ್ರವಗಳೊಂದಿಗೆ ನೇರ ಸಂಪರ್ಕದ ಮೂಲಕ ಹೆಚ್‌ಐವಿ ಹರಡುತ್ತದೆ ಎಂದು ತಿಳಿಸುವುದು ಮುಖ್ಯವಾಗಿದೆ. ಯಾವುದೇ ಹೆಚ್ಐವಿ ಲಕ್ಷಣಗಳಿಲ್ಲದ ಅಥವಾ ಆರೋಗ್ಯ ವ್ಯಕ್ತಿಯ ರಕ್ತಪ್ರವಾಹಕ್ಕೆ ಹೆಚ್‌ಐವಿ ಇರುವ ವ್ಯಕ್ತಿಯಿಂದ ದ್ರವದ ರೂಪದಲ್ಲಿ ಕಾಯಿಲೆ ಹರಡುತ್ತದೆ. ಇದು ಬಾಯಿ, ಯೋನಿ, ಚುಚ್ಚುಮದ್ದಿನ ಮೂಲಕ ಹರಡುತ್ತದೆ.
ಏಡ್ಸ್ಗೆ ಚಿಕಿತ್ಸೆಗಳು
ಒಟ್ಟಾರೆ ಹೆಚ್ಐವಿ ಸೋಂಕು ಒಮ್ಮೆ ದೇಹದಲ್ಲಿ ಸೇರಿದರೆ ಅದು ಹಾಗೆ ಇರುತ್ತದೆ. ಆದರೆ ಆಂಟಿರೆಟ್ರೋವೈರಲ್ ಚಿಕಿತ್ಸೆಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ, ಸೋಂಕಿನ ಪರಿಣಾಮ ಹೆಚ್ಚಾಗುತ್ತದೆ ಮತ್ತು ಹೆಚ್ಐವಿ ಪುನಃ ಸಿಡಿ4 ಜೀವಕಣಗಳ ಮೇಲೆ ಆಕ್ರಮಣವನ್ನು ಪ್ರಾರಂಭಿಸಿ ದೇಹವನ್ನು ಕುಗ್ಗಿಸುತ್ತದೆ.
ಇದನ್ನೂ ಓದಿ:
World AIDS Vaccine Day 2021: ಹೆಚ್ಐವಿ ಏಡ್ಸ್ಗೆ ತಿರುಗದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ?
ಇಂದು ವಿಶ್ವ ಏಡ್ಸ್ ದಿನ: ಮಿಥ್ಯೆಗಳಿಂದ ದೂರವಿರಿ, ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿ