World Biriyani Day 2024: ಪನೀರ್ ಬಿರಿಯಾನಿ ಈ ರೀತಿ ಮಾಡಿ ತೂಕ ಕಡಿಮೆ ಮಾಡಿಕೊಳ್ಳಿ

ವಿವಿಧ ರೀತಿಯ ಬಿರಿಯಾನಿಗಳಿವೆ, ಬೇಯಿಸುವ ವಿಧಾನ ಅಥವಾ ರುಚಿ ಭಿನ್ನವಾಗಿರಬಹುದು. ಪ್ರದೇಶಗಳಿಗೆ ಅನುಗುಣವಾಗಿ ಇದು ಬದಲಾಗಬಹುದು ಆದರೆ ಅದರ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ. ವಿವಿಧ ರೀತಿಯ ಬಿರಿಯಾನಿಗಳಲ್ಲಿ ಉತ್ತಮ ಮತ್ತು ಸ್ವಾದಿಷ್ಟಕರವಾದ ಪನೀರ್ ಬಿರಿಯಾನಿ ಸವಿಯಬೇಕು ಎಂದು ಅಂದುಕೊಂಡಿದ್ದರೆ ನೀವು ಉಡುಪಿ ಮತ್ತು ಬೆಂಗಳೂರು ಕಡೆಗಳಲ್ಲಿ ಸವಿಯಬಹುದು ಅದರ ಹೊರತಾಗಿ ಮನೆಯಲ್ಲಿಯೇ ಕುಳಿತು ಸರಳವಾಗಿ ಇದನ್ನು ಮಾಡಬಹುದು. ಇನ್ನೇಕೆ ತಡ, ಇಂದು ಬಿರಿಯಾನಿ ಡೇ. ಈ ಪಾಕವಿಧಾನ ಪ್ರಯತ್ನಿಸಲು ಬೇರೆ ದಿನ ಬೇಕಿಲ್ಲ. ಇದನ್ನು ಟ್ರೈ ಮಾಡಿ ಬಿರಿಯಾನಿಯನ್ನು ಸವಿಯಿರಿ.

World Biriyani Day 2024: ಪನೀರ್ ಬಿರಿಯಾನಿ ಈ ರೀತಿ ಮಾಡಿ ತೂಕ ಕಡಿಮೆ ಮಾಡಿಕೊಳ್ಳಿ
World Biriyani Day 2024
Follow us
| Updated By: ಅಕ್ಷತಾ ವರ್ಕಾಡಿ

Updated on:Jul 07, 2024 | 9:40 AM

ಭಾರತದಾದ್ಯಂತ ವಿವಿಧ ರೀತಿಯ ಬಿರಿಯಾನಿಗಳಿವೆ, ಬೇಯಿಸುವ ವಿಧಾನ ಅಥವಾ ರುಚಿ ಭಿನ್ನವಾಗಿರಬಹುದು. ಪ್ರದೇಶಗಳಿಗೆ ಅನುಗುಣವಾಗಿ ಇದು ಬದಲಾಗಬಹುದು ಆದರೆ ಅದರ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ. ವಿವಿಧ ರೀತಿಯ ಬಿರಿಯಾನಿಗಳಲ್ಲಿ ಉತ್ತಮ ಮತ್ತು ಸ್ವಾದಿಷ್ಟಕರವಾದ ಪನೀರ್ ಬಿರಿಯಾನಿ ಸವಿಯಬೇಕು ಎಂದು ಅಂದುಕೊಂಡಿದ್ದರೆ ನೀವು ಉಡುಪಿ ಮತ್ತು ಬೆಂಗಳೂರು ಕಡೆಗಳಲ್ಲಿ ಸವಿಯಬಹುದು ಅದರ ಹೊರತಾಗಿ ಮನೆಯಲ್ಲಿಯೇ ಕುಳಿತು ಸರಳವಾಗಿ ಇದನ್ನು ಮಾಡಬಹುದು. ಇನ್ನೇಕೆ ತಡ, ಇಂದು ಬಿರಿಯಾನಿ ಡೇ. ಈ ಪಾಕವಿಧಾನ ಪ್ರಯತ್ನಿಸಲು ಬೇರೆ ದಿನ ಬೇಕಿಲ್ಲ. ಇದನ್ನು ಟ್ರೈ ಮಾಡಿ ಬಿರಿಯಾನಿಯನ್ನು ಸವಿಯಿರಿ.

ಬೇಕಾಗುವ ಸಾಮಗ್ರಿಗಳು:

ಮಸಾಲೆಗಾಗಿ:

  • 1 ಕಪ್ ದಪ್ಪ ಮೊಸರು
  • 1 ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  • ¼ ಟೀ ಸ್ಪೂನ್ ಅರಿಶಿನ
  • ¾ ಟೀ ಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
  • 2 ಟೀ ಸ್ಪೂನ್ ಬಿರಿಯಾನಿ ಮಸಾಲ
  • 2 ಟೀ ಸ್ಪೂನ್ ಕೊತ್ತಂಬರಿ ಸೊಪ್ಪು, ನುಣ್ಣಗೆ ಕತ್ತರಿಸಿ
  • 2 ಟೀ ಸ್ಪೂನ್ ಪುದೀನ
  • 1 ಟೀ ಸ್ಪೂನ್ ಎಣ್ಣೆ
  • 1 ಟೀ ಸ್ಪೂನ್ ನಿಂಬೆ ರಸ
  • 1 ಟೀ ಸ್ಪೂನ್ ಉಪ್ಪು
  • 15 ಪೀಸ್ ಪನೀರ್ / ಕಾಟೇಜ್ ಚೀಸ್
  • ½ ಈರುಳ್ಳಿ
  • ½ ಕ್ಯಾಪ್ಸಿಕಂ

ಅನ್ನಕ್ಕಾಗಿ:

  • 6 ಕಪ್ ನೀರು
  • 2 ಏಲಕ್ಕಿ
  • 4 ಲವಂಗ
  • 1 ಇಂಚಿನ ದಾಲ್ಚಿನ್ನಿ
  • 2 ಪಲಾವ್ ಎಲೆ
  • 1 ಟೀ ಸ್ಪೂನ್ ಮೆಣಸು
  • 1 ಟೀ ಸ್ಪೂನ್ ಉಪ್ಪು
  • 2 ಟೀ ಸ್ಪೂನ್ ಎಣ್ಣೆ
  • 1 ಮೆಣಸಿನಕಾಯಿ
  • 1 ಕಪ್ ಬಾಸ್ಮತಿ ಅಕ್ಕಿ, 20 ನಿಮಿಷ ನೆನೆಸಿಡಿ

ಬಿರಿಯಾನಿಗಾಗಿ:

  • 2 ಟೀ ಸ್ಪೂನ್ ಎಣ್ಣೆ
  • 1 ಟೀ ಸ್ಪೂನ್ ತುಪ್ಪ
  • 2 ಪಲಾವ್ ಎಲೆ
  • 1 ಸ್ಟಾರ್ ಸೋಂಪು
  • 1 ಕಪ್ಪು ಏಲಕ್ಕಿ
  • 2 ಏಲಕ್ಕಿ
  • 1 ಟೀಸ್ಪೂನ್ ಷಾ ಜೀರಾ
  • ½ ಈರುಳ್ಳಿ
  • 1 ಟೊಮೆಟೊ, ನುಣ್ಣಗೆ ಕತ್ತರಿಸಿ
  • 2 ಟೀ ಸ್ಪೂನ್ ಕೊತ್ತಂಬರಿ ಸೊಪ್ಪು, ಕತ್ತರಿಸಿದ
  • 2 ಟೀಸ್ಪೂನ್ ಪುದೀನ ಕತ್ತರಿಸಿದ
  • 2 ಟೀ ಸ್ಪೂನ್ ಹುರಿದ ಈರುಳ್ಳಿ
  • ಸ್ವಲ್ಪ ಬಿರಿಯಾನಿ ಮಸಾಲ
  • 2 ಟೀ ಸ್ಪೂನ್ ಕೇಸರಿ ಹಾಲು
  • 1 ಟೀ ಸ್ಪೂನ್ ತುಪ್ಪ
  • ½ ಕಪ್ ನೀರು

ಮಾಡುವ ವಿಧಾನ:

ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ 1 ಕಪ್ ಮೊಸರು, 1 ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ¼ ಟೀ ಸ್ಪೂನ್ ಅರಿಶಿನ, ¾ ಟೀ ಸ್ಪೂನ್ ಮೆಣಸಿನ ಪುಡಿ ಮತ್ತು 2 ಟೀ ಸ್ಪೂನ್ ಬಿರಿಯಾನಿ ಮಸಾಲಾ ತೆಗೆದುಕೊಳ್ಳಿ. 2 ಟೀ ಸ್ಪೂನ್ ಕೊತ್ತಂಬರಿ ಸೊಪ್ಪು, 2 ಟೀ ಸ್ಪೂನ್ ಪುದೀನ, 1 ಟೀ ಸ್ಪೂನ್ ಎಣ್ಣೆ, 1 ಟೀ ಸ್ಪೂನ್ ನಿಂಬೆ ರಸ ಮತ್ತು 1 ಟೀ ಸ್ಪೂನ್ ಉಪ್ಪು ಸೇರಿಸಿ. ಮಸಾಲೆಗಳು ಚೆನ್ನಾಗಿ ಕಲಸಿ. ಇದಕ್ಕೆ 15 ಪೀಸ್ ಪನೀರ್, ಈರುಳ್ಳಿ ಮತ್ತು ½ ಕ್ಯಾಪ್ಸಿಕಂ ಸೇರಿಸಿ ಎಲ್ಲವನ್ನೂ ನಿಧಾನವಾಗಿ ಮಿಶ್ರಣ ಮಾಡಿ. 30-60 ನಿಮಿಷಗಳ ಕಾಲ ಕವರ್ ಮಾಡಿ ಮತ್ತು ಮ್ಯಾರಿನೇಟ್ ಮಾಡಿ.

ಬಿರಿಯಾನಿಗೆ ಅನ್ನ ತಯಾರು ಮಾಡುವ ವಿಧಾನ:

ಮೊದಲನೆಯದಾಗಿ, ದೊಡ್ಡ ಪಾತ್ರೆಯಲ್ಲಿ 6 ಕಪ್ ನೀರನ್ನು ತೆಗೆದುಕೊಳ್ಳಿ. 2 ಏಲಕ್ಕಿ, 4 ಲವಂಗ, 1 ಇಂಚಿನ ದಾಲ್ಚಿನ್ನಿ, 2 ಪಲಾವ್ ಎಲೆ, ½ ಟೀ ಸ್ಪೂನ್ ಮೆಣಸು ಮುಂತಾದ ಮಸಾಲೆ ಸೇರಿಸಿ. 1 ಟೀ ಸ್ಪೂನ್ ಉಪ್ಪು, 2 ಟೀ ಸ್ಪೂನ್ ಎಣ್ಣೆ ಮತ್ತು 1 ಮೆಣಸಿನಕಾಯಿ ಸೇರಿಸಿ. 2 ನಿಮಿಷಗಳ ಕಾಲ ಅಥವಾ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ಬಳಿಕ 1 ಕಪ್ ಬಾಸ್ಮತಿ ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಕಲಕಿ. 3 ನಿಮಿಷ ಕುದಿಸಿ ಅಥವಾ ಅಕ್ಕಿ ಅರ್ಧ ಬೇಯಿಸಿ ಅನ್ನದ ನೀರನ್ನು ತೆಗೆದು ಪಕ್ಕಕ್ಕೆ ಇರಿಸಿ.

ಪನೀರ್ ಬಿರಿಯಾನಿ ಮಾಡುವ ವಿಧಾನ:

ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 2 ಟೀ ಸ್ಪೂನ್ ಎಣ್ಣೆ ಮತ್ತು 1 ಟೀ ಸ್ಪೂನ್ ತುಪ್ಪವನ್ನು ಹಾಕಿ ಬಿಸಿ ಮಾಡಿ. 2 ಪಲಾವ್ ಎಲೆ, 1 ಸ್ಟಾರ್ ಸೋಂಪು, 2 ಏಲಕ್ಕಿ ಮತ್ತು 1 ಟೀ ಸ್ಪೂನ್ ಷಾ ಜೀರಾ ಹಾಕಿ ಹುರಿದುಕೊಳ್ಳಿ. ನಂತರ ಈರುಳ್ಳಿ ಸೇರಿಸಿ ಗೋಲ್ಡನ್ ಕಲರ್ ಆಗುವವರೆಗೆ ಹುರಿದುಕೊಳ್ಳಿ. ಬಳಿಕ 1 ಟೊಮೆಟೊ ಸೇರಿಸಿ, ಮೃದು ಮತ್ತು ಮೆತ್ತಗಾಗುವವರೆಗೆ ಮತ್ತೆ ಫ್ರೈ ಮಾಡಿ. ಮ್ಯಾರಿನೇಡ್ ಮಾಡಿಟ್ಟುಕೊಂಡ ಪನೀರ್ ಸೇರಿಸಿ ಮಿಶ್ರಣವನ್ನು ಚೆನ್ನಾಗಿ ಕಲಸಿ. ಇದು ಎಣ್ಣೆ ಬಿಟ್ಟ ನಂತರ ಅರ್ಧ ಬೆಯಿಸಿದ ಅನ್ನವನ್ನು ನಿಧಾನವಾಗಿ ಹರಡಿ. 2 ಟೀ ಸ್ಪೂನ್ ಕೊತ್ತಂಬರಿ ಸೊಪ್ಪು, 2 ಟೀ ಸ್ಪೂನ್ ಪುದೀನ ಮತ್ತು 2 ಟೀ ಸ್ಪೂನ್ ಹುರಿದ ಈರುಳ್ಳಿಯನ್ನು ಅದರ ಮೇಲೆ ಹಾಕಿ. ಬಿರಿಯಾನಿ ಮಸಾಲಾ ಸೇರಿಸಿ, 2 ಟೀ ಸ್ಪೂನ್ ಕೇಸರಿ ಹಾಲು, 1 ಟೀ ಸ್ಪೂನ್ ತುಪ್ಪ ಮತ್ತು ¼ ಕಪ್ ನೀರು ಸಿಂಪಡಿಸಿ. ಅಲ್ಯೂಮಿನಿಯಂ ಫಾಯಿಲ್ನಿಂದ ಮುಚ್ಚಿ ಮತ್ತು ಮುಚ್ಚಳವನ್ನೂ ಮುಚ್ಚಿ. 20 ನಿಮಿಷಗಳ ಕಾಲ ಅಥವಾ ಅಕ್ಕಿ ಸಂಪೂರ್ಣವಾಗಿ ಬೆಂದ ಮೇಲೆ ಬಿಸಿಬಿಸಿಯಾಗಿ ಸಲಾಡ್ ನೊಂದಿಗೆ ಸವಿಯಿರಿ.

ಇದನ್ನೂ ಓದಿ: ತಲಚೇರಿ ಚಿಕನ್ ಬಿರಿಯಾನಿ, ಮಾಡೋದು ಹೇಗೆ?

ಪನೀರ್ ಬಿರಿಯಾನಿ ಆರೋಗ್ಯ ಪ್ರಯೋಜನಗಳೇನು?

ಬೆಳಗಿನ ಸಮಯದಲ್ಲಿ ಪನೀರ್ ಅಥವಾ ಅದನ್ನು ಸೇರಿಸಿದ ಆಹಾರವನ್ನು ಸೇವನೆ ಮಾಡುವುದರಿಂದ ಇಡೀ ದಿನ ಹೊಟ್ಟೆ ಹಸಿವೆಯಾಗದಂತೆ ದೇಹಕ್ಕೆ ಪುಷ್ಟಿ ದೊರಕುತ್ತದೆ. ಹಾಗಾಗಿ ಪನೀರ್ ಅನ್ನು ಉಪಾಹಾರ ಅಥವಾ ಊಟದೊಂದಿಗೆ ಸವಿಯಬಹುದಾಗಿದೆ. ಅದರಲ್ಲಿಯೂ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದುಕೊಳ್ಳುವವರಿಗೆ ಇದೊಂದು ಅತ್ಯುತ್ತಮವಾದ ಆಹಾರ ಎಂದು ಹೇಳಬಹುದು. ಹಾಗಾಗಿ ಬಿರಿಯಾನಿಗಳಲ್ಲಿ ಪನ್ನೀರ್ ಅನ್ನು ಸೇರಿಸುವುದರಿಂದ ರುಚಿಯೂ ಸಿಗುತ್ತದೆ ಜೊತೆಗೆ ಆರೋಗ್ಯ ಪ್ರಯೋಜನಗಳು ಕೂಡ ಲಭ್ಯವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:40 am, Sun, 7 July 24

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ