ಇತ್ತೀಚಿನ ವರ್ಷಗಳಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ದೂರವಾಣಿಗಳಂತಹ ಆಧುನಿಕ ಮಾಹಿತಿ ತಂತ್ರಜ್ಞಾನಗಳು ಜಗತ್ತಿನಲ್ಲಿ ನಡೆಯುವ ಸಮಸ್ಯೆಗಳು ಹಾಗೂ ಘಟನೆಗಳ ಬಗ್ಗೆ ಜನರನ್ನು ಎಚ್ಚರಿಸುವಲ್ಲಿ ಮತ್ತು ವ್ಯಾಪಾರ ಮತ್ತು ಅಭಿವೃದ್ಧಿ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಅಂದು ವಿವಿಧ ರಾಷ್ಟ್ರಗಳಲ್ಲಿ ಅಭಿವೃದ್ಧಿಯ ಸುತ್ತಲಿನ ಸಮಸ್ಯೆಗಳು ಮತ್ತು ಅವುಗಳನ್ನು ನಿವಾರಿಸುವ ಸಲುವಾಗಿ ವಿಶ್ವ ಅಭಿವೃದ್ಧಿ ಮಾಹಿತಿ ದಿನವು ಹುಟ್ಟಿಕೊಂಡಿತು. ಹೀಗಾಗಿ ಪ್ರತಿ ವರ್ಷ ಅಕ್ಟೋಬರ್ 24 ರಂದು ವಿಶ್ವ ಅಭಿವೃದ್ಧಿ ಮಾಹಿತಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವ ಸಂಸ್ಥೆಯ ದಿನದಂದೇ ಅಂದರೆ ಅಕ್ಟೋಬರ್ 24ರಂದು ವಿಶ್ವ ಅಭಿವೃದ್ಧಿ ದಿನಾಚರಣೆಯನ್ನು ಕೂಡ ಆಚರಿಸಬೇಕು ಎಂದು 1972ರಲ್ಲಿ ನಿರ್ಧರಿಸಿತು. ಪ್ರತಿ ವರ್ಷ ಸಮಸ್ಯೆಗಳು ಅಭಿವೃದ್ಧಿ ಹೊಂದುತ್ತಿರುವುದರಿಂದ ಸಾರ್ವಜನಿಕರ ಅಭಿಪ್ರಾಯಗಳನ್ನು ಗಮನ ಸೆಳೆಯುವ ಉದ್ದೇಶ ಕೂಡ ಜನರಲ್ ಅಸ್ಲೆಂಬಿಯದಾಗಿತ್ತು. ಅವುಗಳನ್ನು ಬಗೆಹರಿಸಲು ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸುವುದು ಬಹಳ ಅಗತ್ಯವಾಗಿತ್ತು. ಈ ಸಮಸ್ಯೆಗಳನ್ನು ಬಗೆಹರಿಸಲು ದಾರಿಗಳನ್ನು ಕಂಡುಕೊಳ್ಳುವುದಕ್ಕಾಗಿ ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿತ್ತು. ಹೀಗಾಗಿ ವಿಶ್ವ ಅಭಿವೃದ್ಧಿ ಮಾಹಿತಿ ದಿನವನ್ನು ಅಕ್ಟೋಬರ್ 24, 1973ರಲ್ಲಿ ಪ್ರಥಮ ಬಾರಿಗೆ ಆಚರಿಸಲಾಯಿತು. ಆದಾದ ಬಳಿಕ ಪ್ರತಿ ವರ್ಷ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ವಿವಿಧ ರಾಷ್ಟ್ರಗಳಲ್ಲಿ ಅಭಿವೃದ್ಧಿಯ ಸುತ್ತಲಿನ ಸಮಸ್ಯೆಗಳು ಮತ್ತು ಅವುಗಳನ್ನು ನಿವಾರಿಸಲು ಪರಿಹಾರಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಇಂದಿಗೂ ಸಹ, ಅಭಿವೃದ್ಧಿ ಸಮಸ್ಯೆಗಳನ್ನು ಪರಿಹರಿಸುವ, ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸುವ ಮತ್ತು ವಿಶ್ವ ಸಾರ್ವಜನಿಕ ಅಭಿಪ್ರಾಯದ ಗಮನವನ್ನು ಸೆಳೆಯುವ ಉದ್ದೇಶದಿಂದ ಈ ದಿನವು ಮಹತ್ವದಾಗಿದೆ. ವಿವಿಧ ದೇಶಗಳಲ್ಲಿ, ವ್ಯಾಪಾರ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸರ್ಕಾರಗಳು ಮತ್ತು ಸಂಸ್ಥೆಗಳು ಈ ವಿಶೇಷ ದಿನದಂದು ಮಾಧ್ಯಮಗಳಲ್ಲಿ ಜಾಹೀರಾತುಗಳ ಮೂಲಕ ಜನರಿಗೆ ಅನೇಕ ಮಾಹಿತಿಯನ್ನು ಒದಗಿಸುತ್ತವೆ. ವಿಚಾರ ಸಂಕಿರಣಗಳು ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ.
ಇದನ್ನೂ ಓದಿ: ನಿಮ್ಮ ತುಟಿಗಳ ಆಕಾರವು ಬಿಚ್ಚಿಡುತ್ತೆ ನಿಮ್ಮ ವ್ಯಕ್ತಿತ್ವ, ತುಟಿ ನೋಡಿಯೇ ಸ್ವಭಾವ ತಿಳಿಯಿರಿ
ಇಂದು ನಾವು ನೀವುಗಳು ಅಭಿವೃದ್ಧಿಯತ್ತ ಸಾಗುತ್ತಿದ್ದೇವೆ. ಹೀಗಾಗಿ ಕಾಲಕ್ಕೆ ತಕ್ಕಂತೆ ಸಾಕಷ್ಟು ಬದಲಾಗಿದೆ. ಮೊಬೈಲ್, ಇಂಟರ್ ನೆಟ್ ಮತ್ತಿತರ ಸಂವಹನ ಕ್ರಾಂತಿಗಳು ತನ್ನ ಆಯಾಮಗಳನ್ನು ವಿಸ್ತರಿಸಿಕೊಂಡಿದ್ದು, ಇದೀಗ ಅವುಗಳ ಮೂಲಕ ಜನರಿಗೆ ತ್ವರಿತ ಮಾಹಿತಿ ತಲುಪಿಸಲಾಗುತ್ತಿದೆ. ಈ ಆಧುನಿಕ ಮಾಹಿತಿ ತಂತ್ರಜ್ಞಾನಗಳು ಜನರನ್ನು ಎಚ್ಚರಿಸುವಲ್ಲಿ ಮತ್ತು ವ್ಯಾಪಾರ ಮತ್ತು ಅಭಿವೃದ್ಧಿ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ