Appple Jilebi Recipe : ಬಾಯಲ್ಲಿ ನೀರೂರಿಸುವ ಸೇಬು ಜಿಲೇಬಿ, ಇಲ್ಲಿದೆ ಸುಲಭ ಪಾಕವಿಧಾನ

ಸಿಹಿ ತಿಂಡಿ ಅಂದರೆ ಯಾರಿಗೆ ತಾನೇ ಇಷ್ಟ ಹೇಳಿ, ಕೆಲವರಂತೂ ಬೆಳಗ್ಗೆ ಎದ್ದ ಕೂಡಲೇ ಸಿಹಿ ತಿನಿಸುಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅದರಲ್ಲಿಯು ಈ ಜಿಲೇಬಿ ಬಹುತೇಕರ ಫೇವರಿಟ್ ತಿನಿಸುಗಳಾಗಿ ಒಂದಾಗಿದ್ದು, ಇದನ್ನು ಎಲ್ಲರೂ ಸವಿದಿರುತ್ತಾರೆ. ಆದರೆ ಗರಿಗರಿಯಾದ ಸೇಬು ಜಿಲೇಬಿಯನ್ನು ತಿಂದಿರಲು ಸಾಧ್ಯವಿಲ್ಲ. ಮನೆಯಲ್ಲಿ ಸೇಬು ಹಣ್ಣಿದ್ದರೆ ಈ ಸಿಹಿ ತಿನಿಸನ್ನು ಒಮ್ಮೆ ಟ್ರೈ ಮಾಡಬಹುದು. ಹಾಗಾದ್ರೆ ಈ ಸೇಬು ಜಿಲೇಬಿಯ ಸುಲಭ ಪಾಕವಿಧಾನ ಇಲ್ಲಿದೆ.

Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 24, 2024 | 3:16 PM

ಜಿಲೇಬಿ ಅಂದ್ರೆ ಸಾಕು, ಬಾಯಲ್ಲಿ ನೀರೂರುತ್ತದೆ, ತಟ್ಟೆ ತುಂಬಾ ಈ ಸಿಹಿ ತಿಂಡಿಯನ್ನು ತಂದಿಟ್ಟರೆ ಸವಿಯುತ್ತಾ ತಿನ್ನುವವರೇ ಜಾಸ್ತಿ. ಅದರಲ್ಲಿ ಗರಿ ಗರಿಯಾಗಿರೋ ಈ ಬಿಸಿ ಬಿಸಿ ಜಿಲೇಬಿ ಕೊಟ್ಟರಂತೂ ಬೇಡ ಅನ್ನೋದಕ್ಕೆ ಮನಸ್ಸೇ ಆಗಲ್ಲ. ನೀವು ಹಳದಿ ಅಥವಾ ಕೇಸರಿ ಬಣ್ಣದ ಆಕರ್ಷಕ ಹಾಗೂ ರುಚಿಕರ ಜಿಲೇಬಿಯನ್ನು ಸವಿದ್ದೀರಬಹುದು. ಆದರೆ ಈ ಸೇಬು ಜಿಲೇಬಿಯನ್ನು ಒಮ್ಮೆಯಾದರೂ ತಿಂದಿರಲು ಸಾಧ್ಯವೇ ಇಲ್ಲ. ವಿಭಿನ್ನ ರುಚಿಯನ್ನು ಹೊಂದಿರುವ ಈ ಸಿಹಿ ತಿನಿಸನ್ನು ಮನೆಯಲ್ಲೇ ಮಾಡಿ ಸವಿಯಬಹುದು.

ಸೇಬು ಜಿಲೇಬಿ ಮಾಡಲು ಬೇಕಾಗುವ ಸಾಮಗ್ರಿಗಳು

* ಎರಡು ಸೇಬು

* ಮೂರು ಕಪ್ ಮೈದಾ

* ಎರಡು ಚಮಚ ಸಕ್ಕರೆ

* ಎರಡು ಚಮಚ ಎಣ್ಣೆ

* ಒಂದು ಕಪ್ ನೀರು

* ಒಂದು ಚಮಚ ನಿಂಬೆ ರಸ

* ಏಲಕ್ಕಿ ಪುಡಿ

* ಗೋಡಂಬಿ

* ರೋಸ್ ವಾಟರ್ (ಗುಲಾಬಿ ನೀರು)

ಸೇಬು ಜಿಲೇಬಿ ಮಾಡುವ ವಿಧಾನ

* ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಮತ್ತು ಸಕ್ಕರೆಯನ್ನು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

* ಆ ಬಳಿಕ ಮತ್ತೊಂದು ಪಾತ್ರೆಯಲ್ಲಿ ಹಿಟ್ಟು, ಎಣ್ಣೆ, ಸಕ್ಕರೆ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಪಕ್ಕದಲ್ಲಿ ಇರಿಸಿಕೊಳ್ಳಿ.

* ತದನಂತರದಲ್ಲಿ ಮತ್ತೊಂದು ಪಾತ್ರೆಯಲ್ಲಿ ಸಕ್ಕರೆ ನೀರಿನ ಪಾಕ ಮಾಡಿಕೊಳ್ಳಿ. ಅದಕ್ಕೆ ನಿಂಬೆ ರಸ, ರೋಸ್ ವಾಟರ್ ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ.

* ಈಗ ಸೇಬನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಈ ಹೋಳುಗಳನ್ನು ಮೈದಾ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಿರಿ.

* ಈಗಾಗಲೇ ಕರಿದ ಈ ಸೇಬುಗಳನ್ನು ಸಕ್ಕರೆ ಪಾಕದಲ್ಲಿ ಹಾಕಿ ಸ್ವಲ್ಪ ಸಮಯದವರೆಗೆ ಹಾಗೆ ಇಟ್ಟರೆ ಸೇಬು ಜಿಲೇಬಿ ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ
ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ
ಚನ್ನಪಟ್ಟಣಕ್ಕೆ 2 ಬಾರಿ ಶಾಸಕನಾಗಿದ್ದ ಕುಮಾರಸ್ವಾಮಿ ಕೊಡುಗೆ ಏನು?ಶಿವಕುಮಾರ್
ಚನ್ನಪಟ್ಟಣಕ್ಕೆ 2 ಬಾರಿ ಶಾಸಕನಾಗಿದ್ದ ಕುಮಾರಸ್ವಾಮಿ ಕೊಡುಗೆ ಏನು?ಶಿವಕುಮಾರ್
ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ
ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ
ಕಾಡಿಬೇಡಿ ರೋಹಿತ್ ಶರ್ಮಾರನ್ನು ಒಪ್ಪಿಸಿ ಔಟ್ ಮಾಡಿದ ಸರ್ಫರಾಝ್ ಖಾನ್
ಕಾಡಿಬೇಡಿ ರೋಹಿತ್ ಶರ್ಮಾರನ್ನು ಒಪ್ಪಿಸಿ ಔಟ್ ಮಾಡಿದ ಸರ್ಫರಾಝ್ ಖಾನ್
ಜನ ಕುಮಾರಸ್ವಾಮಿ ಹೊರಗಿನವ ಅಂದುಕೊಂಡಿದ್ದರೆ 2 ಬಾರಿ ಗೆಲ್ಲಿಸುತ್ತಿದ್ವರೇ?
ಜನ ಕುಮಾರಸ್ವಾಮಿ ಹೊರಗಿನವ ಅಂದುಕೊಂಡಿದ್ದರೆ 2 ಬಾರಿ ಗೆಲ್ಲಿಸುತ್ತಿದ್ವರೇ?
ಬಾಬುಸಾಬ್​ ​ಪಾಳ್ಯ ದುರಂತ: ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿದ್ದರಾಮಯ್ಯ
ಬಾಬುಸಾಬ್​ ​ಪಾಳ್ಯ ದುರಂತ: ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿದ್ದರಾಮಯ್ಯ
ಬಿಗ್​ಬಾಸ್ ಮನೆಗೆ ಬಂದ ಸುದ್ದಿ ವಾಚಕಿ, ಮನೆ ಮಂದಿಗೆ ಕ್ಲಾಸ್
ಬಿಗ್​ಬಾಸ್ ಮನೆಗೆ ಬಂದ ಸುದ್ದಿ ವಾಚಕಿ, ಮನೆ ಮಂದಿಗೆ ಕ್ಲಾಸ್
ಬೆಂಗಳೂರು ನಗರ ಉಸ್ತುವಾರಿ ಸಚಿವ ಶಿವಕುಮಾರ್ ಚನ್ನಪಟ್ಟಣದಲ್ಲಿ ಬ್ಯೂಸಿ!
ಬೆಂಗಳೂರು ನಗರ ಉಸ್ತುವಾರಿ ಸಚಿವ ಶಿವಕುಮಾರ್ ಚನ್ನಪಟ್ಟಣದಲ್ಲಿ ಬ್ಯೂಸಿ!
ಹಾಸನಾಂಬಾ ಸನ್ನಿಧಾನದಲ್ಲಿ ಭರದ ಸಿದ್ಧತೆ
ಹಾಸನಾಂಬಾ ಸನ್ನಿಧಾನದಲ್ಲಿ ಭರದ ಸಿದ್ಧತೆ
ಬಿಬಿಎಂಪಿ ಭ್ರಷ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದರೆ ಸಮಸ್ಯೆ ಕೊನೆಗೊಳ್ಳದು
ಬಿಬಿಎಂಪಿ ಭ್ರಷ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದರೆ ಸಮಸ್ಯೆ ಕೊನೆಗೊಳ್ಳದು